Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentವಂಶಿಕಾಗೆ ರಿಯಾಲಿಟಿ ಶೋಗಳಿಂದ ಬರ್ತಾ ಇರೋ ದುಡ್ಡು ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಪಾದನೆ ಇಷ್ಟೊಂದಾ.?

ವಂಶಿಕಾಗೆ ರಿಯಾಲಿಟಿ ಶೋಗಳಿಂದ ಬರ್ತಾ ಇರೋ ದುಡ್ಡು ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಪಾದನೆ ಇಷ್ಟೊಂದಾ.?

ವಂಶಿಕಾ ಎಂಬ ಈ ಪುಟ್ಟ ಪೋರಿಯ ಹೆಸರು ಯಾರಿಗೆ ತಾನೇ ಕರ್ನಾಟಕದಲ್ಲಿ ಗೊತ್ತಿಲ್ಲ ತನ್ನ ಮುಗ್ಧ ನಟನೆಯಿಂದ, ನೃತ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್ ಗಳ ಮೂಲಕ ಮೆಚ್ಚುಗೆಯನ್ನ ಪಡೆದಿದ್ದ ಈ ಹುಡುಗಿ ಟಿವಿ ಶೋಗಳ ಮೂಲಕ ಜನರನ್ನು ಮನರಂಜಿಸುತ್ತಿದ್ದಾಳೆ. ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ಗಿಲಿ ಶೋಗಳ ಮೂಲಕ ತನ್ನ ಅಭಿನಯ ಚಾತುರ್ಯವನ್ನು ಪ್ರೇಕ್ಷಕರನ್ನು ಮನರಂಜಿಸಿ ಮೆಚ್ಚುಗೆಗಳನ್ನು ಗಿಟ್ಟಿಸಿಕೊಂಡಿದ್ದಾಳೆ.4 ವರ್ಷದ ವಂಶಿಕಾ ‘ನನ್ನಮ್ಮ ಸೂಪರ್ ಸ್ಟಾರ್’ ಮಕ್ಕಳ ಶೋನಲ್ಲಿ ಭಾಗಿಯಾಗಿ ಮೊದಲ ಎಪಿಸೋಡ್‌ನಲ್ಲಿ ವೀಕ್ಷಕರ ಮನ ಗೆದ್ದಿದ್ದಾರೆ.

ಕನ್ನಡ ಕಿರುತೆರೆಯ ಖ್ಯಾತ ಶೋ ನನ್ನಮ್ಮ ಸೂಪರ್ ಸ್ಟಾರ್ ಶೋ ಪಟ್ಟವನ್ನು ತನ್ನದಾಗಿಸಿಕೊಂಡಿರುವ ಸಿಕ್ಕಾಪಟ್ಟೆ ಫೇಮಸ್ ಆದ ಪುಟಾಣಿ ವಂಶಿಕ ಸದ್ಯ ಇದೀಗ ಗಿಚ್ಚಿ ಗಿಲಿ ಗಿಲಿ ಶೋ ನಲ್ಲಿ ಪಾಲ್ಗೊಂಡಿದ್ದು ಈ ಹಿಂದೆ ವಂಶಿಕಳನ್ನು ಮೆಚ್ಚಿಕೊಂಡಿರುವಂತಹ ಜನರು ಇದೀಗ ವಂಶಿಕ ಅವರ ಅಮ್ಮ ಯಶಸ್ವಿನಿ ಹಾಗೂ ಮಾಸ್ಟರ್ ಆನಂದ್ ಅವರನ್ನು ಟೀಕಿಸುತ್ತಿದ್ದಾರೆ. ವಂಶಿಕ ಸಂಪಾದಿಸುತ್ತಿರುವಂತ ಹಣದ ಬಗ್ಗೆಯೂ ಮಾತನಾಡಿದ್ದು ಇದೀಗ ವಂಶಿಕ ಅವರ ತಾಯಿ ಯಶಸ್ವಿನಿ ಅವರು ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ವಂಶಿಕಾಗೆ ಬರುತ್ತಿರುವಂತಹ ಸಂಭಾವನೆ ಎಷ್ಟು ಆ ಹಣದಿಂದ ಏನು ಆಗುತ್ತಿದೆ ಎಲ್ಲವನ್ನು ಸಹ ತಿಳಿಸಿದ್ದಾರೆ. ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡಿರುವ ಇಬ್ಬರು ಮಗಳ ಬಗ್ಗೆ ಮಗಳ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.

ಮೊದಲನೆಯದಾಗಿ ಮಾತನಾಡಿದ ಮಾಸ್ಟರ್ ಆನಂದ್ ಅವರು ಮಗಳ ವಿದ್ಯಾಭ್ಯಾಸ ಹಾಳು ಮಾಡುತ್ತಿದ್ದೀರಾ ಎಂದು ಹಲವಾರು ಜನ ಕಮೆಂಟ್ ಮಾಡುತ್ತಾರೆ. ಇವಳ ವಿದ್ಯಾಭ್ಯಾಸವನ್ನು ಹಾಳು ಮಾಡುವುದಕ್ಕೆ ಇವಳೇನು ಐಎಎಸ್ ಮಾಡುತ್ತಿದ್ದಾಳ ಎಂದು, ಮಕ್ಕಳಿಗೆ ಪ್ರತಿಭೆ ಇದ್ದಾಗ ಅದಕ್ಕೆ ಸರಿಯಾದ ಅವಕಾಶ ಸಿಗುವುದು ಕಡಿಮೆ ಅಂತದ್ದರಲ್ಲಿ ಇವಳಿಗೆ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಂಡು ಆಕೆಯ ಆಸಕ್ತಿ ಏನು ಇದೆ ಅದರಲ್ಲಿ ಸಂತೋಷವನ್ನು ಪಟ್ಟರೆ ಜನರ ಪ್ರೀತಿ ಪಡೆದರೆ ಏನು ತಪ್ಪು ಇದೆ ಎಂದಿದ್ದಾರೆ. ಇನ್ನು ಯಶಸ್ವಿನಿ ಅವರು ಮಾತನಾಡಿ ಸಂಭಾವನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಹಣಕ್ಕಾಗಿ ಅವಳನ್ನು ಶೋ ಗೆ ಕಳುಹಿಸುತ್ತಿದ್ದೀರಾ ಎಂದು ಹೇಳುತ್ತಾರೆ, ದೇವರು ಸದ್ಯ ನಮಗೆ ಆ ಸ್ಥಿತಿಯಲ್ಲಿ ಇಟ್ಟಿಲ್ಲ ಅವಳ ಸಂಭಾವನೆಯಿಂದ ನಾವು ಜೀವನವನ್ನು ಮಾಡುವ ಸ್ಥಿತಿ ನಮಗಿಲ್ಲ. ನಿಜವಾಗಿ ಇಲ್ಲಿರುವ ವಾಸ್ತವ ಸ್ಥಿತಿಯೇ ಬೇರೆ ಕೆಲ ಜನಗಳಿಗೆ ಇದು ಅರ್ಥವಾಗುವುದಿಲ್ಲ ಜನ ಬಾಯಿಗೆ ಬಂದಂತೆ ಕಮೆಂಟ್ ಮಾಡುತ್ತಾರೆ.

ದೇವರ ದಯೆಯಿಂದ ನಮಗೆ ಅಂತ ಬೇರೆ ಬೇರೆ ಕೆಲಸಗಳು ಇವೆ ಅದೇ ಸಾಕು ಇದು ಆಕೆಯ ಜೀವನ ಅವಳಿಗೆ ಆಸಕ್ತಿ ಇರುವ ಕಡೆ ಅವಳನ್ನು ತೊಡಗಿಸಬೇಕಾದದ್ದು ಹೆತ್ತವರ ಕರ್ತವ್ಯ ಎಂದಿದ್ದಾರೆ. ಇಷ್ಟೇ ಅಲ್ಲದೆ ಹಣಕ್ಕಾಗಿ ಅವಳನ್ನು ಶೋಗೆ ಕಳುಹಿಸುತ್ತಿದ್ದೀರಾ ಎಂದು ಹಲವಾರು ಜನ ಕೆಟ್ಟದಾಗಿ ಕಾಮೆಂಟ್ ಮಾಡಿದ್ದನ್ನು ನೋಡಿ ಭಾವುಕರಾದರು. ಇನ್ನು ಸಂಭಾವನೆಯ ವಿಚಾರಕ್ಕೆ ಬಂದರೆ ವಂಶಿಕಾಳಿಗೆ ಒಂದು ಸಂಚಿಕೆಗೆ ಅಂದರೆ ಒಂದು ವಾರಕ್ಕೆ 20,000 ನೀಡಲಾಗುತ್ತಿದೆ ಎನ್ನಲಾಗಿದೆ. ಒಂದು ವಾರದ ಸಂಚಿಕೆಯಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಚಿತ್ರೀಕರಣ ಆಗಿರುತ್ತದೆ. ಈ ರೀತಿ ವಾರಕ್ಕೆ ನಾಲ್ಕು ಅಥವಾ ಐದು ಬಾರಿ ಚಿತ್ರೀಕರಣ ಇರಲಿದ್ದು ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮುಖಾಂತರ ತಿಳಿಸಿ.