ಅಂದು ದಿಗ್ಗಜ ನಟರೊಂದಿಗೆ ನಟಿಸುವುದೇ ಒಂದು ದೊಡ್ಡ ಸೌಭಾಗ್ಯದಾಯಕ ಅದೃಷ್ಟವಾಗಿತ್ತು ಅಂದಿನ ನಟಿಮಣಿಯರಿಗೆ. ಚಂದನವನದಲ್ಲಿ ಅಂದಿನ ನಟಿಮಣಿಯರ ಪೈಕಿ ಕನಸಿನ ರಾಣಿ ಮಾಲಾಶ್ರೀ ಕೂಡ ಒಬ್ಬರಾಗಿದ್ದು ಟಾಪ್ ನಟಿಯರಲ್ಲಿ ಹಾಗೂ ಬೇಡಿಕೆಯ ನಟಿಯರಲ್ಲಿ ಮುಂಚೂಣಿಯಲ್ಲಿದ್ದರು. ಲೇಡಿ ಸಿಂಗಂ ರೀತಿ ಫೈಟ್ ಸೀನ್ ಗಳಲ್ಲಿಯೂ ಮಿಂಚುತ್ತಾ ಸ್ಯಾಂಡಲ್ವುಡ್ ನಲ್ಲಿ ಎಲ್ಲಾ ತರಹದ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡ ನಟಿ. ಅವರು 1989ರಲ್ಲಿ ಸಾರ್ವಕಾಲಿಕ ಜನಪ್ರಿಯ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದಲ್ಲಿ ಒಬ್ಬ ಅಹಂಕಾರದ, ಗಂಡುಬೀರಿ ಮಹಿಳೆಯಾಗಿ ಅವರ ಅಭಿನಯ ಅವರಿಗೆ ಅಪಾರ ಮನ್ನಣೆ ತಂದಿತು ಮತ್ತು ಕನ್ನಡ ಚಿತ್ರರಂಗದ ಪ್ರಮುಖ ನಟಿಯಾಗಿ ಅವರ ಆಗಮನವನ್ನು ಸೂಚಿಸಿತು. ಅವರ ಮುಂದಿನ ಕೆಲವು ಚಿತ್ರಗಳು ಅವರಿಗಾಗಿಯೇ ಬರೆದಂಥವಾಗಿದ್ದವು ಮತ್ತು ಇವೆಲ್ಲವುಗಳಲ್ಲಿ ಅವರು ಮುಖ್ಯಪಾತ್ರ ವಹಿಸಿದ್ದರು.
ಗಜಪತಿ ಗರ್ವಭಂಗ, ಪೊಲೀಸ್ ನ ಹೆಂಡ್ತಿ, ಪ್ರತಾಪ್, ಕಿತ್ತೂರಿನ ಹುಲಿ ಮತ್ತು ತವರು ಮನೆ ಉಡುಗೊರೆ ಚಿತ್ರಗಳು ಎಲ್ಲವೂ ಯಶಸ್ವಿಯಾಗಿ ತೆರೆ ಕಂಡು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು ಮತ್ತು ಅವರು ಮುಂದೆ ಕನ್ನಡ ಚಿತ್ರರಂಗದ ಅತ್ಯಧಿಕ ಸಂಭಾವನೆ ಪಡೆದ ನಟಿಯೆನಿಸಿದರು. ಇಂತಹ ಯಶಸ್ವಿ ನಟಿ ಡಾಕ್ಟರ್ ರಾಜ್ ಕುಮಾರ್ ಹಾಗೂ ಡಾಕ್ಟರ್ ವಿಷ್ಣುವರ್ಧನ್ ಹೊರತು ಪಡಿಸಿ ಎಲ್ಲಾ ದಿಗ್ಗಜ ನಟರ ಜೊತೆಗೆ ನಟಿಸಿದ್ದರು. ರಾಜ್ ಕುಮಾರ್ ಅವರೇನೋ 1989 ರ ನಂತರ ಕೇವಲ 6 ಚಿತ್ರಗಳಲ್ಲಿ ನಟಿಸಿದ್ದರು ಅವರ ಜೊತೆಗೆ ನಟಿಸಲು ಇವರಿಗೆ ಸಾಧ್ಯವಾಗದೆ ಇತ್ತೇನೋ ಆದರೆ ವಿಷ್ಣುವರ್ಧನ್ ಅವರು 1989 ರ ನಂತರ 75 ಚಿತ್ರಗಳಲ್ಲಿ ನಟಿಸಿದ್ದರೂ ಸಹ ಮಾಲಾಶ್ರೀ ಅವರಿಗೇಕೆ ಅವರೊಡನೆ ನಟಿಸಲು ಅವಕಾಶ ಸಿಗಲಿಲ್ಲ ಎಂದು ಎಲ್ಲಾ ಸಿನಿ ರಸಿಕರಲ್ಲೂ ಕಾಡುವ ಪ್ರಶ್ನೆ?!.
ಅಂದಿನಿಂದಲೂ ಈ ಕಾಡುವ ಪ್ರಶ್ನೆಗೆ ಹಲವರು ಹಲವಾರು ರೀತಿಯ ಉತ್ತರ ನೀಡುತ್ತಾರೆ ಈ ಉತ್ತರಗಳೆಲ್ಲ ಬರೀ ಗಾಳಿಸುದ್ದಿಯಾಗಿಯೇ ಉಳಿದಿದೆ ಕೂಡ. ಒಮ್ಮೆ ಮಾಧ್ಯಮಗಳ ಮುಂದೆ ಮಾಲಾಶ್ರೀ ಅವರು ನಿಮ್ಮ ಸಿನಿ ಯಶಸ್ಸಿನ ಗುಟ್ಟೇನು ಎಂದು ರಿಪೋರ್ಟರ್ ಒಬ್ಬರು ಕೇಳುವ ಪ್ರಶ್ನೆಗೆ ನನ್ನ ಜೊತೆಗೆ ನಟಿಸಿದವರೆಲ್ಲರೂ ಕೂಡ ಫೇಮಸ್ ಆಗುತ್ತಾರೆ ಎಂದು ಉತ್ತರಿಸಿರುತ್ತಾರೆ ಇದನ್ನೇ ಗುರಿಯಾಗಿಸಿಕೊಂಡು ಕೆಲವರು ಇವರು ಈ ರೀತಿ ಅಹಂಕಾರದಿಂದ ಹೇಳಿದ್ದರು ಆದ್ದರಿಂದ ವಿಷ್ಣುವರ್ಧನ್ ಅವರು ಇವರಿಗೆ ಅವಕಾಶ ನೀಡಲಿಲ್ಲ ಎಂದು ಹೇಳುತ್ತಾರೆ. 1991 ರಲ್ಲಿ ವಿಷ್ಣುವರ್ಧನ್ ಅವರ ಲಯನ್ ಜಗಪತಿ ರಾವ್ ಚಿತ್ರ ಹಾಗೂ ಅಂಬರೀಷ್ ಮಾಲಾಶ್ರೀ ನಟನೆಯ ಹೃದಯ ಹಾಡಿತು ಚಿತ್ರ ಎರಡೂ ಒಟ್ಟಿಗೆ ಬಿಡುಗಡೆ ಆಗುವ ಸನ್ನಿವೇಶ ಬಂದಾಗ ಇದರಿಂದ ಇಬ್ಬರಿಗೂ ಲಾಭವಿಲ್ಲ ಎನ್ನುವುದನ್ನು ಮನಗಂಡ ವಿಷ್ಣುದಾದ ಅವರು ಅಂಬರೀಷ್ ಅವರಿಗೆ ತಮ್ಮ ಚಿತ್ರವನ್ನು ಮುಂದೂಡುವಂತೆ ವಿನಂತಿಸುತ್ತಾರೆ.
ಈ ಘಟನೆಯನ್ನು ಕೆಲವು ಬುದ್ದಿಜೀವಿಗಳು ಮಾಲಾಶ್ರೀ ಅವರು ವಿಷ್ಣುವರ್ಧನ್ ಅವರ ಜೊತೆಗೆ ಈ ಕಾರಣಕ್ಕೆ ನಟಿಸಲಿಲ್ಲ ಎಂದು ಗಾಳಿಸುದ್ದಿ ಹಬ್ಬಿಸಿದ್ದರು. ಏನೇ ಆದರೂ ಯಾವುದೇ ಚಿತ್ರಗಳಲ್ಲಿ ನಟಿಸಬೇಕಾದರೆ ಪಾತ್ರಗಳು ಹೊಂದಾಣಿಕೆ ಆಗಿ ಕಥೆಗೆ ತಕ್ಕ ನಟನೆಗಳನ್ನು ನಿರ್ದೇಶಕರು ಹುಡುಕುತ್ತಿರುತ್ತಾರೆ. ಸುಮ್ಮನೆ ಯಾರೂ ಕೂಡ ಅವಕಾಶ ಕೂಡಿ ಬರದೆ ನಟಿಸಬೇಕು ಎಂದುಕೊಂಡ ತಕ್ಷಣ ನಟಿಸಲು ಸಾಧ್ಯವಾಗುವುದಿಲ್ಲ ಅಲ್ಲವೇ?. ಆದರೆ ಈ ಗಾಳಿಸುದ್ದಿಯ ಘಟನಾವಳಿಗಳು ಹರಿದಾಡುತ್ತಿರುವುದು ಕೂಡ ಅಷ್ಟೇ ಸತ್ಯವಾಗಿದೆ. ಮಾಲಾಶ್ರೀ ಅವರ ಈ ವರ್ತನೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.