ಬಾಳೆ ಹಣ್ಣು ಒಂದು ಪರಿಪೂರ್ಣ ಆಹಾರ. ನಿದ್ರಾಹೀನತೆಗೆ ಮಲಬದ್ಧತೆಗೆ ಮಾನಸಿಕ ಖಿ’ನ್ನ’ತೆಗೆ ಬಾಳೆಹಣ್ಣು ಔಷಧಿ.
ಸಾಮಾನ್ಯವಾಗಿ ಬಾಳೆಹಣ್ಣನ್ನು ಮನೆಗೆ ಹೆಚ್ಚಾಗಿಯೇ ತರುತ್ತೇವೆ. ಕೆಲವು ಮನೆಗಳಲ್ಲಿ ತಮ್ಮ ಹಿತ್ತಲ ಹಿಂದೆ ಬಾಳೆ ಗಿಡ ನೆಟ್ಟಿರುತ್ತಾರೆ ಮತ್ತು ಬಾಳೆಗೊನೆ ಕಡಿದಾಗ ಎಲ್ಲವೂ ಒಟ್ಟಿಗೆ ಹಣ್ಣಾಗಿ ವೇಸ್ಟ್ ಆಗಿರುತ್ತದೆ.
ಇನ್ನು ಕೆಲವರು ಬಾಳೆಹಣ್ಣು ಕಡಿಮೆ ರೇಟ್ ಗೆ ಇದ್ದಾಗ ಹೆಚ್ಚಾಗಿ ತೆಗೆದುಕೊಂಡು ಬರುತ್ತಾರೆ, ಹಬ್ಬ ಹರಿದಿನವೋ ಅಥವಾ ಮನೆಯಲ್ಲಿ ಕಾರ್ಯಕ್ರಮಗಳು ಇದ್ದಾಗ ಹೆಚ್ಚಾಗಿ ಬಾಳೆಹಣ್ಣು ತಂದು ತಿನ್ನಲು ಸಮಯ ಇಲ್ಲದೆ ಅಥವಾ ಎಲ್ಲವೂ ಒಂದೇ ಬಾರಿಗೆ ಹಣ್ಣಾಗಿ ವೇಸ್ಟ್ ಆಗುತ್ತಿರುತ್ತದೆ.
ಬಾಳೆಹಣ್ಣು ಹಣ್ಣಾಗಿ ಹೋಗದೆ ಇದ್ದರೂ ಮೇಲೆ ಸಿಪ್ಪೆ ಕಪ್ಪು ಬಣ್ಣ ಬರುವಾಗ ಕೂಡ ಬೇಜಾರಾಗಿ ಕೆಟ್ಟು ಹೋಗಿದೆ ಎಂದುಕೊಂಡು ಬಿಸಾಕಿ ಬಿಡುತ್ತೇವೆ. ನಿಮಗೂ ಈ ಅನುಭವ ಆಗಿದ್ದರೆ ಈಗ ನಾವು ಹೇಳುವ ಈ ಟೆಕ್ನಿಕ್ ಗಳನ್ನು ಬಳಸಿದರೆ ಬಹಳ ದಿನಗಳವರೆಗೆ ನೀವು ಹಣ್ಣು ಫ್ರೆಶ್ ಆಗಿರುವಂತೆ ನೋಡಿಕೊಳ್ಳಬಹುದು.
ಈ ಸುದ್ದಿ ಓದಿ:- ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!
* ಬಾಳೆಹಣ್ಣನ್ನು ಯಾವಾಗಲೂ ನೆಲದ ಮೇಲೆ ಇಡಬಾರದು, ಒಂದು ಬುಟ್ಟಿಯಲ್ಲಿ ಇಡಬೇಕು ಅಥವಾ ನೇತು ಹಾಕುವ ಕುಕ್ಕೆ ಇದ್ದರೆ ಅದರಲ್ಲಿ ಹಾಕಿ ಇಡಬೇಕು ಈ ರೀತಿ ಮಾಡುವುದರಿಂದ ಇದು ಬೇಗ ಕಪ್ಪಾಗುವುದಿಲ್ಲ, ಕೊಳೆಯುವುದಿಲ್ಲ
* ಬಾಳೆಹಣ್ಣನ್ನು ಇತರ ಯಾವುದೇ ಹಣ್ಣುಗಳ ಜೊತೆ ಸೇರಿಸಿ ಇಡಬಾರದು. ಯಾಕೆಂದರೆ ಬೇರೆ ಹಣ್ಣುಗಳು ಹಣ್ಣಾಗುವಾಗ ಬಿಡುಗಡೆಯಾಗುವ ಅನಿಲ ರಿಯಾಕ್ಷನ್ ಬಾಳೆಹಣ್ಣು ಬೇಗ ಹಣ್ಣಾಗುವಂತೆ ಮಾಡುತ್ತದೆ ಮತ್ತು ಇದು ನ್ಯಾಚುರಲ್ ಆಗಿ ಹಣ್ಣಾಗದೆ ಕೃತಕವಾಗಿ ಹೊರಗಿನಿಂದ ಒತ್ತಡ ಹಾಕಿ ಹಣ್ಣು ಮಾಡಿದ ರೀತಿ ಆಗುತ್ತದೆ. ಈ ರೀತಿ ಮಾಡಿದರೆ ಬಾಳೆಹಣ್ಣುಗಳು ಬೇಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಕೆಟ್ಟು ಹೋಗುತ್ತದೆ. ಹಾಗಾಗಿ ಬಾಳೆಹಣ್ಣನ್ನು ಪ್ರತ್ಯೇಕವಾಗಿ ಇಡಿ
* ಬಾಳೆಹಣ್ಣನ್ನು ನೇರವಾಗಿ ಸೂರ್ಯನ ಬೆಳಕು ಬೀಳುವ ಕಡೆ ಅಥವಾ ಗ್ಯಾಸ್ ಬಳಿ ಈ ರೀತಿ ಬಿಸಿ ತಾಕುವ ಕಡೆ ಇಡಬಾರದು ಈ ತಾಪದಿಂದ ಕೂಡ ಅದು ಬಹಳ ಬೇಗ ಹಣ್ಣಾಗುತ್ತದೆ ಮತ್ತು ಮೇಲೆ ಕಪ್ಪಾಗುತ್ತದೆ ಆಗಲೂ ಅದು ಬಹಳ ದಿನ ಇಡಲು ಆಗುವುದಿಲ್ಲ.
ಈ ಸುದ್ದಿ ಓದಿ:- ಬಟ್ಟೆಗಳ ಮೇಲಿನ ಅರಿಶಿಣದ ಕಲೆ ತೆಗೆಯುವುದು ಎಷ್ಟು ಸುಲಭ ಗೊತ್ತಾ? ಈ ಟ್ರಿಕ್ ಫಾಲೋ ಮಾಡಿ 100% ಕ್ಲೀನ್ ಆಗುತ್ತದೆ.!
* ಬಾಳೆಹಣ್ಣಿನ ಗೊನೆಯಲ್ಲಿ ಈಗಾಗಲೇ ಚಾಕು ಅಥವಾ ಇನ್ಯಾವುದರಿಂದಲೋ ಏಟು ಆಗಿರುವ ಹಣ್ಣುಗಳು ಇದ್ದರೆ ಅದನ್ನು ಮೊದಲು ತೆಗೆದುಬಿಡಿ. ಇದರಿಂದ ಇತರೆ ಹಣ್ಣುಗಳು ಹಾಳಾಗುತ್ತವೆ
* ಬಾಳೆಹಣ್ಣಿನ ಗೊನೆಯ ತುದಿಯನ್ನು ಗಾಳಿ ಆಡಲು ಬಿಡುವುದರಿಂದ ಇದು ಬೇಗ ಹಾಳಾಗುತ್ತದೆ ಹಾಗಾಗಿ ಇದನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಕವರ್ ಮಾಡಿ ಒಂದು ದಾರಕಟ್ಟಿ ಇಡಬೇಕು. ಈ ಈ ರೀತಿ ಪ್ಲಾಸ್ಟಿಕ್ ಟೇಪ್ ನಿಂದ ಕವರ್ ಮಾಡುವುದರಿಂದ ಹೆಚ್ಚು ದಿನಗಳವರೆಗೆ ಬಾಳೆಹಣ್ಣು ಫ್ರೆಶ್ ಆಗಿ ಇರುವಂತೆ ನೋಡಿಕೊಳ್ಳಬಹುದು. ಬೇಕಾದರೆ ಇದನ್ನು ಫ್ರಿಡ್ಜ್ ನಲ್ಲಿ ಕೂಡ ಇಡಬಹುದು ಅಥವಾ ಹೊರಗೆ ಕೂಡ ಇಡಬಹುದು.
* ಫ್ರಿಡ್ಜ್ ನಲ್ಲಿ ಬಾಳೆಹಣ್ಣು ಇಟ್ಟರು ಕೂಡ ಅದು ಫ್ರೆಶ್ ಆಗಿರುತ್ತದೆ ಆದರೆ ಬಾಳೆಹಣ್ಣು ಸಿಪ್ಪೆ ಚುಕ್ಕಿ ಚುಕ್ಕಿ ಆಗಿರುತ್ತದೆ ಅಷ್ಟೇ
* ಡೀಪ್ ಫ್ರೀಜರ್ ನಲ್ಲಿ ಬಾಳೆಹಣ್ಣು ಇಡುವುದರಿಂದ ಬಹಳ ದಿನಗಳವರೆಗೆ ಫ್ರೆಶ್ ಆಗಿರುತ್ತದೆ ಆದರೆ ತಿನ್ನುವ ಸ್ವಲ್ಪ ಸಮಯಕ್ಕೂ ಮೊದಲೇ ಇದನ್ನು ಹೊರಗೆ ತೆಗೆದಿಟ್ಟು ತಿನ್ನುವುದು ಒಳ್ಳೆಯದು.
ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟಿಸುವ ಕನಸಿದ್ದರೆ, ಆಸ್ತಿ ವಿಚಾರವಾಗಿ ಸಮಸ್ಯೆ ಇದ್ದರೆ ವರಾಹ ಪುರಾಣದಲ್ಲಿ ಸೂಚಿಸಿರುವ ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿ ಎಲ್ಲವೂ ಪರಿಹಾರವಾಗುತ್ತದೆ.!
* ಬಾಳೆ ಹಣ್ಣನ್ನು ಈಗಾಗಲೇ ಹಣ್ಣಾಗಿ ಹೋಗಿದೆ ಇಡಲು ಆಗುವುದಿಲ್ಲ ಎಂಬ ಸ್ಥಿತಿ ಇದ್ದಾಗ ಅದನ್ನು ಉದ್ದಗೆ ಕಟ್ ಮಾಡಿ ಒಳಗಡೆ ಜೇನುತುಪ್ಪ ಅಥವಾ ನಿಂಬೆರಸ ಸವರಿ ಇಟ್ಟು ಫ್ರಿಡ್ಜ್ ನಲ್ಲಿ ಇಟ್ಟರೆ ಒಂದು ದಿನದವರೆಗೂ ಕೂಡ ಸೇವಿಸಬಹುದು.