ನಮಗೆಲ್ಲಾ ಉಜ್ಜೈನಿಯಲ್ಲಿರುವ ಮಹಾಕಾಳೇಶ್ವರನ ಬಗ್ಗೆ ತಿಳಿದೇ ಇದೆ. ಕಾಲದ ಅಧಿಪತಿಯಾದ ಶಿವನ ಅವತಾರವಾದ ಮಹಾಕಾಳೇಶ್ವರನ ಸನ್ನಿಧಾನದಲ್ಲಿ ನಡೆದ ಅನೇಕ ಪವಾಡಗಳ ಕಥೆಯನ್ನು ಕೇಳಿರುತ್ತೇವೆ ಮತ್ತು ಮಹಾಕಾಳೇಶ್ವರನ ಆರಾಧನೆಯಿಂದ ದರ್ಶನದಿಂದ ನಮ್ಮ ಕೆ’ಟ್ಟ ಸಮಯವು ಸರಿ ಹೋಗುತ್ತದೆ ಎನ್ನುವ ನಂಬಿಕೆ ಕೂಡ ನಮ್ಮದು ಅಂತೆಯೇ ಭಾರತದಲ್ಲಿ ಮತ್ತೊಂದು ಪುರಾಣ ಪ್ರಸಿದ್ಧವಾದ ದೇವಸ್ಥಾನ ಇದೆ.
ಈ ದೇವಸ್ಥಾನದಲ್ಲಿ ಕೂಡ ಇದೇ ರೀತಿಯಾದ ನಂಬಿಕೆ ಇದ್ದು, ನಮ್ಮ ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಇರುವ ಈ ದೇವಸ್ಥಾನಕ್ಕೆ ಹೆಚ್ಚಾಗಿ ಜೀವನದಲ್ಲಿ ಬಹಳ ಕೆ’ಟ್ಟ ಸಮಯ ಅನುಭವಿಸುತ್ತಾ ಇರುವಂತಹ ಜನರು ಭೇಟಿ ಕೊಟ್ಟು ಅದರ ಪರಿಹಾರಕ್ಕಾಗಿ ಪ್ರಾರ್ಥಿಸಿ ಫಲ ಪಡೆಯುತ್ತಾರೆ. ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ತಾಯಿ ಕಾಳದೇವಿಯು ಈ ರೀತಿ ತನ್ನನ್ನು ನಂಬಿ ಬಂದ ಭಕ್ತಾಧಿಗಳ ಕ’ಷ್ಟಗಳನ್ನು ಕೇಳಿ ಅವರಿಗೆ ಹರಸಿ ಕಳುಹಿಸುತ್ತಾಳೆ ಎನ್ನುವ ನಂಬಿಕೆ ಇದೆ.
ಈ ದೇವಸ್ಥಾನಕ್ಕೆ ಹೋಗಿ ಒಂದು ವಿಶೇಷವಾದ ಆಚರಣೆ ಮಾಡುವುದರಿಂದ ಜೀವನದಲ್ಲಿ ಕೆ’ಟ್ಟ ಸಮಯಯಿಂದ ಅನುಭವಿಸುತ್ತಿರುವ ಸಾಕಷ್ಟು ತೊಂದರೆಗಳಿಗೆ ಪರಿಹಾರ ಪಡೆಯಬಹುದು. ಈ ದೇವಸ್ಥಾನದ ವಿಶೇಷತೆ ಏನೆಂದರೆ ಹಗಲಿನಲ್ಲಿ ಈ ದೇವಸ್ಥಾನವು ತೆರೆದಿರುವುದಿಲ್ಲ ಪ್ರತಿ ದಿನ ರಾತ್ರಿ ದೇವಸ್ಥಾನವನ್ನು ತೆರೆದು ಸೂರ್ಯೋದಯ ಆಗುವ ಮುನ್ನ ದೇವಸ್ಥಾನವನ್ನು ಮುಚ್ಚಲಾಗುತ್ತದೆ.
ಈ ದೇವಸ್ಥಾನದ ಮುಖ್ಯ ವಿಷಯ ವಿಚಾರ ಇದಾಗಿತ್ತು ಇದು ಅನೇಕರಿಗೆ ಅಚ್ಚರಿಯನ್ನುಂಟು ಮಾಡಿದರು ಕೂಡ ಇದೇ ಸತ್ಯ. ಅನಾದಿ ಕಾಲದಿಂದಲೂ ಇದೇ ರೂಢಿಯಲ್ಲಿದ್ದು ಇನ್ನೂ ಸಹ ಪಾರಂಪರ್ಯವಾಗಿ ಅದನ್ನೇ ನಡೆಸಿಕೊಂಡು ಬರುತ್ತಿದ್ದಾರೆ. ತಮಿಳುನಾಡಿನ ಮಧುರೈನಲ್ಲಿರುವ ಈ ದೇವಸ್ಥಾನಕ್ಕೆ ತೆರಳಬೇಕಾದರೆ, ರಾಜಪಾಳ್ಯ (Rajyapalya)ಕ್ಕೆ ಹೋಗುವ ಬಸ್ಸಿನಲ್ಲಿ ಹೋಗಬೇಕು.
ಅಲ್ಲಿ ಇಳಿದು ಸುಪ್ಪಲಪುರಂ (Suppalapuram) ಮುಖ್ಯ ರಸ್ತೆ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಚಿಲ್ಲರ್ ಪಟ್ಟಿ (Chillar Patti) ಎಂಬ ಹಳ್ಳಿಗೆ ಹೋದರೆ ಈ ಕಾಳದೇವಿಯ ದರ್ಶನವನ್ನು ಪಡೆಯಬಹುದು. ಬಸ್ಸಿನಿಂದ ಇಳಿದು ಆಟೋ ಮಾಡಿಕೊಂಡು ಈ ದೇವಾಲಯವನ್ನು ತಲುಪಬಹುದಾಗಿದೆ. ಈ ದೇವಸ್ಥಾನಕ್ಕೆ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುತ್ತಾರೆ.
ಈ ದೇವಸ್ಥಾನಕ್ಕೆ ಹೋಗಿ ತಾಯಿ ಕಾಳದೇವಿಯ ದರ್ಶನ ಮಾಡಿ ನಿಮ್ಮ ಮನಸ್ಸನ್ನಲ್ಲಿರುವ ಸಮಸ್ಯೆಯನ್ನು ಹೇಳಿಕೊಳ್ಳಬೇಕು. ನಂತರ ದೇವಸ್ಥಾನದ ಅಂಬಾಲದಲ್ಲಿ ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ಒಂಬತ್ತು ಬಾರಿ ಪ್ರದರ್ಶನ ಹಾಕಬೇಕು ಮತ್ತು ನಿಮ್ಮ ಶಕ್ತಿಯನುಸಾರ ಇಲ್ಲಿ ದೀಪಗಳನ್ನು ಹಚ್ಚಬೇಕು ಈ ರೀತಿ ಮಾಡುವುದರಿಂದ ನಿಮ್ಮ ಕೆ’ಟ್ಟ ಸಮಯ ಕಳೆದು ನಿಮ್ಮ ಬಾಳಿನಲ್ಲೂ ಕೂಡ ಬೆಳಕು ಬರುತ್ತದೆ ಎನ್ನುವುದು ಇಲ್ಲಿಗೆ ನಡೆದುಕೊಳ್ಳುವ ಭಕ್ತಾಧಿಗಳು ಹೇಳುವ ಮಾತು.
ಈ ಕಾಲ ದೇವಿಯ ದರ್ಶನವನ್ನು ಪಡೆದ ಮೇಲೆ ಗ್ರಹಗತಿಗಳ ದೋಷದಿಂದಾಗಿ ಅಥವಾ ಪಾಪ ಕರ್ಮಗಳ ಕಾಟದಿಂದಾಗಿ ಬದುಕಿನಲ್ಲಿ ಬಹಳ ವರ್ಷಗಳಿಂದ ಕ’ಷ್ಟವನ್ನೇ ಪಡುತ್ತಿದ್ದ ಅನೇಕರು ಜೀವನವನ್ನು ಸುಧಾರಿಸಿಕೊಂಡು ಚೇತರಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳು ಇವೆ. ಮತ್ತು ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟವರು ನಂತರ ಸ್ನೇಹಿತರು ಹಾಗೂ ಕುಟುಂಬದವರು ಕೂಡ ಮತ್ತೊಮ್ಮೆ ಈ ದೇವಸ್ಥಾನಕ್ಕೆ ಹೋಗಲು ಬಯಸುವಂತಹ ವಾತಾವರಣ ಈ ದೇವಸ್ಥಾನದಲ್ಲಿ ಇದೆ. ಸಾಧ್ಯವಾದರೆ ಪ್ರತಿಯೊಬ್ಬರೂ ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಿ ಎಲ್ಲರಿಗೂ ಶುಭವಾಗಲಿ.