ನಮಸ್ಕಾರ ಎನ್ನುವುದು ಮನುಷ್ಯನಿಗೆ ಬಹಳ ಮುಖ್ಯವಾದದ್ದು. ಒಬ್ಬ ವ್ಯಕ್ತಿಗೆ ಶಿಸ್ತು, ಪ್ರಾಮಾಣಿಕತೆ, ವಿನಯ ಎಲ್ಲವನ್ನು ಕೂಡ ಸಂಸ್ಕಾರ ಎನ್ನುವುದೇ ಕಲಿಸುತ್ತದೆ. ಸಂಸ್ಕಾರ ಎನ್ನುವುದು ನಮ್ಮ ಕುಟುಂಬದಲ್ಲಿ ನಾವು ಹೇಗೆ ಬೆಳೆದು ಬಂದಿದ್ದೇವೆ ಎನ್ನುವುದನ್ನು ತೋರಿಸುತ್ತದೆ ನಮ್ಮ ಸಂಸ್ಕಾರ ನೋಡಿ ವ್ಯಕ್ತಿತ್ವ ಅಳೆಯಬಹುದು,
ಸಂಸ್ಕಾರ ಎನ್ನುವುದು ಹೇಳಿ ಬರುವುದಂತದಲ್ಲ ಅದನ್ನು ನಡವಳಿಕೆಯಲ್ಲಿ ನೋಡಬೇಕು. ಸಂಸ್ಕಾರ ಎಂದರೆ ಹೆಣ್ಣು ಮಕ್ಕಳು, ಗಂಡು ಮಕ್ಕಳು ಎಲ್ಲರೂ ಕೂಡ ಅಚ್ಚುಕಟ್ಟಾದ ಜೀವನಕ್ಕಾಗಿ ಪಾಲಿಸಬೇಕಾದದ್ದು, ಇದರಲ್ಲಿ ಕೆಲವು ಸಂಸ್ಕಾರದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
* ನಾವು ಎಷ್ಟೇ ಶ್ರೀಮಂತಿಕೆ ಸಂಪಾದನೆ ಮಾಡಿದ್ದರೂ ಕೂಡ ನಮಗಿಂತ ಹಿರಿಯರನ್ನು ನೋಡಿದಾಗ ಅವರಿಗೆ ಗೌರವ ಕೊಟ್ಟು ನಡೆದುಕೊಳ್ಳುವುದು ಮತ್ತು ನಮ್ಮ ಮನೆ ಹಿರಿಯರಿಗೆ ನೋವಾಗದಂತೆ ನಡೆದುಕೊಂಡರೆ ಅದು ಸಂಸ್ಕಾರ ಎನಿಸುತ್ತದೆ.
* ಹೆಣ್ಣು ಮಕ್ಕಳು ಎಷ್ಟೇ ಉನ್ನತ ಹುದ್ದೆಗೆ ಏರಿದರೂ ಅಥವಾ ಯಾವುದೇ ಮಹಾನಗರದಲ್ಲಿ ವಾಸಿಸಿದರೂ ನಮ್ಮತನ ಬಿಟ್ಟುಕೊಡದೆ ಹಣೆಗೆ ಬೊಟ್ಟು ಇಡುವುದು ಸಂಸ್ಕಾರ ಎನಿಸುತ್ತದೆ
* ಮದುವೆ ಆಗಿರುವ ಹೆಣ್ಣು ಮಗಳು ಕೈಗೆ ಬಳೆಗಳನ್ನು ಹಾಕುವುದು, ತಲೆಗೆ ಹೂವು ಮುಡಿದುಕೊಳ್ಳುವುದು ಹಣೆಗೆ ಸಿಂಧೂರ ಹಚ್ಚಿಕೊಳ್ಳುವುದು. ಮಂಗಳಸೂತ್ರ ಹಾಗೂ ಕಾಲುಂಗುರ ಪವಿತ್ರ ಎಂದು ಭಾವಿಸಿ ಅದರ ಗೌರವಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳುವುದು ಕೂಡ ಸಂಸ್ಕಾರ ಎನಿಸುತ್ತದೆ
* ಎಷ್ಟೇ ಡಿಗ್ರಿ ಪಡೆದು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ನಮಗೆ ಅಕ್ಷರ ಕಲಿಸಿದ ಗುರುಗಳನ್ನು ಕಂಡಾಗ ಮನಸ್ಸಿನಲ್ಲಿ ಭಯ ಭಕ್ತಿ ಮೂಡುವುದು ಸಂಸ್ಕಾರ ಎನಿಸುತ್ತದೆ
* ದುಡಿಯುತ್ತಿದ್ದೇನೆ ಮನೆ ನೋಡಿಕೊಳ್ಳುತ್ತಿದ್ದೇನೆ ಎನ್ನುವ ದರ್ಪ ತೋರದೆ ಮನೆಯ ಎಲ್ಲರೊಡನೆ ಪ್ರೀತಿಯಿಂದ ನಡೆದುಕೊಳ್ಳುವುದು, ಚಿಕ್ಕ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವುದು ಸಂಸ್ಕಾರ
* ನಮ್ಮ ನಡವಳಿಕೆಯಲ್ಲಿ ಇರುವ ನಯ ನಾಜೂಕೂ ಕೂಡ ಸಂಸ್ಕಾರ ಎನಿಸುತ್ತದೆ
* ಓದು, ಬರಹ, ಉದ್ಯೋಗ ಇತ್ಯಾದಿಗಳ ಹೊರತಾಗಿ ಕೂಡ ನಾವು ನಮ್ಮ ಸಮಾಜದ ಜವಾಬ್ದಾರಿಗಳನ್ನು ಹೊರುವುದು ಸಂಸ್ಕಾರ
* ಖಾಯಿಲೆ ಬಿದ್ದಿರೋ ತಂದೆ ತಾಯಿಯನ್ನು ಮಕ್ಕಳಂತೆ ಜೋಪಾನ ಮಾಡುವುದು ಕೂಡ ಸಂಸ್ಕಾರ
* ಮನೆಯಲ್ಲಿರುವ ಹೆಣ್ಣು ಮಕ್ಕಳ ಬೇಕು ಬೇಡಗಳನ್ನು ಕೇಳಿ ನೆರವೇರಿಸುವುದು ಕೂಡ ಸಂಸ್ಕಾರ
* ಪ್ರೀತಿಯಿಂದ ಸಾಕಿದ ಮಕ್ಕಳೆಲ್ಲ ತಪ್ಪು ದಾರಿ ಹಿಡಿದಾಗ ಅವರಿಗೆ ಒಳ್ಳೆಯ ಮಾತಿನಿಂದ ತಪ್ಪು ಅರ್ಥ ಮಾಡಿಸಿ ಸರಿ ದಾರಿಗೆ ತರುವುದು ಕೂಡ ಸಂಸ್ಕಾರ.
* ಗಂಡನ ಸಂಪಾದನೆ ಸಣ್ಣದಾಗಿದ್ದರೂ ಕೂಡ ಕುಟುಂಬವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಸಂಸಾರದ ಗುಟ್ಟನ್ನು ಬಿಟ್ಟು ಕೊಡದೆ ಹೆಂಡತಿಯ ಗುಣ ಸಂಸ್ಕಾರ ಎನಿಸಿಕೊಳ್ಳುತ್ತದೆ
* ಹೆಣ್ಣು ಮಕ್ಕಳು ಬೆಳಗ್ಗೆ ಎದ್ದ ಕೂಡಲೇ ನಿತ್ಯ ಕರ್ಮ ಮುಗಿಸಿ ಮನೆ ಮುಂದೆ ರಂಗೋಲಿ ಬಿಡಿಸುವುದು, ದೇವರಿಗೆ ದೀಪ ಹಚ್ಚಿ ಪೂಜೆ ಮಾಡುವುದು, ತುಳಸಿ ಕಟ್ಟೆಗೆ ಪೂಜೆ ಮಾಡುವುದು ಕೂಡ ಸಂಸ್ಕಾರ ಎನಿಸಿಕೊಡುತ್ತದೆ
* ಮನೆ ಹತ್ತಿರ ಬಂದ ಸಾಕು ಪ್ರಾಣಿಗೆ ಆಹಾರ ಒದಗಿಸಿಕೊಡುವುದು ಭಿಕ್ಷಕ್ಕೆ ಬಂದವರಿಗೆ ಇಲ್ಲ ಎಂದು ಹೇಳದೆ ಏನಾದರೂ ಕೊಟ್ ಕಳಿಸುವುದು ಇದು ಕೂಡ ಸಂಸ್ಕಾರ ಎನಿಸುತ್ತದೆ.
* ತನ್ನ ನೂರಾರು ಕ’ಷ್ಟಗಳ ನಡುವೆಯೂ ಸಂಬಂಧಿಕರು ಸ್ನೇಹಿತರು ಸಹಾಯ ಕೋರಿದಾಗ ಇಲ್ಲದೆ ಎಂದು ಮಾಡುವ ಗುಣವು ಕೂಡ ಸಂಸ್ಕಾರ
* ಹೆಣ್ಣುಮಕ್ಕಳು ಅಡುಗೆ ಮಾಡಿದಾಗ ಬರುವ ಘಮದಲ್ಲಿ, ಮಾಡಿದ ಅಡುಗೆಯನ್ನು ಬಡಿಸುವ ವಿಧಾನದಲ್ಲಿ, ತುಳಸಿಕಟ್ಟೆಯನ್ನು ಸ್ವಚ್ಛವಾಗಿ ಮಡಿಯಾಗಿ ಇಟ್ಟುಕೊಳ್ಳುವುದರಲ್ಲಿ , ಮನೆಯವರಿಗೆ ಹುಷಾರಿಲ್ಲದೇ ಇದ್ದಾಗ ಮಾಡುವ ಆರೈಕೆಯಲ್ಲಿ ಸಂಸ್ಕಾರ ಕಾಣುತ್ತದೆ.
* ನಮ್ಮ ಬಾಯಿಯಿಂದ ಬರುವ ಪದಗಳಲ್ಲೂ ಕೂಡ ನಮ್ಮ ಸಂಸ್ಕಾರ ಪ್ರತಿಬಿಂಬಿಸುತ್ತದೆ.