ಶನಿವಾರದ ದಿನ ಕೆಲವೊಂದಷ್ಟು ವಸ್ತುಗಳನ್ನು ಮನೆಗೆ ತರಬಾರದು ಎಂದು ಹಿರಿಯರು ಹೇಳುತ್ತಾರೆ ಹಾಗೇನಾದರೂ ನಾವು ಆ ವಸ್ತುಗಳನ್ನು ಶನಿವಾರದ ದಿನ ಮನೆಗೆ ತಂದಿದ್ದೆ ಆದರೆ ಮನೆ ಸರ್ವನಾಶ ಆಗುತ್ತದೆ ಎಂದು ಹೇಳುತ್ತಾರೆ.ಹಾಗಾದರೆ ಯಾವ ವಸ್ತುವನ್ನು ಶನಿವಾರದ ದಿನ ತರಬಾರದು ಹಾಗೂ ಅದು ನಮಗೆ ಹೇಗೆ ಸಮಸ್ಯೆಯನ್ನು ಉಂಟು ಮಾಡುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.ಅದಕ್ಕೂ ಮೊದಲು ಪ್ರತಿಯೊಂದು ಮನೆಯಲ್ಲಿಯೂ ಕೂಡ ಹಿರಿಯರು ಇರುವುದು ಬಹಳ ಮುಖ್ಯವಾಗಿರುತ್ತದೆ.
ಪ್ರತಿಯೊಂದು ವಿಚಾರದ ಬಗ್ಗೆಯೂ ಪ್ರತಿಯೊಂದು ಸಂದರ್ಭದಲ್ಲೂ ಕೂಡ ನಾವು ಯಾವ ರೀತಿಯ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಯಾವ ನಿರ್ಧಾರವನ್ನು ತೆಗೆದುಕೊಂಡರೆ ಅದು ನಮಗೆ ಉತ್ತಮವಾಗಿ ಅದು ನಮಗೆ ಶುಭಫಲವಾಗಿ ಪರಿಣಮಿಸುತ್ತದೆ ಎನ್ನುವಂತಹ ದಾರಿ ಯನ್ನು ತೋರಿಸುವವರು ನಮ್ಮ ಮನೆಯಲ್ಲಿ ಇರುವಂತಹ ಹಿರಿಯರು. ಹಾಗಾಗಿ ಮನೆಯಲ್ಲಿ ಹಿರಿಯರು ಇದ್ದರೆ ಆ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ಎಂದೇ ಹೇಳಬಹುದು.
ಹಿರಿಯರು ಮನೆಯಲ್ಲಿ ಇದ್ದರೆ ಎಷ್ಟು ಚಂದವೋ ಅದೇ ರೀತಿ ನಮ್ಮ ಜೀವನದಲ್ಲಿ ನಾವೇನಾದರೂ ತಪ್ಪು ಮಾಡಿದಾಗ ನಮ್ಮನ್ನು ಸರಿದಾರಿಗೆ ಕರೆದುಕೊಂಡು ಹೋಗುವವರು ಶನಿ ಭಗವಾನರು. ಶನಿ ಭಗವಾನ ರನ್ನು ಎಲ್ಲರೂ ಕೂಡ ಕೆಟ್ಟ ಗ್ರಹ ದುಷ್ಟ ಗ್ರಹ ಅದು ಒಳ್ಳೆಯ ಗ್ರಹ ಅಲ್ಲ ಎಂದು ಹೇಳುವಂತಹ ಪ್ರತೀತಿ ಇಂದಿಗೂ ಕೂಡ ಜಾರಿಯಲ್ಲಿ ಇದೆ. ಆದರೆ ಅದು ತಪ್ಪು, ಶನಿ ದೇವರಷ್ಟು ಒಳ್ಳೆಯ ಗ್ರಹ ಇನ್ನೊಂದಿಲ್ಲ.
ಏಕೆ ಎಂದರೆ ಶನಿಗ್ರಹ ಒಳ್ಳೆಯವರಿಗೆ ನೂರಎಲ್ಲಾ ಸಾವಿರ ಪಟ್ಟು ಒಳ್ಳೆಯದನ್ನು ಮಾಡುತ್ತಾರೆ. ಅದೇ ರೀತಿ ಕೆಟ್ಟವರಿಗೆ ಕೆಟ್ಟ ಫಲಗಳನ್ನು ಕೊಟ್ಟು ಅವರಿಗೆ ಅವರು ಮಾಡಿರುವಂತಹ ತಪ್ಪಿಗೆ ತಕ್ಕ ಶಿಕ್ಷೆಯನ್ನು ಶನಿ ಭಗವಾನರು ನೀಡುತ್ತಾರೆ. ಹಾಗಾಗಿ ಶನಿ ದೇವರು ಕೆಟ್ಟವರಲ್ಲ ಒಳ್ಳೆಯವರೇ. ಆದರೆ ಶನಿವಾರ ಈ ಕೆಲವೊಂದು ವಸ್ತುಗಳನ್ನು ಮನೆಗೆ ತರುವುದರಿಂದ ಶನಿ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಆ ವಸ್ತುಗಳನ್ನು ಶನಿವಾರದ ದಿನ ಮನೆಗೆ ತರುವುದು ಅಷ್ಟೊಂದು ಶ್ರೇಯಸ್ಕರವಲ್ಲ. ಹಾಗಾದರೆ ಆ ವಸ್ತುಗಳು ಯಾವುದು ಎಂದು ಈಗ ತಿಳಿಯೋಣ.
* ಲೋಹದ ವಸ್ತುಗಳು :- ನೀವೇನಾದರೂ ಲೋಹದ ವಸ್ತುಗಳನ್ನು ಶನಿವಾರದ ದಿನ ಮನೆಗೆ ತಂದರೆ ಮನೆಯಲ್ಲಿ ಜಗಳಗಳು ಪ್ರಾರಂಭವಾ ಗುತ್ತದೆ. ಗಂಡ ಹೆಂಡತಿಯರ ನಡುವೆ ವೈಮನಸ್ಯ ಬಿರುಕು ಹೆಚ್ಚಾಗುತ್ತದೆ.
* ಉಪ್ಪು :- ನೀವೇನಾದರೂ ಉಪ್ಪನ್ನು ಶನಿವಾರದ ದಿನ ತಂದರೆ ರೋಗ, ಶತ್ರು ಭಾದೆ ಹೆಚ್ಚಾಗುತ್ತದೆ. ಅದೇ ರೀತಿ ಸಾಲದ ಭಾದೆಗಳು ಕೂಡ ಹೆಚ್ಚಾಗುತ್ತಾ ಹೋಗುತ್ತದೆ.
* ಕತ್ತರಿ :- ನೀವೇನಾದರೂ ಕತ್ತರಿಯನ್ನು ಶನಿವಾರದ ದಿನ ತಂದರೆ ಮನೆಯಲ್ಲಿ ಜಗಳಗಳು ವೈಮನಸ್ಸು, ಇದ್ದಕ್ಕಿದ್ದ ಹಾಗೆ ಮನೆಯಲ್ಲಿರುವ ನೆಮ್ಮದಿ ಹಾಳಾಗುತ್ತಾ ಹೋಗುತ್ತದೆ. ಹಾಗೇನಾದರೂ ಗಂಡ ಹೆಂಡತಿ ನಡುವೆ ಈಗಾಗಲೇ ಕೆಲವೊಂದಷ್ಟು ವೈಮನಸ್ಸು ಇದ್ದರೆ ಅದು ವಿಚ್ಛೇದನ ಪಡೆಯುವಂತಹ ಸಂದರ್ಭಗಳು ಕೂಡ ಉಂಟಾಗಬಹುದು.
* ಇನ್ನು ಬಹಳ ಮುಖ್ಯವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ದಂತಹ ಕೆಲವೊಂದಷ್ಟು ವಸ್ತುಗಳನ್ನು ಸಹ ಶನಿವಾರದ ದಿನ ತೆಗೆದು ಕೊಳ್ಳಬಾರದು ಎಂದು ಸಹ ತಿಳಿಸಿದ್ದಾರೆ.
* ಅದೇ ರೀತಿಯಾಗಿ ಕಪ್ಪು ಎಳ್ಳು ಹಾಗೂ ಸಾಸಿವೆ ಎಣ್ಣೆಯನ್ನು ಸಹ ಶನಿವಾರದ ದಿನ ಖರೀದಿ ಮಾಡಬಾರದು. ಬದಲಿಗೆ ನೀವು ಅದನ್ನು ಶುಕ್ರವಾರದ ದಿನ ಖರೀದಿ ಮಾಡಿ ಅದನ್ನು ನೀವು ಶನಿವಾರದ ದಿನ ಬೇರೆಯವರಿಗೆ ದಾನ ಮಾಡಿದರೆ ಇನ್ನೂ ಒಳ್ಳೆಯದು ಎಂದು ಸಹ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.