ಸಿಂಹ ರಾಶಿಯ ಚಿಹ್ನೆಯು ಕೂಡ ಸಿಂಹವೇ ಆಗಿದೆ. ಸಿಂಹ ಎಂದರೆ ಎಲ್ಲರಿಗೂ ಗೊತ್ತಿದೆ ಕಾಡಿನ ರಾಜ ಎಂದು. ಕಾಡಿನಲ್ಲಿ ಅಷ್ಟು ಪ್ರಾಣಿಗಳಿದ್ದರೂ ಕೂಡ ನಾವು ಕಾಡಿನ ರಾಜ ಎಂದು ಸಿಂಹವನ್ನೇ ಕರೆಯುತ್ತೇವೆ. ಯಾಕೆಂದರೆ ಸಿಂಹಕ್ಕೆ ಅಂತ ರಾಜ ಗಾಂಭೀರ್ಯವಿದೆ. ಅದರ ನಡಿಗೆ, ಅದು ಒಂದು ಸಲ ಘರ್ಜಿಸಿದರೆ ಇಡೀ ಅರಣ್ಯವೇ ನಡುಗುವಂತಹ ಹವಾ ಸೃಷ್ಟಿಸಿದೆ ಹೀಗಾಗಿ ಅದಕ್ಕೆ ಆ ರಾಜ ಪದವಿ ಸಿಕ್ಕಿದೆ.
ಅಂತಹ ಗುಣಗಳಲ್ಲಿ ಕೆಲವು ಸಿಂಹ ರಾಶಿಯವರಿಗೆ ಸಹಜವಾಗಿ ಬಂದೇ ಇರುತ್ತದೆ. ಸಿಂಹ ರಾಶಿಯ ಗಂಡು ಮಕ್ಕಳು ಸಿಂಹಗಳಂತಿದ್ದರೆ ಹೆಣ್ಣು ಮಕ್ಕಳು ಸಿಂಹಿಣಿಯರಂತೆ ವರ್ಚಸ್ಸು ಹೊಂದಿರುತ್ತಾರೆ, ಹಾಗೆಯೇ ಜೀವನಪೂರ್ತಿ ಎಷ್ಟೇ ಕಷ್ಟ ಅನುಭವಿಸಿದರೂ ಗತ್ತಿನಿಂದಲೇ ಬದುಕುತ್ತಾರೆ.
ಇವರಲ್ಲಿ ನಾಯಕತ್ವದ ಗುಣ ಹುಟ್ಟಿನಿಂದಲೇ ಇರುತ್ತದೆ ಮತ್ತು ಯಾವುದನ್ನೇ ಆದರೂ ಜವಾಬ್ದಾರಿ ತೆಗೆದು ಕೊಂಡು ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸುವಂತಹ ಬುದ್ಧಿವಂತಿಕೆ ಇರುತ್ತದೆ. ಇವರು ಯಾವುದೇ ಸಭೆ ಸಮಾರಂಭ ಆಫೀಸು ಕಛೇರಿ ಎಲ್ಲಾ ಕಡೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತಾರೆ.
ತಮ್ಮ ಕೆಲಸ ಕಾರ್ಯದ ಮೂಲಕ ಮತ್ತು ತಮ್ಮ ಮಾತಿನ ಶೈಲಿಯ ಮೂಲಕ ಹಾಗೂ ಸಮಯಕ್ಕೆ ತಕ್ಕ ಹಾಗೆ ಸಮಸ್ಯೆಗಳನ್ನು ಬಗೆಹರಿಸುವ ನಿಪುಣತೆ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಸಿಂಹ ರಾಶಿಯವರು ಸ್ವಭಾವತಃ ನೇರವಂತಿಕೆ ಗುಣ ಉಳ್ಳವರು. ಇವರಿಗೆ ಯಾರಿಗಾದರೂ ಬಕೆಟ್ ಹಿಡಿವ ಬುದ್ಧಿಯಾಗಲಿ ಅಥವಾ ಯಾರನ್ನಾದರೂ ನೈಸ್ ಮಾಡಿ ಕೆಲಸ ಮಾಡಿಸುವುದಾಗಲಿ ಬರುವುದಿಲ್ಲ.
ಇವರು ಕಮ್ಯಾಂಡ್ ಮಾಡಿ ಕೆಲಸ ತೆಗೆಯುತ್ತಾರೆ ಹಾಗಾಗಿ ಎಲ್ಲರಿಗೂ ಇವರು ಡಾಮಿನೇಟ್ ಎನಿಸಿದರೆ ಕೂಡ ಇದು ಅವರ ಕಾರ್ಯ ಚತುರತೆ ಇದೆ ಅವರ ಜೀವನದ ಯಶಸ್ಸಿನ ಗುಟ್ಟು ಕೂಡ ಹೌದು ಸಿಂಹ ರಾಶಿಯವರು ಬಹಳ ಪ್ರಾಮಾಣಿಕರಾಗಿರುತ್ತಾರೆ ಮತ್ತು ಇತರರು ಕೂಡ ತಮಗೆ ಹೀಗೆ ಇರಬೇಕು ಎಂದು ಬಯಸುತ್ತಾರೆ.
ಹೆಚ್ಚು ತಮಾಷೆಯಾಗಿರಲು ಬಯಸುವುದಿಲ್ಲ ಆದರೆ ಸುಖ ಸುಮ್ಮನೆ ಯಾರಿಗೂ ತೊಂದರೆಯೂ ಕೊಡುವುದಿಲ್ಲ. ಇವರು ಹೊಗಳಿದರು ತೆಗೆಳೀದರೂ ಅದರಲ್ಲಿ ಸತ್ಯವೇ ಇರುತ್ತದೆ. ಇವರು ಯಾರನ್ನು ಬೇಗ ನಂಬುವುದಿಲ್ಲ, ಹೊಂದಿಕೊಳ್ಳುವುದಿಲ್ಲ ಒಂದು ಬಾರಿ ಅವರಿಗೆ ಸ್ನೇಹಿತರಾದರೆ ಅಥವಾ ಸಂಗಾತಿ ಎಂದು ಒಪ್ಪಿಕೊಂಡರೆ ಕೊನೆ ಉಸಿರು ಇರುವವರೆಗೂ ಕೂಡ ಅವರ ನಂಬಿಕೆ ಉಳಿಸಿಕೊಳ್ಳುತ್ತಾರೆ.
ಅವರಿಂದ ಮೋ’ಸ ಹೋದರೆ ತಿರುಗಿ ಜೀವನದಲ್ಲಿ ಎಂದು ಕೂಡ ಅವರ ಕಡೆ ನೋಡುವುದಿಲ್ಲ. ಸಿಂಹ ರಾಶಿಯವರೂ ಎಲ್ಲರೆದುರೂ ಭಾವನೆಗಳನ್ನು ತೋಡಿಕೊಳ್ಳುವುದಿಲ್ಲ, ಎಂತಹದೆ ಕ’ಷ್ಟ ಬಂದರೂ ಕೂಡ ಅದನ್ನು ಎದುರಿಸಿ ನಿಲ್ಲುವ ಗಟ್ಟಿ ತನ್ನದವರು.
ಸಿಂಹ ರಾಶಿಯವರು ಎಲ್ಲ ರೀತಿಯಲ್ಲೂ ಕೂಡ ಪರ್ಫೆಕ್ಟ್ ಆಗಿರುತ್ತಾರೆ. ತಾವು ಅಂದುಕೊಂಡ ರೀತಯೇ ಬದುಕುತ್ತಾರೆ. ಆದರೆ ಸಂಗಾತಿ ವಿಷಯ ಬಂದಾಗ ಮಾತ್ರ ತಮಗೆ ಹೊಂದಾಣಿಕೆ ಆಗುವ ತಮ್ಮ ಮಾತನ್ನು ಕೇಳುವ ತಮ್ಮನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಗಳನ್ನು ಆರಿಸಿಕೊಳ್ಳುವುದು ಸೂಕ್ತ. ಇಲ್ಲವಾದಲ್ಲಿ ಇವರಿಗೂ ಡಾಮಿನೇಟ್ ಗುಣಗಳು ಇರುವುದರಿಂದ ವೈ ಮನಸು ಉಂಟಾಗಬಹುದು.
ಇದೊಂದು ವಿಚಾರದಲ್ಲಿ ಮಾತ್ರ ಎಚ್ಚರಿಕೆಯಿಂದ ಇರಿ. ಹಾಗೆ ಮುಂಗೋಪವನ್ನು ಸಾಧ್ಯವಾದಷ್ಟು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಿ. ಕೋ’ಪ ನ್ಯಾಯವಾಗಿಯೇ ಇದ್ದರು ಎಲ್ಲಾ ಸ್ಥಳದಲ್ಲೂ ಕೋ’ಪ ತರುವುದು ಸೂಕ್ತವಲ್ಲ. ಉಳಿತಂತೆ ಸೂರ್ಯದೇವನ ಅನುಗ್ರಹ ನಿಮಗೆ ಯಾವಾಗಲೂ ಇರುತ್ತದೆ ಆದ್ದರಿಂದ ಸೂರ್ಯನಂತೆ ಪ್ರಜ್ವಲಿಸುತ್ತೀರಿ. ಪ್ರತಿದಿನ ತಪ್ಪದೆ ಸೂರ್ಯ ನಮಸ್ಕಾರ ಮಾಡಿ.