ರಾಶಿ ಚಕ್ರದಲ್ಲಿ 12 ರಾಶಿಗಳಿವೆ. ಈ 12 ರಾಶಿಯ ಜನರು ಕೂಡ ಬೇರೆ ಬೇರೆ ರೀತಿಯ ಸ್ವಭಾವಗಳನ್ನು ಹೊಂದಿರುತ್ತಾರೆ. ವಿದ್ಯಾಭ್ಯಾಸದ ವಿಷಯದಲ್ಲಿ, ವೃತ್ತಿ ವ್ಯಾಪಾರ ವಿಚಾರದಲ್ಲಿ, ಸಾಂಸಾರಿಕ ಜೀವನವೇ ಆಗಲಿ ಅಥವಾ ಸಾಮಾಜಿಕ ಜೀವನದಲ್ಲೇ ಆಗಲಿ ಒಬ್ಬರಿಗಿಂತ ಒಬ್ಬರು ಬಹಳ ವಿಭಿನ್ನ. ಇದರಲ್ಲಿ ಮದುವೆಯ ವಿಚಾರದಲ್ಲಿ ಯಾರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಅಂದಾಜಿಸಿ ಯಾವ ರಾಶಿಯವರು ಹೆಚ್ಚು ಲವ್ ಮ್ಯಾರೇಜ್ ಆಗುತ್ತಾರೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
1. ಮೇಷ ರಾಶಿ:- ಮೊದಲ ರಾಶಿಯವರದ ಮೇಷ ರಾಶಿಯವರು ತುಂಬಾ ಫ್ರೆಂಡ್ಲಿ ಆಗಿರುತ್ತಾರೆ, ಎಲ್ಲರ ಜೊತೆಗೂ ತುಂಬಾ ಓಪನ್ ಆಗಿ ಮಾತನಾಡುತ್ತಾರೆ, ಫ್ಯಾಮಿಲಿ ಮೇಲೆ ತುಂಬಾನೇ ಪ್ರೀತಿ ಇರುತ್ತದೆ. ಕುಟುಂಬದವರು ಇವರ ನಿರ್ಧಾರಗಳನ್ನು ಗೌರವಿಸುತ್ತಾರ ಹಾಗೂ ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಆದಷ್ಟು ಮೇಷ ರಾಶಿಯವರು 90% ಲವ್ ಮ್ಯಾರೇಜ್ ಆಗುತ್ತಾರೆ.
2. ವೃಷಭ ರಾಶಿ:- ಇವರು ಬಹಳ ಬೇಗ ಒಬ್ಬರನ್ನು ಹಚ್ಚಿಕೊಳ್ಳುವ, ಇಷ್ಟವಾಗುವ ವ್ಯಕ್ತಿಗಳಾಗಿರುತ್ತಾರೆ. ತುಂಬಾನೇ ಕೇರಿಂಗ್ ಮಾಡುವ ವ್ಯಕ್ತಿಗಳು ಎನಿಸಿಕೊಳ್ಳುವ ಇವರಿಗೆ ಪ್ರಪೋಸಲ್ ಗಳು ಹೆಚ್ಚಾಗುತ್ತದೆ, ಇವರು ಕೂಡ ಲವ್ ಮ್ಯಾರೇಜ್ ಆಗುತ್ತಾರೆ.
3, ಮಿಥುನ ರಾಶಿ:- ಇವರು ಕೂಡ ಬೇಗ ಇಷ್ಟ ಆಗುವ ವ್ಯಕ್ತಿಗಳಾಗಿರುತ್ತಾರೆ. ಇವರು ಸಹ ಪ್ರೀತಿಯಲ್ಲಿ ಬೀಳುತ್ತಾರೆ. ಇವರು ಪ್ರೀತಿ ಮಾಡಿದರು ಮನೆಯವರ ಒಪ್ಪಿಗೆ ಪಡೆದೆ ಮದುವೆ ನಿರ್ಧಾರ ಮಾಡುತ್ತಾರೆ. ಕುಟುಂಬದವರ ಒಪ್ಪಿಗೆಯಿಲ್ಲದೆ ಇವರು ಯಾವ ಕೆಲಸವನ್ನು ಮಾಡದ ಕಾರಣ ಕುಟುಂಬದವರಿಗಾಗಿ ಕೆಲವೊಮ್ಮೆ ಪ್ರೀತಿಯನ್ನು ಬಿಟ್ಟು ಕೊಡಬಹುದು
4. ಕಟಕ ರಾಶಿ:- ಈ ವ್ಯಕ್ತಿಗಳು ಪ್ರೀತಿ ಮತ್ತು ಮದುವೆ ವಿಷಯದಲ್ಲಿ ಅದೃಷ್ಟವಂತರು.ಯಾಕೆಂದರೆ ಇವರು ಪ್ರೀತಿ ಮಾಡಿದವರನ್ನೇ ಮದುವೆ ಆಗುವಂತಹ ಸನ್ನಿವೇಶಗಳು ಹೆಚ್ಚಾಗಿರುತ್ತದೆ. ಇವರಿಗೆ ಸಿಗುವ ಪಾರ್ಟ್ನರ್ ಇವರ ಕಾರಣದಿಂದಲೇ ಹೆಚ್ಚು ಖುಷಿಯಾಗಿರುತ್ತಾರೆ, ಇವರ ಪ್ರತಿಯೊಂದು ಕೆಲಸದಲ್ಲೂ ಅವರು ಸದಾ ಜೊತೆಯಲ್ಲಿ ಇರುತ್ತಾರೆ. ಕಟಕ ರಾಶಿಯವರು ಪ್ರೀತಿಯ ವಿಚಾರದಲ್ಲಿ ಯಶಸ್ವಿ ಆಗುತ್ತಾರೆ.
5. ಸಿಂಹ ರಾಶಿ:- ಈ ರಾಶಿಯ ವ್ಯಕ್ತಿಗಳು ಪ್ರೀತಿಯ ವಿಷಯದಲ್ಲಿ ತುಂಬಾನೇ ಸೀರಿಯಸ್ ಆಗಿ ಇರುತ್ತಾರೆ. ಇವರ ಮನೆಯಲ್ಲಿ ಒಪ್ಪದಿದ್ದರೂ ಸಹ ಮನೆಯವರ ವಿರೋಧ ಕಟ್ಟಿಕೊಂಡು ಬೇಕಾದರೂ ಲವ್ ಮ್ಯಾರೇಜ್ ಆಗುತ್ತಾರೆ.
6. ಕನ್ಯಾ ರಾಶಿ:- ಈ ರಾಶಿಯ ವ್ಯಕ್ತಿಗಳು ತುಂಬಾನೇ ಎಮೋಷನಲ್ ವ್ಯಕ್ತಿಗಳಾಗಿರುತ್ತಾರೆ. ಪ್ರೀತಿ ಎಂದರೆ ನಂಬಿಕೆ ಎನ್ನುವ ಇವರು ಅದನ್ನು ಮದುವೆ ಹಂತಕ್ಕೆ ತೆಗೆದುಕೊಂಡು ಹೋಗಿ ಉಳಿಸಿಕೊಳ್ಳುತ್ತಾರೆ.
7, ತುಲಾ ರಾಶಿ:- ತುಲಾ ರಾಶಿಯವರು ಯಾವುದೇ ವಿಚಾರದಲ್ಲಿ ಗೊಂದಲ ಮಾಡಿಕೊಳ್ಳುವುದಕ್ಕೆ, ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೋಗುವುದಿಲ್ಲ ಹಾಗಾಗಿ ಇವರು ಕುಟುಂಬದವರು ಮೆಚ್ಚಿದವರನ್ನೇ ಕೈ ಹಿಡಿಯುತ್ತಾರೆ.
8. ವೃಶ್ಚಿಕ ರಾಶಿ:- ತುಂಬಾನೇ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡುವ ಇವರು ಪ್ರೀತಿ ವಿಚಾರದಲ್ಲೂ ಕೂಡ ಇದೇ ರೀತಿ ಯೋಚಿಸುತ್ತಾರೆ. ಪ್ರೀತಿಸಿದವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಜೀವನ ಒಂದು ಲೆವೆಲ್ ಗೆ ಬಂದ ಮೇಲೆ ಅವರನ್ನೇ ಮದುವೆಯಾಗುತ್ತಾರೆ
9. ಧನಸ್ಸು ರಾಶಿ:- ಕನಸು ರಾಶಿಯವರು ಪ್ರೀತಿಯಲ್ಲಿ ಮೋಸ ಹೋಗುವ ಅಥವಾ ಪ್ರೀತಿಯಲ್ಲಿ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಸಾಮಾನ್ಯವಾಗಿ ಇವರು ಕುಟುಂಬದ ಮೇಲೆ ಮದುವೆ ಜವಾಬ್ದಾರಿ ಹಾಕಿ ಅರೇಂಜ್ ಮ್ಯಾರೇಜ್ ಆಗುತ್ತಾರೆ.
10. ಮಕರ ರಾಶಿ:- ತಮ್ಮ ಪ್ರೀತಿಗೆ ಕುಟುಂಬ ಒಪ್ಪುವುದಿಲ್ಲ ಎನ್ನುವುದು ಮಕರ ರಾಶಿಯ ಬಹುತೇಕರಿಗೆ ತಿಳಿದಿರುತ್ತದೆ. ಕುಟುಂಬದವರಿಗೆ ನೋವನ್ನು ಕೊಟ್ಟು ಪ್ರೀತಿ ಮಾಡಬಾರದು ಎನ್ನುವ ಯೋಚನೆ ಇರುತ್ತದೆ. ಆದ್ದರಿಂದ 90% ಇವರು ಕೂಡ ಅರೆಂಜ್ ಮ್ಯಾರೇಜ್ ಆಗುತ್ತಾರೆ.
11, ಕುಂಭ ರಾಶಿ:- ಇವರದ್ದು ಸಾಮಾನ್ಯವಾಗಿ ಒನ್ ಸೈಡ್ ಲವ್, ಎಷ್ಟೋ ಸಮಯದಲ್ಲಿ ತಮ್ಮ ಪ್ರೀತಿ ಬಗ್ಗೆ ಹೇಳಿಕೊಳ್ಳುವುದಿಲ್ಲ ಹೀಗಾಗಿ ಪ್ರೀತಿ ಕೈ ತಪ್ಪಿ ಅರೆಂಜ್ ಮ್ಯಾರೇಜ್ ಆಗುತ್ತಾರೆ.
12. ಮೀನ ರಾಶಿ:- ಯಾವುದೇ ಒಂದು ಡಿಸಿಷನ್ ತೆಗೆದುಕೊಳ್ಳುವಾಗ ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಪ್ರೀತಿ ಆದರೂ ಕೂಡ ಎಲ್ಲರನ್ನು ಒಪ್ಪಿಸಿ ಮದುವೆ ಆಗಲು ಬಯಸುತ್ತಾರೆ.