ಆಧಾರ್ ಕಾರ್ಡ್ (Aadhar Card) ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ UIDAI ನೀಡುತ್ತಿರುವ ಒಂದು ಗುರುತಿನ ಚೀಟಿಯಾಗಿದೆ. ಇದನ್ನು ಗುರುತಿನ ಪುರಾವೆಯಾಗಿ ಹಾಗೂ ವಿಳಾಸ ಪುರಾವೆಯಾಗಿ ಬಳಸಬಹುದು. ಅಲ್ಲದೆ ನಮ್ಮ ನಿತ್ಯ ಜೀವನದ ಕೆಲಸ ಕಾರ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.
ನಾವು ಸಿಮ್ ಕಾರ್ಡ್ ಖರೀದಿ ಮಾಡುವುದರಿಂದ ಹಿಡಿದು ಬ್ಯಾಂಕ್ ಅಕೌಂಟ್ ತೆರೆದು UPI ಪೇಮೆಂಟ್ ಮಾಡಬೇಕು ಎಂದರೂ, ಶಾಲಾ ವಿದ್ಯಾಭ್ಯಾಸದ ದಾಖಲಾತಿಯಿಂದ ಹಿಡಿದು ವೃದ್ಧಾಪ್ಯ ವೇತನ ಪಡೆಯಬೇಕು, ವ್ಯಕ್ತಿಯೊಬ್ಬನ ಮರಣ ಪ್ರಮಾಣ ಪತ್ರ ಪಡೆಯಬೇಕು ಎನ್ನುವ ತನಕ ಪ್ರತಿಯೊಂದು ಕಚೇರಿ ಕಾರ್ಯಕ್ಕೂ ಕೂಡ ಆಧಾರ್ ಮೇಲೆ ಡಿಪೆಂಡ್ ಆಗಿದೆ.
ನಾವು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, DL ಗೆ, ಬ್ಯಾಂಕ್ ಅಕೌಂಟ್ ಗಳಿಗೆ ಮತ್ತು ಇತರ ದಾಖಲೆಗಳಿಗೆ ಲಿಂಕ್ ಮಾಡುತ್ತೇವೆ. ಆಧಾರ್ ಕಾರ್ಡ್ ಇಲ್ಲದೆ ಇದ್ದಲ್ಲಿ ನಮಗೆ ಸರ್ಕಾರದಿಂದ ಯಾವುದೇ ಯೋಜನೆಯ ಪ್ರಯೋಜನ ಪಡೆಯಲು ಆಗುವುದಿಲ್ಲ. ಆಧಾರ್ ಕಾರ್ಡ್ ಹೊಂದಿರುವುದು ಮಾತ್ರವಲ್ಲದೆ ಕಾಲಕಾಲಕ್ಕೆ ತಕ್ಕಂತೆ UIDAI ನಿಗದಿಪಡಿಸಿರುವ ನಿಯಮಗಳ ಪ್ರಕಾರವಾಗಿ ನಡೆದುಕೊಳ್ಳಬೇಕು.
ಈ ಸುದ್ದಿ ಓದಿ:- 2024 ಮಾರ್ಚ್ ತಿಂಗಳ ರಾಶಿ ಫಲ, ಮಿಥುನ ರಾಶಿಯವರು ಸದೃಢರಾಗಲು ಒಂದು ಒಳ್ಳೆಯ ಅವಕಾಶ.!
ಅಂತೆಯೇ ಕಳೆದ ವರ್ಷ ಆಧಾರ್ ಕಾರ್ಡ್ ಕುರಿತಂತೆ ಒಂದು ಹೊಸ ನಿಯಮ ತರಲಾಗಿದೆ ಹಾಗೂ ಇದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಸರ್ಕಾರ ಸೂಚಿಸಿರುವ ಈ ನಿಯಮದಂತೆ ನಡೆದುಕೊಳ್ಳದೆ ಇದ್ದಲ್ಲಿ ಅಂತಹ ವ್ಯಕ್ತಿಗಳ ಆಧಾರ್ ಕಾರ್ಡನ್ನು ಸ್ಥಗಿತಗೊಳಿಸಲಾಗುವುದು ನಂತರ ಅವರು ಎಲ್ಲೂ ಆಧಾರ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.
ಮತ್ತು ಆಧಾರ್ ಸಂಬಂಧಿತವಾಗಿ ಲಿಂಕ್ ಆಗಿರುವ ಯಾವುದೇ ದಾಖಲೆಗಳನ್ನು ಬಳಸಲು ಆಗುವುದಿಲ್ಲ ಎಂದು ಹೇಳಲಾಗಿದೆ ಹಾಗಾಗಿ ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದುಕೊಳ್ಳಲೇಬೇಕು. ಆ ಹೊಸ ನಿಯಮ ಏನೆಂದರೆ ಯಾರು ಕಳೆದ ಹತ್ತು ವರ್ಷಗಳಿಂದ ಒಮ್ಮೆ ಕೂಡ ತಮ್ಮ ಆಧಾರ್ ಕಾರ್ಡ್ ಗಳಲ್ಲಿರುವ ಮಾಹಿತಿಯನ್ನು ಅಪ್ಡೇಟ್ ಮಾಡಿಸಿಲ್ಲ ಅಂತವರು.
ಈ ಕೂಡಲೇ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬೇಕು ಎಂದು UIDAI ಕಳೆದ ವರ್ಷವೇ ಆಜ್ಞೆ ಮಾಡಿ ಮೂರು ತಿಂಗಳ ಅವಕಾಶವನ್ನು ಕೂಡ ನೀಡಿ ಮೂರು ಬಾರಿ ಉಚಿತವಾಗಿ ಕಾಲಾವಕಾಶವನ್ನು ಕೂಡ ವಿಸ್ತರಿಸಿದೆ. 2024ಕ್ಕೆ ಉಚಿತವಾಗಿ ಆದ ರಿನಿವಲ್ ಮಾಡಿಕೊಳ್ಳಲು ನೀಡಿದ್ದ ಕಾಲಾವಕಾಶ ಮುಕ್ತವಾಗಿತ್ತು.
ಈ ಸುದ್ದಿ ಓದಿ:- ಆಧಾರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೂ ಸಿಗಲಿದೆ ರೂ.2000.!
ಆದರೂ ಸರ್ಕಾರ ಮತ್ತೊಮ್ಮೆ ಜೂನ್ 14, 2024ರವರೆಗೆ ನಾಗರಿಕರಿಗೆ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಕಡೆಯ ಬಾರಿಗೆ ಕಾಲಾವಕಾಶ ಮಾಡಿಕೊಟ್ಟಿದೆ. ಈ ಅವಧಿ ಮುಗಿದ ಮೇಲು ಕೂಡ ಯಾರು ಹತ್ತು ವರ್ಷಗಳಿಂದ ಒಮ್ಮೆ ಕೂಡ ಆದರೆ ಅಪ್ಡೇಟ್ ಮಾಡಿಸಿರುವುದಿಲ್ಲ ಅಂತವರು ಆಧಾರ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳುತ್ತವೆ.
ನಂತರ ದಂಡ ಕಟ್ಟಿ ರಿನಿವಲ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿದೆ. ಹಾಗಾಗಿ ಈಗಲೇ ಸರ್ಕಾರದ ನಿಯಮದಂತೆ ನಡೆದುಕೊಳ್ಳಿ. ಈ ರೀತಿ ಒಂದು ರೂಲ್ಸ್ ಮಾಡಲು ಕಾರಣ ಏನೆಂದರೆ ಆಧಾರ್ ಕಾರ್ಡ್ ನಲ್ಲಿ ಹೆಸರು, ಲಿಂಗ, ಭಾವಚಿತ್ರ, ಹುಟ್ಟಿದ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಜೊತೆಗೆ 12 ಅಂಕೆಗಳ ಆಧಾರ್ ಸಂಖ್ಯೆ ಇರುತ್ತದೆ.
ಈ 10 ವರ್ಷಗಳಲ್ಲಿ ಒಮ್ಮೆಯಾದರೂ ಯಾವುದಾದರೂ ತಪ್ಪುಗಳಿದ್ದರೆ ತಿದ್ದುಪಡಿ ಆಗಿರುತ್ತದೆ ಅಥವಾ ಮೊಬೈಲ್ ಸಂಖ್ಯೆ ವಿಳಾಸ ಬದಲಾಯಿಸಿದಾಗ ನಾವೇ ಹೊಸ ವಿಳಾಸಕ್ಕೆ ಆಧಾರ್ ಚೇಂಜ್ ಮಾಡಿಸಿಕೊಂಡಿರುತ್ತೇವೆ. ಇದರೊಂದಿಗೆ ನಮ್ಮ ಮುಖ ಚಹರೆ ಮತ್ತು ಬಯೋಮೆಟ್ರಿಕ್ ಕೂಡ 10 ವರ್ಷಗಳಲ್ಲಿ ಸಾಕಷ್ಟು ಬದಲಾಗಿರುತ್ತದೆ, ಅಪ್ಡೇಟ್ ಮಾಡದೇ ಇದ್ದಲ್ಲಿ ಸರ್ಕಾರಕ್ಕೆ ಸರಿಯಾದ ಡಾಟ ಸಿಗುವುದಿಲ್ಲ.
ಈ ಸುದ್ದಿ ಓದಿ:- ನೀವು ಸಾಮಾನ್ಯ ಮನುಷ್ಯನಲ್ಲ ಎಂದು ತೋರಿಸುವ 9 ಲಕ್ಷಣಗಳು ಇವು, ಇವುಗಳು ನಿಮ್ಮಲ್ಲಿದ್ದರೆ ಭಗವಂತನೇ ನಿಮ್ಮ ಜೊತೆಗೆ ಇದ್ದಾರೆ ಎಂದು ಅರ್ಥ.!
ಆ ಕಾರಣದಿಂದಾಗಿಯೇ ಈ ರೀತಿ ರಿನಿವಲ್ ಮಾಡಿಕೊಳ್ಳಬೇಕು ಎಂದು ತಿಳಿಸಿದೆ. ತಪ್ಪದೆ ಪ್ರತಿಯೊಬ್ಬರೂ ಸರ್ಕಾರ ನೀಡಿರುವ ಈ ಉಚಿತ ಕಾಲಾವಕಾಶದ ಒಳಗೆ ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ UIDAI ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಆನ್ಲೈನ್ ನಲ್ಲಿ ಈ ಪ್ರಕ್ರಿಯ ಪೂರ್ತಿಗೊಳಿಸಿ. CSC ಕೇಂದ್ರಗಳಲ್ಲಿ ಮಾತ್ರ 50 ರೂಪಾಯಿ ಮಾತ್ರ ಶುಲ್ಕ ಪಾವತಿಸುವ ಮೂಲಕ ರಿನೀವಲ್ ಮಾಡಿಸಬಹುದು.