ದೇವರ ಪೂಜೆ ಮಾಡುವುದಕ್ಕೆ ಕೆಲವು ನಿಯಮಗಳಿವೆ. ಈ ನಿಯಮಗಳ ಮುಖ್ಯ ಉದ್ದೇಶ ನಮಗೆ ಪೂಜೆಯಲ್ಲಿ ಏಕಾಗ್ರತೆ ಬರಲಿ ಮತ್ತು ನಂಬಿಕೆ ಶ್ರದ್ಧೆಯಿಂದ ಈ ಕಾರ್ಯವನ್ನು ಮಾಡಲಿ ಎನ್ನುವುದೇ ಆಗಿರುತ್ತದೆ. ಅದಕ್ಕಾಗಿ ಪೂರ್ವಿಕರು ಮತ್ತು ಹಿರಿಯರು ಅನೇಕ ನಿಯಮಗಳನ್ನು ಹಾಕಿ ಹೋಗಿದ್ದಾರೆ.
ನಾವು ಮಾಡಿದ ಪೂಜೆಗೆ ಪೂರ್ತಿ ಫಲ ಸಿಗಬೇಕು ಎಂದರೆ ನಾವು ಈ ರೀತಿ ನಿಯಮ ಬದ್ಧವಾಗಿ ಪೂಜೆ ಮಾಡಿದಾಗ ಮಾತ್ರ ನಮ್ಮ ಪೂಜೆ ಸಲ್ಲಿಕೆಯಾಗಿ ಇಷ್ಟಾರ್ಥ ಸಿದ್ಧಿಯಾಗುವುದು. ಇವುಗಳನ್ನು ತಪ್ಪಿದಾಗ ಕೆಲವೊಮ್ಮೆ ನಾವು ಮಾಡಿದ ಪೂಜೆಗೆ ಫಲ ಸಿಗುವುದಿಲ್ಲ ಹಾಗಾಗಿ ಪೂಜೆ ಹೇಗೆ ಮಾಡಬೇಕು ಎನ್ನುವ ನಿಯಮಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಯಾವುದೇ ಪೂಜೆ ಆರಂಭಿಸುವ ಮುನ್ನ ಮನೆ ಮತ್ತು ಮನಸ್ಸು ಶುದ್ಧವಾಗಿರಬೇಕು. ಮನಸ್ಸಿನಲ್ಲಿ ನಕಾರಾತ್ಮಕತೆ ಇಟ್ಟುಕೊಂಡು ಪೂಜೆ ಮಾಡಬಾರದು ಹಾಗೆ ದೊಡ್ಡ ಮನೆ ಇದ್ದರೆ ಅಡುಗೆಮನೆ ಹಾಗೂ ದೇವರ ಮನೆಯನ್ನಾದರೂ ಪ್ರತಿದಿನವೂ ಶುಚಿ ಮಾಡಿ, ಪೂಜೆ ಮಾಡಬೇಕು.
* ಪೂಜೆ ಮಾಡಲು ಬೆಳಿಗ್ಗೆ ಹಾಕು ಸಂಜೆ ಒಳ್ಳೆಯ ಸಮಯ ಯಾವಾಗ ಎಂದರೆ ಆಗ ಪೂಜೆ ಮಾಡಬಾರದು
* ನೀವು ಯಾವ ದೇವರಿಗಾಗಿ ಪೂಜೆ ಮಾಡಿದರೂ ಕೂಡ ಮೊದಲು ಪ್ರಥಮ ಪೂಜೆ ವಂದಿತನಾದ ಗಣಪತಿಯನ್ನು ಪ್ರಾರ್ಥಿಸಬೇಕು ಗಣೇಶನಿಗೆ ಮೊದಲು ಪೂಜೆ ಮಾಡಿ ನಂತರ ನಮ್ಮ ಪೂಜೆಯನ್ನು ಮುಂದುವರಿಸಬೇಕು
* ನೀವು ಯಾವ ದೇವರನ್ನು ಪೂಜೆ ಮಾಡುತ್ತಿದ್ದೀರಾ ಆ ದೇವರಿಗೆ ಇಷ್ಟವಾದ ಹೂವುಗಳು ಇರುತ್ತದೆ ಮತ್ತು ನೈವೇದ್ಯಗಳು ಇರುತ್ತವೆ ಆ ಹೂಗಳಿಂದ ಮತ್ತು ಆ ಬಗೆಯ ನೈವೇದ್ಯ ಮಾಡುವುದರಿಂದ ನೀವು ಪೂಜಿಸುವ ದೇವರು ಬೇಗ ಪ್ರಸನ್ನರಾಗುತ್ತಾರೆ
* ದೇವರ ಪೂಜೆ ಮಾಡುವಾಗ ಏಕಾಗ್ರತೆ ಮುಖ್ಯ ಇದನ್ನು ಮೊದಲೇ ತಿಳಿಸಿದ್ದೇವೆ. ಹೀಗಾಗಿ ನೀವು ದೇವರ ಪೂಜೆ ಮಾಡುವಾಗ ಆ ದೇವರಿಗೆ ಸಂಬಂಧಪಟ್ಟ ಅಷ್ಟೋತ್ತರಗಳು, ನಾಮಾವಳಿಗಳು, ಸ್ತೋತ್ರಗಳು, ಸಹಸ್ರನಾಮಗಳು ಈ ರೀತಿ ದೇವರ ಬಗ್ಗೆ ರಚಿಸಿರುವ ಕೀರ್ತನೆಗಳನ್ನು ಹೇಳುತ್ತಾ ಪೂಜೆ ಮಾಡಿದರೆ ಪೂಜೆ ಬೇಗ ಸಲ್ಲುತ್ತದೆ ಫಲ ಸಿಗುತ್ತದೆ
* ಪೂಜೆ ಮಾಡುವಾಗ ಬೇರೆ ಏನನ್ನು ಯೋಚನೆ ಮಾಡಬಾರದು ಮತ್ತು ಬೇರೆ ಯಾರೊಂದಿಗೂ ವಾದ ಮಾಡುತ್ತಾ ಜ’ಗ’ಳ ಆಡಿಕೊಳ್ಳುತ್ತಾ ಕೋಪದಲ್ಲಿ ಪೂಜೆ ಮಾಡಿದರೆ ಮಾಡಿದ ಪೂಜೆಯು ಫಲ ಕೊಡುವುದಿಲ್ಲ.
* ನಾವು ಮಾಡಿದ ಪೂಜೆಗೆ ದೇವರು ಬೇಗ ಫಲ ಕೊಡಬೇಕು ಎಂದರೆ ದೇವರ ಪೂಜೆಗೆ ಬಳಸುವ ಹೂವು ಹಣ್ಣು ಇವುಗಳನ್ನು ನಮ್ಮ ಕೈಯಾರೆ ಬೆಳೆದು ಅರ್ಪಿಸುವುದು ಒಂದು ಉತ್ತಮ ಮಾರ್ಗ ಎಂದು ಹೇಳಬಹುದು.
* ದೇವರ ಪೂಜೆ ಮಾಡುತ್ತಿದ್ದೇವೆ ದೇವರನ್ನು ಕಷ್ಟಗಳನ್ನು ಪರಿಹರಿಸಿವಂತೆ ಕೇಳುತ್ತಿದ್ದೇವೆ ಅಥವಾ ಜೀವನದಲ್ಲಿ ದಾರಿ ತೋರಿಸುವಂತೆ ಪ್ರಾಥಿಸುತ್ತಿದ್ದೇವೆ ಎಂದರೆ ನಾವು ದೇವರ ಹಾದಿಯಾಗಿ ನಡೆಯುವಾಗ ಅದನ್ನು ಒಳ್ಳೆ ಕಾರಣಗಳಿಗಾಗಿಯೇ ಮಾಡಬೇಕು. ಬೇರೊಬ್ಬರಿಗೆ ಕೆಡಕು ಮಾಡುವ ಅಥವಾ ದುರುದ್ದೇಶಗಳಿಂದ ಪೂಜೆ ಕೈಗೊಂಡರೆ ಎಂದಿಗೂ ಕೂಡ ಅಂತ ಪೂಜೆಗಳು ಫಲ ಕೊಡುವುದಿಲ್ಲ, ಅಲ್ಲದೆ ನಿಮ್ಮ ಮೇಲೆ ದುಷ್ಪರಿಣಾಮಗಳು ಕೂಡ ಬೀರಬಹುದು.
* ದೇವರ ಪೂಜೆ ಮಾಡಿದ ನಂತರ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಬರುತ್ತದೆ ಏನೋ ಒಂದು ರೀತಿ ಸಮಾಧಾನ ಸಿಗುತ್ತದೆ. ಇದು ದಿನಪೂರ್ತಿ ಹೀಗೆ ಇರಬೇಕು ಎಂದರೆ ಯಾವಾಗಲೂ ಒಳ್ಳೆಯದನ್ನು ಮಾತನಾಡುವುದು, ದೇವರು ಮೆಚ್ಚುವ ಹಾಗೆ ನಡೆದುಕೊಳ್ಳುವುದು ಮಾಡಬೇಕು. ಜೊತೆಗೆ ಮನೆಯಲ್ಲಿರುವ ಹಿರಿಯರನ್ನು ಗೌರವಿಸಿದರೆ ಹಿರಿಯರನ್ನು ಪ್ರೀತಿಸಿದರೆ ಗುರುಹಿರಿಯರಿಗೆ ಗೌರವ ತೋರಿದರೆ ಆಗಲು ಕೂಡ ನಾವು ಮಾಡಿರುವ ಪೂಜೆಗಳು ಬೇಗ ಫಲ ಕೊಡುತ್ತವೆ.