ಎಲ್ಲರ ಮೆಚ್ಚಿನ ಕಾಟೇರ ಸಿನಿಮಾದ ಸೂಪರ್ ಹಿಟ್ ಡೈಲಾಗ್ ಈ ವಿಷಯಕ್ಕೆ ಹೊಂದುತ್ತದೆ, ಗಂಡಸವಾದವನು ಬೆವರು ಸುರಿಸಬೇಕು, ಜೊಲ್ಲಲ್ಲ ಎಷ್ಟೊಂದು ಅರ್ಥ ಶಕ್ತಿ ಇದೆ ಈ ಮಾತಲ್ಲಿ ಅದನ್ನು ಇಂದಿನ ನಮ್ಮ ಲೇಖನದ ವಿಷಯದೊಂದಿಗೆ ಹೋಲಿಸಿದರೆ ಈ ರೀತಿ ವಿವರಿಸಬಹುದು.
ವಿವಾಹಂ ವಿದ್ಯಾ ನಾಶನಂ, ಶೋಭನಂ ಸರ್ವನಾಶಂ ಈ ಸಂಸ್ಕೃತದ ಉಕ್ತಿ ಕೂಡ ಅದೇ ಅರ್ಥ ಕೊಡುತ್ತದೆ. ಪುರುಷರು ಯಾವಾಗಲೂ ಸಾಧನೆ ಕಡೆಗೆ ಶ್ರಮಪಡಬೇಕು ಹೊರತು ತಮ್ಮ ಲೈಂಗಿಕಾಸಕ್ತಿಗಳಿಗೆ ಸೋತು ಸಮಯ ಹಾಳು ಮಾಡಿಕೊಳ್ಳಬಾರದು. ವೀರ್ಯ ಎನ್ನುವ ಪದ ಕೇಳಿದ ತಕ್ಷಣ ಕೆಲವರು ಮುಖ ಮುರಿಯುತ್ತಾರೆ ಅಥವಾ ನಗುತ್ತಾರೆ ಆದರೆ ಇದು ನಾಚಿಕೆ ಪಡುವಂತಹ ವಿಷಯ ಅಲ್ಲವೇ ಅಲ್ಲ.
ಒಂದು ಹನಿ ರಕ್ತದಿಂದ ಜೀವಿಯನ್ನು ಸೃಷ್ಟಿಸಲು ಆಗುವುದಿಲ್ಲ ಆದರೆ ಅದೇ ಒಂದು ಹನಿ ವೀರ್ಯಕ್ಕೆ ಎಷ್ಟೋ ಅಂಡಾಣುಗಳಿಗೆ ಜೀವ ಕೊಡುವ ಶಕ್ತಿ ಇದೆ. ಪುರುಷನು ಇಂತಹ ಶಕ್ತಿ ಹೊಂದಿದ್ದಾನೆ ಆದರೆ ಈ ಶಕ್ತಿ ಇರುವುದು ಪ್ರಕೃತಿದತ್ತವಾಗಿ ನಾವು ಮತ್ತೊಂದು ಜೀವಿಯನ್ನು ಸೃಷ್ಟಿಸುವ ಕಾರ್ಯಕ್ಕಾಗಿ.
ಆದರೆ ಇದೇ ಪೂರ್ತಿ ಬದುಕಲ್ಲ ಅಂದರೆ ಈ ಶಕ್ತಿಯನ್ನು ಲೈಂಗಿಕ ಶಕ್ತಿಯಿಂದ ಮನಸ್ಸಿನ ಇಚ್ಚಾ ಶಕ್ತಿಯಾಗಿ ಬದಲಾಯಿಸಿಕೊಂಡರೆ ಮಹತ್ತರವಾದದನ್ನು ಜೀವನದಲ್ಲಿ ಸಾಧಿಸಬಹುದು. ಆದರೆ ಹಲವರು ಈ ಎನರ್ಜಿಯನ್ನು ಕೇವಲ ಲೈಂಗಿಕ ಆಸಕ್ತಿಕ್ಕಾಗಿ ಬಳಸಿಕೊಂಡು ಜೀವನದಲ್ಲಿ ಫೇಲ್ ಆಗುತ್ತಿದ್ದಾರೆ ಹಾಗಾಗಿ ಪುರುಷನು 40 ವರ್ಷಗಳಾದ ಬಳಿಕವೇ ಹೆಚ್ಚು ಸಕ್ಸಸ್ ಕಾಣುತ್ತಿರುವುದು ಎನ್ನುತ್ತಿದೆ ಸಂಶೋಧನೆ.
ಈ ಲೈಂಗಿಕ ಶಕ್ತಿಯನ್ನು ಪರಿವರ್ತನೆ ಮಾಡಿ ಆ ಮೂಲಕ ನಮ್ಮ ಗುರಿಯನ್ನು ಮುಟ್ಟುವ ಸೀಕ್ರೆಟ್ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಲೈಂಗಿಕ ಆಸಕ್ತಿಯಿಂದ ಎಷ್ಟು ಬದಲಾವಣೆ ಆಗುತ್ತಿದೆ ಎಂದರೆ ಕಲ್ಪನ ಶಕ್ತಿ ಬರುತ್ತದೆ ಮತ್ತು ಅದಕ್ಕಾಗಿ ಎಂತಹ ಸಾಹಸ ಬೇಕಾದರೂ ಮಾಡುವ ಧೈರ್ಯ ಅದೇ ಇಚ್ಛಾ ಶಕ್ತಿ ಆಗಿರುತ್ತದೆ.
ಅದನ್ನು ಪಡೆಯುವುದಕ್ಕೆ ಅವರ ಅಂತಿಮ ಆಸಕ್ತಿ ಆಗಿರುತ್ತದೆ ಆದರೆ ಇದನ್ನೇ ಗುರಿ ಕಡೆಗೆ ತಿರುಗಿಸಿ ನೋಡಿ. ನಿಮ್ಮ ಈ ಎಲ್ಲ ಎನರ್ಜಿಯನ್ನು ನಿಮ್ಮ ಸಾಧನೆಯನ್ನು ಸಾಧಿಸುವುದಕ್ಕಾಗಿ ಬಳಸಿನೋಡಿ ನಿಮ್ಮ ಗುರಿ ಕಡೆಗೆ ಗುರಿ ತಲುಪುವುದಕ್ಕೆ ಹೆಚ್ಚು ಹೆಚ್ಚು ಯೋಜನೆಗಳನ್ನು ರೂಪಿಸಿ, ಸರಿಯಾದ ಗುರಿಯನ್ನು ಸೃಷ್ಟಿಸಿ ಬಳಿಕ ಅದಕ್ಕಾಗಿ ಎಂತಹ ಸಾಹಸವನ್ನು ಆದರೂ ಮಾಡುವ ಆತ್ಮಸ್ಥೈರ್ಯ ತಂದುಕೊಳ್ಳಿ.
ಈಗ ಅದೇ ನಿಮ್ಮ ಶಕ್ತಿ ಆಗಿರಲಿ ಅದೊಂದಕ್ಕಾಗಿಯೇ ನೀವು ಹಗಲಿರಲು ಕನಸು ಕಾಣಿ, ಅದು ನಿಮ್ಮ ಸಬ್ ಕಾನ್ಶಿಯಸ್ ಮೈಂಡ್ ಅಲ್ಲಿ ರೆಕಾರ್ಡ್ ಆಗಿ ಅದೇ ನಿಮ್ಮನ್ನು ಗುರಿ ಕಡೆಗೆ ದಾರಿ ತೋರಿಸುತ್ತದೆ. ಈ ರೀತಿ ಲೈಂಗಿಕ ಶಕ್ತಿಯನ್ನು ಕಂಟ್ರೋಲ್ ಮಾಡಿದ ಪರಿಣಾಮವಾಗಿ ಅದು ಅವರ ಜೀವನದ ಸಾಧನೆಗೆ ಎಷ್ಟು ಅನುಕೂಲತೆ ಮಾಡಿ ಕೊಟ್ಟಿದ್ದು ಎನ್ನುವುದನ್ನು ಅನೇಕ ಸಾಧಕರ ಉದಾಹರಣೆಯೊಂದಿಗೆ ನಾವು ಕಾಣಬಹುದು.
ಸ್ವಾಮಿ ವಿವೇಕಾನಂದ, ಟೆಸ್ಲಾ, ವಾಜಪೇಯಿ ಈಗಿನ ಕ್ರೀಡಾಪಟುಗಳು ಸಿನಿಮಾ ಸ್ಟಾರ್ ಗಳಲ್ಲಿ ಅನೇಕರು ಹೀಗೆ ಹೆಚ್ಚಿನ ಸಾಧಕರು ಬ್ರಹ್ಮಚರ್ಯ ಪಾಲಿಸಿ ಗೆದ್ದವರು. ಆದರೆ ನಾವು ಅದನ್ನು ಪರ್ಯಂತ ಹೀಗೆ ಇರಬೇಕಾ ಎಂದು ಕೇಳಬೇಡಿ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸಿ ನಿಮ್ಮ ಪೋಷಕರನ್ನು ಗೌರವ ಪಡಿಸುವ ತನಕ ನೀವು ಆರ್ಥಿಕವಾಗಿ ಸ್ವಾತಂತ್ರ್ಯವಾಗಿ ನಿಮ್ಮ ಕಾಲ ಮೇಲೆ ನಿಲ್ಲುವ ತನಕ.
ನಿಮ್ಮದೇ ಆದ ಕೀರ್ತಿ ಸಂಪಾದನೆ ಮಾಡುವ ತನಕ ನಿಮ್ಮ ಗುರಿಯನ್ನು ಮುಟ್ಟುವ ತನಕ ತಪ್ಪದೇ ಕಾಯ, ವಾಚ, ಮನಸ ಬ್ರಹ್ಮಚರ್ಯವನ್ನು ಪಾಲಿಸಿ. ಎಲ್ಲರೂ ಈ ಬಗ್ಗೆ ಮಾತನಾಡುತ್ತಾರೆ ಆದರೆ ವಾಸ್ತವದಲ್ಲಿ ಬಹಳ ವ್ಯತ್ಯಾಸ ಇದೆ. ಎರಡು ದಿನ ಪ್ರಯತ್ನ ಪಟ್ಟು ಮೂರನೇ ದಿನ ಅದೇ ರೀತಿ ಅಶ್ಲೀಲ ವಿಡಿಯೋಗಳನ್ನು ನೋಡುವುದಕ್ಕೆ ನಿಮ್ಮ ಸಮಯ ಆಸಕ್ತಿ ಎಲ್ಲವನ್ನು ವ್ಯರ್ಥ ಮಾಡಿದರೆ ನೀವು ಮತ್ತೆ ಆಲಸಿಗಳಾಗುತ್ತಿರಿ, ಸೋಂಬೇರಿಗಳಾಗುತ್ತಿರಿ.
ಜೀವನದ ಮುಖ್ಯ ವಿಷಯಗಳ ಬಗ್ಗೆ ಇಂಟರೆಸ್ಟ್ ಕಳೆದುಕೊಂಡು ಸೋಲುತ್ತೀರಿ. ಈ ಬಗ್ಗೆ ಕಠಿಣ ವ್ರತ ಪಾಲಿಸಿ ಕನಿಷ್ಠ 21 ದಿನಗಳು ಕಟ್ಟುನಿಟ್ಟಾಗಿ ಇರಿ, ಬಳಿಕ ನಿಮ್ಮ ನಿರ್ಧಾರಕ್ಕೆ ಗೌರವ ಕೊಟ್ಟು ಮೂರು ತಿಂಗಳವರೆಗೂ ಮುಂದುವರಿಸಿ ಅದು ಅಭ್ಯಾಸ ಆಗುತ್ತದೆ. ನಂತರ ಹೀಗೆ ಗುರಿ ಮುಟ್ಟುವ ತನಕ ಇದನ್ನು ಪಾಲಿಸಿ ಸಾಧನೆಯ ಶಿಖರ ಏರಿ.
ಈ ಲೈಂಗಿಕ ಆಸಕ್ತಿಯು ಮೂಲಾಧಾರ ಚಕ್ರದಲ್ಲಿ ಆಕ್ಟಿವೇಟ್ ಆಗುತ್ತದೆ ಅದರಿಂದ ನೀವು ಅದನ್ನು ಮೇಲಿನ ಚಕ್ರಗಳಿಗೆ ವರ್ಗಾಯಿಸಬೇಕು. ಹೀಗೆ ಮಾಡಲು ಅಶ್ವಿನಿ ಮುದ್ರೆಯು ಅನುಕೂಲ ಮಾಡಿ ಕೊಡುತ್ತದೆ. ಆದರೆ ನೀವು ಸೂಕ್ತ ಗುರುಗಳ ಬಳಿ ಸರಿಯಾದ ಗೈಡ್ ಲೈನ್ಸ್ ತೆಗೆದುಕೊಂಡು ಅಶ್ವಿನಿ ಮುದ್ರೆ ಮಾಡಬೇಕು ಇಲ್ಲವಾದಲ್ಲಿ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
ಹಾಗಾಗಿ ಎಲ್ಲಾ ಚಕ್ರಗಳನ್ನು ಆಕ್ಟಿವೇಟ್ ಮಾಡಲು ಪ್ರಾಡಾಯಾಮ ಅಭ್ಯಾಸ ಮಾಡಿ ನಿಮಗಿರುವ. ಕೆಟ್ಟ ಚಟಗಳನ್ನು ಇವತ್ತೇ ಬಿಟ್ಟುಬಿಡಿ ಈ ಮೂಲಕ ಲೈಂಗಿಕ ಶಕ್ತಿಯನ್ನು ಪರಿವರ್ತನೆ ಮಾಡಿ ಜೀವನದಲ್ಲಿ ಇಚ್ಛಾ ಶಕ್ತಿಯನ್ನು ಹೆಚ್ಚಿಸಿಕೊಂಡು ಸಾಧಕರಾಗಿ.