ಕೆಲವೊಂದಷ್ಟು ಜನರ ಹಲ್ಲುಗಳು ತುಂಬಾ ಹಳದಿ ಬಣ್ಣದಿಂದ ಇರುತ್ತದೆ ಇದರಿಂದಾಗಿ ಅವರು ಬೇರೆಯವರ ಮುಂದೆ ಮಾತನಾಡುವಂತಹ ಸಮಯದಲ್ಲಿ ಅವರ ಬಾಯನ್ನು ಮುಚ್ಚಿಕೊಂಡು ಮಾತನಾಡುವಂತಹ ಪರಿಸ್ಥಿತಿ ಇರುತ್ತದೆ. ಆದರೆ ಇನ್ನು ಮುಂದೆ ಈ ರೀತಿಯ ಸಮಸ್ಯೆ ಅನುಭವಿಸುವ ಅಗತ್ಯ ಇರುವುದಿಲ್ಲ ಅಂದರೆ ನಿಮ್ಮ ಹಲ್ಲಿನಲ್ಲಿರುವ ಹಳದಿ ಬಣ್ಣವನ್ನು ಸುಲಭವಾಗಿ ತೆಗೆಯಬಹುದು.
ಅದರಲ್ಲೂ ನಿಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ನಿಮ್ಮ ಹಲ್ಲುಗಳನ್ನು ಸುಲಭವಾಗಿ ಸ್ವಚ್ಛ ಮಾಡಬಹುದು ಹಾಗಾದರೆ ಈ ದಿನ ನಮ್ಮ ಹಲ್ಲುಗಳಲ್ಲಿ ಇರುವಂತಹ ಯಾವುದೇ ಕೊಳೆ ಹಳದಿ ಬಣ್ಣ ಇದ್ದರೂ ಕೂಡ ಅದನ್ನು ಹೇಗೆ ಸುಲಭವಾಗಿ ದೂರ ಮಾಡಬಹುದು.
ಯಾವ ಕೆಲವು ಮನೆಮದ್ದುಗಳನ್ನು ಉಪಯೋಗಿಸುವುದರಿಂದ ಇದನ್ನು ಸರಿಪಡಿಸಬಹುದು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.
ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥ ಯಾವುದು ಎಂದು ನೋಡುವುದಾದರೆ.
* ಒಂದು ಚಮಚ ಶುಂಠಿ ರಸ
* ಕಾಲು ಚಮಚ ನಿಂಬೆ ಹಣ್ಣಿನ ರಸ
* ಅರ್ಥ ಚಮಚ ಹಲ್ಲು ಉಜ್ಜುವ ಪೇಸ್ಟ್
ಈ ಸುದ್ದಿ ಓದಿ:-ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!
ಮಾಡುವ ವಿಧಾನ :- ಮೊದಲು ಶುಂಠಿಯನ್ನು ತೆಗೆದುಕೊಂಡು ಅದನ್ನು ಜಜ್ಜಿ ಅದರಿಂದ ಒಂದು ಚಮಚದಷ್ಟು ಶುದ್ಧವಾದoತಹ ಶುಂಠಿ ರಸವನ್ನು ತೆಗೆದುಕೊಳ್ಳಬೇಕು. ಆನಂತರ ಅದಕ್ಕೆ ಕಾಲು ಚಮಚ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಆನಂತರ ಅದಕ್ಕೆ ನೀವು ಪ್ರತಿನಿತ್ಯ ಉಪಯೋಗಿಸುವಂತಹ ಯಾವುದೇ ಪೇಸ್ಟ್ ಇದ್ದರೂ ಅದು ಅರ್ಧ ಚಮಚದಷ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಮ್ಮ ಹಲ್ಲಿನಲ್ಲಿ ಯಾವುದೇ ರೀತಿಯ ಪಾಚಿ ಕಟ್ಟಿದ್ದರು ಸಹ ಅದನ್ನು ದೂರ ಮಾಡುವಂತಹ ಶಕ್ತಿಯನ್ನು ಶುಂಠಿ ಹೊಂದಿದೆ ಇದರ ಜೊತೆಗೆ ನಮ್ಮ ಹಲ್ಲಿಗೆ ಒಳ್ಳೆಯ ಶಕ್ತಿಯನ್ನು ಸಹ ಒದಗಿಸುತ್ತದೆ. ಶುಂಠಿಯಲ್ಲಿರು ವಂತಹ ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟಿಸ್ ನಮ್ಮ ಹಲ್ಲುಗಳು ತೊಂದರೆಗೆ ಈಡಾಗದೆ ಇರುವ ಹಾಗೆ ಕಾಪಾಡುತ್ತದೆ.
ನಾವು ತಿಂದಂತಹ ಆಹಾರ ನಮ್ಮ ಹಲ್ಲುಗಳ ಸಂಧಿಗಳಲ್ಲಿ ಹೋಗಿ ಸೇರಿಕೊಳ್ಳುತ್ತದೆ ಅದನ್ನು ನಾವು ಸ್ವಚ್ಛವಾಗಿ ತೊಳೆಯದೆ ಇದ್ದಂತಹ ಸಂದರ್ಭದಲ್ಲಿ ಬ್ಯಾಕ್ಟೀರಿಯ ಗಳು ಅಲ್ಲಿ ಉತ್ಪತ್ತಿಯಾಗುತ್ತದೆ ಆದ್ದರಿಂದ ಶುಂಠಿಯನ್ನು ಉಪಯೋಗಿಸಿ ನಾವು ಹಲ್ಲನ್ನು ಸ್ವಚ್ಛ ಮಾಡುವುದರಿಂದ ಅದು ನಮ್ಮ ಹಲ್ಲಿನಲ್ಲಿರುವಂತಹ ಯಾವುದೇ ಬ್ಯಾಕ್ಟೀರಿಯಾ ಇದ್ದರೂ ಅದನ್ನು ನಾಶಪಡಿಸುತ್ತದೆ ಆದ್ದರಿಂದ ಹಲ್ಲುಗಳಿಗೆ ತೊಂದರೆ ಉಂಟಾಗುವುದನ್ನು ಸಹ ತಪ್ಪಿಸುತ್ತದೆ.
ಈ ಸುದ್ದಿ ಓದಿ:-ಗ್ಯಾಸ್ ಬರ್ನರ್ ಸರಿಯಾಗಿ ಉರೀತಾ ಇಲ್ವಾ.? ಈ ವಸ್ತು ಇದ್ರೆ 1 ನಿಮಿಷದಲ್ಲಿ ನೀವೇ ರಿಪೇರಿ ಮಾಡಿಕೊಳ್ಳಬಹುದು.!
ಅದೇ ರೀತಿಯಾಗಿ ನಿಂಬೆಹಣ್ಣು ಕೂಡ ನಮ್ಮ ಹಲ್ಲುಗಳಲ್ಲಿ ಅಂದರೆ ನಮ್ಮ ವಸಡುಗಳಲ್ಲಿ ಕಾಣಿಸಿಕೊಳ್ಳುವಂತಹ ನೋವನ್ನು ತಡೆಗಟ್ಟುತ್ತದೆ. ಇದು ಕೂಡ ಒಂದು ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಅಂದರೆ ನಮ್ಮ ಹಲ್ಲು ಪಳಪಳನೆ ಹೊಳೆಯುವುದಕ್ಕೆ ಬಹಳ ಪ್ರಮುಖ ವಾದಂತಹ ಕಾರಣ ಎಂದೇ ಹೇಳಬಹುದು.
ಈ ರೀತಿ ತಯಾರಿಸಿಕೊಂಡ ಪೇಸ್ಟ್ ಅನ್ನು ನಿಮ್ಮ ಕೈಗಳ ಸಹಾಯದಿಂದಲೇ ಐದರಿಂದ ಹತ್ತು ನಿಮಿಷ ಹಾಗೆ ಉಜ್ಜಬೇಕು ಈ ರೀತಿ ಉಜ್ಜುತ್ತಾ ಬಂದರೆ ಹಲ್ಲುಗಳಲ್ಲಿರುವಂತಹ ಕೊಳೆ ಅಂಶ ಪಾಚಿ ಹಳದಿ ಅಂಶ ಎಲ್ಲವೂ ಸಹ ದೂರವಾಗುತ್ತದೆ. ಇದನ್ನು ಚಿಕ್ಕ ಮಕ್ಕಳು ಸಹ ಉಪಯೋಗಿಸಬಹುದು ಇದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಬದಲಿಗೆ ನಿಮ್ಮ ಹಲ್ಲುಗಳ ಆರೋಗ್ಯವು ಕೂಡ ಅಷ್ಟೇ ಚೆನ್ನಾಗಿರುತ್ತದೆ ಆದ್ದರಿಂದ ಈ ವಿಧಾನವನ್ನು ಪ್ರತಿಯೊಬ್ಬರು ಅನುಸರಿಸುವುದು ತುಂಬಾ ಒಳ್ಳೆಯದು.