ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ಬಾರಿಯಾದರೂ ಒಂದು ಸುಂದರವಾದ ಮನೆ ಕಟ್ಟಬೇಕು ಎಂಬ ಆಸೆ ಇರುತ್ತದೆ. ಆದರೆ ಸಾಕಷ್ಟು ಜನರಿಗೆ ಮನೆ ಕಟ್ಟುವಂತಹ ಆಸೆ ಆಕಾಂಕ್ಷೆ ಇದ್ದರೂ ಕೂಡ ಈ ಮನೆ ಕಟ್ಟುವುದಕ್ಕೆ ಹೆಚ್ಚಿನ ಹಣ ಖರ್ಚಾಗುತ್ತದೆ ಎಂಬ ಕಾರಣದಿಂದಾಗಿ ಮನೆ ಕಟ್ಟುವಂತಹ ಆಸೆಯನ್ನು ತಮ್ಮೊಳಗೆ ಬಚ್ಚಿಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಮನೆ ಕಟ್ಟಬೇಕು ಅಂತ ವಿಪರೀತವಾಗಿ ಸಾಲ ಮಾಡುತ್ತಾರೆ ಆದರೆ ಈ ರೀತಿ ಆಡಂಬರದ ಮನೆ ಕಟ್ಟುವುದಕ್ಕಿಂತ ಜೀವನ ವಾಸಕೆ ಅಗತ್ಯವಾಗಿ ಬೇಕಾಗುವಂತಹ ವ್ಯವಸ್ಥೆ ಮಾಡಿಕೊಳ್ಳುವಂತಹ ಒಂದು ಸುಂದರವಾದ ಮನೆ ಕಟ್ಟುವ ವಿಧಾನವನ್ನು ಇಂದು ನಿಮಗೆ ತಿಳಿಸುತ್ತೇನೆ. ನಾವು ತಿಳಿಸುವಂತಹ ಈ ವಿಧಾನವನ್ನು ನೀವು ಕೇಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.
ಅಷ್ಟೇ ಅಲ್ಲದೆ ನಿಮಗೆ ಅನುಮಾನ ಕೂಡ ಬರಬಹುದು ಕೇವಲ ಏಳು ಲಕ್ಷದಲ್ಲಿ ಯಾವ ರೀತಿ ಮನೆ ನಿರ್ಮಾಣ ಆಗುವುದಕ್ಕೆ ಸಾಧ್ಯ ಅಂತ ಈಗಂತೂ ಮಾರ್ಕೆಟ್ ನಲ್ಲಿ ಯಾವುದೇ ಸಾಮಾಗ್ರಿ ಖರೀದಿ ಮಾಡಬೇಕಾದರೂ ಒಂದಕ್ಕಿಂತ ಎರಡರಷ್ಟು ಹಣ ದುಪ್ಪಟ್ಟು ಆಗಿರುವುದನ್ನು ನೋಡಬಹುದು. ಈ ದುಬಾರಿ ದುನಿಯಾದಲ್ಲಿ ಮನೆ ಕಟ್ಟುವುದು ಹೇಗೆ ಎಂದು ಸಾಕಷ್ಟು ಜನ ಯೋಚನೆ ಮಾಡುತ್ತಾರೆ ಆದರೆ ಕಡಿಮೆ ಹಣದಲ್ಲೂ ಕೂಡ ಸುಂದರವಾದ ಮನೆ ನಿರ್ಮಾಣ ಮಾಡಬಹುದು. ಈಗಾಗಲೇ ಕೇವಲ 7 ಲಕ್ಷದ ಬಜೆಟ್ ನಲ್ಲಿ ಕಟ್ಟಿರುವಂತಹ ಮನೆಗಳು ಸಾಕಷ್ಟು ಕಾಣ ಸಿಗುತ್ತದೆ.
ಅಂದ ಹಾಗೆ ಕೇವಲ ಏಳು ಲಕ್ಷದ ಬಜೆಟ್ ಎಂಬ ಕಾರಣಕ್ಕೆ ಈ ಮನೆಗೆ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡಿದ್ದಾರೆ ಎಂದು ಅಂದುಕೊಳ್ಳಬೇಡಿ. ಏಕೆಂದರೆ ಈ ಮನೆಗೆ ಬಳಕೆ ಮಾಡಿರುವಂತಹ ಪ್ರತಿಯೊಂದು ವಸ್ತುವೂ ಕೂಡ ಕ್ವಾಲಿಟಿ ಇರುವಂತಹ ವಸ್ತುಗಳೇ ಹಾಗಾಗಿ ನೀವು ಯೋಚನೆ ಮಾಡುವಂತಹ ಅಗತ್ಯವಿಲ್ಲ. ನಿಮ್ಮ ಬಳಿ ಕಾಲಿ ನಿವೇಶನ ಇತ್ತು ಅಂದರೆ ಸಾಕು ಅಲ್ಲಿ ಸುಂದರವಾದ ಮನೆ ನಿರ್ಮಾಣ ಮಾಡುವಂತ ಕಾರ್ಯವನ್ನು ಪ್ರಾರಂಭ ಮಾಡಬಹುದು. ಅಷ್ಟಕ್ಕೂ ಈ ಮನೆ ಎಷ್ಟು ಚದುರ ಇರುತ್ತದೆ ಈ ಮನೆಯ ಒಳಗೆ ಏನೆಲ್ಲ ಇರುತ್ತದೆ ಎಂಬುದನ್ನು ನೋಡುವುದಾದರೆ ಸುಮಾರು 30 ಅಡಿ ಉದ್ದ 40 ಅಡಿ ಅಗಲದ ಕಾಲಿನಿವೇಶನ ಇತ್ತು ಅಂದರೆ ಅಲ್ಲಿ ಒಂದು ಮನೆಯನ್ನು ನಿರ್ಮಾಣ ಮಾಡಬಹುದಾಗಿದೆ.
ಈ ಮನೆಯನ್ನು 20 ಅಡಿ ಅಗಲ 20 ಅಡಿ ಉದ್ದದಲ್ಲಿ ನಿರ್ಮಾಣ ಮಾಡಲಾಗುತ್ತದೆ ಅಷ್ಟೇ ಅಲ್ಲದೆ ಈ ಮನೆಯ ಒಳಗೆ ದೇವರ ಮನೆ, ಅಡುಗೆ ಮನೆ, ಹಾಲ್, ಡೈನಿಂಗ್ ಹಾಲ್, ಬಾತ್ರೂಮ್, ಬೆಡ್ರೂಮ್ ಈ ರೀತಿ ಸೇರಿದಂತೆ ಒಂದು ಅಚ್ಚುಕಟ್ಟಾದ ಮನೆಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗುತ್ತದೆ. ಮುಖ್ಯವಾಗಿ ಪಾರ್ಕಿಂಗ್ ಹೌದು ಸಾಮಾನ್ಯವಾಗಿ ಮನೆ ಕಟ್ಟುವ ಅವಸರದಲ್ಲಿ ಕೆಲವರು ಪಾರ್ಕಿಂಗ್ ಜಾಗವನ್ನು ಬಿಟ್ಟಿರುವುದಿಲ್ಲ. ಆದರೆ ನಾವು ತಿಳಿಸುವಂತಹ ಈ ಮನೆಯಲ್ಲಿ ಪಾರ್ಕಿಂಗ್ ಗೆ ಸಂಬಂಧ ಪಟ್ಟಂತಹ ಎಲ್ಲಾ ವಿಚಾರಗಳನ್ನು ಕೂಡ ಸವಿಸ್ತಾರವಾಗಿ ತಿಳಿಸಿದರೆ. ಹಾಗಾದರೆ ಇನ್ನೇಕೆ ತಡ 7 ಲಕ್ಷದ ಬಜೆಟ್ ನಲ್ಲಿ ನಿರ್ಮಾಣವಾಗಿರುವಂತಹ ಈ ಮನೆಯ ಸುಂದರ ವಿಡಿಯೋವನ್ನು ಒಮ್ಮೆ ನೋಡಿ. ನೀವೇನಾದರೂ ಮನೆ ಕಟ್ಟಬೇಕು ಅಂತ ಅಂದುಕೊಂಡಿದ್ದರೆ ಖಂಡಿತವಾಗಿಯೂ ಕೂಡ ಈ ವಿಡಿಯೋ ನಿಮಗೆ ಬಹಳ ಉಪಯುಕ್ತಕಾರಿಯಾಗುತ್ತದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡಿ ಹಾಗೂ ಈ ಮಾಹಿತಿಯನ್ನು ಹೆಚ್ಚಿನ ಜನಕ್ಕೆ ಶೇರ್ ಮತ್ತು ಲೈಕ್ ಮಾಡಿ.