ಬೆಂಗಳೂರಿನಲ್ಲಿ ಪ್ರತಿ ವರ್ಷ ಸ್ವಾತಂತ್ರ್ಯ ದಿನೋತ್ಸವ ಆಚರಣೆ ಅಂಗವಾಗಿ ಹಾಗೂ ಗಣರಾಜ್ಯೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಪ್ರಯುಕ್ತವಾಗಿ ಲಾಲ್ ಭಾಗ್ ಅಲ್ಲಿ ಫಲ ಪುಷ್ಪ ಪ್ರದರ್ಶನ ಆಚರಿಸುವುದು ಎಲ್ಲರಿಗೂ ತಿಳಿದೇ ಇದೆ. ರಾಜ್ಯದ ಹಲವು ಉದ್ಯಾನವನಗಳಲ್ಲಿ ಈ ರೀತಿ ಆಚರಣೆ ರೂಢಿ ಇದ್ದರೂ ಕೂಡ ಬೆಂಗಳೂರಿನ ಲಾಲ್ಬಾಗ್ ನಲ್ಲಿ ನಡೆಯುವ ಫಲ ಪುಷ್ಪ ಪ್ರದರ್ಶನ ದೇಶದಾದ್ಯಂತ ಬಹಳ ಪ್ರಖ್ಯಾತಿ ಹೊಂದಿದೆ. ದೇಶದ ನಾನಾ ಕಡೆಯಿಂದ ಹಾಗೂ ರಾಜ್ಯದ ನಾನಾ ಕಡೆಯಿಂದ ಹೆಚ್ಚಿನ ಜನಸಂಖ್ಯೆ ಈ ಫಲಪುಷ್ಪ ಪ್ರದರ್ಶನದಲ್ಲಿ ಪಾಲ್ಗೊಂಡು ಅಲ್ಲಿನ ಪುಷ್ಪ ವೈವಿಧ್ಯತೆ ಹಾಗೂ ಇನ್ನಿತರ ವಿಷಯಗಳನ್ನು ಕಣ್ತುಂಬಿಕೊಂಡು ಹೋಗುತ್ತಾರೆ. ಆದರಿ ಕೋವಿಡ್ ಕಾರಣದಿಂದ ಅವಕಾಶ ಎರಡು ವರ್ಷಗಳಿಂದ ಎಲ್ಲರಿಗೂ ತಪ್ಪಿ ಹೋಗಿತ್ತು. ಸರ್ಕಾರವು ಕೋವಿಡ್ ಸಮಯದಲ್ಲಿ ಎಲ್ಲಾ ಕಡೆ ಕಟ್ಟುನಿಟ್ಟಿನ ನಿಯಮ ತಂದಿದ್ದರಿಂದ ಫಲಪುಷ್ಪ ಪ್ರದರ್ಶನ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಆದರೆ ಈ ವರ್ಷ ಅದ್ದೂರಿಯಾಗಿ ಈ ಕಾರ್ಯಕ್ರಮ ಜರುಗಲಿದೆ.
ಪ್ರತಿ ವರ್ಷ ಕೂಡ ಏನಾದರೂ ಒಂದು ಹೊಸ ಥೀಮ್ ಇಟ್ಟುಕೊಂಡು ಈ ರೀತಿ ಹೂಗಳಿಂದ ರಚನೆ ಮಾಡುವುದು ಪದ್ಧತಿ ಆದರೆ ಈ ವರ್ಷ ನಮ್ಮ ಸ್ಯಾಂಡಲ್ವುಡ್ ನಟ ದಿವಾಂಗತ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಆಕರ್ಷಣೆಯೇ ಪುನೀತ್ ರಾಜಕುಮಾರ್ ಆಗಲಿದ್ದಾರೆ. ಸರ್ಕಾರವು ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಡಿಸಿದ್ದು ಅಗಲಿದ ನಟನಿಗೆ ಈ ಮೂಲಕ ಗೌರವ ಸಂಧಿಸುತ್ತಿದೆ. ಈಗಾಗಲೇ ಪುನೀತ್ ರಾಜಕುಮಾರ್ ಅವರಿಗೆ ಹಲವಾರು ಕಡೆ ಗೌರವ ಸನ್ಮಾನಗಳು ಸಂದಿವೆ, ಬಿಬಿಎಂಪಿಯು ತನ್ನ ಉದ್ದನೆಯ ರಸ್ತೆಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಕೂಡ ಕೊಟ್ಟು ಗೌರವಿಸಿತ್ತು. ಹಾಗೂ ಮೈಸೂರು ವಿವಿಯು ಗೌರವ ಡಾಕ್ಟರೇಟ್ ಕೂಡ ನೀಡಿದೆ. ಇದರೊಂದಿಗೆ ಸರ್ಕಾರವು ಮತ್ತೊಂದು ರೀತಿಯಲ್ಲಿ ಪುನೀತ್ ಅವರಿಗೆ ನಮನ ಸಲ್ಲಿಸುವ ಯೋಜನೆಯನ್ನು ಫಲಪುಷ್ಪ ಪ್ರದರ್ಶನದ ಮೂಲಕ ಮಾಡುತ್ತಿದೆ.
ಈ ಕುರಿತಾಗಿ ಸಚಿವ ಮುನಿರತ್ನ ಅವರೇ ಮಾತನಾಡಿ ಈಗಾಗಲೇ ವಿಧಾನಸಭೆ ಅಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿ 10 ದಿನಗಳವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಸ್ವಾತಂತ್ರ ದಿನದ ನಂತರವೂ ನೋಡಲು ಅವಕಾಶ ಸಿಗಬಹುದು ಅದನ್ನು ಇನ್ನು ಎರಡು ದಿನ ಹೆಚ್ಚಿಸುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದೇವೆ. ದೇಶದ ವಿವಿಧ ಕಡೆಯಿಂದ ಹಾಗೂ ವಿದೇಶಗಳಿಂದ ಇದಕ್ಕಾಗಿ ಹೂಗಳನ್ನು ತರಿಸಿಕೊಳ್ಳಲಾಗುತ್ತಿದೆ ಈ ಬಾರಿಯೂ ಕೂಡ ಕೋವಿಡ್ ನಿಯಮಗಳನ್ನು ಅನುಸರಿಸಿಯೇ ನಾವು ಕಾರ್ಯಕ್ರಮ ನಡೆಸುತ್ತೇವೆ ಎಂದು ಮಾತನಾಡಿದ್ದಾರೆ. ಹಾಗೂ ಈ ಮೇಳದ ವಿಶೇಷತೆ ಈ ಬಾರಿ ಸಂಪೂರ್ಣವಾಗಿ ಪುನೀತ್ ಅವರನ್ನೇ ಒಳಗೊಂಡಿರುತ್ತದೆ ಎಂದು ಕೂಡ ಹೇಳಿದ್ದಾರೆ. ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವ ಹಾಗೂ ಅವರ ಸಿನಿಮಾಗಳು ಈ ವಿಷಯದ ಕುರಿತಾಗಿ ಮೇಳ ನಡೆಸಲಾಗುತ್ತದೆ.
ಅವರ ಗಾಜಿನೂರು ಮನೆಯನ್ನು ಕೂಡ ಹೂವಿನಿಂದ ಅಲಂಕರಿಸುವ ಯೋಜನೆ ಹಾಕಿಕೊಂಡಿದ್ದಾರಂತೆ. ಈಗಾಗಲೇ ರಾಜ್ಯದೆಲ್ಲೆಡೆ ವರುಣನ ಅಬ್ಬರ ತುಂಬಾ ಜೋರಾಗಿದೆ. ರಾಜ್ಯ ರಾಜ್ಯಧಾನಿಯೂ ಕೂಡ ಮಳೆಯಲ್ಲಿ ಮೀಯುತ್ತಿದೆ. ಇದರ ನಡುವೆ ಇಲಾಖೆಗೆ ಸಂಬಂಧಪಟ್ಟವರು ಪ್ರಸಿದ್ಧ ಪುಷ್ಪ ಪ್ರದರ್ಶನ ಕಾರ್ಯಕ್ರಮಕ್ಕೆ ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಎಲ್ಲವು ನಿರೀಕ್ಷೆಯಂತೆ ನಡೆದರೆ ಅಪ್ಪು ಅಭಿಮಾನಿಗಳು ಇದನ್ನು ಕೂಡ ದಾಖಲೆ ಮಟ್ಟದಲ್ಲಿ ತೆಗೆದುಕೊಂಡು ಹೋಗುವುದು ಗ್ಯಾರಂಟಿ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.