ರೇಷ್ಮೆ ಸೀರೆ ಎಂದರೆ ಎಲ್ಲ ಹೆಣ್ಣು ಮಕ್ಕಳಿಗೂ ಪಂಚಪ್ರಾಣ ಮದುವೆ ಸಮಾರಂಭಗಳಲ್ಲಿ ಅಥವಾ ಇನ್ಯಾವುದೇ ಶುಭ ಸಮಾರಂಭಗಳಲ್ಲಿ ದೇವಸ್ಥಾನಗಳಿಗೆ ಹೋಗುವಾಗ ರೇಷ್ಮೆ ಸೀರೆ ಹಾಕಿಕೊಂಡು ಹೋದರೆ ಒಂದು ಲಕ್ಷಣ ಮತ್ತು ರೇಷ್ಮೆ ಸೀರೆ ಉಟ್ಟವರಿಗೆ ಸ್ವಲ್ಪ ಹೆಚ್ಚು ಗೌರವ ಸಿಗುತ್ತದೆ ಎನ್ನುವುದು ಕೆಲವು ಮಹಿಳೆಯರ ಅಭಿಪ್ರಾಯ.
ಒಟ್ಟಿನಲ್ಲಿ ಪ್ರತಿಯೊಂದು ಮಹಿಳೆ ಬಳಿಗೂ ಕೂಡ ಒಂದಾದರೂ ರೇಷ್ಮೆ ಸೀರೆ ಇದ್ದೇ ಇರುತ್ತದೆ ರೇಷ್ಮೆ ಸೀರೆ ಇದ್ದರೂ ಕೆಲವೊಮ್ಮೆ ಉಡುವ ಯೋಗ ಇರುವುದಿಲ್ಲ ಯಾಕೆಂದರೆ ರೇಷ್ಮೆ ಸೀರೆ ವಾಷ್ ಮಾಡುವುದು ಕಷ್ಟ ಹಾಗಾಗಿ ರೇಷ್ಮೆ ಸೀರೆ ಹುಟ್ಟಿಕೊಂಡು ಕಲೆ ಆದರೆ ಎಂದು ಭಯ. ಹೀಗೆ ಯೋಚನೆ ಮಾಡುತ್ತಲೇ ಆ ಸೀರೆಯನ್ನು ಹಾಗೆ ಇಟ್ಟು ಬಿಟ್ಟಿರುತ್ತಾರೆ ಅದು ಇಟ್ಟಲಿಯೇ ಹಾಳಾಗಿರುತ್ತದೆ.
ಇನ್ನು ಮುಂದೆ ಆ ರೀತಿಯ ಟೆನ್ಶನ್ ಬೇಡ ನಾವು ಹೇಳುವ ಈ ಟೆಕ್ನಿಕ್ ಬಳಸಿದರೆ ನಿಮ್ಮ ರೇಷ್ಮೆ ಸೀರೆಯಲ್ಲಿ ಯಾವುದೇ ಕಲೆಯಿದ್ದರೂ ಅದರಲ್ಲೂ ಎಲ್ಲರೂ ಹೆಚ್ಚು ಭಯಪಡುವ ಎಣ್ಣೆ ಕಲೆ ಇದ್ದರೂ ಕೂಡ ಬಹಳ ಸುಲಭವಾಗಿ ತೆಗೆಯಬಹುದು. ಫಂಕ್ಷನ್ ಮನೆ ಅಥವಾ ದೇವಸ್ಥಾನ ಎಂದ ಮೇಲೆ ದೀಪದ ಎಣ್ಣೆ ಅಥವಾ ಅರಿಶಿಣ ಅಥವಾ ನಾವು ತಿಂದ ಆಹಾರ ಪದಾರ್ಥಗಳು ತಗುಲಿ ಕಲೆ ಆಗುವುದು ಸಹಜ.
ಈ ಸುದ್ದಿ ಓದಿ:- ಎಷ್ಟೇ ಕಷ್ಟಪಟ್ಟರು ಸ್ವಂತ ಮನೆ ಕನಸು ನನಸಾಗುತ್ತಿಲ್ಲವೇ? 7 ಗುರುವಾರ ಈ ಚಿಕ್ಕ ಕೆಲಸ ಮಾಡಿ, ಮುಕ್ಕೋಟಿ ದೇವತೆಗಳ ಆಶೀರ್ವಾದದಿಂದ ಸ್ವಗೃಹ ಯೋಗ ಖಚಿತ…
ಎಣ್ಣೆ ಕಲೆ ಆದರೆ ಅದು ಹಾಗೆ ಉಳಿದುಕೊಂಡು ಬಿಡುತ್ತದೆ ಎಂದು, ಅದು ಸೀರೆ ಅಂದವನ್ನು ಕೆಡಿಸುತ್ತದೆ ಎಂದು ನಮ್ಮ ಬೇಜಾರು. ರೇಷ್ಮೆ ಸೀರೆಗಳು ಬಲು ದುಬಾರಿ ಕೂಡ ಆಗಿರುವುದರಿಂದ ಇದು ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತದೆ. ಇನ್ನು ಮುಂದೆ ಈ ರೀತಿ ಟೆನ್ಶನ್ ಬೇಡವೇ ಬೇಡ ಯಾವುದೇ ಕಲೆ ಇದ್ದರೂ ನಿಮ್ಮ ಮನೆಯಲ್ಲಿ ಸಿಗುವ ಈ ವಸ್ತುವಿನಿಂದ ಸೂಪರ್ ಆಗಿ ಕ್ಲೀನ್ ಮಾಡಬಹುದು.
ಮೊದಲಿಗೆ ರೇಷ್ಮೆ ಸೀರೆಯನ್ನು ಕಲೆ ಆಗಿರುವ ಕಡೆ ಒಂದು ಎಳೆಯಲ್ಲಿ ಹಾಕಿಕೊಳ್ಳಿ ಈಗ ಅದರ ಮೇಲೆ ಕಲೆಯಾಗಿರುವ ಅಷ್ಟು ಜಾಗದಲ್ಲಿ ಮಾತ್ರ ಟೂತ್ಪೇಸ್ಟ್ ಹಾಕಿ ಸ್ಪ್ರೆಡ್ ಮಾಡಿ ನೀವು ನಿಮ್ಮ ಮನೆಯಲ್ಲಿ ಬಳಸುವ ಯಾವುದೇ ಟೂತ್ಪೇಸ್ಟ್ ಬಳಸಬಹುದು ಸಾಮಾನ್ಯವಾಗಿ ಎಲ್ಲರೂ ಈ ಸಮಯದಲ್ಲಿ ಕೋಲ್ಗೇಟ್ ಟೂತ್ಪೇಸ್ಟ್ ಬಳಸುತ್ತಾರೆ ಅದು ತುಂಬಾ ಚೆನ್ನಾಗಿ ಕ್ಲೀನ್ ಮಾಡುತ್ತದೆ ಎನ್ನುವುದು ಹಲವರ ಅಭಿಪ್ರಾಯ.
ಈ ಸುದ್ದಿ ಓದಿ:- ಈ ಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿ ಹರಕೆ ಕಟ್ಟಿಕೊಂಡು ಮನೆಗೆ ಹೋದರೆ ನೀವು ತಲುಪುವುದರ ಒಳಗೆ ಸಮಸ್ಯೆ ಪರಿಹಾರ ಆಗುವುದು ಗ್ಯಾರಂಟಿ.!
ಇದು ಹಚ್ಚಿದ ಮೇಲೆ ಸ್ವಲ್ಪ ಸಮಯ ಬಿಟ್ಟು ಯಾವುದೇ ವಾಷಿಂಗ್ ಪೌಡರ್ ಅದರ ಮೇಲೆ ಸುರಿಯಿರಿ ಈಗ ನಿಧಾನವಾಗಿ ನಿಮ್ಮ ಬೆರಳ ಸಹಾಯದಿಂದ ಕಲೆಯನ್ನು ಉಜ್ಜಿ. ಆಮೇಲೆ ಒಂದು ಬಕೆಟ್ ನಲ್ಲಿ ನೀರು ತೆಗೆದುಕೊಂಡು ನೀವು ಪೇಸ್ಟ್ ಹಾಗೂ ವಾಷಿಂಗ್ ಪೌಡರ್ ಹಚ್ಚಿರುವ ಜಾಗದಷ್ಟು ಮಾತ್ರ ನೀರಿನಲ್ಲಿ ಮುಳುಗುವ ಹಾಗೆ ನೀರಿನಲ್ಲಿ ಅದ್ದಿ ವಾಶ್ ಮಾಡಿ.
ಎರಡು ಮೂರು ಬಾರಿ ಫ್ರೆಶ್ ವಾಟರ್ ನಿಂದ ಈ ರೀತಿ ಕ್ಲೀನ್ ಮಾಡಿ ನೆರಳಿನಲ್ಲಿ ಒಣಗಲು ಹಾಕಿ ಒಣಗಿದ ಮೇಲೆ ನಿಮ್ಮ ಸೀರೆ ಚೆಕ್ ಮಾಡಿದರೆ ಎಲ್ಲಿ ಕಲೆಹಾಕಿತ್ತು ಎನ್ನುವುದೇ ನಿಮಗೆ ಮರೆತು ಹೋಗಿರುತ್ತದೆ ಅಷ್ಟು ಚೆನ್ನಾಗಿ ಕ್ಲೀನ್ ಆಗಿರುತ್ತದೆ. ಈ ಟೆಕ್ನಿಕ್ ಉಪಯೋಗಿಸಿ ಮತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.