Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಾವು ತಿನ್ನುವ ಆಹಾರ ಪದಾರ್ಥವವೂ ಕೂಡ ನಮ್ಮ ಬೆನ್ನು ನೋವಿಗೆ ಕಾರಣವಾಗುತ್ತೆ.! ಬೆನ್ನು ನೋವು ಇರುವವರು ಯಾವ ಆಹಾರ ತಿನ್ನಬೇಕು? ಯಾವುದನ್ನು ತಿನ್ನಬಾರದು? ಇಲ್ಲಿದೆ ನೋಡಿ ಮಾಹಿತಿ

Posted on December 26, 2023 By Kannada Trend News No Comments on ನಾವು ತಿನ್ನುವ ಆಹಾರ ಪದಾರ್ಥವವೂ ಕೂಡ ನಮ್ಮ ಬೆನ್ನು ನೋವಿಗೆ ಕಾರಣವಾಗುತ್ತೆ.! ಬೆನ್ನು ನೋವು ಇರುವವರು ಯಾವ ಆಹಾರ ತಿನ್ನಬೇಕು? ಯಾವುದನ್ನು ತಿನ್ನಬಾರದು? ಇಲ್ಲಿದೆ ನೋಡಿ ಮಾಹಿತಿ

ನಾವು ನಡೆದಾಡುವ ಭಂಗಿ ಸರಿ ಇಲ್ಲದೆ ಇದ್ದಾಗ, ನಾವು ತಪ್ಪಾದ ಕ್ರಮದಲ್ಲಿ ತೂಕವನ್ನು ಎತ್ತಿದಾಗ ಅಥವಾ ಮಾನಸಿಕ ಒತ್ತಡ ಮತ್ತು ವ್ಯಾಯಾಮ ಇಲ್ಲದೆ ಇರುವುದು ಇವುಗಳು ನಮ್ಮ ಬೆನ್ನು ನೋವಿಗೆ ಕಾರಣ ಆಗುತ್ತದೆ ಎಂದು ಅನೇಕರು ಬಲ್ಲರು ಆದರೆ ನಾವು ತಿನ್ನುವ ಆಹಾರ ಕ್ರಮ ತಪ್ಪಾಗಿರುವುದರಿಂದ ಕೂಡ ನಮಗೆ ಬೆನ್ನು ನೋವು ಬರುತ್ತಿದೆ ಎಂದರೆ ಅದು ಅನೇಕರಿಗೆ ಆಶ್ಚರ್ಯ ಎನಿಸುತ್ತದೆ, ಆದರೆ ಈ ಮಾತು ಸತ್ಯ.

ಬೆನ್ನು ನೋವು ಬರುವುದಕ್ಕೆ ನಾವು ತಿನ್ನುತ್ತಿರುವ ಆಹಾರಗಳು ಕಾರಣವಾಗುತ್ತಿವೆ. ಬೆನ್ನುನೋವು ಇರುವವರು ಯಾವ ರೀತಿ ಆಹಾರಗಳನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎನ್ನುವುದರಲ್ಲಿ ಒಂದಿಷ್ಟು ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ…

1. ಪ್ಯಾಕೇಜ್ ಫುಡ್ ಗಳಾದ ಚಿಪ್ಸ್, ಬಿಸ್ಕೆಟ್ ಇಂತಹ ಪದಾರ್ಥಗಳನ್ನು ಸೇವಿಸಬಾರದು. ಯಾಕೆಂದರೆ ಇವುಗಳಿಗೆ ಪ್ರಿಸರ್ವೇಟೀವ್ಸ್ ಮತ್ತು ಅಡೀಟೀವ್ಸ್ ಬಳಸಿರುತ್ತಾರೆ. ಇವುಗಳು ಉರಿಯೂತ (inflamation) ಉಂಟು ಮಾಡುವುದರಿಂದ ಬೆನ್ನು ನೋವು ಹೆಚ್ಚಾಗುತ್ತದೆ ಹಾಗಾಗಿ ಇಂತಹ ಆಹಾರ ಪದಾರ್ಥಗಳಿಂದ ದೂರವಿರಬೇಕು. ಅದೇ ರೀತಿಯಾಗಿ ಎರಡು ನಿಮಿಷಗಳಲ್ಲಿ ತಯಾರಾಗುವಂತಹ ಪಾಸ್ತಾ ನೂಡಲ್ಸ್, ಬಿಸಿ ಮಾಡಿಕೊಂಡು ತಿನ್ನಬಹುದಾದಂತಹ ಆಹಾರ ಪದಾರ್ಥಗಳನ್ನು ಕೂಡ ಅವಾಯ್ಡ್ ಮಾಡಬೇಕು. (Avoid packaged and canned foods)

2. ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳು ಅಂದ್ರೆ ಚಾಕಲೇಟ್, ಸಿಹಿ ತಿನಿಸುಗಳು, ಜ್ಯೂಸ್ ಗಳು, ಕೇಕ್ ಗಳು ಇವೆಲ್ಲವೂ ಕೂಡ ದೇಹದಲ್ಲಿ ಬೆನ್ನು ನೋವು ಹೆಚ್ಚಾಗುವುದಕ್ಕೆ ಕಾರಣವಾಗುತ್ತವೆ. ಇದರೊಂದಿಗೆ ನಾವು ದಕ್ಷಿಣ ಭಾರತದ ಆಹಾರ ಶೈಲಿಯಲ್ಲಿ ಅತಿ ಹೆಚ್ಚಾಗಿ ಉಪಯೋಗಿಸುವ ಅಕ್ಕಿ ಗೋಧಿ ಪದಾರ್ಥಗಳು ಕೂಡ ಕೊನೆಗೆ ಕಾರ್ಬೋಹೈಡ್ರೇಟ್ ನಿಂದ ಶುಗರ್ ಆಗಿ ಬದಲಾವಣೆ ಆಗುವುದರಿಂದ ಈ ಸಕ್ಕರೆ ಅಂಶವೂ ದೇಹದಲ್ಲಿ ಇನ್ಫಮೇಷನ್ ಕ್ರಿಯೇಟ್ ಮಾಡಿ ಸಮಸ್ಯೆ ಉಂಟುಮಾಡುತ್ತದೆ. (Avoid Sugar richched foods and Carbohydrates)

3. ಇದರ ಬದಲು ಆಹಾರದಲ್ಲಿ ಫೈಬರ್ ಮತ್ತು ಪ್ರೋಟೀನ್ ಅಂಶ ಹೆಚ್ಚಿರಬೇಕು (eat more Fiber and Protein)
4. ಕೆಟ್ಟ ಕೊಬ್ಬನ್ನು ದೇಹದಲ್ಲಿ ಹೆಚ್ಚು ಮಾಡುವ LDL ಕ್ರಿಯೇಟ್ ಮಾಡುವ ಆಹಾರ ಪದಾರ್ಥಗಳನ್ನು ಅವಾಯ್ಡ್ ಮಾಡಬೇಕು, ಕರಿದ ಆಹಾರ ಪದಾರ್ಥಗಳು, ಮೈದಾ ಬಳಸಿ ಮಾಡಿದ ಪದಾರ್ಥಗಳು, ಜಂಕ್ ಫುಡ್ ಗಳು ಈ ರೀತಿ LDL ಹೆಚ್ಚಿಸುತ್ತದೆ. ಇವುಗಳನ್ನು ಅವಾಯ್ಡ್ ಮಾಡುವುದರಿಂದ ಬೆನ್ನು ನೋವು ಕಡಿಮೆ ಮಾಡಿಕೊಳ್ಳಬಹುದು. (Avoid tran fat foods)

5. ಧೂಮಪಾನ ಅಭ್ಯಾಸ ಬಿಡುವುದು ತುಂಬಾ ಒಳ್ಳೆಯ ನಿರ್ಧಾರ. ಯಾಕೆಂದರೆ ಧೂಮಪಾನದ ಚಟ ಇರುವವರಿಗೆ ಮಾಂಸ ಖಂಡದಲ್ಲಿ ಉರಿಯೂತ ಹೆಚ್ಚಾಗುತ್ತದೆ, ಇದು ನೋವನ್ನು ಹೆಚ್ಚು ಮಾಡುತ್ತದೆ. ಇನ್ನು ಮಧ್ಯಪಾನ ಅಭ್ಯಾಸ ಇರುವವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ ಈ ಕಾರಣಕ್ಕಾಗಿ ಅವರಿಗೆ ಸರಿಯಾಗಿ ಚೇತರಿಕೆಯಾಗದೆ ಬೆನ್ನು ನೋವು ಹೆಚ್ಚಾಗುತ್ತದೆ.

ಮತ್ತು ಅತಿ ಹೆಚ್ಚು ಕಾಫಿ ಕುಡಿಯುವರಲ್ಲಿ ದೇಹದ ಕ್ಯಾಲ್ಸಿಯಂ ಪ್ರಮಾಣ ಹೀರಿಕೊಳ್ಳುವುದಕ್ಕೆ ಉಂಟಾಗುವುದರಿಂದ ಕ್ಯಾಲ್ಸಿಯಂ ಕೊರತೆಯಿಂದಲೂ ಕೂಡ ಬೆನ್ನು ನೋವು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. (Avoid Smoking, driking and caffeine)

6. ನಮ್ಮ ದೇಹವು ಆಕ್ಟಿವ್ ಆಗಿರಲು ನಾವು ತಿಂದ ಆಹಾರ ಜೀರ್ಣವಾಗಿ ಅದರಲ್ಲಿರುವ ಸತ್ವಗಳು ದೇಹಕ್ಕೆ ಸೇರಬೇಕು. ಈ ರೀತಿ ವಿಟಮಿನ್ ಗಳು ಮಿನರಲ್ಸ್ ಗಳನ್ನು ದೇಹ ಹೀರಿಕೊಳ್ಳಲು ಮುಖ್ಯವಾಗಿ ವಿಟಮಿನ್ ಡಿ ಕಾರಣವಾಗುತ್ತದೆ. ವಿಟಮಿನ್ ಡಿ ನ್ಯಾಚುರಲ್ ಆಗಿ ಸೂರ್ಯನ ಬೆಳಕಿನಿಂದ ನಮಗೆ ಸಿಗುತ್ತದೆ ಹಾಗಾಗಿ ಸೂರ್ಯನ ಬೆಳಗಿನ ಜಾವ ಬಿಸಿಲಿನಲ್ಲಿ ವಾಕಿಂಗ್ ಮಾಡುವುದು.

ವ್ಯಾಯಾಮ ಮಾಡುವುದು ಅಥವಾ ಕೆಲಸ ಕಾರ್ಯಗಳನ್ನು ಮಾಡುವುದರಿಂದ ದೇಹಕ್ಕೆ ವಿಟಮಿನ್ ಡಿ ಕೊರತೆ ಉಂಟಾಗುವುದಿಲ್ಲ. ಇದರ ಮೂಲಕವಾಗಿ ದೇಹಕ್ಕೆ ಇತರ ಪೋಷಕಾಂಶಗಳು ಸೇರುವುದಕ್ಕೆ ಅನುಕೂಲವಾಗುತ್ತದೆ ಇದರಿಂದಲೂ ಬೆನ್ನು ನೋವು ನಿವಾರಣೆ ಆಗುತ್ತದೆ ಈ ವಿಚಾರವಾಗಿ ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Health Tips
WhatsApp Group Join Now
Telegram Group Join Now

Post navigation

Previous Post: ಶನಿವಾರ ರಾತ್ರಿ ಉಪ್ಪಿನಿಂದ ಈ ಕೆಲಸ ಮಾಡಿ, ನಿಮ್ಮ ಮನೆಯ ಸದಸ್ಯರ ಯಾವುದೇ ಸದಸ್ಯರ ದುಶ್ಚಟ ಬೇಕಾದ್ರೂ ಬಿಡಿಸಬಹುದು.!
Next Post: ಸಿಂಹ ರಾಶಿಯವರ ಸಿಕ್ರೇಟ್.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore