ಮೇಷ ರಾಶಿಯಲ್ಲಿರುವ ಗುರು ವೃಷಭ ರಾಶಿಗೆ ಬರುತ್ತಿದ್ದಾರೆ, ಎಲ್ಲದಕ್ಕೂ ಕಾರಣಕರ್ತನಾಗಿರುವ ದೇವಗೃಹ ಎಂದು ಕರೆಸಿಕೊಂಡಿರುವ ಗುರು ಸಂಚಾರವು ದ್ವಾದಶ ರಾಶಿಗಳೆಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಒಂದಷ್ಟು ರಾಶಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಿದರೆ ಕೆಲವೊಂದು ರಾಶಿಗಳ ಅನಾನುಕೂಲತೆಯನ್ನು ಅನುಭವಿಸಬೇಕಾಗುತ್ತದೆ. ಆ ಪ್ರಕಾರವಾಗಿ ಸಿಂಹ ರಾಶಿಯ ಮೇಲೆ ಗುರುವಿನ ಸಂಕ್ರಮಣ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.
ಸಿಂಹ ರಾಶಿಯಿಂದ ದಶಮ ರಾಶಿಯಾದ ವೃಷಭ ರಾಶಿಗೆ ಗುರು ಬರುತ್ತಿದ್ದಾರೆ. ಇದು ನಿಮಗೆ ಉದ್ಯೋಗದ ವಿಚಾರವಾಗಿ ಬಹಳ ಉತ್ತಮ ಪರಿಣಾಮಗಳನ್ನು ಕೊಡುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಅಥವಾ ಬಹಳ ದಿನಗಳಿಂದ ಪ್ರಮೋಷನ್ ನಿರೀಕ್ಷೆಯಲ್ಲಿದ್ದರೆ ಉದ್ಯೋಗ ದೊರಕುವ ಭಾಗ್ಯ ಅಥವಾ ಉದ್ಯೋಗ ಬದಲಿಸಲು ಯೋಚಿಸುತ್ತಿದ್ದರೆ ಮತ್ತೊಂದು ಕಡೆ ಒಳ್ಳೆಯ ವೇತನಕ್ಕೆ ಅನುಕೂಲಕರವಾದ ಉದ್ಯೋಗ ಸಿಗುವುದು ವರ್ಗಾವಣೆ ಸಿಗುವುದು ಮೇಲಾಧಿಕಾರಿಗಳಿಂದ ಪ್ರಶಂಸೆ ಈ ರೀತಿ ಉತ್ತಮ ಪರಿಣಾಮಗಳು ಸಿಗಲಿದೆ.
ಅಷ್ಟಮ ರಾಶಿಯಾಧಿಪತಿಯಾಗಿ ಕೂಡ ಗುರು ಇರುವುದರಿಂದ ಸಿಂಹ ರಾಶಿಯವರಿಗೆ ಈ ಸಮಯದಲ್ಲಿ ಬಹಳ ಪೈಪೋಟಿಗಳು ಎದುರಾಗುತ್ತವೆ. ನಿಮ್ಮ ಏಳಿಗೆ ಸಹಿಸಲಾಗದೇ ಕೆಲವರಿಂದ ಕೇಡು ಕೂಡ ಉಂಟಾಗಬಹುದು ಎಚ್ಚರ. ಗುರು ಪಂಚಮಾಧಿಪತಿ ಕೂಡ ಆಗಿರುವುದರಿಂದ ಈ ಸಮಯದಲ್ಲಿ ನೀವು ಯಾವುದರ ಮೇಲೆ ಹೂಡಿಕೆ ಮಾಡಿದರೂ ಕೂಡ ಅದರ ದುಪ್ಪಟ್ಟು ಲಾಭವನ್ನು ಪಡೆಯುತ್ತೀರಿ.
ಈ ಸುದ್ದಿ ಓದಿ:- ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!
ಈ ಸಮಯದಲ್ಲಿ ನೀವು ವಿದ್ಯಾಭ್ಯಾಸದ ಮೇಲೆ ಗಮನ ಹರಿಸಿದರೂ ಕೂಡ ನಂತರದ ದಿನಗಳಲ್ಲಿ ಇದರ ಉತ್ತಮ ಪರಿಣಾಮಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಸಿಂಹ ರಾಶಿಯವರಿಗೆ ನೀಡಬಹುದಾದ ಸಲಹೆ ಏನೆಂದರೆ, ಈ ಸಮಯದಲ್ಲಿ ನೀವು ಶಕ್ತರಾಗಿರುವುದರಿಂದ ದಾನ ಧರ್ಮದಲ್ಲೂ ಕೂಡ ನಂಬಿಕೆ ಇಟ್ಟು ಪುಣ್ಯ ಕಾರ್ಯಗಳಲ್ಲಿ ತೊಡಗಿದರೆ ಮುಂದೆ ಒಂದು ದಿನ ಇದರ ಪ್ರತಿಫಲ ನಿಮಗೆ ಖಂಡಿತ ದೊರಕುತ್ತದೆ.
ಆರ್ಥಿಕತೆ, ಸಂತಾನ, ವಿವಾಹ ಭಾಗ್ಯ, ವಿದೇಶ ಪ್ರಯಾಣ ಇದೆಲ್ಲದಕ್ಕೂ ಕೂಡ ಕಾರಕನಾಗಿರುವ ಗುರುವು ಈ ವಿಚಾರಗಳಲ್ಲಿ ಯಾವ ರೀತಿಯ ಪರಿಣಾಮ ಉಂಟುಮಾಡುತ್ತಾರೆ ಎಂದು ನೋಡುವುದಾದರೆ, ಗುರುವಿನ ಒಂದು ಗುಣವೇನೆಂದರೆ ಗುರುಬಲ ಇದ್ದಾಗ ಗುರುವಿನ ಬಲದಿಂದ ಈ ಸಂಗತಿಗಳು ನಿರ್ವಿಘ್ನವಾಗಿ ಸಾಗುತ್ತವೆ.
ಈ ವಿಚಾರದಲ್ಲಿ ಪ್ರಯತ್ನ ಪಟ್ಟರೆ ಗುರುಬಲದಿಂದ ಇವುಗಳು ನಡೆಯುತ್ತದೆ. ಗುರುಬಲ ಇಲ್ಲದೆ ಇದ್ದರೆ ಈ ವಿಚಾರಗಳಲ್ಲಿ ತೊಂದರೆಯಾಗುತ್ತದೆ ಎಂದು ಭಯಪಡುವ ಅಗತ್ಯ ಖಂಡಿತ ಇಲ್ಲ. ಈ ವಿಚಾರಗಳಲ್ಲಿ ಗುರು ತಟಸ್ಥ ಉದಾಹರಣೆಗೆ ನೀವು ಹಣಕಾಸಿನ ಸಂಪಾದನೆ ಮಾಡಲು ಕಷ್ಟ ಆಗುತ್ತದೆ ಹೊರತು ಒಂದು ರೂಪಾಯಿ ಕೂಡ ದುಡ್ಡು ಮಾಡಲು ಸಾಧ್ಯವೇ ಆಗುವುದಿಲ್ಲ ಎಂದು ಅರ್ಥವಲ್ಲ. ಹೆಚ್ಚಿನ ಶ್ರಮ ಹಾಕಿ ನೀವು ಕೆಲಸ ಮಾಡಬೇಕಾಗುತ್ತದೆ ಅಷ್ಟೇ.
ಈ ಸುದ್ದಿ ಓದಿ:- ಮಕ್ಕಳು ಯಾವ ತಿಂಗಳಲ್ಲಿ ಜನಿಸಿದರೆ ಏನು ಫಲ ನೋಡಿ.!
ಈ ರೀತಿ ವಿಚಾರದಲ್ಲಿ ಮಾತ್ರವಲ್ಲದೆ ಉಳಿದ ಎಲ್ಲಾ ವಿಚಾರಗಳನ್ನು ಕೂಡ ಇದೇ ರೀತಿಯ ಪರಿಣಾಮ ಉಂಟು ಮಾಡುತ್ತದೆ. ಗುರುಬಲ ಕಡಿಮೆ ಆದಾಗ ನೀವು ಬಹಳ ಕಷ್ಟಪಟ್ಟು ನೀವು ಇಚ್ಛೆ ಪಡುವ ವಸ್ತುಗಳನ್ನು ಪಡೆದುಕೊಳ್ಳಬೇಕಾಗುತ್ತದೆ.
ಈ ವರ್ಷದಲ್ಲಿ ಸಿಂಹ ರಾಶಿಯವರಿಗೆ ಗುರು ಬಲ ಕಡಿಮೆ ಇರುತ್ತದೆ ಆದರೆ ಎಲ್ಲ ರಾಶಿಯವರಿಗೂ ಒಳ್ಳೆಯದನ್ನು ಬಯಸುವ ರಾಶಿಯಾಗಿರುವ ಗುರುಗ್ರಹದಿಂದ ಯಾವುದೇ ರೀತಿಯ ತೊಂದರೆಗಳಂತೂ ಉಂಟಾಗುವುದಿಲ್ಲ ಗುರುವಿನ ಆರಾಧನೆ ಮಾಡಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ ಶುಭವಾಗಲಿ.