ಹಿಂದೂ ಸಂಪ್ರದಾಯದಲ್ಲಿ, ಜನನ ಸಮಯದಲ್ಲಿ ಗ್ರಹಗಳ ಸ್ಥಾನವನ್ನು ಆಧರಿಸಿ ಜಾತಕದ ಆಧಾರದ ಮೇಲೆ ನವಜಾತ ಶಿಶುವಿನ ಹೆಸರಿಗೆ ಒಂದು ಅಕ್ಷರವನ್ನು ನಿರ್ಧರಿಸುವ ಪದ್ಧತಿಯಿದೆ ಇದನ್ನು ನಾಮಕರಣ ಪದ್ಧತಿ ಎನ್ನುತ್ತಾರೆ. ಈ ಪದ್ಧತಿಯಲ್ಲಿ, ಪ್ರತಿಯೊಂದು ರಾಶಿಗೂ ನಿರ್ದಿಷ್ಟ ಅಕ್ಷರಗಳು ಅನುಗುಣವಾಗಿವೆ ಮತ್ತು ಈ ಅಕ್ಷರಗಳು ವ್ಯಕ್ತಿಯ ಜೀವನದಲ್ಲಿ ಯಶಸ್ಸು, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತವೆ.
ಉದಾಹರಣೆಗೆ ‘ಅ’ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರ ಗುಣಗಳು ಮತ್ತು ಅವರ ಜೀವನದ ವಿವಿಧ ಅಂಶಗಳು ಅವರ ರಾಶಿ ಮತ್ತು ನಕ್ಷತ್ರದ ಆಧಾರದ ಮೇಲೆ ವಿವರಿಸಲಾಗುತ್ತದೆ. ಇದೇ ರೀತಿ ‘ಬ’ ಅಕ್ಷರದಿಂದ ಆರಂಭಿಸುವ ಹೆಸರಿನ ಜನರ ಮೇಲೆ ಚಂದ್ರನ ಪ್ರಮುಖ ಪರಿಣಾಮವಿರುತ್ತದೆ ಮತ್ತು ಇದು ವೃಷಭ ರಾಶಿಯ ಜನರಿಗೆ ಸಂಬಂಧಿಸಿದೆ.
ಜ್ಯೋತಿಷ್ಯದಲ್ಲಿ ರಾಶಿ ಮತ್ತು ಅಕ್ಷರಗಳ ಈ ಸಂಬಂಧವು ವ್ಯಕ್ತಿಯ ಜೀವನದ ವಿವಿಧ ಅಂಶಗಳನ್ನು ನಿರ್ಧರಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ವ್ಯಕ್ತಿಯ ಸ್ವಭಾವ, ಆರೋಗ್ಯ, ವೃತ್ತಿ, ಜೀವನ, ಸಂಬಂಧಗಳು, ಮತ್ತು ಇತರ ಜೀವನದ ಸಮಯ ಸಂದರ್ಭದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಜ್ಯೋತಿಷ್ಯ ಶಾಸ್ತ್ರವನ್ನು ನಂಬುವ ಜನರು ಹುಟ್ಟಿದ ದಿನಾಂಕದ ಮೇಲೆ ಭವಿಷ್ಯ ತಿಳಿದು ಕೊಳ್ಳಲು ಇಚ್ಚಿಸುತ್ತಾರೆ.
ಈ ಸುದ್ದಿ ಓದಿ:-ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ
ಜೊತೆಗೆ ತಮ್ಮ ಹೆಸರಿನ ಅಕ್ಷರದ ಮೇಲೂ ಭವಿಷ್ಯ ತಿಳಿಯುವ ಹಂಬಲ ಹೊಂದಿರುತ್ತಾರೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾವ ಯಾವ ರಾಶಿಯವರಿಗೆ ಯಾವ ಅಕ್ಷರದಿಂದ ಹೆಸರನ್ನು ಇಡಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.
* ಮೇಷ ರಾಶಿ :- ಅ, ಚ, ಚು, ಚೆ, ಲ, ಲಿ, ಲು, ಲೆ
* ವೃಷಭ ರಾಶಿ :- ಉ, ಎ, ಈ, ಔ, ದ, ದೀ, ವೊ
* ಮಿಥುನ ರಾಶಿ :- ಕೆ, ಕೊ, ಕೆ, ಘ, ಛ, ಹ, ಡ
* ಕರ್ಕಾಟಕ ರಾಶಿ :- ಹಾ, ಹೇ, ಹೋ, ಡಾ, ಹೀ, ಡೋ
* ಸಿಂಹ ರಾಶಿ :- ಮಿ, ಮೇ, ಮಿ, ಟೇ, ಟಾ, ಟೀ
* ಕನ್ಯಾ ರಾಶಿ :- ಪ, ಷ, ಣ, ಪೆ, ಪೊ, ಪ
* ತುಲಾ ರಾಶಿ :- ರೇ, ರೋ, ರಾ, ತಾ, ತೇ,
* ವೃಶ್ಚಿಕ ರಾಶಿ :- ಲೋ, ನೆ, ನಿ, ನೂ, ಯಾ, ಯಿ
* ಧನು ರಾಶಿ :- ಧಾ, ಯೇ, ಯೋ, ಭಿ, ಭೂ, ಫಾ, ಢಾ
* ಮಕರ ರಾಶಿ :- ಜಾ, ಜಿ, ಖೋ, ಖೂ, ಗ, ಗೀ, ಭೋ
* ಕುಂಭ ರಾಶಿ :- ಗೆ, ಗೋ, ಸಾ, ಸೂ, ಸೆ, ಸೋ, ದ
* ಮೀನ ರಾಶಿ :- ದೀ, ಚಾ, ಚಿ, ಝ, ದೋ, ದೂ
ಹೀಗೆ ಮೇಲೆ ಹೇಳಿದ ಇಷ್ಟು ರಾಶಿಗಳಿಗೆ ಈ ಅಕ್ಷರದಿಂದ ಹೆಸರನ್ನು ಇಟ್ಟರೆ ಅವರು ತಮ್ಮ ಜೀವನದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿಯನ್ನು ಏಳಿಗೆಯನ್ನು ಕಾಣುತ್ತಾರೆ. ಅದು ಅವರ ಭವಿಷ್ಯವನ್ನು ನಿರ್ಧರಿಸು ವಂತಹ ಬಹಳ ಮಹತ್ವ ಪೂರ್ಣವಾದಂತಹ ಹೆಸರು ಎಂದೇ ಹೇಳಬಹುದು.
ಈ ಸುದ್ದಿ ಓದಿ:-ಹಳೆಯ ಟಿ ಶರ್ಟ್ ನಿಂದ ನೆಲ ಶುಚಿಗೊಳಿಸುವ ಮಾಪ್ ತಯಾರಿಸುವ ವಿಧಾನ.!
ಅದೇ ರೀತಿಯಾಗಿ ಮೇಲೆ ಹೇಳಿದಂತೆ ಯಾವುದೇ ಒಂದು ಶಿಶು ಜನನ ವಾದಂತಹ ಸಮಯದಲ್ಲಿ ಆ ಒಂದು ಸಂದರ್ಭದಲ್ಲಿ ಗ್ರಹ ನಕ್ಷತ್ರ ತಿಥಿ ಆಧಾರದ ಮೇಲೆ ಆ ಮಗುವಿಗೆ ಹೆಸರನ್ನು ಇಡುತ್ತಾರೆ ಅದು ಅವರ ಜೀವನದುದ್ದಕ್ಕೂ ಕೂಡ ಶ್ರೇಯಸ್ಸನ್ನು ತಂದುಕೊಡುತ್ತದೆ ಎನ್ನುವಂತಹ ನಂಬಿಕೆ ಶಾಸ್ತ್ರಪುರಾಣಗಳಲ್ಲಿ ಇದೆ. ಆದ್ದರಿಂದ ಪ್ರತಿಯೊಬ್ಬ ಹಿಂದುಗಳು ಕೂಡ ಈ ವಿಧಾನವನ್ನು ಅನುಸರಿಸುತ್ತಾರೆ.