ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಜಾರಿಯಾಗಿ ಏಳು ತಿಂಗಳುಗಳು ಕಳೆದಿದೆ. ಕಾಂಗ್ರೆಸ್ ಸರ್ಕಾರವು ನೀಡಿದ್ದ ಗ್ಯಾರಂಟಿ ಯೋಜನೆಗಳ ಭರವಸೆ ಪ್ರಕಾರ ಗೃಹಲಕ್ಷ್ಮಿ ಯೋಜನೆಯು ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ಕುಟುಂಬದ ಒಡತಿಗೆ (HOF) ರೂ.2000 ಸಹಾಯಧನವನ್ನು ನೀಡುವ ಯೋಜನೆಯಾಗಿದೆ.
30 ಆಗಸ್ಟ್, 2023 ರಂದು ಯೋಜನೆ ಲಾಂಚ್ ಆಗಿದ್ದು ಇದುವರೆಗೂ ಏಳು ತಿಂಗಳನ್ನು ಪೂರೈಸಿದೆ ಮತ್ತು ಇದೇ ಮಾರ್ಚ್ ಅಂತ್ಯದೊಳಗೆ ಎಲ್ಲ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೂ 7ನೇ ಕಂತಿನ ಹಣ ವರ್ಗಾವಣೆ ಆಗುತ್ತಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ಬಹಳ ದೊಡ್ಡ ಬದಲಾವಣೆ ಆಗುತ್ತಿದ್ದು ಮುಂದಿನ ತಿಂಗಳು ಅಂದರೆ ಏಪ್ರಿಲ್ ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗುವ ಸಮಯದಲ್ಲಿ ಈ ಮಹಿಳೆಯರಿಗೆ ರೂ.6000 ಹಣ ಸಿಗುತ್ತಿದೆ. ಇದು ಯಾಕೆ? ಮತ್ತು ಎಲ್ಲರೂ ಈ ರೀತಿ ರೂ.6000 ಹಣ ಪಡೆಯುತ್ತಾರೆಯೇ ಎನ್ನುವ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಈ ಸುದ್ದಿ ಓದಿ:- ಈ ಒಂಬತ್ತು ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನೀವು ಸಾಮಾನ್ಯರಲ್ಲ ಎಂದು ಅರ್ಥ.!
ಅದ್ಯಾಕೋ ಏನೋ ಗೃಹಲಕ್ಷ್ಮಿ ಯೋಜನೆ ಜಾರಿಯಾದಾಗಲಿಂದಲೂ ಕೂಡ ಒಂದಲ್ಲ ಒಂದು ರೀತಿಯ ತೊಡಕುಗಳು ಎದುರಾಗುತ್ತಲೇ ಇವೆ. ಆರಂಭದಲ್ಲಿ ಅರ್ಜಿ ಸಲ್ಲಿಸುವ ವಿಷಯಕ್ಕೂ ಕೂಡ ಸಾಕಷ್ಟು ಗೊಂದಲ ಆಗಿತ್ತು.
ನಂತರ ಸಮಸ್ಯೆ ಬಗೆಹರಿದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ 1.17 ಕೋಟಿ ಮಹಿಳೆಯರ ಪೈಕಿ ಶೇಕಡ 90%ರಷ್ಟು ಮಹಿಳೆಯರು ಮೊದಲ ಕಂತಿನಿಂದಲೇ ಯಶಸ್ವಿಯಾಗಿ ತಮ್ಮ ಖಾತೆಗಳಿಗೆ DBT ಮೂಲಕ ಹಣ ಪಡೆದುಕೊಂಡರು.
ಲಕ್ಷಾಂತರ ಮಹಿಳೆಯರಿಗೆ ಹಣ ತಲುಪಲು ಸಮಸ್ಯೆ ಆಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಂಡ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಮತ್ತು ಹಣ ಪಡೆದುಕೊಳ್ಳುವುದಕ್ಕೆ ಆಗುತ್ತಿರುವ ತೊಡಕುಗಳನ್ನು ನಿವಾರಣೆ ಮಾಡುವುದಕ್ಕಾಗಿ ಸಾಕಷ್ಟು ಪರಿಹಾರ ಕ್ರಮಗಳನ್ನು ಸೂಚಿಸಿತು.
ಈ ಸುದ್ದಿ ಓದಿ:-ಸ್ವಂತ ಮನೆ ಇಲ್ಲ ಎಂದು ದುಃಖ ಪಡುವವರು ಅರಿಶಿನದಿಂದ ಈ ಒಂದು ಚಿಕ್ಕ ಕೆಲಸ ಮಾಡಿದರೆ ನಿಮ್ಮ ಕನಸು ನನಸಾಗುತ್ತದೆ.!
ಮುಖ್ಯಮಂತ್ರಿಗಳ (Cheif Ministee) ಅಣತೆಯಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಹೊಣೆ ಹೊತ್ತುಕೊಂಡು ತಮ್ಮ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಬ್ಯಾಂಕ್ ಸಿಬ್ಬಂದಿಗಳು, ಅಂಚೆ ಇಲಾಖೆ ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಎಲ್ಲರನ್ನು ಒಳಗೊಂಡ ಗೃಹಲಕ್ಷ್ಮಿ ಕ್ಯಾಂಪ್ (Gruhalakshmi Camp) ಏರ್ಪಡಿಸಿ ಗೃಹಲಕ್ಷ್ಮಿ ಯೋಜನೆಗಿರುವ ತೊಡಕುಗಳ ನಿವಾರಣೆ ಮಾಡಲು ಪ್ರಯತ್ನಿಸಿದರು.
ಕೊನೆಗೂ ಕಾರ್ಯಕ್ರಮ ಯಶಸ್ವಿಯಾಗಿದ್ದು ಇಂತಹ ಕ್ರಮಗಳನ್ನು ಕೈಗೊಂಡ ಬಳಿಕ ಅನೇಕ ಮಹಿಳೆಯರಿಗೆ ತಮ್ಮ ಪಾಲಿನ ಹಣ ಪಡೆಯಲು ಸಾಧ್ಯವಾಗಿದೆ ಮತ್ತು ಸಮಸ್ಯೆ ಬಗೆಹರಿಯುವವರೆಗೂ ಕೂಡ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಸ್ಥಗಿತಗೊಳಿಸಲಾಗಿದ್ದ ಪ್ರಕ್ರಿಯೆಗೆ ಈಗ ಮತ್ತೆ ಅವಕಾಶ ನೀಡಲಾಗಿದ್ದು ಅನೇಕರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ.
ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳದೆ ಹೊಸದಾಗಿ ಈಗ ಎರಡನೇ ಬಾರಿ ಅವಕಾಶ ನೀಡಿದಾಗ ಅರ್ಜಿ ಸಲ್ಲಿಸಿದ್ದಾರೆ ಅಥವಾ ತಮ್ಮ ದಾಖಲೆಗಳಲ್ಲಿನ ಸಮಸ್ಯೆ ಕಾರಣದಿಂದ ಹಣ ಪಡೆಯಲು ಸಮಸ್ಯೆ ಪಟ್ಟಿರುವವರು ಅಥವಾ ಅರ್ಹರಾಗಿದ್ದರೂ ಸರ್ಕಾರದ ಕಡೆಯಿಂದ ಆಗಿರುವ ಸಮಸ್ಯೆಯಿಂದ ಒಂದು ಕಂತಿನ ಹಣ ಪಡೆಯಲು ಸಾಧ್ಯವಾಗದೆ ಇದ್ದವರು.
ಈ ಸುದ್ದಿ ಓದಿ:-ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!
ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ವಿಳಂಬ ಆಗಿರುವವರು ಈ ರೀತಿ ಯಾರೇ ಗೃಹಲಕ್ಷ್ಮಿ ಯೋಜನೆ ಹಣ ಮಿಸ್ ಮಾಡಿಕೊಂಡಿದ್ದರೆ ಅಂತಹ ಫಲಾನುಭವಿಗಳ ಖಾತೆಗೆ ಏಪ್ರಿಲ್ ತಿಂಗಳಲ್ಲಿ ಒಟ್ಟು ರೂ.6,000 ಹಣ ಜಮೆ ಆಗುತ್ತಿದೆ.
7ನೇ ತಿಂಗಳ ಕಂತಿನ ಹಣದೊಂದಿಗೆ ಹಿಂದಿನ ಬಾಕಿ ಉಳಿದಿರುವ ಎರಡು ಕಂತುಗಳ ಹಣ ಸೇರಿ ಒಟ್ಟಿಗೆ ರೂ.6000 ಹಣವು ಗೃಹಲಕ್ಷ್ಮಿ ಹಣ ಪಡೆಯುವ ಸಮಸ್ಯೆ ಆಗಿದ್ದ ಫಲಾನುಭವಿಗಳ ಖಾತೆಗೆ ತಲುಪುತ್ತಿದೆ, ಸ್ವತಃ ಇಲಾಖೆ ಅಧಿಕಾರಿಗಳೇ ಈ ಮಾಹಿತಿಯನ್ನು ನೀಡಿದ್ದಾರೆ.