ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಗುರುಗ್ರಹದ ಅನುಗ್ರಹ ಒಂದಿದ್ದರೆ ಎಂತಹ ದೋಷಗಳಿದ್ದರೂ ಕೂಡ ಆ ವ್ಯಕ್ತಿ ಯಾವುದೇ ಭಯವಿಲ್ಲದೆ ಬದುಕಬಹುದು. ಆ ಪ್ರಕಾರವಾಗಿ ಮೇ 01, 2024ರಂದು ಗುರು ಗ್ರಹದ ಸ್ಥಾನ ಬದಲಾವಣೆಯಾಗುತ್ತಿದೆ.
ಬೃಹಸ್ಪತಿಯು ವೃಷಭ ರಾಶಿಗೆ ಪ್ರವೇಶ ಮಾಡುತ್ತಿದ್ದಾರೆ ಇದು ದ್ವಾದಶ ರಾಶಿಗಳೆಲ್ಲದರ ಮೇಲೆ ಕೂಡ ಪರಿಣಾಮ ಬೀರುತ್ತಿದ್ದು ಅದರಲ್ಲೂ ಈ ಐದು ರಾಶಿಯವರಿಗೆ ಧನ ಯೋಗ ರಾಜಯೋಗವನ್ನು ನೀಡುತ್ತಿದೆ. ಈ ರೀತಿ ಅಖಂಡ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವುವು ಮತ್ತು ಯಾವ ವಿಷಯದಲ್ಲಿ ಇವರಿಗೆ ಶುಭವಾಗುತ್ತಿದೆ ಎನ್ನುವ ವಿವರವನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇವೆ.
* ಮೇಷ ರಾಶಿ:- ಮೇಷ ರಾಶಿಯವರಿಗೆ ಧನಸ್ಥಾನದಲ್ಲಿ ಗುರು ಸಂಚಾರ ಮಾಡುತ್ತಿದ್ದಾರೆ, ಕುಟುಂಬ ಸ್ಥಾನದಲ್ಲೂ ಗುರುವಿನ ಸಂಚಾರ ನಡೆಯುತ್ತಿರುವುದರಿಂದ ಯುಗಾದಿ ನಂತರ ಹಣಕಾಸಿನ ವಿಚಾರದಲ್ಲಿ ಬಹಳ ಬದಲಾವಣೆ ಆಗುತ್ತಿದೆ ಮತ್ತು ಇದು ಸಕಾರಾತ್ಮಕವಾಗಿ ನಡೆಯಲಿದೆ.
ಈ ಸುದ್ದಿ ಓದಿ:- ತೂತಾದ ಬಟ್ಟೆಯನ್ನು ಕೇವಲ ಒಂದು ನಿಮಿಷದಲ್ಲಿ ಒಂದು ಚೂರು ವ್ಯತ್ಯಾಸ ಗೊತ್ತಾಗದಂತೆ ರಿಪೇರಿ ಮಾಡಬಹುದು ಹೇಗೆ ಅಂತ ನೋಡಿ.!
ನಿಮ್ಮ ಮಾತಿಗೆ ವಿರೋಧಗಳು ಬರುವುದಿಲ್ಲ. ನೀವು ಆಡಿದ್ದೇ ಮಾತು, ಮಾಡಿದ್ದೇ ಕೆಲಸ ಎನ್ನುವಂತೆ ಎಲ್ಲದರಲ್ಲೂ ಯಶಸ್ಸು ಪಡೆಯುವಿರಿ ಆ ಮಟ್ಟಿಗಿನ ಗುರುಬಲ ನಿಮಗೆ ದೊರೆಯುತ್ತಿದೆ. ಈ ಹಿಂದೆ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಕೂಡ ಎಲ್ಲ ಬಗೆಹರಿದು ಪ್ರಶಾಂತವಾದ ಜೀವನವನ್ನು ಅನುಭವಿಸುತ್ತೀರಿ.
* ಕಟಕ ರಾಶಿ:- ಕಟಕ ರಾಶಿಗೆ ಗುರು ಸಂಚಾರ ಮಾಡುತ್ತಿರುವ ವೃಷಭ ರಾಶಿಯು 11ನೇ ಮನೆಯಾಗುತ್ತದೆ. ಈ ಏಕದಶಾಸ್ಥಾನದ ಸಂಚಾರವು ಲಾಭ ತರುತ್ತದೆ ಯಾಕಂದರೆ ಈ 11ನೇ ಮನೆಯನ್ನು ಲಾಭ ಸ್ಥಾನ ಎನ್ನಲಾಗುತ್ತದೆ ಹಾಗಾಗಿ ಈ ರಾಶಿಯವರಿಗೆ ಪ್ರತಿಯೊಂದು ವಿಚಾರದಲ್ಲೂ ಕೂಡ ಸಕ್ಸಸ್ ಸಿಗುತ್ತದೆ ಯಾವುದೇ ವ್ಯವಹಾರಗಳಿಗೆ ಕೈ ಹಾಕಿದರು ಲಾಭ ನಿಶ್ಚಿತ ಯಾವುದೇ ಕೆಲಸ ಮಾಡಿದರು ನಿಶ್ಚಿತ ಫಲ ಸಿಕ್ಕೆ ಸಿಗುತ್ತದೆ ಇಂತಹ ರಾಜಯೋಗವನ್ನು ಕಟಕ ರಾಶಿಯವರು ಪಡೆದಿದ್ದಾರೆ.
* ಕನ್ಯಾ ರಾಶಿ:- ಕನ್ಯಾ ರಾಶಿಗೆ ಗುರು ಬದಲಾಗುತ್ತಿರುವ ವೃಷಭ ರಾಶಿಯು 9ನೇ ಮನೆ ಆಗುತ್ತದೆ. ಈ 9ನೇ ಮನೆಯು ಕನ್ಯಾ ರಾಶಿಗೆ ಭಾಗ್ಯಸ್ಥಾನವಾಗಿದೆ. ಇದೆಲ್ಲದರ ಪರಿಣಾಮವು ಕನ್ಯಾ ರಾಶಿಗೆ ಇರುವ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಕನ್ಯಾ ರಾಶಿಯವರಿಗೆ ಕಳೆದ ಕೆಲವು ದಿನಗಳಿಂದ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಬಹಳ ಸಮಸ್ಯೆಯಲ್ಲಿ ಇದ್ದರು ಗುರುಬಲದಿಂದ ಅವರ ಕಷ್ಟಗಳು ಕಳೆದು ಧನ ಯೋಗ ಪ್ರಾಪ್ತಿಯಾಗುತ್ತಿದೆ.
ಈ ಸುದ್ದಿ ಓದಿ:- ರಾಜ್ಯದ ರೈತರಿಗೆ ಸಿಹಿಸುದ್ದಿ, 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿದ್ದರೆ ಸರ್ಕಾರದಿಂದ 10,000 ಫ್ರೀ.!
* ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯಿಂದ ಲೆಕ್ಕ ಹಾಕಿದಾಗ ಗುರು ಪ್ರವೇಶ ಮಾಡುತ್ತಿರುವ ವೃಷಭ ರಾಶಿಯು ಏಳನೇ ಮನೆಯಾಗುತ್ತದೆ. ಆ ಪ್ರಕಾರವಾಗಿ ವೃಶ್ಚಿಕ ರಾಶಿಗೆ ಸಪ್ತಮ ಸಂಚಾರದಲ್ಲಿರುವ ಗುರುವು ಈ ರಾಶಿಗೆ ರಾಜಯೋಗ ನೀಡುತ್ತಿದ್ದಾರೆ ಇದು ನೇರವಾಗಿ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ.
ಇದುವರೆಗೂ ಕೂಡ ಇಷ್ಟ ವಾಗುವ ರೀತಿ ಸಂಬಂಧ ಸಿಗದೆ ವಿವಾಹ ವಿಳಂಬ ಆಗಿದ್ದರೆ ಅಥವಾ ವಿವಾಹವಾಗಿ ದಂಪತಿಗಳ ನಡುವೆ ಮ’ನ’ಸ್ತಾ’ಪ ಏರ್ಪಟ್ಟಿದ್ದರೆ ಇದೆಲ್ಲವೂ ನಿವಾರಣೆಯಾಗಿ ಸತಿಪತಿ ಹೊಂದಾಣಿಕೆಯಿಂದ ಬದುಕುವಂತಹ ಯೋಗವನ್ನು ಗುರುವು ನೀಡುತ್ತಿದ್ದಾರೆ. ವೃಶ್ಚಿಕ ರಾಶಿಗೆ ಇರುವ ಅಷ್ಟಮ ಶನಿ ಕಾಟದ ಪ್ರಭಾವವನ್ನು ಕೂಡ ಗುರುವು ಕಡಿಮೆಗೊಳಿಸಿ ರಾಜಯೋಗ ನೀಡುತ್ತಿದ್ದಾರೆ.
ಈ ಸುದ್ದಿ ಓದಿ:- ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!
* ಮಕರ ರಾಶಿ:- ಮಕರ ರಾಶಿ ಕೂಡ ಯುಗಾದಿ ನಂತರ ಬಹಳ ಉತ್ತಮ ಫಲಗಳು ದೊರೆಯುತ್ತಿವೆ. ಮಕರ ರಾಶಿಯಿಂದ ಲೆಕ್ಕ ಹಾಕಿದಾಗ ಯುಗಾದಿಯ ನಂತರ ಮೇ 1ರಂದು, ಗುರುವಿನ ಸ್ಥಾನ ಪಲ್ಲಟದಿಂದ ಬದಲಾವಣೆ ಕಾಣುವ ವೃಷಭ ರಾಶಿಯು 5ನೇ ರಾಶಿಯಾಗುತ್ತದೆ.
ಪಂಚಮ ಸ್ಥಾನದಲ್ಲಿ ಗುರುವಿನ ಬದಲಾವಣೆಗಳಾಗುತ್ತಿರುವುದು ಮಕ್ಕಳ ವಿಚಾರದಲ್ಲಿ ಶುಭ ಸಮಾಚಾರ ತರಲಿದೆ. ಮಕರ ರಾಶಿಯವರು ಮಕ್ಕಳ ಕುರಿತಾಗಿ ಸಮಸ್ಯೆ ಹೊಂದಿದ್ದರೆ ಅದು ಪರಿಹಾರವಾಗಲಿದೆ. ಸಂತಾನ ಭಾಗ್ಯ ಅಥವಾ ಮಕ್ಕಳ ಮನ ಪರಿವರ್ತನೆ ಮುಂತಾದ ಶುಭಫಲಗಳು ದೊರೆಯಲಿದೆ, ಇದರಿಂದ ನಿಮ್ಮ ಬದುಕು ಬದಲಾಗಲಿದೆ.