ನಟಿ ಸಿತಾರ ಅವರು ಮುದ್ದು ಮುಖದ ಸಹಜ ಸುಂದರಿ. ಅಷ್ಟೇ ಅಲ್ಲದೆ ನಟನ ವಿಷಯದಲ್ಲೂ ಕೂಡ ಅವರದೇ ಆದ ವಿಭಿನ್ನ ಹಾವಾಭಾವದಿಂದ ಈ ನಟಿ ತುಂಬಾ ಪ್ರಖ್ಯಾತಿ ಹೊಂದಿದ್ದರು. 90ರ ದಶಕದಲ್ಲಿ ಕನ್ನಡ ಸೇರಿದಂತೆ ತಮಿಳು ತೆಲುಗು ಎಲ್ಲಾ ಚಿತ್ರರಂಗದಲ್ಲೂ ಕೂಡ ಸ್ಟಾರ್ ನಟಿಯಾಗಿ ಮಿಂಚಿದ್ದ ಸಿತಾರಾ ಅವರು ಹಾಲುಂಡ ತವರು ಎನ್ನುವ ಸಿನಿಮಾದ ಮೂಲಕ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸಿದ ಮೊದಲ ನಿಮ್ಮ ಹಾಲುಂಡ ತವರು ಈ ಸಿನಿಮಾ ಅದ್ಭುತವಾಗಿ ಯಶಸ್ಸು ಕಂಡಿತ್ತು. ಇದಾದ ನಂತರ ಸಾಲು ಸಾಲು ಅವಕಾಶಗಳು ಕನ್ನಡದಲ್ಲಿ ಸಿತಾರ ಅವರನ್ನು ಅರಸಿ ಬಂದವು. ನಂತರ ವಿಷ್ಣುವರ್ಧನ್ ಅವರ ಜೊತೆಯಲ್ಲಿ ದೀರ್ಘಸುಮಂಗಲಿ, ಬಂಗಾರದ ಕಳಶ ಮುಂತಾದ ಸಿನಿಮಾಗಳಲ್ಲಿ ಕೂಡ ಜೋಡಿಯಾಗಿ ಕಾಣಿಸಿ ಕೊಂಡರು ಇವರು.
ಇದಲ್ಲದೆ ಕಾವ್ಯ ಗಣೇಶನ ಗಲಾಟೆ ಜೇನುಗೂಡು ಹೆತ್ತವಳ ಕೂಗು ಶ್ರಾವಣ ಸಂಜೆ ಕರುಳಿನ ಕುಡಿ ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದರು ಸಿತಾರ ಅವರು. ನಂತರ ವೈಯಕ್ತಿಕ ಬದುಕಿನಲ್ಲಿ ಘಟನೆಗಳಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ಬಹಳ ದಿನಗಳ ನಂತರ ನಾನು ನನ್ನ ಕನಸು ಅಮ್ಮ ಐ ಲವ್ ಯು ಚಕ್ರವ್ಯೂಹ ಇನ್ನು ಮುಂತಾದ ಸಿನಿಮಾಗಳಲ್ಲಿ ಅಮ್ಮನ ಪಾತ್ರದಲ್ಲಿ ಕೂಡ ನಟಿಸಿದರು. ಸಿನಿಮಾಗಳಲ್ಲಿ ಯಾವಾಗಲೂ ಕಣ್ಣೀರಿಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಸಿತಾರ ಅವರ ಬದುಕು ಕೂಡ ಈ ರೀತಿ ದುರಂತದಲ್ಲಿ ಇದೆ ಎನ್ನುವುದು ತುಂಬಾ ಬೇಸರದ ವಿಷಯ. ಮದುವೆ ವಿಚಾರದಲ್ಲಿ ಸೀತಾರ ಅವರು ಒಂದು ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದು ಆ ಒಂದು ಕಾರಣಕ್ಕಾಗಿ ಇನ್ನೂ ಕೂಡ ಮದುವೆಯಾಗದೆ ಹಾಗೆ ಉಳಿದಿದ್ದಾರೆ. ಅಷ್ಟಕ್ಕೂ ಅವರು ತೆಗೆದುಕೊಂಡಿದ್ದ ಆ ನಿರ್ಧಾರ ಹಾಗೂ ಅದರ ಹಿಂದಿನ ಕಾರಣ ಏನು ಎನ್ನುವ ಕುತೂಹಲ ನಿಮ್ಮಲ್ಲಿದ್ದರೆ ಇದನ್ನು ಪೂರ್ತಿಯಾಗಿ ನೋಡಿ.
ನಟಿ ಸಿತಾರ ಅವರು ಸಿನಿಮಾರಂಗದಲ್ಲಿ ಉತ್ತುಂಗದಲ್ಲಿ ಇದ್ದಾಗಲೇ ತಮಿಳು ನಟ ಮುರಳಿ ಅವರ ಜೊತೆ ಸ್ನೇಹ ಸಂಬಂಧ ಇಟ್ಟುಕೊಂಡಿದ್ದರು. ಆದರೆ ನಟ ಮುರಳಿ ಅವರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. ಅವರ ಸಾವಿನಿಂದ ಬಹಳವಾಗಿ ಮಾನಸಿಕವಾಗಿ ಕುಗ್ಗಿ ಹೋದ ನಟಿ ಸೀತಾರ ಅವರು ಬದುಕಿನ ಮೇಲೆ ಇದ್ದ ಎಲ್ಲಾ ಹೋಪನ್ನು ಕೂಡ ಕಳೆದು ಕೊಳ್ಳುತ್ತಾರೆ. ಆ ಸಮಯದಲ್ಲಿಯೇ ಅವರು ಚಿತ್ರರಂಗದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ನಂತರ ಹಾಗೆ ಕಾಣೆಯಾಗಿ ಬಿಡುತ್ತಾರೆ. ಇತ್ತೀಚೆಗೆ ಮತ್ತೆ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕಂಬ್ಯಾಕ್ ಮಾಡಿರುವ ನಟಿ ಈಗ 50ರ ಹತ್ತಿರದ ವಯಸ್ಸಿನಲ್ಲಿದ್ದಾರೆ. ಆದರೂ ಕೂಡ ಇನ್ನು ಮದುವೆಯಾಗುವ ಯಾವುದೇ ವಿಚಾರ ಕೂಡ ಅವರ ಮನಸ್ಸಿನಲ್ಲಿ ಇಲ್ಲವಂತೆ ಕೊನೆವರೆಗೂ ತಾವು ಹೀಗೆ ಏಕಾಂಗಿಯಾಗಿ ಇರಲು ಸಿತಾರ ಅವರು ನಿರ್ಧಾರ ಮಾಡಿದ್ದಾರಂತೆ.
ಆತ್ಮೀಯರ ಒಂದು ಸಾವು ಮನುಷ್ಯನ ಮನಸ್ಸನ್ನು ಎಷ್ಟು ಮಟ್ಟಕ್ಕೆ ಕುಗ್ಗಿಸಿ ಬಿಡುತ್ತದೆ ಎನ್ನುವುದಕ್ಕೆ ನಟಿ ಸಿತಾರಾ ಅವರ ಈ ಪ್ರಕರಣವೇ ಪ್ರತ್ಯಕ್ಷ ಸಾಕ್ಷಿ ಎನ್ನಬಹುದು. ವೈಯಕ್ತಿಕ ಬದುಕಿನಲ್ಲಿ ಬಹಳ ನೋವು ಕಂಡಿರುವ ಸೀತಾರ ಬದುಕು ಇನ್ನು ಮುಂದೆ ಆದರೂ ಹಸನಾಗಲಿ ಮದುವೆ ವಿಚಾರ ಅಲ್ಲದಿದ್ದರೂ ಕೂಡ ಮತ್ತೆ ಯಾವುದೋ ವಿಚಾರದಿಂದ ಅವರ ಬದುಕಿನಲ್ಲಿ ಸಂತಸ ತುಂಬಲಿ ಎಂದು ಅಭಿಮಾನಿಗಳಾಗಿ ನಾವೆಲ್ಲರೂ ಹಾರೈಸೋಣ. ಸಿನಿ ಜರ್ನಿಯಲ್ಲೂ ಕೂಡ ಇನ್ನಷ್ಟು ಕಾಲ ಅವರು ಎಲ್ಲ ಭಾಷೆಯ ಸಿನಿಮಾಗಳಲ್ಲಿ ರಾರಾಜಿಸುವಂತಾಗಲಿ ಎಂದು ಹರಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮುಖಾಂತರ ತಿಳಿಸಿ.