ನಮ್ಮ ನಂಬಿಕೆಗಳ ಪ್ರಕಾರವಾಗಿ ಮನುಷ್ಯ ಜನ್ಮವು ಬಹಳ ಶ್ರೇಷ್ಠವಾದದ್ದು. ಹಲವು ಜನ್ಮಗಳನ್ನು ಪಡೆದು ಪುಣ್ಯ ಸಂಪಾದನೆ ಮಾಡಿದ ವ್ಯಕ್ತಿ ಮಾತ್ರ ಮನುಷ್ಯ ಜನ್ಮ ಪಡೆಯುತ್ತಾನೆ ಮತ್ತು ಮನುಷ್ಯ ಜನ್ಮದಿಂದ ಮೋಕ್ಷದ ಹಾದಿ ಸರಾಗ. ಇದನ್ನೇ ಪುರಂದರದಾಸರು ಮಾನವ ಜನ್ಮ ಶ್ರೇಷ್ಠವಾದದ್ದು ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂದು ಹೇಳಿದ್ದು.
ಈ ಮನುಷ್ಯ ಜನ್ಮ ಒಂದೇ ರೀತಿ ಇದ್ದರೂ ಒಬ್ಬ ವ್ಯಕ್ತಿಗಿಂತ ಮತ್ತೊಬ್ಬ ವ್ಯಕ್ತಿ ಬಹಳ ವಿಭಿನ್ನ. ಕೆಲವರು ಮನುಷ್ಯರಾಗಿದ್ದರು ಅವರಲ್ಲಿ ರಾಕ್ಷಸರ ಗುಣಗಳಿರುತ್ತದೆ, ಕೆಲವರು ಪಶುಗಳಂತೆ ವರ್ತಿಸುತ್ತಿರುತ್ತಾರೆ. ಇನ್ನು ಕೆಲವರು ಮನುಷ್ಯರಾಗಿದ್ದರು ಅವರಿಗೆ ಅಸಾಮಾನ್ಯ ಶಕ್ತಿ ಇದೆ ಎಂದು ಭಾಸವಾಗುತ್ತಿರುತ್ತದೆ.
ಈ ರೀತಿ ಶ್ರೇಷ್ಠವಾಗಿರುವ ದೈವೀ ಗುಣ ಹೊಂದಿರುವ ವ್ಯಕ್ತಿಗಳ ಬಳಿ ಭಗವಂತ ಯಾವಾಗಲೂ ಇರುತ್ತಾನೆ. ಈ ರೀತಿ ಲಕ್ಷಣಗಳು ಎಲ್ಲರಿಗೂ ಅರಿವಾಗಲಿ ಎನ್ನುವ ಕಾರಣದಿಂದಾಗಿ ಕೆಲವು ಲಕ್ಷಣಗಳ ಬಗ್ಗೆ ಈ ಅಂಕಣದಲ್ಲಿ ವಿವರಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!
* ಯಾವ ವ್ಯಕ್ತಿ ತನ್ನ ಬಗ್ಗೆ ಯಾರು ಏನು ಮಾತನಾಡುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ಯಾರ ಮಾತುಗಳು ಆ ವ್ಯಕ್ತಿ ಮೇಲೆ ಪರಿಣಾಮ ಬೀರುವುದಿಲ್ಲವೋ ತಾನಾಯಿತು ತನ್ನ ಕೆಲಸ ಆಯ್ತು ಎಂದು ತನ್ನ ಕೆಲಸ ಕಾರ್ಯಗಳನ್ನು ಬದುಕುತ್ತಿರುತ್ತಾನೋ ಅಂತ ವ್ಯಕ್ತಿ ಅಸಾಮಾನ್ಯನಾಗಿರುತ್ತಾನೆ. ಆತನಿಗೆ ಭಗವಂತ ಹಾಗೂ ತನ್ನ ಮೇಲೆ ಬಿಟ್ಟರೆ ಮತ್ತೊಬ್ಬರ ಮೇಲೆ ವಿಶ್ವಾಸ ಇಡುವುದಿಲ್ಲ. ಇಂತಹ ಆತ್ಮವಿಶ್ವಾಸಿಗಳ ಜೊತೆಗೆ ಭಗವಂತ ಯಾವಾಗಲೂ ಇರುತ್ತಾನೆ.
* ಯಾವ ವ್ಯಕ್ತಿ ಎಂದಿಗೂ ಬೇರೆಯವರಿಗೆ ಕೆಟ್ಟದನ್ನು ಬಯಸುವುದಿಲ್ಲ ಮತ್ತು ಕೆಟ್ಟದಾಗಿ ಮಾತನಾಡುವುದಿಲ್ಲ ಇನ್ನೊಬ್ಬರನ್ನು ಟೀಕೆ ಮಾಡಿಕೊಂಡು ನಗುವುದಿಲ್ಲ ಇನ್ನೊಬ್ಬರ ಪರಿಸ್ಥಿತಿ ಬಗ್ಗೆ ಹೀಯಾಳಿಸುವುದಿಲ್ಲ ಇಂತಹ ವ್ಯಕ್ತಿಗಳ ಕೂಡ ಅಸಾಮಾನ್ಯರು ಎನ್ನಲಾಗುತ್ತದೆ ಇವರ ಮೇಲೆ ಭಗವಂತ ಯಾವಾಗಲೂ ಅನುಕಂಪದ ದೃಷ್ಟಿ ಇಟ್ಟಿರುತ್ತಾನೆ
* ಯಾರು ತನ್ನ ಜೀವನದಲ್ಲಿ ಎಷ್ಟೇ ಬಿಸಿ ಇದ್ದರೂ ದೇವರಿಗಾಗಿ ಸಮಯ ಮೀಸಲಿಡುತ್ತಾರೆ, ತನ್ನ ಬ್ಯುಸಿ ಶೆಡ್ಯೂಲ್ ನಡುವೆ ಸಮಯ ಮೀಸಲಿಟ್ಟು ದೇವತಾ ಕಾರ್ಯಗಳಲ್ಲಿ ತೊಡಗುತ್ತಾನೆ ಇಂತಹ ವ್ಯಕ್ತಿಯನ್ನು ಕೂಡ ಸಾಮಾನ್ಯ ಎನ್ನಲಾಗುತ್ತದೆ. ಇವರ ಮೇಲು ಕೂಡ ಭಗವಂತನ ಆಶೀರ್ವಾದ ಇರುತ್ತದೆ.
ಈ ಸುದ್ದಿ ಓದಿ:- ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…
* ತನ್ನಂತೆ ನೆರೆಹೊರೆಯರನ್ನು ಹಾಗೂ ತಾನು ಇರುವ ನೆಲವನ್ನು ದೇಶವನ್ನು ಪ್ರೀತಿಸುವ ವ್ಯಕ್ತಿ ಜೊತೆ, ವಸುದೈವ ಕುಟುಂಬಕಂ ಎನ್ನುವುದನ್ನು ಬಲವಾಗಿ ನಂಬುತ್ತಾನೋ ಮತ್ತು ಮನುಷ್ಯರು ಮಾತ್ರವಲ್ಲ ಈ ಪ್ರಕೃತಿಯಲ್ಲಿ ಎಲ್ಲರಿಗೂ ಬದುಕುವ ಹಕ್ಕು ಇದೆ ಎನ್ನುವುದನ್ನು ಅರಿತು ಯಾರಿಗೂ ತೊಂದರೆ ಕೊಡದೆ ಸಕಲ ಜೀವರಾಶಿಯ ಮೇಲೆ ದಯೆ ತೋರುತ್ತಾರೋ ಆತ ಅಸಮಾನ್ಯ
* ಯಾವ ವ್ಯಕ್ತಿ ಇನ್ನೊಬ್ಬರ ಸೇರಿದ ವಸ್ತುಗಳಿಗೆ ಆಸೆ ಪಡುವುದಿಲ್ಲ ಮತ್ತು ಯಾವಾಗಲೂ ಅನ್ಯರ ಆಸ್ತಿ ಹಣ ಇವುಗಳನ್ನು ಬಯಸುವುದಿಲ್ಲ ಇಂಥ ಜನರ ಜೊತೆ ಶ್ರೀಕೃಷ್ಣ ಯಾವಾಗಲೂ ಇರುತ್ತಾನೆ ಇವರನ್ನು ಪರೀಕ್ಷೆ ಮಾಡಿದರೂ ಕೊನೆಯಲ್ಲಿ ಕಾಪಾಡುತ್ತಾನೆ
* ಯಾರು ಇನ್ನೊಬ್ಬರ ಹಸಿವನ್ನು ದುಃಖವನ್ನು ಹಂಚಿಕೊಳ್ಳುತ್ತಾರೋ ಅವರಿಗೆ ಶಕ್ತಿಯಾಗಿ ಭಗವಂತ ನಿಲ್ಲುತ್ತಾನೆ. ಪ್ರತಿಯೊಬ್ಬರು ಕೂಡ ಈ ಮೇಲಿನ ಗುಣಗಳನ್ನು ಅನುಸರಿಸಿಕೊಂಡರೆ ಎಲ್ಲರೂ ದೇವರಿಗೆ ಹತ್ತಿರವಾಗಬಹುದು ಜೊತೆಗೆ ಕೆಲವು ದಿನಗಳು ಈ ಸರಳ ಆಚರಣೆ ಮಾಡಿ ನೋಡಿದರೆ ನಿಮ್ಮ ಜೊತೆ ದೇವರು ಇರುವ ಅನುಭವಗಳು ಆಗುತ್ತವೆ.
ಈ ಸುದ್ದಿ ಓದಿ:- ಮಾರ್ಚ್ 16ರಂದು ಅಮೃತ ಸಿದ್ಧಿ ಯೋಗ, ತಪ್ಪದೇ ಈ ಒಂದು ವಸ್ತುವನ್ನು ಮನೆಗೆ ತನ್ನಿ ನಿಮ್ಮ ಏಳಿಗೆ ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.!
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಯೋಗ ವ್ಯಾಯಾಮ ಧ್ಯಾನ ಮಾಡಿ ಸ್ನಾನ ಮಾಡಿ ದೇವರಿಗೆ ನಮಿಸಿ ಮನೆ ಕೆಲಸದಲ್ಲಿ ಮನೆಯವರಿಗೆ ನೆರವಾಗಿ ಮತ್ತು ಕಚೇರಿಯಲ್ಲಿ ಸರಿಯಾಗಿ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ ಹಿರಿಯರ ಜೊತೆ ಒಳ್ಳೆಯ ಮಾತುಕತೆ ಆಡಿ ಕಿರಿಯರ ಜೊತೆ ಪ್ರೀತಿಯಿಂದ ನಡೆದುಕೊಳ್ಳಿ.
ಬಿಡುವಿನ ಸಮಯದಲ್ಲಿ ದೇವರ ಕಥೆಗಳು ದೇವರನಾಮಗಳು ದೇವರ ಸೇವೆ ಇವುಗಳಲ್ಲಿ ಪಾಲ್ಕೊಳ್ಳಿ, ದುಡಿದಿದ್ದರಲ್ಲಿ ಅಲ್ಪವನ್ನಾದರೂ ಅಸಹಾಯಕರಿಗಾಗಿ ದಾನ ಮಾಡಿ ಈ ರೀತಿ ಸರಳ ಬದುಕಿದರೆ ನಿಮಗೂ ಕೂಡ ಭಗವಂತನ ಒಲಿಯುತ್ತಾನೆ.