ನಮ್ಮ ಮನೆಯ ಸುತ್ತಮುತ್ತ ನಮಗೆ ಗೊತ್ತಿಲ್ಲದೆ ಅನೇಕ ಮರಗಳು ಬೆಳೆದಿರುತ್ತವೆ. ಇನ್ನು ಕೆಲವು ಮರಗಳನ್ನು ನಾವೇ ಬೆಳೆಸಿರುತ್ತೇವೆ. ಈ ರೀತಿ ಮರಗಳಲ್ಲಿ ಕೆಲವು ಮರಗಳಿಗೆ ವಿಶೇಷ ಶಕ್ತಿಯಿದ್ದು ಅವುಗಳು ಮನೆ ಸುತ್ತಮುತ್ತ ಇರುವುದರಿಂದ ಆ ಮನೆಗೆ ಬಹಳ ಒಳ್ಳೆಯದಾಗುತ್ತಿರುತ್ತದೆ. ಆ ಪ್ರಕಾರವಾಗಿ ಯಾವ ರೀತಿ ಮರಗಳು ಇಂತಹ ದೈವಿ ಗುಣವನ್ನು ಹೊಂದಿವೆ ಹಾಗೂ ಇದರಿಂದ ಯಾವ ರೀತಿಯ ಫಲಗಳು ಸಿಗುತ್ತಿದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ವಿವರಿಸುತ್ತಿದ್ದೇವೆ.
* ಮನೆಯ ಮುಂದೆ ತೆಂಗಿನ ಕಾಯಿ ಮರವಿದ್ದರೆ ಮನಸ್ಸಿಗೆ ಬಹಳ ನೆಮ್ಮದಿ ದೊರೆಯುತ್ತದೆ ಕಲ್ಪವೃಕ್ಷವೆಂದು ಕರೆಯಲ್ಪಡುವ ಈ ವೃಕ್ಷವನ್ನು ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ದರ್ಶನ ಮಾಡುವುದು ನಮ್ಮ ಸಂಸ್ಕೃತಿ. ಹೀಗೆ ಮನೆ ಅಕ್ಕಪಕ್ಕ ಇರುವ ತೆಂಗಿನ ಮರದ ಪ್ರಭಾವದಿಂದಾಗಿ ಆ ಕುಟುಂಬಕ್ಕೆ ಬಹಳ ಒಳ್ಳೆಯದಾಗುತ್ತದೆ ಸಮಾಜದಲ್ಲಿ ಒಳ್ಳೆಯ ಗೌರವ ಸ್ಥಾನಮಾನ ಕೂಡ ದೊರೆಯುತ್ತದೆ. ಹೀಗಾಗಿ ತೆಂಗಿನ ಮರವನ್ನು ಯಾರು ಯಾವುದೇ ಸಂದರ್ಭದಲ್ಲೂ ಕಡಿಸಿ ಹಾಕಲು ಇಷ್ಟಪಡುವುದಿಲ್ಲ.
ಈ ಸುದ್ದಿ ಓದಿ:- 18 ವರ್ಷಗಳ ನಂತರ ರಾಹು ಮತ್ತು ಬುಧ ಸಂಯೋಗ, ಸಿಂಹ ರಾಶಿಯವರ ಮನೆ ಬಾಗಿಲಿಗೆ ಬರುತ್ತಿದೆ ಅದೃಷ್ಟ…
* ಮನೆಯ ಮುಂದೆ ಪಾರಿಜಾತ ವೃಕ್ಷವಿದ್ದರೆ ಆ ಮನೆ ಮೇಲೆ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇರುತ್ತದೆ ಎಂದು ಹೇಳಲಾಗುತ್ತದೆ. ಇದು ಬಹಳ ಶುಭದ ಸಂಕೇತವಾಗಿದೆ, ಆ ಮನೆ ಮೇಲೆ ಬಹಳ ಸಕರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ, ಹಣಕಾಸಿನ ಏಳಿಗೆಯನ್ನು ತಂದುಕೊಡುತ್ತದೆ.
* ಮನೆಯ ಮುಂದೆ ಮಲ್ಲಿಗೆ ಗಿಡವಿದ್ದರೂ ಕೂಡ ಆ ಮನೆಗೆ ಬಹಳ ಒಳ್ಳೆಯದಾಗುತ್ತದೆ. ಮಲ್ಲಿಗೆ ಹೇಗೆ ಸುಗಂಧ ತರುವುದು ಹಾಗೆ ಆ ಮನೆಯ ಮಕ್ಕಳು ಕೀರ್ತಿವಂತರಾಗುತ್ತಾರೆ ಸದ್ಗುಣಿಗಳಾಗುತ್ತಾರೆ ಎಂದು ಹೇಳಲಾಗುತ್ತದೆ
* ಮನೆಯ ಪೂರ್ವ ದಿಕ್ಕಿಗೆ ಅಥವಾ ಈಶಾನ್ಯ ಮೂಲೆಯಲ್ಲಿ ಬಾಳೆ ಮರ ಬೆಳೆಸಿದರೆ ಬಹಳ ಒಳ್ಳೆಯದು, ಇದು ಆ ಮನೆಗೆ ಸುಖ ಸಮೃದ್ಧಿ ತರುತ್ತದೆ ಎಂದು ಹೇಳಲಾಗುತ್ತದೆ. ಬಾಳೆ ವೃಕ್ಷವನ್ನು ಭಗವಾನ್ ವಿಷ್ಣುವಿನ ನಿವಾಸ ಎಂದು ಕರೆಯಲಾಗುತ್ತದೆ.
ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಹೊಸ ಅಪ್ಡೇಟ್.!
* ಮನೆ ಮುಂದೆ ಕೇದಿಗೆ ಸಸ್ಯ ಇದ್ದರೆ ನಿಮ್ಮ ಮನೆ ಮೇಲೆ ಶತ್ರುಗಳು ಯಾವುದೇ ರೀತಿ ಕೆಡಕುಂಟು ಮಾಡಲು ಪ್ರಯತ್ನಿಸಿದರು ಅದು ನಡೆಯುವುದಿಲ್ಲ ಇದೆಲ್ಲದರಿಂದ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತದೆ
* ಮುತ್ತಲ ಗಿಡವು ಮನೆ ಸುತ್ತಮುತ್ತ ಇದ್ದರೆ ಆ ಮನೆಗೆ ಬ್ರಹ್ಮ ಶಕ್ತಿಯನ್ನು ಕೊಡುತ್ತದೆ
* ಮನೆ ಮುಂದೆ ಶ್ರೀಗಂಧ ಹಾಗೂ ಹಲಸಿನ ಮರವನ್ನು ಬೆಳೆಸಿದರೆ ದುಃ’ಖ ದಾರಿದ್ರ್ಯಗಳು ನಿವಾರಣೆ ಆಗುತ್ತದೆ ಎಂದು ಹೇಳಲಾಗಿದೆ
* ಮನೆ ಮುಂದೆ ಬಿದುರಿನ ಗಿಡ ಬೆಳೆಸುವುದರಿಂದ ಕಳ್ಳ ಕಾಕರ ಭ’ಯ ನಿವಾರಣೆಯಾಗುತ್ತದೆ
* ಕಗ್ಗಲಿ ಮರವನ್ನು ಮನೆ ಸುತ್ತಮುತ್ತ ಬೆಳೆಸಿದರೆ ಕುಟುಂಬದವರ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ
* ಮನೆಯ ಸುತ್ತಮುತ್ತ ದಾಳಿಂಬೆ ಗಿಡಗಳನ್ನು ಹಾಕಿ ಬೆಳೆಸಿದರೆ ಅವಿವಾಹಿತ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಶೀಘ್ರವೇ ಕಂಕಣ ಭಾಗ್ಯ ಕೂಡಿ ಬರುತ್ತದೆ ಅವರ ಜೀವನ ಸಂತೋಷಕರವಾಗಿರುತ್ತದೆ ಎಂದು ಹೇಳಲಾಗುತ್ತದೆ.
ಈ ಸುದ್ದಿ ಓದಿ:-ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!
* ಮನೆಯ ಮುಂದೆ ಅಶೋಕ ಮರವಿದ್ದರೆ ಸುಖ ಶಾಂತಿ ನೆಲೆಸುತ್ತದೆ
* ಮನೆ ಮುಂದೆ ಬಸರಿಮರ ಇರುವುದು ಬಹಳ ಪುಣ್ಯ. ಮನೆ ಸುತ್ತಾ ಎಲ್ಲೇ ಬಸರಿಮರ ಬೆಳೆದಿದ್ದರು ಅದನ್ನು ಪೋಷಿಸಿ ಯಾಕೆಂದರೆ ಬಸರಿಮರ ಬೆಳೆಸಿದರೆ ಯಜ್ಞ ಮಾಡಿದಷ್ಟು ಫಲ ಎಂದು ಹೇಳಲಾಗಿದೆ
* ನೇರಳೆ ಹಣ್ಣಿನ ಗಿಡದಿಂದ ಕುಲದ ಗೌರವ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ
* ಮನೆಯ ಹತ್ತಿರ ಬಿಲ್ವಪತ್ರ ಮರ ಬೆಳೆಸಿದರೆ ಅ’ಪ’ಮೃ’ತ್ಯು ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ.
* ಮನೆಯ ಹತ್ತಿರದಲ್ಲಿ ಅರಳಿಮರ ಇದ್ದರೆ ಅದನ್ನು ಪ್ರತಿದಿನವೂ ಪೂಜಿಸಬೇಕು ಇದರಿಂದ ಎಲ್ಲ ರೀತಿಯ ಪಾಪ ಕರ್ಮಗಳು ಕಳೆಯುತ್ತವೆ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ.