ಅಡುಗೆ ಮನೆ ಎಂದ ಮೇಲೆ ಅಲ್ಲಿ ಸಿಹಿ ಪದಾರ್ಥಗಳು ಇದ್ದೇ ಇರುತ್ತದೆ. ಸಿಹಿ ಪದಾರ್ಥ ಇದ್ದರೆ ಅಲ್ಲಿಗೆ ಇರುವೆಗಳು ಬರುವುದು ಸಹಜ ಹಾಗೆಂದ ಮಾತ್ರಕ್ಕೆ ನಾವು ಕೆಲವೊಮ್ಮೆ ಸಿಹಿ ಪದಾರ್ಥಗಳನ್ನು ಎಷ್ಟೇ ಎಚ್ಚರಿಕೆ ವಹಿಸಿ ಬೇರೆ ಕಡೆ ಇಟ್ಟರೂ ಸಹ ಆ ಒಂದು ಪದಾರ್ಥಗಳಿಗೆ ಇರುವೆಗಳು ಹತ್ತುತ್ತದೆ. ಇಂತಹ ಸಂದರ್ಭದಲ್ಲಿ ನಾವು ಕೆಲವೊಂದಷ್ಟು ಉಪಾಯ ಗಳನ್ನು ಮನೆಯಲ್ಲಿ ಮಾಡಿ ಇರುವೆಗಳು ಬಾರದ ರೀತಿ ನೋಡಿಕೊಳ್ಳಬಹುದು.
ಕೆಲವೊಂದಷ್ಟು ಜನರು ಇರುವೆಗಳನ್ನು ಓಡಿಸುವುದಕ್ಕಾಗಿ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು ಕೆಮಿಕಲ್ ಪದಾರ್ಥ ತಂದು ಉಪಯೋಗಿಸುತ್ತಿರುತ್ತಾರೆ ಆದರೆ ಅದು ತುಂಬಾ ಅಪಾಯ. ಅದು ಕೆಲವೊಮ್ಮೆ ಆಹಾರಕ್ಕೆ ತಾಕಿದರೆ ಅದು ವಿಷವಾಗಿ ಬದಲಾಗು ತ್ತದೆ ಆದ್ದರಿಂದ ಅವುಗಳನ್ನು ಉಪಯೋಗಿಸುವುದು ಸೂಕ್ತವಲ್ಲ.
ಅದರ ಬದಲು ಮನೆಯಲ್ಲಿಯೇ ಇರುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ಉಪಯೋಗಿಸಿ ಅದನ್ನು ಔಷಧಿಯ ರೂಪವಾಗಿ ಉಪಯೋಗಿಸುವುದು ಉತ್ತಮ. ಇದರಿಂದ ನಮಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಹಾಗೂ ಇವುಗಳು ಸಹ ಇರುವೆ ಗಳನ್ನು ದೂರ ಮಾಡುವುದಕ್ಕೆ ಅತ್ಯುತ್ತಮವಾದಂತಹ ಕೆಲಸವನ್ನು ಮಾಡುತ್ತದೆ ಎಂದು ಹೇಳಬಹುದು.
ಈ ಸುದ್ದಿ ಓದಿ:- ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!
ಹಾಗಾದರೆ ಈ ದಿನ ಅಡುಗೆ ಮನೆಯಲ್ಲಿರುವಂತಹ ಸಿಹಿ ಪದಾರ್ಥಗಳಿಗೆ ಇರುವೆಗಳು ಹತ್ತುತ್ತಿದ್ದರೆ ಅದನ್ನು ಹೇಗೆ ದೂರ ಮಾಡುವುದು ಅದನ್ನು ದೂರ ಮಾಡುವುದಕ್ಕೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬಹುದು ಎಂದು ಈ ದಿನ ತಿಳಿಯೋಣ. ನಮ್ಮೆಲ್ಲರ ಮನೆಯಲ್ಲಿಯೂ ಕೂಡ ಸೀಮೆ ಸುಣ್ಣ ಇದ್ದೇ ಇರುತ್ತದೆ ಇದನ್ನು ಇರುವೆ ಓಡಾಡುವಂತಹ ಸ್ಥಳಗಳಿಗೆ ಬರೆಯುವುದರಿಂದ ಅದರಲ್ಲಿ ಇರುವಂತಹ ಅಂಶವು ಇರುವೆಯನ್ನು ದೂರ ಮಾಡುತ್ತದೆ.
ಅಥವಾ ಅದನ್ನು ಚೆನ್ನಾಗಿ ಪುಡಿ ಮಾಡಿ ಇರುವೆ ಗೂಡು ಇರುವ ಜಾಗಕ್ಕೆ ಹಾಕುವುದರಿಂದ ಇರುವೆಗಳು ಸಾಯುತ್ತದೆ. ಸೀಮೆ ಸುಣ್ಣದಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಇದೆ ಇದರ ಒಂದು ಅಂಶದಿಂದ ಇರುವೆಗಳು ಇದರ ಹತ್ತಿರ ಬರುವುದಿಲ್ಲ. ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಅರಿಶಿಣದ ಪುಡಿ ಇದ್ದೇ ಇರುತ್ತದೆ ಇದನ್ನು ನಾವು ಪೂಜೆಗಳಿಗೆ ಅಡುಗೆಗಳಿಗೆ ಉಪಯೋಗಿಸುವು ದಷ್ಟೇ ಅಲ್ಲದೆ ಇರುವೆಗಳನ್ನು ಓಡಿಸುವುದಕ್ಕೂ ಕೂಡ ಅತ್ಯುತ್ತಮವಾದ ಪದಾರ್ಥ ಇಂದೇ ಹೇಳಬಹುದು.
ನೀವು ಸಿಹಿ ಪದಾರ್ಥಗಳನ್ನು ಒಂದು ಸ್ಥಳದಲ್ಲಿ ಇಟ್ಟಿದ್ದರೆ ಅದರ ಸುತ್ತ ಅರಿಶಿನದ ಪುಡಿಯನ್ನು ಹಾಕುವುದರಿಂದ ಇರುವೆಗಳು ಅದರ ಒಳಗಡೆ ಪ್ರವೇಶಿಸುವುದಿಲ್ಲ. ಮೆಣಸು ಇದು ಕೂಡ ನಮ್ಮ ಅಡುಗೆ ಮನೆಯಲ್ಲಿಯೇ ಸುಲಭವಾಗಿ ಸಿಗುವಂತಹ ಪದಾರ್ಥವಾಗಿದ್ದು ಇದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಕೊಳ್ಳಬೇಕು. ಇದನ್ನು ಸಹ ಮೇಲೆ ಹೇಳಿದಂತೆ ಸುತ್ತಾ ಹಾಕುವುದರಿಂದ ಇರುವೆಗಳು ಬರುವುದಿಲ್ಲ.
ಈ ಸುದ್ದಿ ಓದಿ:-ಹೀಗೆ ಮಾಡಿ ಎಷ್ಟೇ ಹಳೆಯ ಪಾತ್ರೆ ಕೂಡ ಮತ್ತೆ ಹೊಸತಾಗುತ್ತೆ.!
ಇದರಲ್ಲಿ ಖಾರದ ಅಂಶ ಇರುವುದರಿಂದ ಇದರಲ್ಲಿರುವ ವಾಸನೆ ಇರುವೆಗಳಿಗೆ ಆಗುವುದಿಲ್ಲ ಆದ್ದರಿಂದ ಇದನ್ನು ಉಪಯೋಗಿಸುವುದು ಸೂಕ್ತ. ಕೆಲವೊಂದಷ್ಟು ಜನರ ಅಡುಗೆ ಮನೆಯಲ್ಲಿ ಸಕ್ಕರೆ ಡಬ್ಬಿಗೆ ಇರುವೆ ಹತ್ತುತ್ತಿರುತ್ತದೆ ಇಂತಹ ಸಂದರ್ಭದಲ್ಲಿ ಅದರ ಒಳಗಡೆಗೆ ಎರಡರಿಂದ ಮೂರು ಲವಂಗವನ್ನು ಹಾಕುವುದರಿಂದ ಸಕ್ಕರೆಗೆ ಇರುವೆ ಹತ್ತುವುದಿಲ್ಲ.
* ಕೆಲವೊಮ್ಮೆ ಮನೆಯಲ್ಲಿ ಯಾವುದಾದರು ಚಿಕ್ಕ ರಂದ್ರ ಕಾಣಿಸಿದರು ಅದರಲ್ಲಿ ಇರುವೆಗಳು ಬರುವುದಕ್ಕೆ ಪ್ರಾರಂಭ ಮಾಡುತ್ತದೆ ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಇರುವಂತಹ ಇಂಗಿನ ಪುಡಿಯನ್ನು ಆ ಒಂದು ಜಾಗಕ್ಕೆ ಹಾಕುವುದರಿಂದ ಆ ಒಂದು ಸ್ಥಳದಿಂದ ಇರುವೆಗಳು ದೂರವಾಗುತ್ತದೆ. ಮನೆ ಒರೆಸುವಂತಹ ಸಂದರ್ಭದಲ್ಲಿ ಆ ಒಂದು ನೀರಿಗೆ ಒಂದು ಚಮಚ ಅಡುಗೆ ಸೋಡಾ ಒಂದು ಚಮಚ ವಿನೀಗರ್ ಅಥವಾ ನಿಂಬೆ ಹಣ್ಣಿನ ರಸ ಇಷ್ಟನ್ನು ಮಿಶ್ರಣ ಮಾಡಿ ಮನೆಯನ್ನು ಒರೆಸುವುದರಿಂದ ಇರುವೆಗಳು ಬಾರದಂತೆ ತಡೆಯಬಹುದು.