ಯುಗಾದಿ ಎಂದರೆ ಯುಗದ ಆದಿ. ಯುಗಾದಿ ದಿನದಂದು ಹೊಸ ಸಂವತ್ಸರ ಆರಂಭವಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರವಾಗಿ ಇದೇ ಹೊಸ ವರ್ಷ, ಈ ವರ್ಷ ಏಪ್ರಿಲ್ 9ರಂದು ಶುಭಕೃತ್ ಸಂವತ್ಸರ ಮುಗಿದು ಕ್ರೋಧಿ ಸಂವತ್ಸರ ಆರಂಭವಾಗುತ್ತಿದೆ.
ಈ ಶುಭ ಸಂದರ್ಭದಲ್ಲಿ ನೀವು ನಿಮ್ಮ ಮನೆಗೆ ಕೆಲ ವಸ್ತುಗಳನ್ನು ಖರೀದಿಸಿ ತರುವುದರಿಂದ ನಿಮ್ಮ ಯೋಗ ವೃದ್ಧಿಯಾಗುತ್ತದೆ ಮತ್ತು ಈ ವರ್ಷ ಪೂರ್ತಿ ನಿಮ್ಮ ಮನೆಯಲ್ಲಿ ಧನ ಧಾನ್ಯ ಸಂಪತ್ತು ಐಶ್ವರ್ಯ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
ತಾಯಿ ಮಹಾಲಕ್ಷ್ಮಿ ಸಮೇತರಾಗಿ ಎಲ್ಲಾ ದೇವಾನು ದೇವತೆಗಳ ಆಶೀರ್ವಾದ ಸಿಗುತ್ತದೆ. ಹಾಗಾದರೆ ನೀವು ಯಾವ ವಸ್ತುಗಳನ್ನು ಯುಗಾದಿಗೂ ಮುನ್ನ ಖರೀದಿಸಿ ಹಬ್ಬದ ದಿನ ಅದನ್ನು ಬಳಸಿ ಪೂಜೆ ಮಾಡಬೇಕು ಎನ್ನುವ ವಿಚಾರವನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!
* ಯುಗಾದಿ ಹಬ್ಬದ ದಿನದಂದು ಮನೆಯಲ್ಲಿ ಕಳಶ ಇಟ್ಟು ಪೂಜೆ ಮಾಡುವ ಪದ್ಧತಿ ಇದೆ. ಸಾಮಾನ್ಯವಾಗಿ ಕಳಶವನ್ನು ಗೌರಿ ಹಾಗೂ ತಾಯಿ ಮಹಾಲಕ್ಷ್ಮಿ ಪ್ರತೀಕವಾಗಿ ಇಡಲಾಗುತ್ತದೆ ಮತ್ತು ಇದು ಸಮೃದ್ಧಿ ಸಂಕೇತವಾಗಿದೆ. ನಿಮಗೆ ಈ ಆಚರಣೆ ರೂಢಿ ಇಲ್ಲದಿದ್ದರೆ ಇನ್ನು ಮುಂದೆ ಇದನ್ನು ನೀವು ಪ್ರಾರಂಭಿಸಬಹುದು ಅದಕ್ಕಾಗಿ ನೀವು ಕಳಸಕ್ಕೆ ಬೇಕಾದ ಪದಾರ್ಥಗಳನ್ನು ಖರೀದಿಸಿ ಹೊಸ ಸಂವತ್ಸರವನ್ನು ಸ್ವಾಗತಿಸಿ.
* ಗಣೇಶ ಹಾಗೂ ತಾಯಿ ಮಹಾಲಕ್ಷ್ಮಿಯ ಸಣ್ಣ ವಿಗ್ರಹಗಳನ್ನು ಖರೀದಿಸಿ ತರುವುದು ಶ್ರೇಷ್ಠ. ನಿಮ್ಮ ಶಕ್ತಿ ಅನುಸಾರ ಬೆಳ್ಳಿ ಅಥವಾ ಪಂಚಲೋಹ ಅಥವಾ ಇನ್ಯಾವುದೇ ಲೋಹದ ವಿಗ್ರಹಗಳನ್ನು ಖರೀದಿಸಿ ಯುಗಾದಿ ದಿನದಿಂದ ಪ್ರತಿನಿತ್ಯವೂ ಈ ವಿಗ್ರಹಗಳಿಗೆ ಪೂಜೆ ಮಾಡಿ ನೈವೇದ್ಯ ಅರ್ಪಿಸುವುದನ್ನು ರೂಢಿ ಮಾಡಿಕೊಳ್ಳಿ ಒಂದು ವರ್ಷದೊಳಗೆ ನಿಮ್ಮ ಬದುಕಿನಲ್ಲಿ ಆಗುವ ಬದಲಾವಣೆ ನಿಮಗೆ ತಿಳಿಯುತ್ತದೆ
* ಅದೇ ರೀತಿಯಾಗಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಶ್ರೀ ಚಕ್ರ ಇರಬೇಕು ಎಂದು ಹೇಳಲಾಗುತ್ತದೆ. ಇದು ಬಹಳ ಶಕ್ತಿಶಾಲಿಯಾದ ವಸ್ತುವಾಗಿದ್ದು ನಿಮ್ಮ ಮನೆಯಲ್ಲಿ ಇಲ್ಲ ಎನ್ನುವುದಾದರೆ ಮೊದಲು ಶ್ರೀಚಕ್ರ ಖರೀದಿಸಿ. ಪ್ರತಿನಿತ್ಯವೂ ಅಭಿಷೇಕ, ಅರ್ಚನೆ ಮಾಡಿ ಪ್ರಾರ್ಥಿಸಿ ಇದನ್ನು ಆರಂಭಿಸುವುದಕ್ಕೂ ಕೂಡ ಯುಗಾದಿ ದಿನ ಶ್ರೇಷ್ಠ.
ಈ ಸುದ್ದಿ ಓದಿ:- ಕನ್ಯಾ ರಾಶಿಯವರಿಗೆ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಕನ್ಯಾ ರಾಶಿಯವರಿಗೆ ಯಾವಾಗಲೂ ಈ ರೀತಿ ಆಗುವುದೇಕೆ.?
* ಯುಗಾದಿ ಹಬ್ಬದ ದಿನದಂದು ಮನೆಯಲ್ಲಿರುವ ಎಲ್ಲರೂ ಕೂಡ ಹೊಸ ಬಟ್ಟೆ ಧರಿಸಿ ಹೊಸ ವರ್ಷ ಆಚರಿಸಿದರೆ ವರ್ಷ ಪೂರ್ತಿ ಅವರಿಗೆ ಈ ರೀತಿ ಸಂಭ್ರಮ ಸಡಗರ ದುಪಟ್ಟಾಗುತ್ತದೆ. ಒಂದು ವೇಳೆ ನಿಮಗೆ ಆ ಶಕ್ತಿ ಇಲ್ಲದಿದ್ದರೆ ನಿಮ್ಮ ಮನೆಯಲ್ಲಿರುವ ಚಿಕ್ಕ ಮಕ್ಕಳಿಗಾದರೂ ಕೊಡಿಸಿ. ಅವರ ದಿನ ಸಂತೋಷವಾಗಿ ಆರಂಭವಾಗಲಿ ಮತ್ತು ಅವರ ಜೀವನವು ಉಜ್ವಲವಾಗಲಿ.
* ಯುಗಾದಿ ಹಬ್ಬ ಎಂದರೆ ಸಂಭ್ರಮ, ಹೊಸದೊಂದು ಸಂತಸ, ವಸಂತ ಮಾಸ ಆರಂಭವಾಗುವ ಈ ಶುಭ ಸಮಯದಲ್ಲಿ ಪ್ರಕೃತಿ ಜೊತೆಗೆ ನಾವು ಹೊಂದಿಕೊಂಡು ಸಂಭ್ರಮಿಸುತ್ತೇವೆ. ಮನೆಮನೆದಲ್ಲೆಲ್ಲಾ ಈ ಸಂತೋಷ ನೆಲೆಸಬೇಕು ಎಂದರೆ ಮನೆ ಹೊಸಿಲಿಗೆ ಹಸಿರು ತೋರಣಗಳಿಂದ ಶೃಂಗಾರ ಆಗಲೇಬೇಕು. ಯುಗಾದಿ ದಿನ ಮುಂಜಾನೆಯೇ ನೀವು ನಿಮ್ಮ ಮನೆ ಹೊಸ್ತಿಲಿಗೆ ಮಾವಿನ ತೋರಣ ಕಟ್ಟಿ ಹೊಸ ವರ್ಷದ ಆಚರಣೆ ಆರಂಭಿಸಿ
* ಯುಗಾದಿ ಹಬ್ಬದ ದಿನ ಪೂಜೆಗೆ ಬೇಕಾದ ಮಂಗಳ ದ್ರವ್ಯಗಳನ್ನು ಕೂಡ ಹಬ್ಬದಿಂದ ಹಿಂದಿನ ದಿನವೇ ಹಬ್ಬಕ್ಕಿಂತ ಮುಂಚೇ ಖರೀದಿಸಿ ತರುವುದು ಬಹಳ ಶ್ರೇಷ್ಠ. ಯುಗಾದಿ ಹಬ್ಬದ ದಿನ ಸಾಧ್ಯವಾದಷ್ಟು ಬೇಗ ದೇವರ ಪೂಜೆ ಮಾಡಿ ಸಿಹಿ ಅಡುಗೆ ಮಾಡಿ ಮನೆಮಂದಿಯಲ್ಲ ಒಟ್ಟಿಗೆ ಸೇರಿ ಆಸ್ವಾದಿಸಿ ಮತ್ತು ಸಂತೋಷದಿಂದ ಸಮಯ ಕಳೆಯಿರಿ. ಈ ರೀತಿ ಆ ದಿನ ಶುಭಕರವಾಗಿರಬೇಕು ಎಂದರೆ ಆ ದಿನದ ಪೂಜೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಕೂಡ ಮುಂಚಿತವಾಗಿ ಹೊಂದಿಸಿಕೊಳ್ಳುವುದು ಒಳ್ಳೆಯದು.