ಸಾಲ ಎನ್ನುವುದು ಹೊನ್ನಿನ ಶೂಲ ಎನ್ನುವ ಗಾದೆ ಇದೆ. ಯಾಕೆಂದರೆ ಸಾಲ ತೆಗೆದುಕೊಳ್ಳುವಾಗ ತಕ್ಷಣಗೆ ಹಣ ಸಿಕ್ಕಿತು ಎಂದು, ಕಷ್ಟ ಕಳೆಯಿತು ಎಂದು ಎಷ್ಟು ಸಮಾಧಾನ ಸಿಗುತ್ತದೆಯೋ ಒಂದು ವೇಳೆ ಸರಿಯಾದ ಸಮಯಕ್ಕೆ ವಾಪಸ್ಸು ಮಾಡಲು ಆಗದೇ ಇದ್ದರೆ ಅದೇ ನಿಮಗೆ ಕಂಠಕವೂ ಆಗುತ್ತದೆ.
ಸಾಲದ ಸುಳಿಯಲ್ಲಿ ಸಿಲುಕಿದ ಜೀವಕ್ಕೆ ನಿತ್ಯವೂ ನ’ರ’ಕ ದರ್ಶನ. ಸಾಲ ಎನ್ನುವ ಎರಡಕ್ಷರವು ನಮ್ಮ ಜೀವನದ ಎಲ್ಲಾ ನೆಮ್ಮದಿಯನ್ನು ಕೂಡ ಕಿತ್ತುಕೊಂಡು ಬಿಡುತ್ತದೆ. ಹಾಗಾಗಿ ಸಾಲ ಮಾಡುವ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಈಗಾಗಲೇ ಆಗಿರುವ ತಪ್ಪಿನಿಂದ ನೀವು ಇಂತಹದೇ ಯಾವುದಾದರು ಋಣ ಭಾರ ಹೊತ್ತುಕೊಂಡಿದ್ದರೆ ಈಗ ನಾವು ಹೇಳುವ ಸರಳ ವಿಧಾನವನ್ನು ಪಾಲಿಸಿ ನಿಜವಾಗಲೂ ಸಾಲದ ಹೊರೆ ಇಳಿಯುತ್ತದೆ.
ಸಾಲ ತೀರುವುದಕ್ಕೆ ಮಾತ್ರವಲ್ಲದೇ ಜೀವನದಲ್ಲಿ ಯಾವುದೇ ಒಳ್ಳೆ ವಿಚಾರಗಳು ಕೈ ಹಿಡಿಯಬೇಕು ನಿಮಗೆ ಭೂಮಿ ಯೋಗ, ಹೊಸ ಮನೆಯ ಯೋಗ, ಮದುವೆ ಯೋಗ, ಸಂತಾನ ಬೇಕು ಎಂದರು ನಿಮ್ಮ ರಾಶಿಯಲ್ಲಿ ಗುರುಬಲ ಗಟ್ಟಿಯಾಗಿರಬೇಕು ಮತ್ತು ಮಹಾಲಕ್ಷ್ಮಿ ಹಾಗೂ ಮಹಾ ವಿಷ್ಣುವಿನ ಆಶೀರ್ವಾದ ಇರಬೇಕು ಗುರುವಾರದ ದಿನ ಇದಕ್ಕೆ ಶ್ರೇಷ್ಠವಾದ ದಿನವಾಗಿದೆ.
ಈ ಸುದ್ದಿ ಓದಿ:- 18 ವರ್ಷಗಳ ನಂತರ ರಾಹು ಮತ್ತು ಬುಧ ಸಂಯೋಗ, ಸಿಂಹ ರಾಶಿಯವರ ಮನೆ ಬಾಗಿಲಿಗೆ ಬರುತ್ತಿದೆ ಅದೃಷ್ಟ…
ಗುರುವಾರದ ದಿನ ವಿಷ್ಣು ಹಾಗೂ ಗುರುವಿನ ಪ್ರಭಾವ ಹೇರಳವಾಗಿರುವ ದಿನವಾಗಿದೆ ಈ ದಿನ ಕೆಲ ಸರಳ ಆಚರಣೆ ಮಾಡುವುದರಿಂದ ಹಾಗೂ ಕೆಲಸ ತಪ್ಪುಗಳ ಮಾಡುವುದನ್ನು ನಿಲ್ಲಿಸುವುದರಿಂದ ನಿಮ್ಮ ಸಾಲದ ಕಷ್ಟಕ್ಕೆ ಪರಿಹಾರ ಆಶ್ಚರ್ಯಕರ ರೀತಿಯಲ್ಲಿ ಶೀಘ್ರವಾಗಿ ಸಿಗುತ್ತದೆ.
* ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ಗುರುವಾರದ ದಿನ ತಲೆ ಸ್ನಾನ ಮಾಡಬಾರದು, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸುತ್ತದೆ ಹಾಗೆ ಈ ದಿನ ಕೂದಲು ಕಟ್ ಮಾಡುವುದು, ಉಗುರುಗಳನ್ನು ಕತ್ತರಿಸುವುದು ಇವುಗಳನ್ನು ಕೂಡ ಮಾಡಬಾರದು. ಗಂಡು ಮಕ್ಕಳು ಕೂಡ ಈ ದಿನ ಗಡ್ಡ ಶೇವ್ ಮಾಡುವುದು ಕೂಡ ಕಟ್ ಮಾಡುವುದು ತಲೆ ಸ್ನಾನ ಮಾಡುವುದು ಇಂತಹ ತಪ್ಪುಗಳನ್ನು ಮಾಡಬಾರದು ಒಂದು ವೇಳೆ ನೀವು ಹೀಗೆ ಮಾಡಿದರೆ ಆರ್ಥಿಕ ಸಂಕಷ್ಟ ಗಳಿಗೆ ಗುರಿಯಾಗುತ್ತೀರಿ.
* ಈ ದಿನ ವಿಷ್ಣುವಿನ ಹಾಗೂ ಗುರುರಾಯರ ಅಥವಾ ಗುರುವಿನ ಸ್ಥಾನದಲ್ಲಿರುವವರ ದರ್ಶನ ಮಾಡಿ ಗುರುವಿನ ಆರಾಧನೆ ಮಾಡಿ. ಗುರು ಸ್ತೋತ್ರ ಪಾರಾಯಣ ಮಾಡಿ ಮತ್ತು ಧರ್ಮ ಗ್ರಂಥಗಳನ್ನು ದಾನ ಮಾಡಿ, ದೇವಸ್ಥಾನಗಳಲ್ಲಿ ಹಳದಿ ಬಣ್ಣದ ಧಾನ್ಯ, ಹಳದಿ ಬಣ್ಣದ ವಸ್ತು ಅಥವಾ ಹಳದಿ ಬಣ್ಣದ ಹಣ್ಣುಗಳನ್ನು ದಾನ ಮಾಡಿ.
ಈ ಸುದ್ದಿ ಓದಿ:-18 ವರ್ಷಗಳ ನಂತರ ರಾಹು ಮತ್ತು ಬುಧ ಸಂಯೋಗ, ಸಿಂಹ ರಾಶಿಯವರ ಮನೆ ಬಾಗಿಲಿಗೆ ಬರುತ್ತಿದೆ ಅದೃಷ್ಟ…
* ಗುರುವಾರ ದಿನ ಬೆಳಗ್ಗೆ ಬೇಗ ಎದ್ದು ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿ ವಿಷ್ಣುವಿಗೆ ಹಾಗೂ ತಾಯಿ ಮಹಾಲಕ್ಷ್ಮಿಗೆ ಮತ್ತು ಗುರು ಸ್ವರೂಪದಲ್ಲಿರುವವರಿಗೆ ನಿಮ್ಮ ಕಷ್ಟ ಹೇಳಿಕೊಂಡು ಪ್ರಾರ್ಥನೆ ಸಲ್ಲಿಸಿ ಕೃಪಾಕಟಾಕ್ಷಕ್ಕಾಗಿ ಬೇಡಿ. ಈ ರೀತಿ ಗುರುವಾರ ಸ್ನಾನ ಮಾಡುವಾಗ ಚಿಟಿಕೆ ಅರಿಶಿಣ ಹಾಕಿಕೊಂಡು ಸ್ನಾನ ಮಾಡಿ ಗುರು ಗ್ರಹದ ಅನುಗ್ರಹ ಆಗುತ್ತದೆ ಗುರುಬಲದಿಂದ ನಿಮ್ಮ ಹಣಕಾಸು ಸಮಸ್ಯೆ ನಿವಾರಣೆ ಆಗುತ್ತದೆ.
ಸ್ನಾನ ಪೂಜೆ ಇತ್ಯಾದಿ ಮುಗಿದ ಮೇಲೆ ಒಂದು ಚಂಬಿನಲ್ಲಿ ಪೂರ್ತಿ ಶುದ್ಧವಾದ ನೀರು ತುಂಬಿಕೊಂಡು ಅದಕ್ಕೆ ಕೂಡ ಸ್ವಲ್ಪ ಅರಿಶಿನ ಹಾಕಿ ಇದನ್ನು ಬಾಳೆ ಗಿಡಕ್ಕೆ ಹಾಕಿ ಈ ರೀತಿ ಮಾಡುವುದರಿಂದ ಕೂಡ ನಿಮ್ಮ ಹಣಕಾಸಿನ ಪರಿಸ್ಥಿತಿ ಬಹಳ ಸುಧಾರಿಸುತ್ತದೆ. ನಿರ್ಲಕ್ಷ ಮಾಡದೆ ಭಕ್ತಿಯಿಂದ ಇದನ್ನು ಮಾಡಿ ಉತ್ತಮ ಫಲಿತಾಂಶ ಪಡೆಯಿರಿ.