Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಜೋಗಿ ಸಿನಿಮಾದಲ್ಲಿ ಮಿಂಚಿದ್ದ ಜೆನಿಫರ್ ಕೊತ್ವಾಲ್ ಬದುಕು ಈಗ ಹೇಗಾಗಿದೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಈ ನಟಿ ಕಥೆ ಕೇಳಿದ್ರೆ.

Posted on July 16, 2022 By Kannada Trend News No Comments on ಜೋಗಿ ಸಿನಿಮಾದಲ್ಲಿ ಮಿಂಚಿದ್ದ ಜೆನಿಫರ್ ಕೊತ್ವಾಲ್ ಬದುಕು ಈಗ ಹೇಗಾಗಿದೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಈ ನಟಿ ಕಥೆ ಕೇಳಿದ್ರೆ.

ಜೋಗಿ ಸಿನಿಮಾ ಓಂ ಸಿನಿಮಾದ ನಂತರ ರೌಡಿಸಂ ಬಗ್ಗೆ ಜನರಿಗೆ ಮತ್ತಷ್ಟು ಹತ್ತಿರವಾದ ಸಿನಿಮಾ. ಶಿವಣ್ಣನಿಗೆ ಈ ರೀತಿಯ ಪಾತ್ರಗಳು ಸೂಟ್ ಆಗುತ್ತವೋ ಅಥವಾ ಶಿವಣ್ಣನಿಗಾಗಿಯೇ ಈ ರೀತಿಯ ಪಾತ್ರಗಳನ್ನು ಮಾಡುತ್ತಾರೋ ಗೊತ್ತಿಲ್ಲ. ಜೋಗಿ ಸಿನಿಮಾದ ಶಿವಣ್ಣನ ಪಾತ್ರ ನಮ್ಮ ಕಣ್ಣು ಮುಂದೆ ನಮ್ಮ ಮನೆ ಎದುರಿಗಿರುವ ವ್ಯಕ್ತಿಯ ಬದುಕಿನಲ್ಲಿ ಆಗುತ್ತಿರುವಂತಹ ಘಟನೆ ಎನಿಸುವಷ್ಟು ತುಂಬಾ ನೈಜವಾಗಿ ಅಭಿನಯಿಸಿದ್ದಾರೆ ಶಿವರಾಜ್ ಕುಮಾರ್ ಅವರು. ಡೈರೆಕ್ಟರ್ ಪ್ರೇಮ್ ಅವರ ನಿರ್ದೇಶನದ ಈ ಸಿನಿಮಾ ಕನ್ನಡದಲ್ಲಿ ಹೊಸ ದಾಖಲೆಯನ್ನೇ ಬರೆಯಿತು. ಪ್ರೇಮ್ ಅವರು ಹಳ್ಳಿಯಿಂದ ಬಂದ ಪ್ರತಿಭೆ ಆಗಿದ್ದರಿಂದ ತಮ್ಮ ಬಾಲ್ಯದಿಂದ ಏನನ್ನು ಅವರು ನೋಡಿಕೊಂಡು ಬಂದಿದ್ದರು ಅದೇ ಜೋಗಿಯ ಕಾರ್ಯವನ್ನು ಸಿನಿಮಾ ಮೂಲಕ ಜನರಿಗೆ ತೋರಿಸಲು ಪ್ರಯತ್ನ ಪಟ್ಟರು. ಅವರ ನಿರೀಕ್ಷೆಗಿಂತಲೂ ಒಂದು ಪಟ್ಟು ಹೆಚ್ಚಿಗೆ ಅದನ್ನು ಸಮರ್ಪಕವಾಗಿ ನಿರ್ವಹಿಸಿದರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಎನ್ನಬಹುದು.

ಡಾಕ್ಟರ್ ರಾಜಕುಮಾರ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರಾದ್ದರಿಂದ ಮಲೈ ಮಹದೇಶ್ವರನ ಭಕ್ತರು ಎಂದು ಹೇಳಬಹುದು ಹೀಗಾಗಿ ಆ ಭಾಷೆ ಸೊಗಡು ರಾಜಣ್ಣನ ಕುಟುಂಬದಲ್ಲಿ ಎಲ್ಲರಿಗೂ ಇದೆ. ಸಾಮಾನ್ಯವಾಗಿ ಶಿವರಾಜ್ ಕುಮಾರ್, ಡಾಕ್ಟರ್ ರಾಜಕುಮಾರ್ ಅವರು ಮಾತನಾಡುವಾಗ ಪುನೀತ್ ರಾಜಕುಮಾರ್ ಅವರು ಮಾತನಾಡುವಾಗ ಈ ರೀತಿ ಮೂಡಲು ಸೀಮೆಯ ಸೊಗಡು ಅವರ ಭಾಷೆಯಲ್ಲಿ ಬರುವುದನ್ನು ನಾವೆಲ್ಲರೂ ಗಮನಿಸಬಹುದು. ಹಾಗಾಗಿ ಜೋಗಿ ಸಿನಿಮಾದಲ್ಲಿ ಶಿವರಾಜಕುಮಾರ್ ಅವರು ಮಾತನಾಡಿರುವ ಸ್ಟ್ಲಾಂಗ್ ಶಿವರಾಜ್ ಕುಮಾರ್ ಅವರಿಗೆ ತಿಳಿದಿರುವ ಭಾಷಾ ಶೈಲಿಯೇ ಆಗಿದೆ. ಹೀಗಾಗಿ ಸಿನಿಮಾದಲ್ಲಿ ಇದು ಅವರಿಗೆ ಹೆಚ್ಚು ಸಹಾಯ ಆಗಿರಬಹುದು ಹಾಗೂ ಅದೇ ಸ್ಕ್ರೀನ್ ಮೇಲೆ ಹೆಚ್ಚು ವರ್ಕ್ ಕೂಡ ಆಗಿರಬಹುದು. ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ತಾಯಿ ಸೆಂಟಿಮೆಂಟ್.

ಅರುಂಧತಿ ನಾಗ್ ಅವರು ಕನ್ನಡ ಸಿನಿಮಾ ಗೆ ಮತ್ತೆ ಕಂಬ್ಯಾಕ್ ಮಾಡಿದ ಸಿನಿಮಾ ಇದು ಅದರಲ್ಲೂ ಶಿವರಾಜ್ ಕುಮಾರ್ ಅವರ ತಾಯಿಯಾಗಿ ಅರುಂಧತಿ ನಾಗ್ ಅವರು ಅಭಿನಯ ಮಾಡಿರುವುದು ವಿಶೇಷ. ಈ ಸಿನಿಮಾದಲ್ಲಿ ತಾಯಿಗಾಗಿ ಬರೆದಿರುವ ಬೇಡುವೆನು ವರವನ್ನು ಕೊಡೆ ತಾಯಿ ಜನುಮವನು ಈ ಹಾಡು ಈಗಲೂ ಕೂಡ ಎಷ್ಟೊ ತಾಯಿ ಮಕ್ಕಳ ಫೇವರೆಟ್ ಹಾಡು. ಇಂದಿಗೂ ಅದೆಷ್ಟೋ ಜನರ ಫೇವರೆಟ್ ಹಾಡಿನ ಲಿಸ್ಟಿನಲ್ಲಿ ಈ ಹಾಡು ಮೊದಲನೇ ಸಾಲಿನಲ್ಲಿ ಬರುತ್ತದೆ ಹಾಡಿಗೆ ತಕ್ಕ ಹಾಗೆ ಇರುವ ಮದರ್ ಥೀಮ್ ಎಂತವರ ಮನಸ್ಸನ್ನು ಕೂಡ ಕಲಕಿ ಬಿಡುತ್ತದೆ. ತಾಯಿಗೆ ಬಳೆ ಮಾಡಿಸುವ ಆಸೆಗಾಗಿ ಊರನ್ನು ಬಿಟ್ಟು ಬೆಂಗಳೂರಿಗೆ ಕೆಲಸ ಅರಸಿ ಬರುವ ಮಗನು ಅಮಾಯಕವಾಗಿ ರೌಡಿಸಂ ಗೆ ಸಿಕ್ಕಿ ಬದುಕು ದಿಕ್ಕೆಡಿಸಿಕೊಂಡ ಕಥೆ ಇದು.

ಹಾಗೂ ಮುನಿಸಿಕೊಂಡ ಬಂದ ಮಗನನ್ನು ಊರಿಗೆ ಮತ್ತೆ ಕರೆತರಲು ಬೆಂಗಳೂರಿನಂತಹ ಮಹಾನಗರಕ್ಕೆ ಅಡ್ರೆಸ್ ಇಲ್ಲದೆ ಬಂದ ತಾಯಿಯ ಗೋಳಿನ ಕಥೆ ಇದು ಎನ್ನಬಹುದು. ಜೊತೆಗೆ ಅಂಡರ್ವರ್ಲ್ಡ್ ಡಾನ್ ಒಬ್ಬರ ಕಥೆಯನ್ನು ಸೇರಿಸಿ ಸಿನಿಮಾಗೆ ಮಿಶ್ರಣ ಮಾಡಿ ಒಂದೊಳ್ಳೆ ಚಿತ್ರವನ್ನು ಕನ್ನಡಕ್ಕೆ ಕೊಟ್ಟರು ಪ್ರೇಮ್ ಅವರು. ಈ ಸಿನಿಮಾದಲ್ಲಿ ಇತರ ಪಾತ್ರಗಳ ಜೊತೆಗೆ ಸಿನಿಮಾ ಪೂರ್ತಿ ಪ್ರೇಕ್ಷಕರನ್ನು ರಂಜಿಸಿದ್ದು ನಾಯಕಿಯ ಪಾತ್ರ. ಆ ಸಮಯದ ಎಲ್ಲಾ ಶಾಲಾ, ಕಾಲೇಜು ಮಕ್ಕಳ ಫಂಕ್ಷನ್ ಗಳಿಗೆ ಜನಿಫರ್ ಅವರ ಎಲ್ಲೋ ಜೋಗಪ್ಪ ನಿನ್ನ ಅರಮನೆ ಮತ್ತು ಚುಕುಬುಕು ರೈಲು ಹಾಡು ಅವರ ಸೆಲೆಕ್ಷನ್ ಆಗಿರುತ್ತಿತ್ತು. ಜನಿಫರ್ ಕೊತ್ವಾಲ್ ಅವರು ಮೂಲತಃ ಮುಂಬೈನವರು ಮಾಡೆಲ್ ಆಗಿ ಇದ್ದ ಇವರನ್ನು ಕನ್ನಡದ ಜೋಗಿ ಸಿನಿಮಾ ಪಾತ್ರಕ್ಕಾಗಿ ಪ್ರೇಮ್ ಅವರು ಕರೆತಂದಿದ್ದರು.

ಜೋಗಿ ಸಿನಿಮಾದಲ್ಲಿ ಸಿನಿಮಾ ಪೂರ್ತಿ ತುಂಬಾ ಚಟುವಟಿಕೆಯಿಂದ ಕಾಣಿಸಿಕೊಂಡು ಎಲ್ಲರನ್ನೂ ರಂಜಿಸಿದ ಜನಿಫರ್ ಅವರು ಆ ಸಿನಿಮಾದ ನಂತರ ಕೆಲವೇ ಕೆಲವು ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಂಡು ನಂತರ ಕನ್ನಡ ಚಿತ್ರರಂಗದಿಂದ ದೂರವಾಗಿ ಬಿಟ್ಟರು. ಲವಕುಶ ಸ್ವಸ್ತಿಕ್ ಮಸ್ತ್ ಮಜಾ ಮಾಡಿ ಮಸ್ತಿ ಮತ್ತು ಕೊನೆಯದಾಗಿ ಕಿಶೋರ್ ಅವರ ಅಭಿನಯದ ಹುಲಿ ಎನ್ನುವ ಸಿನಿಮಾದಲ್ಲಿ ಜೆನಿಫರ್ ಕೊಪ್ಪಲ್ ಅವರ ನಾಯಕಿಯಾಗಿ ಕಾಣಿಸಿಕೊಂಡರು ಹಾಗೂ ತಮಿಳು ತೆಲುಗು ಭಾಷೆ ಒಂದೆರಡು ಸಿನಿಮಾದಲ್ಲಿ ಮಾತ್ರ ಇವರು ಕಾಣಿಸಿಕೊಂಡರು. ಅನಂತರ ಹೆಚ್ಚಾಗಿ ಇವರಿಗೆ ಅವಕಾಶಗಳು ಅರಸಿ ಬರಲೇ ಇಲ್ಲ ಹಾಗಾಗಿ ತಮ್ಮ ಕುಟುಂಬದವರ ಒತ್ತಾಯದ ಮೇರೆಗೆ ಹೆತ್ತವರ ಜೊತೆ ಸಮಯ ಕಳೆಯಲು ನಟಿ ದೆಹಲಿಗೆ ಹೋಗಿ ಈಗ ಕುಟುಂಬದವರ ಜೊತೆ ಸಂತೋಷದಿಂದ ಅಲ್ಲೇ ಕಾಲ ಕಳೆಯುತ್ತಿದ್ದಾರೆ. ಸಿನಿಮಾದಿಂದ ದೂರವಾದ ಮೇಲೆ ನಟಿ ಗಳಿಕೆಗಾಗಿ ಜಾಹೀರಾತುಗಳಲ್ಲಿ ಭಾಗವಹಿಸುತ್ತಿದ್ದಾರೆ ಹಾಗೂ ತಮ್ಮ ಹಿಂದಿನ ಮಾಡಲ್ ವೃತ್ತಿಯನ್ನು ಕೂಡ ಮುಂದುವರಿಸಿದ್ದಾರೆ.

ಅಲ್ಲದೆ ತಮ್ಮದೇ ಖಾಸಗಿ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಇವರು ಹಲವಾರು ಬ್ಲಾಗ್ ಗಳನ್ನು ಹೊಂದಿದ್ದಾರೆ. ಇವುಗಳ ಮೂಲಕ ಟೂರಿಂಗ್ ಗೆ ಸಂಬಂಧ ಪಟ್ಟ ವಿಶೇಷ ಮಾಹಿತಿಗಳು ಹಾಗೂ ಗೈಡೆನ್ಸ್ ಗಳನ್ನು ನೀಡುತ್ತಿದ್ದಾರೆ ಆ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. ಇನ್ನು ಸಿಂಗಲ್ ಆಗಿ ಉಳಿದಿರುವ ಈ ನಟಿಯ ಮದುವೆ ಬಗ್ಗೆ ಕುಟುಂಬದವರು ಹೆಚ್ಚು ತಲೆ ಕೆಡಿಸಿಕೊಂಡಿದ್ದಾರಂತೆ. ಒಳ್ಳೆ ಹುಡುಗ ಸಿಕ್ಕರೆ ಶೀಘ್ರವೇ ನಟಿ ಜೆನಿಫರ್ ಅವರ ಮದುವೆ ಕಾರ್ಯಕ್ರಮವನ್ನು ಕೂಡ ಮಾಡಿ ಮುಗಿಸಲಿದ್ದಾರಂತೆ. ಜೋಗಿ ಹಾಗೂ ಇನ್ನು ಹಲವು ಸಿನಿಮಾಗಳಿಂದ ಕನ್ನಡಿಗರಿಗೆ ಮನೋರಂಜನೆ ಕೊಟ್ಟ ಈ ನಟ್ಟಿಗೆ ಕನ್ನಡದಲ್ಲಿ ಇನ್ನಷ್ಟು ವಿಶೇಷ ಪಾತ್ರಗಳಿಗಾಗಿ ಅವಕಾಶಗಳು ದೊರಕಲಿ ಹಾಗೂ ಅವರ ಮುಂದಿನ ಕನಸುಗಳು ಏನೇ ಇದ್ದರೂ ಕೂಡ ಎಲ್ಲವೂ ಕೂಡ ಒಳಿತಾಗಲಿ ಎಂದು ಹಾರೈಸೋಣ. ಜೆನಿಫರ್ ಕಥೆ ಕೇಳಿದ್ರಲ್ಲ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿ

Entertainment Tags:Jenifar kothwal, Jogi, Shivanna
WhatsApp Group Join Now
Telegram Group Join Now

Post navigation

Previous Post: ಗಣೇಶ ಹಬ್ಬದ ನೆಪದಲ್ಲಿ ಮತ್ತೆ ಬರಲಿದ್ದಾರೆ ಅಪ್ಪು, ಗಣೇಶನೊಟ್ಟಿಗೆ ಇರುವ ಅಪ್ಪು ಪ್ರತಿಮೆ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ ನಿಜಕ್ಕೂ ಕಣ್ಣೀರು ಬರುತ್ತೆ.
Next Post: ಬಹಳ ದಿನಗಳ ನಂತರ ಅಶ್ವಿನಿ ಅವರ ಮುಖದ ಮೇಲೆ ಮೂಡಿದ ನಗು ಇದಕ್ಕೆ ಕಾರಣವೇನು ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore