Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ತುಳಸಿ ಗಿಡಕ್ಕೆ ಇದೊಂದು ವಸ್ತುವನ್ನು ಹಾಕಿದರೆ ವನದಂತೆ ಬೆಳೆಯುತ್ತದೆ.!

Posted on March 20, 2024 By Kannada Trend News No Comments on ತುಳಸಿ ಗಿಡಕ್ಕೆ ಇದೊಂದು ವಸ್ತುವನ್ನು ಹಾಕಿದರೆ ವನದಂತೆ ಬೆಳೆಯುತ್ತದೆ.!

 

ತುಳಸಿ ಗಿಡಕ್ಕೆ ದೈವಶಕ್ತಿ ಇದೆ. ತುಳಸಿ ಗಿಡದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ಹಾಗೂ ಮಹಾವಿಷ್ಣುವು ನೆಲೆಸಿರುತ್ತಾರೆ ಎನ್ನುವುದು ನಂಬಿಕೆ. ಹೀಗಾಗಿ ಬೆಳಗೆದ್ದು ತುಳಸಿ ಕಟ್ಟೆ ಪೂಜೆ ಮಾಡುವುದು ತಮ್ಮ ಸಂಸ್ಕೃತಿ. ಇದರಿಂದ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಕಷ್ಟ ಕಾರ್ಪಣ್ಯಗಳು ಕಳೆಯುತ್ತವೆ ಎಂದು ಹಿರಿಯರು ತಿಳಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ ತುಳಸಿ ಗಿಡ ವಾಸ್ತುಶಾಸ್ತ್ರದಲ್ಲೂ ಕೂಡ ಬಹಳ ಮಹತ್ವ ಪಡೆದುಕೊಂಡಿದೆ. ಆಯುರ್ವೇದಲ್ಲಿಯೂ ತುಳಸಿಯ ಔಷಧಿಯ ಗುಣಗಳ ಬಗ್ಗೆ ವಿವರಿಸಲಾಗಿದೆ, ತುಳಸಿ ಎಲೆ ಬಳಕೆ ಅಪಾರವಾಗಿದೆ. ಉದಾಹರಣೆಗೆ ಹೇಳುವುದಾದರೆ ತುಳಸಿ ಗಿಡಕ್ಕೆ ಎಷ್ಟು ಶಕ್ತಿ ಇದೆ ಎಂದರೆ ನಿಮ್ಮ ಮನೆ ಮೇಲೆ ಆಗುವ ಕೆಟ್ಟ ಪರಿಣಾಮಗಳನ್ನು ಅದು ತಡೆದು ಯಾವಾಗಲೂ ಮನೆಗೆ ಪಾಸಿಟಿವ್ ವೈಬ್ರೇಶನ್ ನೀಡುತ್ತಿರುತ್ತದೆ ಹೀಗಾಗಿ ಪ್ರತಿ ಮನೆ ಮುಂದೆ ಕೂಡ ತುಳಸಿ ಗಿಡ ಇರಬೇಕು.

ಈ ಸುದ್ದಿ ಓದಿ:- 2024 ಮಾರ್ಚ್ ತಿಂಗಳ ರಾಶಿ ಫಲ, ಮಿಥುನ ರಾಶಿಯವರು ಸದೃಢರಾಗಲು ಒಂದು ಒಳ್ಳೆಯ ಅವಕಾಶ.!

ಆದರೆ ತುಳಸಿ ಗಿಡವು ಎಲ್ಲ ಮನೆಗಳಲ್ಲೂ ಚೆನ್ನಾಗಿ ಬರುವುದಿಲ್ಲ. ಕಾಯಿಲೆ ಬೀಳುತ್ತದೆ ಅಥವಾ ಒಣಗಿ ಹೋಗುತ್ತದೆ ಅಥವಾ ಕೊಳೆತು ಹೋಗುತ್ತದೆ. ಇದನ್ನು ಅಶುಭ ಎಂದು ಹೇಳಲಾಗುತ್ತದೆ ಹಾಗಾಗಿ ಗಿಡ ಒಣಗದೆ ಸೊಂಪಾಗಿ ದಟ್ಟವಾಗಿ ಚೆನ್ನಾಗಿ ತುಳಸಿ ಬೆಳೆಯಬೇಕು ಎಂದರೆ ಅದಕ್ಕೆ ಕೆಲವು ನಿಯಮಗಳನ್ನು ಪಾಲಿಸಬೇಕು. ಅದರ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

* ವಾತಾವರಣದ ವ್ಯತ್ಯಾಸಗಳಿಂದಲೂ ತುಳಸಿ ಗಿಡ ಒಣಗುತ್ತದೆ ಅತಿಯಾದ ಮಳೆ ಅತಿಯಾದ ಬಿಸಿಲು ಕೂಡ ಒಳ್ಳೆಯದಲ್ಲ. ಬಹಳ ಬಿಸಿಲು ಬೀಳುವ ಜಾಗದಲ್ಲಿ ಮತ್ತು ನೇರವಾಗಿ ಸೂರ್ಯನ ಕಿರಣ ಬೀಳುವ ಜಾಗದಲ್ಲಿ ತುಳಸಿ ಕಟ್ಟೆ ಇಡಬಾರದು

* ನೀವೇನಾದರೂ ರಾಸಾಯನಿಕ ಗೊಬ್ಬರಗಳನ್ನು ಹಾಕಿದರೆ ತುಳಸಿ ಗಿಡ ಬರುವುದಿಲ್ಲ.
* ಈಗ ಬರುವ ಅಗರಬತ್ತಿ ಧೂಪದ ಕಡ್ಡಿ ಕೆಮಿಕಲ್ ಯುಕ್ತವಾದ್ದರಿಂದ ತುಳಸಿ ಬುಡದಲ್ಲಿ ಅದನ್ನು ಇಡಬಾರದು, ಇದರ ಸೈಡ್ ಎಫೆಕ್ಟ್ ನಿಂದ ಕೂಡ ಗಿಡ ಹಾಳಾಗುತ್ತದೆ.
* ತುಳಸಿ ಗಿಡದ ಮೇಲೆ ಇಬ್ಬನಿ ಹನಿಗಳು ಹಾಗೂ ಮಂಜು ಬೀಳುವುದರಿಂದ ಕೂಡ ಗಿಡ ಹಾಳಾಗುತ್ತದೆ.

ಈ ಸುದ್ದಿ ಓದಿ:- ಸಂತಾನ ಭಾಗ್ಯ ಇಲ್ಲದವರು ಈ ಪೂಜೆ ಮಾಡಿದರೆ ಫಲ ಕಂಡಿತ…

* ತುಳಸಿ ಗಿಡವು ಗಟ್ಟಿಯಾದ ಗಿಡ ಅದರಿಂದ ಇದನ್ನು ಬೆಳಸಲು ಮರಳು ಮಿಶ್ರಿತ ಮಣ್ಣನ್ನು ಹಾಕಬೇಕು. ಬರಿ ಮಣ್ಣನ್ನು ಹಾಕುವುದರಿಂದ ಮಣ್ಣು ಜಾಸ್ತಿ ನೀರು ಕುಡಿದು ಕೆಸರಾದರೆ ಅಲ್ಲೇ ಬೇರು ಕೊಳೆತು ಗಿಡ ಬರುವುದಿಲ್ಲ. ಹೆಚ್ಚು ಕ್ಷಾರ ಹಾಗು ಲವಣ ಯುಕ್ತ ಮಣ್ಣನ್ನು ಹಾಕಬಾರದು ಮತ್ತು ಅಗತ್ಯಕ್ಕಿಂತ ಹೆಚ್ಚು ನೀರನ್ನು ಕೂಡ ಹಾಕಬಾರದು ಎರಡು ದಿನಗಳು ಒಮ್ಮೆ ಶುದ್ದವಾದ ನೀರನ್ನು ಹಾಕಿದರೆ ಸಾಕು.

* ತುಳಸಿ ಗಿಡದಲ್ಲಿ ಬರುವ ಹೂವು ಹಾಗೂ ಬೀಜವನ್ನು ಆಗಾಗ ತೆಗೆಯುತ್ತಿರಬೇಕು, ಇಲ್ಲವಾದಲ್ಲಿ ತುಳಸಿಯು ಅನಾರೋಗ್ಯಕ್ಕೆ ಒಳಗಾಗಿ ಒಣಗುತ್ತದೆ. ಈ ಮಂಜರಿಗಳು ಗಿಡದ ಮೇಲೆ ಇರುವವರೆಗೂ ತುಳಸಿ ಗಿಡದ ಶಕ್ತಿ ಕಡಿಮೆ ಆಗುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಆಗಾಗ ನೋಡಿಕೊಳ್ಳುತ್ತಾ ತೆಗೆಯಬೇಕು ಮತ್ತು ತೆಗೆಯುವ ಮೊದಲು ತುಳಸಿ ಗಿಡಕ್ಕೆ ಪ್ರಾರ್ಥನೆ ಮಾಡಿ ತೆಗೆಯಬೇಕು. ಭಾನುವಾರ ಹಾಗೂ ಏಕಾದಶಿಗಳ ದಿನ ತೆಗೆಯಬಾರದು.

* ತುಳಸಿ ಗಿಡವನ್ನು ಉಗುರಿನಲ್ಲಿ ಕತ್ತರಿಸಬಾರದು ಎಲ್ಲೆಲ್ಲಿ ಅದು ಒಣಗುತ್ತಿದೆಯೋ ಅಥವಾ ಕೊಳತಿದೆಯೋ ಅಲ್ಲಿ ಮಾತ್ರ ಅವುಗಳನ್ನು ಕತ್ತರಿ ಸಹಾಯದಿಂದ ತೆಗೆಯಬೇಕು. ಕಟ್ ಮಾಡಿ ತೆಗೆದ ಜಾಗಕ್ಕೆ ಅರಿಶಿನದ ಪೇಸ್ಟ್ ಹಾಕಬೇಕು.

ಈ ಸುದ್ದಿ ಓದಿ:- ನಿಮ್ಮ ಮನೆ ಅಕ್ಕ ಪಕ್ಕ ಯಾವ ರೀತಿಯ ಗಿಡ ಇದ್ದರೆ ಏನು ಫಲ ತಿಳಿದುಕೊಳ್ಳಿ.!

* ತುಳಸಿಕಟ್ಟೆಯಲ್ಲಿ ಬೆಳೆಯುವ ಹುಲ್ಲುಗಳು ಮತ್ತು ಶೇಖರಣೆಯಾಗುವ ಕಸಗಳನ್ನು ಆಗಾಗ ನೋಡಿಕೊಂಡು ತೆಗೆಯುತ್ತ ಇರಬೇಕು.
* ತುಳಸಿ ಗಿಡಕ್ಕೆ ಗೊಬ್ಬರ ಹಾಕುವ ಮುನ್ನ ಮಣ್ಣನ್ನು ಸಡಿಲಗೊಳಿಸಬೇಕು, ಸೆಗಣಿಯಿಂದ ಮಾಡಿದ ಕಾಂಪೋಸ್ಟ್ ಗೊಬ್ಬರ ಹಾಕುವುದರಿಂದ ಚೆನ್ನಾಗಿ ಬೆಳೆಯುತ್ತದೆ. ಗೊಬ್ಬರ ಹೆಚ್ಚಾದರೂ ಕೂಡ ಗಿಡ ಕೊಳೆತು ಹೋಗುತ್ತದೆ.

News
WhatsApp Group Join Now
Telegram Group Join Now

Post navigation

Previous Post: ನೀರಿಗೆ ಈ ಎರಡು ವಸ್ತು ಮಿಕ್ಸ್ ಮಾಡಿ ಬಾಗಿಲ ಬಳಿ ಹಾಕಿದರೆ ಸಾಕು ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.
Next Post: 100 ವರ್ಷ ಆದರೂ ಹಾರ್ಟ್ ಅಟ್ಯಾಕ್ ಆಗಬಾರದು ಹೃದಯ ವೀಕ್ನೆಸ್ ಆಗಬಾರದು ಎಂದರೆ ಈ ಆಹಾರಗಳನ್ನು ತಿನ್ನಿರಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore