* ಬೆಳಿಗ್ಗೆ ಬೇಗನೆ ಏಳುವುದು ಒಳ್ಳೆಯ ಅಭ್ಯಾಸ. ಸೂರ್ಯ ಉದಯಿ ಸುವ ಮುನ್ನ ನೀವು ಪ್ರತಿದಿನ ಎದ್ದೇಳಬೇಕು. ಬೆಳಗಿನ ವಾತಾವರಣ ವನ್ನು ಅಮೃತದಂತೆ ಪರಿಗಣಿಸಲಾಗುತ್ತದೆ. ಬೆಳಿಗ್ಗೆ 5 ರಿಂದ 6 ರ ನಡುವೆ ಎದ್ದರೆ ದೇಹ ಮತ್ತು ಮನಸ್ಸು ಎರಡೂ ಫಿಟ್ ಆಗಿರುತ್ತವೆ.
* ವಾಕಿಂಗ್, ವ್ಯಾಯಾಮ ಮತ್ತು ಧ್ಯಾನಕ್ಕೆ ಬೆಳಗಿನ ಸಮಯ ತುಂಬಾ ಉಪಯುಕ್ತವಾಗಿದೆ. ವಿದ್ಯಾರ್ಥಿಗಳಿಗೆ ಓದಲು ಇದು ಅತ್ಯುತ್ತಮ ಸಮಯ.
* ನಿದ್ರೆಯ ಕೊರತೆಯಿಂದಾಗಿ ಅನೇಕ ರೋಗಗಳು ಸಹ ಸಂಭವಿಸುತ್ತವೆ. ನಿದ್ರೆ ಇಲ್ಲದಿದ್ದರೆ, ಇಡೀ ದಿನ ವ್ಯರ್ಥವಾಗುತ್ತದೆ. ನೀವು ಕನಿಷ್ಟ 6 ಗಂಟೆಗಳ ನಿದ್ದೆ ತೆಗೆದುಕೊಳ್ಳಬೇಕು ಮತ್ತು 8 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬಾರದು.
* ನಿದ್ರೆಯ ಸಮಯದಲ್ಲಿ ನಮ್ಮ ದೇಹದ ಚೈತನ್ಯವು ದೇಹವನ್ನು ಸರಿಪಡಿಸುತ್ತದೆ ದೇಹವು ವಿಶ್ರಾಂತಿ ಪಡೆಯುತ್ತದೆ, ಇದರಿಂದಾಗಿ ನಾವು ಸಂಪೂರ್ಣವಾಗಿ ರೀಚಾರ್ಜ್ ಆಗುತ್ತೇವೆ.
ಈ ಸುದ್ದಿ ಓದಿ:- ನಾಳೆ ಸಂಕಷ್ಟಹರ ಚತುರ್ಥಿ ಇದೆ ಈ ವಸ್ತುವನ್ನು ದೇವರ ಮನೆಯಲ್ಲಿ ಇಟ್ಟರೆ ಆಸ್ತಿ, ಉದ್ಯೋಗ, ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.!
* ಸಂರ್ಪೂಣ ನಿದ್ರೆ ಆದರೆ ಮನುಷ್ಯನ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಯಾವುದೇ ಕೆಲಸ ಮಾಡಲು ಜೋಶ್ ಬರುತ್ತೆ. ಇಡೀ ದಿನ ಫುಲ್ ಆಕ್ಟಿವ್ ಆಗಿರುತ್ತೇವೆ.
* ಅದರಿಂದ ಕನಿಷ್ಠ 6-8 ನಿರಂತರ ನಿದ್ರೆ ಮಾಡಿ ಪ್ರತಿದಿನ ವ್ಯಾಯಾಮ ಮಾಡಿ ಪ್ರತಿದಿನ ವ್ಯಾಯಾಮ ಮಾಡುವುದು ಅದು ನಿಮ್ಮನ್ನು ಆರೋಗ್ಯ ವಾಗಿಡಲು ಹೆಚ್ಚು ಸಹಾಯ ಮಾಡುತ್ತದೆ. ಕನಿಷ್ಟ 20 ನಿಮಿಷಗಳನ್ನು ವ್ಯಾಯಾಮಕ್ಕಾಗಿ ಸರಿಹೊಂದಿಸಿ ಮಾಡಿಕೊಳ್ಳಿ ಬೆಳಗಿನ ವ್ಯಾಯಾಮವು ನಿಮ್ಮನ್ನು ಪೂರ್ಣ ಶಕ್ತಿಯಿಂದ ತುಂಬಿರುತ್ತದೆ ಮತ್ತು ದಿನವಿಡೀ ಸಂತೋಷವನ್ನು ನೀಡುತ್ತದೆ.
* ಆರೋಗ್ಯವಾಗಿರಲು ನೀರು ಕುಡಿಯಿರಿ ಬೆಳಿಗ್ಗೆ ಎದ್ದಾಗ ಕಾಲಿಹೊಟ್ಟೆ ಯಲ್ಲಿ 3 ರಿಂದ 4 ಗ್ಲಾಸ್ ನೀರು ಕುಡಿಯುವುದು ಅತಿ ಅವಶ್ಯಕ (ಅಂದರೆ ಸುಮಾರು ಒಂದು ಲೀಟರ್) ಉಗುರುಬೆಚ್ಚನೆಯ ನೀರನ್ನು ಕುಡಿದರೆ.
ಅದು ನಿಮ್ಮ ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ನೀರು ಕುಡಿದ 45 ನಿಮಿಷಗಳವರೆಗೆ ನೀವು ಏನನ್ನೂ ತಿನ್ನಬೇಕಾಗಿಲ್ಲ ಎಂಬು ದನ್ನು ನೆನಪಿರಲಿ.
40/50/60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು….||
* ಬೆಳಿಗ್ಗೆ ಯಾವಾಗಲೂ ಆರೋಗ್ಯಕರವಾದಂತಹ ತಿಂಡಿಯನ್ನು ಮಾಡಿ.
* ನೀವು ತಿನ್ನುವ ಆಹಾರವನ್ನು ನುಂಗುವ ಮುನ್ನ ಕನಿಷ್ಠ 25 ಬಾರಿ ಜಾಗಿಯಿರಿ. ಬೆಳಗಿನ ಆಹಾರವನ್ನು ಸೂರ್ಯ ನೆತ್ತಿ ಮೇಲೆ ಏರೋ ಮುಂಚೆಯೇ ಸೇವಿಸಬೇಕು.
* ಬೆಳಗಿನ ತಿಂಡಿ ಜೊತೆ ಯಾವುದಾದರೂ ಹಣ್ಣಿನ ಜ್ಯೂಸ್ ಇದ್ದರೆ ಇನ್ನೂ ಒಳ್ಳೆಯದು.
* ರಾತ್ರಿಯ ವೇಳೆ ಕಡಿಮೆ ಪ್ರಮಾಣದಲ್ಲಿ ಊಟ ಮಾಡಿ ಊಟ ಮಾಡಿದ ತಕ್ಷಣವೇ ನೀರು ಕುಡಿಯಬಾರದು 45 ನಿಮಿಷಗಳ ಮೊದಲು ಅಥವ ನಂತರ ಕುಡಿಯಿರಿ.
* ಆದಷ್ಟು ಹೊರಗಿನ ತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಬೇಕು ಬದಲಿಗೆ ಮನೆಯಲ್ಲಿಯೇ ತಯಾರಿಸಿ ತಿನ್ನುವುದು ಒಳ್ಳೆಯದು.
ಈ ಸುದ್ದಿ ಓದಿ:- ಈ ನಂಬರ್ ಬರೆದು ರಾತ್ರಿ ದಿಂಬಿನ ಕೆಳಗೆ ಇಡಿ, ವಾರಾಹಿ ದೇವಿ ನಿಮ್ಮ ಆಸೆಯನ್ನು 8 ದಿನದಲ್ಲೇ ನೆರವೇರಿಸುತ್ತದೆ……….||
* ಪ್ರತಿದಿನ ಆಹಾರ ಸೇವಿಸಿದ ನಂತರ ಒಂದು ಬಾಳೆಹಣ್ಣು ಸೇವಿಸುವು ದರಿಂದ ಅಜೀರ್ಣ ದೂರವಾಗುತ್ತದೆ.
* ಐಸ್ ಕ್ರೀಮ್ ಚಾಕಲೇಟ್ ಕೂಲ್ ಡ್ರಿಂಕ್ಸ್ ಅಥವ ಯಾವುದೇ ಸಿಹಿ ಪದಾರ್ಥ ಸೇವನೆ ಕಡಿಮೆ ಮಾಡಿ ಯಾಕೆಂದರೆ ಆ ಕಂಪನಿಯವರು ಈ ಆಹಾರ ಪದಾರ್ಥ ಹಾಳಾಗಬಾರದು ಎಂದು ಕೆಲವೊಂದು ಕೆಮಿಕಲ್ ಪದಾರ್ಥವನ್ನು ಉಪಯೋಗಿಸುತ್ತಾರೆ ಅದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ.
* ಸಕ್ಕರೆ ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ. ನಿಮಗೆ ನಿಲ್ಲಿಸಲು ಸಾಧ್ಯವಾಗದಿದ್ದರೆ, ಅದನ್ನು ಸ್ವಲ್ಪ ಕಡಿಮೆ ಮಾಡಿ ಜೇನು, ಸಕ್ಕರೆ ಮಿಠಾಯಿ, ಬೆಲ್ಲ ಇತ್ಯಾದಿಗಳನ್ನು ಬಳಸಿ. ಅಲ್ಲದೆ ಉಪ್ಪನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಿ. ನೀವು ಉಪ್ಪು ತಿನ್ನುವುದಾದರೆ ಕಲ್ಲುಪ್ಪು ಬಳಸಿ.
* ಉಪವಾಸ ಮಾಡುವ ಸಂದರ್ಭ ಬಂದಾಗ ಆದಷ್ಟು ಪ್ರತಿಯೊಬ್ಬರೂ ಉಪವಾಸ ಮಾಡುವುದು ತುಂಬಾ ಒಳ್ಳೆಯದು.