ಸಂತಾನ ಎನ್ನುವುದು ಜೀವನದ ಅತ್ಯಂತ ಸಂತೋಷಕರ ಸಂಗತಿ. ನಮ್ಮ ವಂಶ ಬೆಳಗುವ ಕುಡಿಯನ್ನು ನಾವು ಕೊಡದೇ ಹೋದಲ್ಲಿ ಅದು ಜೀವಮಾನ ಪೂರ್ತಿ ಕಾಡುವ ಕೊರಗಾಗಿ ಬಿಡುತ್ತದೆ ಮತ್ತು ಈ ರೀತಿ ಸಂತಾನ ಇಲ್ಲದೆ ಹೋದರೆ ಶಾಪವೆಂದು ಜನರ ದೃಷ್ಟಿಯಲ್ಲಿ ಕರೆಸಿಕೊಳ್ಳಬೇಕಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ಹೆಣ್ಣು ಮಕ್ಕಳಿಗೆ ಇದರ ಸಂಬಂಧಿತವಾದ ದೋಷಗಳು ಇದ್ದರೆ, ಅನೇಕ ಸಂದರ್ಭಗಳಲ್ಲಿ ಗಂಡು ಮಕ್ಕಳಿಗೂ ಕೂಡ ಈ ಯೋಗ ಇಲ್ಲದ ಕಾರಣದಿಂದಾಗಿ ಸಂತಾನ ಫಲ ಇರುವುದಿಲ್ಲ. ಟೆಕ್ನಾಲಜಿ ಈಗ ಬಹಳಷ್ಟು ಮುಂದುವರೆದಿದೆಯಾದರೂ ಇದೆಲ್ಲಕ್ಕೂ ಮುನ್ನವೇ ನಮ್ಮ ಸಂಸ್ಕೃತಿಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಮೂಲಕ ಹಾಗೂ ಹಸ್ತಸಾಮುದ್ರಿಕ ಶಾಸ್ತ್ರದ ಮೂಲಕ ಕೂಡ ಈ ಸಂತಾನ ಭಾಗ್ಯವನ್ನು ಅಳೆಯಲಾಗುತ್ತಿತ್ತು.
ವಿಜ್ಞಾನ ಇಷ್ಟು ಬೆಳೆಯುವ ಮುನ್ನ ಹಿಂದೆ ಈ ಪ್ರಕಾರವಾಗಿ ಗುರುತಿಸಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು ಮತ್ತು ಶೇಕಡವಾರು ಇದು ಹೋಲಿಕೆಯಾಗಿದೆ ಕೂಡ ಹಾಗಾಗಿ ಇಂದಿಗೂ ಇದರ ಮೇಲೆ ಜನರಿಗೆ ನಂಬಿಕೆ ಇದೆ. ಈಗಲೂ ನಮ್ಮ ಕೈಯಲ್ಲಿರುವ ಹಸ್ತ ರೇಖೆಗಳು ಯಾವ ರೀತಿಯಾಗಿ ನಮ್ಮ ಸಂತಾನ ಫಲದ ಬಗ್ಗೆ ನಮಗೆ ಸೂಚನೆ ಕೊಡುತ್ತವೆ.
ಈ ಸುದ್ದಿ ಓದಿ:- ಸಿಂಹ ರಾಶಿ ಮೇಲೆ ಗುರು ಪರಿವರ್ತನೆ ಯಾವ ರೀತಿ ಪರಿಣಾಮ ಬೀರಲಿದೆ ಗೊತ್ತಾ.?
ನಿಜವಾಗಿಯೂ ಹಸ್ತ ರೇಖೆಗಳ ಮೂಲಕ ನಮಗೆ ಎಷ್ಟು ಮಕ್ಕಳ ಭಾಗ್ಯ ಇದೆ ಎಂದು ನಾವು ತಿಳಿದುಕೊಳ್ಳಬಹುದೇ ಎಂದರೆ ಹೌದು ಸಾಧ್ಯವಿದೆ. ಹಾಗಾದರೆ ಯಾವ ರೀತಿ ಇದನ್ನು ಕಂಡುಕೊಳ್ಳಬೇಕು ಎನ್ನುವುದರ ಸುಲಭ ವಿಧಾನದ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.
ಕಿರುಬೆರಳ ತುದಿಯಲ್ಲಿ ಬುಧ ಪರ್ವತ ಇರುತ್ತದೆ. ಹೃದಯ ರೇಖೆ ಹಾಗೂ ಬುಧ ಪರ್ವತದ ಮಧ್ಯದಲ್ಲಿ ವಿವಾಹ ರೇಖೆ ಇರುತ್ತದೆ. ಈ ವಿವಾಹ ರೇಖೆಗೆ ಅಡ್ಡಲಾಗಿ ಕೆಲಸ ಸಣ್ಣ ಸಣ್ಣ ರೇಖೆಗಳು ಇರುತ್ತವೆ. ಇವು ವಿವಾಹ ರೇಖೆಗೆ ಅಂಟುಕೊಂಡಿರುತ್ತದೆ.
ಈ ರೇಖೆಗಳು ಗಾಢವಾಗಿ ಇದ್ದರೆ, ನೋಡಿದ ತಕ್ಷಣ ಗುರುತಿಸಲು ಆಗುವ ರೀತಿ ಇದ್ದರೆ ಗಂಡು ಸಂತಾನ ಮತ್ತು ಬಹಳ ಸೂಕ್ಷ್ಮವಾಗಿ ಇದ್ದರೆ ಹೆಣ್ಣು ಸಂತಾನ, ಈ ರೇಖೆಗಳು ಕವಲು ಹೊಡೆದಂತೆ ಗೋಚರವಾದರೆ ಅವಳಿ ಮಕ್ಕಳುಗಳು, ಒಂದು ವೇಳೆ ಯಾವುದೇ ರೀತಿ ರೇಖೆಗಳು ಗೋಚರಿಸಲಿಲ್ಲ ಎಂದರೆ ಸಂತಾನ ಫಲ ಇಲ್ಲ ಎಂದು ಹೇಳಲಾಗುತ್ತದೆ.
ಈ ಸುದ್ದಿ ಓದಿ:-ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!
ಹೆಬ್ಬೆರಳ ಬುಡದಲ್ಲಿ ಶುಕ್ರ ಪರ್ವತಕ್ಕೆ ಅಂಟಿಕೊಂಡಂತೆ ಇರುವ ರೇಖೆಗಳಲ್ಲಿ ದ್ವೀಪದ ರೀತಿ ರಚನೆ ಇದ್ದರೆ ಗಂಡು ಸಂತಾನ, ಸಂಪೂರ್ಣ ಮಾಲಾಕೃತಿ ರೀತಿ ಅಂದರೆ ಸಣ್ಣ ಸಣ್ಣ ರೀತಿ ಅಥವಾ ಸುರಳಿ ಸುತ್ತಿಕೊಂಡ ಹಾಗೆ ರಚನೆ ಇದ್ದರೆ ಹೆಣ್ಣು ಸಂತಾನ ಎಂದು ಗುರುತಿಸಲಾಗುತ್ತದೆ.
ಮತ್ತೊಂದು ರೀತಿಯಲ್ಲೂ ಕೂಡ ಇದನ್ನು ಗುರುತಿಸಲಾಗುತ್ತದೆ ಹೇಗೆಂದರೆ ಹೆಬ್ಬೆರಳ ಮಧ್ಯಭಾಗದಲ್ಲಿ ಇರುವ ಕಂಡುಗಳಲ್ಲಿ ಸಣ್ಣ ಸಣ್ಣ ಸೂಕ್ಷ್ಮ ರೇಖೆಗಳು ಹಾಗೂ ಉದ್ದವಾದ ಗಾಢ ರೇಖೆಗಳು ಕೂಡ ಇರುತ್ತವೆ. ಇದರಲ್ಲಿ ಸೂಕ್ಷ್ಮವಾಗಿರುವ ರೇಖೆಗಳು ಹೆಣ್ಣು ಸಂತಾನವನ್ನು ಸೂಚಿಸುತ್ತದೆ ಮತ್ತು ಗಾಢವಾಗಿರುವ ಉದ್ದನೆಯ ರೇಖೆಗಳು ಗಂಡು ಸಂತಾನವನ್ನು ಸೂಚಿಸುತ್ತವೆ.
ಯಾವ ರೀತಿ ರೇಖೆಗಳು ಇಲ್ಲದೆ ಇದ್ದರೆ ಮಕ್ಕಳ ಭಾಗ್ಯ ಇಲ್ಲ ಎಂದು ಕೊಳ್ಳಬೇಕು ಒಂದು ರೇಖೆಯಲ್ಲಿ ಕವಲು ಹೊಡೆದ ರೀತಿ ಇದ್ದರೆ ಅದನ್ನು ಅವಳಿ ಸಂತಾನ ಎಂದು ಪರಿಗಣಿಸಬೇಕು ಎಂದು ಹಸ್ತಸಾಮುದ್ರಿಕ ಶಾಸ್ತ್ರವು ವಿವರಿಸುತ್ತದೆ. ಒಂದು ವೇಳೆ ಈ ವಿಚಾರವಾಗಿ ನಿಮಗೆ ಸರಿಯಾಗಿ ಸ್ಪಷ್ಟವಾಗಿ ಗೋಚರಿಸದೆ ಹೋದಲ್ಲಿ ಅಥವಾ ನೀವು ಕಂಡುಹಿಡಿಯಲು ವಿಫಲವಾದಲ್ಲಿ ಜ್ಯೋತಿಷ್ಯ ಶಾಸ್ತ್ರಜ್ಞರ ಬಳಿ ಹೋಗಿ ವಿಮರ್ಶೆ ಮಾಡಿಸುವುದು ಸೂಕ್ತ ಎಂದು ಹೇಳಲಾಗುತ್ತದೆ.