Home Viral News ಶ್ರಾವಣಿ ಮತ್ತು ಪುನೀತ್ ರಾಜ್ ಕುಮಾರ್ ಅವರ ನಡುವಿನ ಸಂಬಂಧ ತಿಳಿದರೆ ನಿಜಕ್ಕೂ ಎಲ್ಲರೂ ಕಣ್ಣೀರಿಡುವುದು ಗ್ಯಾರಂಟಿ.

ಶ್ರಾವಣಿ ಮತ್ತು ಪುನೀತ್ ರಾಜ್ ಕುಮಾರ್ ಅವರ ನಡುವಿನ ಸಂಬಂಧ ತಿಳಿದರೆ ನಿಜಕ್ಕೂ ಎಲ್ಲರೂ ಕಣ್ಣೀರಿಡುವುದು ಗ್ಯಾರಂಟಿ.

0
ಶ್ರಾವಣಿ ಮತ್ತು ಪುನೀತ್ ರಾಜ್ ಕುಮಾರ್ ಅವರ ನಡುವಿನ ಸಂಬಂಧ ತಿಳಿದರೆ ನಿಜಕ್ಕೂ ಎಲ್ಲರೂ ಕಣ್ಣೀರಿಡುವುದು ಗ್ಯಾರಂಟಿ.

ಶಾರ್ವರಿ ಸದ್ಯಕ್ಕೆ ಈಕೆ ಶಾರ್ವರಿ ಎನ್ನುವ ಹೆಸರಿಗಿಂತ ಆದ್ರಿಕಾ ಎನ್ನುವ ಹೆಸರಿನಿಂದ ದೇಶದಾದ್ಯಂತ ಫೇಮಸ್, ಯಾಕೆಂದರೆ ಚಾರ್ಲಿ777 ಎನ್ನುವ ಸಿನಿಮಾದಲ್ಲಿ ಈಕೆ ಆರ್ದಿಕಾ ಎನ್ನುವ ಪಾತ್ರ ನಿರ್ವಹಿಸಿದ್ದಳು. ಸಿನಿಮಾದಲ್ಲಿ ಪಪ್ಪಿ ಪಾರ್ಕಿನಲ್ಲಿ ಇತ್ತು ಎನ್ನುವ ಡೈಲಾಗ್ ಯಿಂದ ಫೇಮಸ್ ಆಗಿರುವ ಪುಟ್ಟ ಹುಡುಗಿ ಶಾರ್ವರಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ ಎನ್ನುವ ಕಾರ್ಯಕ್ರಮದಿಂದ ಈ ಮೊದಲು ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದರು. ಡ್ರಾಮಾ ಜೂನಿಯರ್ಸ್ ಎಪಿಸೋಡ್ ಗಳನ್ನು ನೋಡಿ ಆ ಕಾರ್ಯಕ್ರಮದಲ್ಲಿ ಇವರ ಆಕ್ಟಿಂಗ್ ನೋಡಿ ಹಲವಾರು ಸಿನಿಮಾ ಆಫರ್ ಗಳು ಇವರನ್ನು ಹರಸಿ ಬಂದಿದ್ದವು. ಹಾಗಾಗಿ ಇವರು ಪೈಲ್ವಾನ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಮಗಳಾಗಿ ಅಭಿನಯಿಸುವ ಅದೃಷ್ಟ ಪಡೆದುಕೊಂಡರು. ನಂತರ ಲಂಬೋದರ ಇನ್ಸ್ಪೆಕ್ಟರ್ ವಿಕ್ರಂ ಚಾರ್ಲಿ777 ಈ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ.

ಸದ್ಯಕ್ಕೆ ಭಾರತದಾದ್ಯಂತ ಅಬ್ಬರಿಸುತ್ತಿರುವ ಚಾರ್ಲಿ777 ಸಿನಿಮಾದಲ್ಲಿ ಎಲ್ಲಾ ಪಾತ್ರಗಳಿಗೂ ಕೂಡ ಅವರದ್ದೇ ಆದ ಬೆಲೆ ಇದೆ. ಅದರಲ್ಲಿ ಹೆಚ್ಚಿನ ಬೆಲೆ ಈ ಪುಟಾಣಿ ಮಗುವಿಗೆ ಇದೆ ಎನ್ನಬಹುದು. ಸಿನಿಮಾದಲ್ಲಿ ಇರುವ ಎಲ್ಲರಂತೆ ಈಕೆಯು ಕೂಡ ಜನರ ಗಮನವನ್ನು ಸೆಳೆದಿದ್ದಾಳೆ ಹಾಗೂ ಸಿಕ್ಕಾಪಟ್ಟೆ ಫೇಮಸ್ ಕೂಡ ಆಗುತ್ತಿದ್ದಾಳೆ. ಶಾರ್ವರಿಗೆ ಪುನೀತ್ ರಾಜಕುಮಾರ್ ಅವರ ಸಿನಿಮಾಗಳಲ್ಲೂ ಅವರೊಟ್ಟಿಗೆ ಅಭಿನಯಿಸುವ ಅವಕಾಶ ಸಿಕ್ಕಿತಂತೆ. ಅದು ಕೂಡ ಒಂದಲ್ಲ ಎರಡೆರಡು ಸಿನಿಮಾಗಳಲ್ಲಿ ಶಾರ್ವರಿ ಅವರು ಪುನೀತ್ ರಾಜಕುಮಾರ್ ಅವರ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ಅವರ ದುರಾದೃಷ್ಟವೋ ಅಥವಾ ಮತ್ತೇನೋ ಗೊತ್ತಿಲ್ಲ ಎರಡು ಬಾರಿ ಕೂಡ ಈ ಅವಕಾಶಗಳು ಕೈತಪ್ಪಿ ಹೋಗಿವೆ. ಇದರ ಬಗ್ಗೆ ಶಾರ್ವರಿ ಅವರ ತಾಯಿಯೇ ಹೇಳಿಕೊಂಡಿದ್ದಾರೆ.

ನನ್ನ ಮಗಳಿಗೆ ಪುನೀತ್ ರಾಜಕುಮಾರ್ ಅವರು ಎಂದರೆ ತುಂಬಾ ಇಷ್ಟ ಅವರೊಟ್ಟಿಗೆ ಅಭಿನಯಿಸುವ ಅವಕಾಶ ಮೊದಲಿಗೆ ಜೇಮ್ಸ್ ಸಿನಿಮಾದಲ್ಲಿ ಬಂದಿತ್ತು ಆದರೆ ಆ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಭಯ ಇದ್ದ ಕಾರಣ ನಾವು ಅಭಿನಯಿಸುವುದು ಬೇಡ ಎಂದು ಬಿಟ್ಟೆವು. ಆ ದಿನಗಳಲ್ಲಿ ಶಾರ್ವರಿ ತುಂಬಾ ನೊಂದುಕೊಂಡಿದ್ದಳು ಹಾಗೂ ಅವಕಾಶ ಕಳೆದುಕೊಂಡಿದ್ದಕ್ಕಾಗಿ ದುಃಖ ಪಡುತ್ತಿದ್ದಳು. ಅವಳು ಯಾವಾಗಲೂ ಹೇಳುತ್ತಿತ್ತು ಒಂದೇ ನನಗೆ ನಾಲ್ಕು ಆಸೆಗಳು ಇರುವುದು ನಾನು ಮೋದಿ ಅವರನ್ನು ಭೇಟಿಯಾಗಬೇಕು ನಾಯಿ ಜೊತೆ ಸಿನಿಮಾ ಮಾಡಬೇಕು ದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಹಾಗೂ ಪುನೀತ್ ರಾಜಕುಮಾರ್ ಅವರ ಜೊತೆ ಸಿನಿಮಾ ಮಾಡಬೇಕು ಎಂದು ಈಗಾಗಲೇ ಮೋದಿ ಅವರನ್ನು ಭೇಟಿ ಮಾಡಿದ್ದು ಆಯ್ತು ನಾಯಿಯ ಜೊತೆ ಸಿನಿಮಾ ಮಾಡಿದ್ದು ಆಯ್ತು ಮುಂದೆ ಯಾವಾಗಲಾದರೂ ದೇವಿ ಪಾತ್ರವನ್ನು ಕೂಡ ಮಾಡುತ್ತಾಳೆ.

ಆದರೆ ಪುನೀತ್ ಅವರ ಜೊತೆ ನಟಿಸುವ ಅವಕಾಶ ಸಿಗುವುದಿಲ್ಲವಲ್ಲ ಎನ್ನುವುದನ್ನು ನೆನೆದುಕೊಂಡು ಇನ್ನು ಕೂಡ ದುಃಖ ಪಡುತ್ತಾಳೆ ಹಾಗೂ ನಾವು ಜೇಮ್ಸ್ ಸಿನಿಮಾದಲ್ಲಿ ಸಿಕ್ಕ ಅವಕಾಶ ತಪ್ಪಿಸಿ ಬಿಟ್ಟೆವಲ್ಲಾ ಎಂದು ತುಂಬಾ ಕೊರಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೆ ದ್ವಿತ್ವ ಎನ್ನುವ ಸಿನಿಮಾದಲ್ಲೂ ಅಭಿನಯಿಸಲು ಪುನೀತ್ ಅವರ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯಿಂದ ಶಾರ್ವರಿ ಅಕೌಂಟಿಗೆ ಹಣ ಕೂಡ ಹಾಕಿದ್ದಾರಂತೆ ಚೈಲ್ಡ್ ಆರ್ಟಿಸ್ಟ್ ಆಗಿದ್ದರು ಕೂಡ ಸೆಲೆಕ್ಟ್ ಆಗದ ತಕ್ಷಣವೇ ನಂಬರ್ ಪಡೆದುಕೊಂಡು ಪೇಮೆಂಟ್ ಮಾಡಿದ್ದಾರಂತೆ ಆದರೆ ಈ ಬಾರಿಯೂ ಕೂಡ ದೇವರು ಅವರೊಟ್ಟಿಗೆ ಕಾಣಿಸಿಕೊಳ್ಳುವ ಅವಕಾಶ ಕೊಡಲೇ ಇಲ್ಲ ನಾವು ಸಾಧ್ಯವಾದರೆ ಮುಂದೊಂದು ದಿನ ಅವರ ಪ್ರೊಡಕ್ಷನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತೇವೆ ಇಲ್ಲವಾದರೆ ಪುನೀತ್ ಅವರು ಕೊಟ್ಟಿದ್ದ ಹಣವನ್ನು ಸಮಾಜ ಸೇವೆಗಾಗಿ ಖರ್ಚು ಮಾಡುತ್ತೇವೆ ಎಂದು ಶಾರ್ವರಿ ತಾಯಿ ಹೇಳಿಕೊಂಡಿದ್ದಾರೆ.

https://youtu.be/m3Awynwvkxk

LEAVE A REPLY

Please enter your comment!
Please enter your name here