ಪ್ರತಿದಿನ ನಾವು ಟೀ ಸ್ಟ್ರೈನರ್ ಅನ್ನು ಉಪಯೋಗಿಸುತ್ತಿರುತ್ತೇವೆ ಪ್ರತಿನಿತ್ಯ ಕಾಫಿ ಟೀ ಅನ್ನು ನಾವು ಸೋಸುವುದಕ್ಕೆ ಟೀ ಸ್ಟ್ರೈನರ್ ಅನ್ನು ಉಪಯೋಗಿಸುತ್ತಿರುತ್ತೇವೆ. ಇದರಿಂದ ಆ ಒಂದು ಸ್ಟ್ರೇನರ್ ನಲ್ಲಿ ಒಂದು ರೀತಿಯ ಕಪ್ಪು ಕಲೆ ಕುಳಿತಿರುತ್ತದೆ ಅದನ್ನು ನಾವು ಪ್ರತಿನಿತ್ಯ ಸ್ವಚ್ಛವಾಗಿ ತೊಳೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಬೇರೆ ಕೆಲಸಗಳು ಇರುವುದರಿಂದ ತಕ್ಷಣಕ್ಕೆ ನಾವು ಕಾಫಿ ಸೋಸಿ ಅದನ್ನು ಹಾಗೆ ತೊಳೆದು ಇಡುತ್ತಿರುತ್ತೇವೆ.
ಆದರೆ ಕೆಲವೊಂದಷ್ಟು ಜನ ಅದನ್ನು ಕೆಲವೊಂದು ವಿಧಾನ ಅನುಸರಿಸುವುದರ ಮೂಲಕ ತಕ್ಷಣವೇ ಅದನ್ನು ಸ್ವಚ್ಛವಾಗಿ ತೊಳೆದು ಇಟ್ಟುಕೊಳ್ಳುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಅದನ್ನು ತಕ್ಷಣಕ್ಕೆ ಸಂಪೂರ್ಣವಾಗಿ ಸ್ವಚ್ಛ ಮಾಡುವುದಿಲ್ಲ ಏಕೆಂದರೆ ಅವರಿಗೆ ಬೇರೆ ಕೆಲಸ ಹೆಚ್ಚಿರುತ್ತದೆ ಆದ್ದರಿಂದ.
ಹಾಗಾದರೆ ಈ ದಿನ ಟೀ ಸ್ಟ್ರೈನರ್ ಅನ್ನು ನಾವು ಹೇಗೆ ಸ್ವಚ್ಛ ಮಾಡುವು ದು ಹಾಗೂ ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಅದನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!
ಮೊದಲನೆಯದಾಗಿ ಇದನ್ನು ಸ್ವಚ್ಛ ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ತಿಳಿಯೋಣ.
* ಒಂದರಿಂದ ಎರಡು ಚಮಚ ಫ್ರಿಲ್ ಲಿಕ್ವಿಡ್
* ಎರಡು ಚಮಚ ಅಡುಗೆ ಸೋಡಾ
ಈ ಎರಡು ಪದಾರ್ಥ ಇದ್ದರೆ ಸಾಕು ನಾವು ಟೀ ಸ್ಟೀಲ್ ಸ್ಟ್ರೈನರ್ ಅನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬಹುದು. ಹಾಗಾದರೆ ಯಾವ ವಿಧಾನ ಅನುಸರಿಸಿ ಇದನ್ನು ಸ್ವಚ್ಛ ಮಾಡಬಹುದು ಎಂದು ಈ ಕೆಳಗೆ ನೋಡೋಣ.
ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದನ್ನು ಚೆನ್ನಾಗಿ ಬಿಸಿ ಮಾಡಲು ಬಿಡಬೇಕು ಆನಂತರ ಅದಕ್ಕೆ ಎರಡು ಚಮಚ ಅಡುಗೆ ಸೋಡಾ ಹಾಗೂ ಎರಡು ಚಮಚ ಫ್ರಿಲ್ ಲಿಕ್ವಿಡ್ ಇಷ್ಟನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡ ನಂತರ ಸ್ಟೀಲ್ ಸ್ಟ್ರೈನರ್ ಅನ್ನು ಅದರ ಒಳಗಡೆ ಹಾಕಿ ಐದರಿಂದ 10 ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..
ಆನಂತರ ಒಂದು ಚಮಚ ಫ್ರಿಲ್ ಲಿಕ್ವಿಡ್ ಹಾಕಿ ಒಂದು ಹಳೆಯ ಬ್ರಷ್ ಸಹಾಯದಿಂದ ಬಿಸಿ ಮಾಡಿದಂತಹ ಈ ಸ್ಟ್ರೈನರ್ ಅನ್ನು ಒಂದು ಕಡೆಯಿಂದ ಉಜ್ಜಿದರೆ ಸಾಕು ಅದರಲ್ಲಿ ಇರುವಂತಹ ಕಪ್ಪು ಕಲೆ ಎಲ್ಲವೂ ಕೂಡ ಸಂಪೂರ್ಣವಾಗಿ ಹೋಗುತ್ತದೆ. ಈ ವಿಧಾನ ಬಹಳ ಸುಲಭವಾಗಿದ್ದು ಯಾವುದೇ ರೀತಿಯ ಹೆಚ್ಚಿನ ಸಮಯ ತೆಗೆದುಕೊಳ್ಳು ವುದಿಲ್ಲ ಹಾಗೂ ಉಜ್ಜಿ ತಿಕ್ಕಿ ತೊಳೆಯುವ ಅವಶ್ಯಕತೆಯೂ ಇರುವುದಿಲ್ಲ
ಕೇವಲ ಕಡಿಮೆ ಪದಾರ್ಥಗಳನ್ನು ಉಪಯೋಗಿಸಿ ಕಡಿಮೆ ಸಮಯದ ಲ್ಲಿಯೇ ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಚ ಮಾಡಬಹುದು. ಸ್ಟೀಲ್ ಸ್ಟ್ರೈನರ್ ಅನ್ನು ಮಾತ್ರ ನಾವು ಈ ವಿಧಾನದಲ್ಲಿ ತೊಳೆಯ ಬಹುದು. ಈ ವಿಧಾನ ಬಹಳ ಸುಲಭವಾಗಿದ್ದು ಮನೆಯಲ್ಲಿರುವಂತಹ ಮಹಿಳೆಯರು ಈ ವಿಧಾನ ಅನುಸರಿಸುವುದರಿಂದ ನಿಮ್ಮ ಸಮಯ ಹಾಗೂ ನಿಮ್ಮ ಶ್ರಮ ಎರಡನ್ನು ಸಹ ಕಡಿಮೆ ಮಾಡಿಕೊಳ್ಳುವುದು.
ಈ ಸುದ್ದಿ ಓದಿ:- ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!
ಆದ್ದರಿಂದ ಈ ವಿಧಾನ ಅನುಸರಿಸುವುದು ತುಂಬಾ ಒಳ್ಳೆಯದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ನಾವು ಪ್ರತಿನಿತ್ಯ ಉಪಯೋಗಿಸುವಂತಹ ಪ್ರತಿಯೊಂದು ವಸ್ತುಗಳನ್ನು ಸಹ ನಾವು ಆದಷ್ಟು ಪ್ಲಾಸ್ಟಿಕ್ ಮುಕ್ತವಾಗಿ ಉಪಯೋಗಿಸಬೇಕು. ಅಂದರೆ ಪ್ಲಾಸ್ಟಿಕ್ ಪದಾರ್ಥವನ್ನು ಉಪಯೋಗಿಸದೆ ಇಂತಹ ಸ್ಟೀಲ್ ಹಿತ್ತಾಳೆ ತಾಮ್ರ ಇಂತಹ ಕೆಲವೊಂದಷ್ಟು ವಸ್ತುಗಳನ್ನು ಉಪಯೋಗಿಸು ವುದು ತುಂಬಾ ಒಳ್ಳೆಯದು. ಹಾಗೂ ಅದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯದು.