ಹಿಂದಿ ಬಿಗ್ ಬಾಸ್ ನಿರೂಪಣೆ ಮಾಡಲು ಸಲ್ಮಾನ್ ಖಾನ್ ಪಡೆಯುತ್ತಿರುವ ಸಂಭವನೆ 350 ಕೋಟಿ, ಕನ್ನಡದಲ್ಲಿ ಕಿಚ್ಚ ಸುದೀಪ್ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ. ಬಿಗ್ ಬಾಸ್ ಈ ಹೆಸರು ಕೇಳುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಬಹಳ ಉತ್ಸುಕರಾಗುತ್ತಾರೆ. ಏಕೆಂದರೆ ಕರ್ನಾಟಕದಲ್ಲಿ ಬಿಗ್ ಬಾಸ್ ನಂತಹ ರಿಯಾಲಿಟಿ ಶೋ ಮತ್ತೊಂದು ಇಲ್ಲ ಬಹಳಷ್ಟು ವೈಭವಿಕರಿಸಿ ಈ ಒಂದು ಶೋವನ್ನು ಸಿದ್ಧ ಪಡಿಸಲಾಗುತ್ತದೆ. ಬಿಗ್ ಬಾಸ್ ಪ್ರಾರಂಭವಾಗಿ ಇಲ್ಲಿಗೆ 8 ವರ್ಷ ಮುಕ್ತಾಯವಾಗಿ 9ನೇ ವರ್ಷ ಕಾಲಿಡುತ್ತಿದೆ. ಹಾಗಾಗಿ ಈ ವರ್ಷದ ಬಿಗ್ ಬಾಸ್ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ತೆರೆ ಮೆರೆ ತರಲು ಎಲ್ಲ ರೀತಿಯಾದಂತಹ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ತಕ್ಕಂತೆ ಮೊನ್ನೆಯಷ್ಟೇ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮದ ಪ್ರೋಮೋ ಶೂಟಿಂಗ್ ನಲ್ಲಿ ಕೂಡ ಭಾಗಿಯಾಗಿದ್ದರು.
ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಿಚ್ಚ ಸುದೀಪ್ ಅವರು ಬಹಳ ಸ್ಟೈಲಿಶ್ ಈ ಕಾರಣಕ್ಕಾಗಿ ಬಿಗ್ ಬಾಸ್ ಪ್ರೊಮೋಗೆ ಹಾಕಿಕೊಂಡಿದಂತಹ ಉಡುಪು ಬಹಳಷ್ಟು ಆಕರ್ಷಕರವಾಗಿತ್ತು ದಿನಪೂರ್ತಿ ಪ್ರೋಮೊ ಶೂಟಿಂಗ್ ನಲ್ಲಿಯೇ ಭಾಗಿಯಾಗಿದ್ದರು. ಈ ಫೋಟೋ ಮತ್ತು ವಿಡಿಯೋಗಳನ್ನು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ಹಾಗೂ ಬಿಗ್ ಬಾಸ್ ನಾ ಸಂಯೋಜಕರು ಆದಂತಹ ಪರಮೇಶ್ ಗುಂಡಲ್ಕರ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರ ಜೊತೆಗೆ ಇದೇ ಜುಲೈನ ಕೊನೆಯ ವಾರದಲ್ಲೂ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗುತ್ತದೆ ಎಂಬ ಅಪ್ಡೇಟ್ ಅನ್ನು ಕೂಡ ನೀಡಿದ್ದರು. ಇದೆಲ್ಲವೂ ಒಂದು ಕಡೆಯಾದರೆ ಇದೀಗ ಮತ್ತೊಂದು ಕಡೆ ಬಹಳಷ್ಟು ಚರ್ಚೆಗಳ ಎದುರಾಗಿದೆ.

ಹೌದು ಅದೇನಂದರೆ ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಕ್ಕೆ ನಟ ಸಲ್ಮಾನ್ ಖಾನ್ ಅವರು 350 ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದರಂತೆ. ಕಳೆದ ಬಾರಿ ಈ ಸಂಭಾವನೆಯ ಮೊತ್ತವನ್ನು ಖಾಸಗಿ ವಾಹಿನಿ ಒಂದರಲ್ಲಿ ಪ್ರಸಾರ ಮಾಡಲಾಗಿತ್ತು ಇದರ ಬೆನ್ನೆಲು ಇದೀಗ ಕರ್ನಾಟಕದಲ್ಲೂ ಕೂಡ ಸಂಭಾವನೆಯ ವಿಚಾರ ಭಾರಿ ಚರ್ಚೆಗೆ ಒಳಗಾಗಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು 350 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅಂದ ಮೇಲೆ ಕನ್ನಡದಲ್ಲಿ ದುಬಾರಿ ಸಂಭಾವನೆಯಲ್ಲಿ ನೀಡಲಾಗುತ್ತಿದೆ ಎಂದು ಕೆಲವು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಕೆಲವು ಮಾಹಿತಿಗಳ ಪ್ರಕಾರ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಕ್ಕೆ ಕಿಚ್ಚ ಸುದೀಪ್ ಅವರು ಬರೋಬ್ಬರಿ ನೂರು ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದಾರಂತೆ.
ಈ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಆದರೆ ಇದರ ಬಗ್ಗೆ ಕಿಚ್ಚ ಸುದೀಪ್ ಅವರಾಗಲಿ ಅಥವಾ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ಆದಂತಹ ಪರಮೇಶ ಗುಂಡಲ್ಕರ್ ಅವರಾಗಲಿ ಎಲ್ಲಿಯೂ ಕೂಡ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಕ್ಕೆ ಪ್ರಾರಂಭ ಮಾಡಿ ಒಂಬತ್ತು ವರ್ಷವಾಯಿತು ಆದರೆ ಎಲ್ಲಿಯೂ ಕೂಡ ತಮ್ಮ ಸಂಭಾವನೆಯ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಕೆಲವು ಮಾಹಿತಿಗಳ ಪ್ರಕಾರ 100 ಕೋಟಿ ಅಂತ ತಿಳಿದು ಬಂದಿದೆ ಆದರೆ 100 ಕೋಟಿ ಪಡೆಯಲು ಸಾಧ್ಯನಾ ಎಂಬುವುದು ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ. ಏಕೆಂದರೆ ಹಿಂದಿ ಬಿಗ್ ಬಾಸ್ ಕಾರ್ಯಕ್ರಮ ಹೈ ಬಜೆಟ್ ಹೊಂದಿದಂತಹ ಕಾರ್ಯಕ್ರಮವಾಗಿದೆ ಹಾಗಾಗಿ ಅಲ್ಲಿ ಸಲ್ಮಾನ್ ಖಾನ್ ಅವರಿಗೆ 350 ಕೋಟಿ ನೀಡಿರಬಹುದು. ಆದರೆ ಕರ್ನಾಟಕದಲ್ಲಿ ಕರ್ನಾಟಕದ ಮಟ್ಟಕ್ಕೆ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆಗೆ 100 ಕೋಟಿ ಬಹಳಷ್ಟು ದುಬಾರಿ ಸಂಭಾವನೆಯಾಗಿದೆ.
ಹಾಗಾಗಿ ಕೆಲವೊಂದು ಸಂಭಾವನೆ ಪಡೆಯುವುದಕ್ಕೆ ಸಾಧ್ಯವಿಲ್ಲ ಅಂತ ಹೇಳುತ್ತಿದ್ದಾರೆ ಆದರೆ ಲಾಭವಿಲ್ಲದೆ ಯಾರೂ ಕೂಡ ಯಾವ ಕೆಲಸವನ್ನು ಮಾಡುವುದಿಲ್ಲ. ಹಾಗಾಗಿ ಕೆಲವು ನೆಟ್ಟಿಗರು ನೂರು ಕೋಟಿ ಸಂಭಾವನೆ ಪಡೆದಿರಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಒಟ್ಟಾರಿಯಾಗಿ ಹೇಳುವುದಾದರೆ ಬಿಗ್ ಬಾಸ್ ಚಾಲನೆಗೆ ಇದೀಗ ಕ್ಷಣಗಳನ್ನು ಪ್ರಾರಂಭವಾಗುತ್ತಿದೆ ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವಂತಹ ಕಾತುರತೆ ಎಲ್ಲರಿಗೂ ಇದೆ. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವ ವ್ಯಕ್ತಿ ಬಂದರೆ ಸೂಕ್ತ ಎಂಬುದನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.