Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentರಾತ್ರೋರಾತ್ರಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಯಾದ ಮೇಘನಾ ರಾಜ್.

ರಾತ್ರೋರಾತ್ರಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಯಾದ ಮೇಘನಾ ರಾಜ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ಬಾರಿ ಓಟಿಟಿಯಲ್ಲಿ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿದೆ ಈ ಒಂದು ಕಾರ್ಯಕ್ರಮವು ಸುಮಾರು 42 ದಿನಗಳ ಕಾಲ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ 16 ಜನ ಸ್ಪರ್ಧಿಗಳು ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದಂತಹ ಹಾಗೂ ಕಿರುತೆರೆಯಲ್ಲಿ ಹೆಸರು ಮತ್ತು ಖ್ಯಾತಿಯನ್ನು ಗಳಿಸಿದಂತಹ ಮತ್ತು ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡಿದಂತಹ ಹಾಗೂ ಸ್ಯಾಂಡಲ್ವುಡ್ ಸಂಬಂಧಪಟ್ಟಂತಹ ಕೆಲವು ವ್ಯಕ್ತಿಗಳನ್ನು ಬಿಗ್ ಬಾಸ್ ಮನೆಗೆ ಆಯ್ಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿಯ ಮಿನಿ ಬಿಗ್ ಬಾಸ್ ಎಂಬ ಹೊಸದೊಂದು ಸಾಹಸಕ್ಕೆ ಕೈ ಹಾಕಿರುವುದು ಏಕೆಂದರೆ ಈವರೆಗೂ ಕೂಡ ಕನ್ನಡವನ್ನು ಹೊರತುಪಡಿಸಿದರೆ ಬೇರೆ ಯಾವ ಭಾಷೆಯಲ್ಲಿ ಕೂಡ ಮಿನಿ ಬಿಗ್ ಬಾಸ್ ಕಾರ್ಯಕ್ರಮವನ್ನು ಆಯೋಜನೆ ಮಾಡಿಲ್ಲ.

ಆದರೆ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ಆದಂತಹ ಪರಮೇಶ್ ಕುಂಡಲ್ಕರ್ ಅವರು ಮಾತ್ರ ಈ ಬಾರಿ ಹೊಸದಾಗಿ ಏನಾದರೂ ಒಂದು ಮುನ್ನು ಮಾಡಬೇಕು ಜನರಿಗೆ ಮನರಂಜನೆಯನ್ನು ನೀಡಬೇಕು ಎಂಬ ಉದ್ದೇಶದಿಂದಾಗಿ ಮೆನಿ ಬಿಗ್ ಬಾಸ್ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಒಂದು ಮಿನಿ ಬಿಗ್ ಬಾಸ್ ಕಾರ್ಯಕ್ರಮವು ಸುಮಾರು 5 ವಾರಗಳ ಕಾಲ ನಡೆಯಲಿದೆ ಈ 5 ವಾರಗಳವರೆಗೆ ಯಾರು ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ ಅರ್ಹತೆಯನ್ನು ಪಡೆಯುತ್ತಾರೋ ಅಂತವರನ್ನು ಬಿಗ್ ಬಾಸ್ ಸೀಸನ್ 9 ರಲ್ಲಿ ಮುನ್ನಡೆಸಿಕೊಂಡು ಹೋಗಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ಮಿನಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವಂತಹ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಸಂಭಾವನೆಯನ್ನು ಕೂಡ ನೀಡಲಾಗುತ್ತದೆ ಅಂತ ಹೇಳಿದ್ದಾರೆ.

ಹಾಗಾಗಿ ಈ ಒಂದು ಮಿನಿ ಬಿಗ್ ಬಾಸ್ ಕಾರ್ಯಕ್ರಮವು ಬಹಳ ವಿಶೇಷತೆ ಮತ್ತು ವಿಭಿನ್ನತೆಯನ್ನು ಒಳಗೊಂಡಿದೆ ಈಗಾಗಲೇ ಬಿಗ್ ಮಿನಿ ಬಿಗ್ ಬಾಸ್ ಮನೆಗೆ 16 ಜನ ಸ್ಪರ್ಧಿಗಳು ಬಂದಿದ್ದು ಒಬ್ಬೊಬ್ಬರು ಕೂಡ ವಿಭಿನ್ನವಾದ ಜೀವನ ಕಥೆ ಮತ್ತು ಹಿನ್ನೆಲೆಯನ್ನು ಹೊಂದಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದಂತಹ ಸೋನು ಶ್ರೀನಿವಾಸ್ ಗೌಡ ತಮ್ಮ ಖಾಸಗಿ ವಿಡಿಯೋ ಲೀಕ್ ಆಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ ಇನ್ನು ಹಿರಿಯ ಪೋಷಕ ಕಲಾವಿದೆ ಆದಂತಹ ಮಾರಿಮುತ್ತು ಅವರ ಮೊಮ್ಮಗಳು ಆದಂತಹ ಜಯಶ್ರೀ ಅವರು ಕೂಡ ಮದುವೆಯಾದ ವಿವಾಹನೊಂದಿಗೆ ನಾನು ರಿಲೇಶನ್ ಶಿಪ್ ನಲ್ಲಿ ಇದ್ದೆ ಸ್ಮೋಕ್ ಮಾಡುತ್ತಿದ್ದೇನೆ ಜೂಜು ಆಡುತ್ತಿದ್ದೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.

ಇನ್ನು ನಾಗಿಣಿ ಧಾರಾವಾಹಿಯಲ್ಲಿ ನಟನೆ ಮಾಡಿದಂತಹ ಅರ್ಜುನ್ ರಮೇಶ್ ಅವರು ಕೂಡ ನಾನು ಮೊದಲ ಹೆಂಡತಿಗೆ ತಿಳಿಯದಂತೆ ಮತ್ತೊಬ್ಬಳನ್ನು ಮದುವೆಯಾಗಿ ಆಕೆಗೆ ಮಗು ಹುಟ್ಟಿದ ನಂತರವಷ್ಟೇ ಎರಡನೇ ಹೆಂಡತಿಯ ವಿಚಾರವನ್ನು ಮೊದಲನೇ ಹೆಂಡತಿಗೆ ತಿಳಿಸಿದ್ದೆ ಎಂಬ ವಿಚಾರವನ್ನು ಹೇಳಿದರು. ಇನ್ನು ನ್ಯೂಸ್ಪಸ್ಟ್ ಆಂಕರ್ ಆದಂತಹ ಸೋಮಣ್ಣ ಮಾಚಿಮಾಡ ಅವರು ಕೂಡ ನಾನು ನನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ್ದೇನೆ ಆದರೂ ಕೂಡ ಆಕೆಯನ್ನು ಮರೆಯಲು ನನಗೆ ಸಾಧ್ಯವಾಗುತ್ತಿಲ್ಲ ಅವಕಾಶ ಸಿಕ್ಕರೆ ಯಾಕೆಯ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ ಎಂದು ಹೇಳಿದ್ದರು. ಇನ್ನು ಪುಟ್ಟಗೌರಿ ಮದುವೆಯಲ್ಲಿ ನಟನೆ ಮಾಡಿದಂತಹ ಸಾನ್ಯಾ ಅಯ್ಯರ್ ಅವರು ಕೂಡ ನನ್ನ ಎರಡನೇ ಮನೆ ತಂದೆ ನನ್ನ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿ ಅದನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವಂತೆ ಬೆದರಿಕೆ ಹಾಕುತ್ತಿದ್ದರು ಎಂಬ ವಿಚಾರವನ್ನು ತಿಳಿಸಿದ್ದಾರೆ. ಈ ರೀತಿ ಬಿಗ್ ಬಾಸ್ ಮನೆಗೆ ಈಗಾಗಲೇ ಬಂದಿರುವ ಎಲ್ಲಾ ಸ್ಪರ್ಧಿಗಳು ಕೂಡ ತಮ್ಮ ಮನಸ್ಸಿನಲ್ಲಿ ಇದ್ದಂತಹ ನೋವು ಮತ್ತು ಕಹಿ ಘಟನೆಯನ್ನು ಹೊರ ಹಾಕಿದ್ದಾರೆ. ಇದರ ಜೊತೆಗೆ ಇದೀಗ ಮೇಘಾನ ರಾಜ್ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಅವರನ್ನು ಮಿನಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಮೂಲಕ ಕಳಿಸಿಕೊಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ಮೇಘನಾ ರಾಜ್ ಅವರ ಮಗ ರಾಯನ್ ಇನ್ನೂ ಕೂಡ ಚಿಕ್ಕಮಗು ಹಾಗಾಗಿ ಆಗ ನಾನು ಬಿಟ್ಟು ಹೆಚ್ಚು ದಿನ ಮೇಘನಾ ರಾಜ್ ಅವರು ಉಳಿಯುವುದಕ್ಕೆ ಸಾಧ್ಯವಿಲ್ಲ.

ಹೀಗಾಗಿ ಒಂದು ದಿನದ ಮಟ್ಟಿಗಾದರೂ ಕೂಡ ಮೇಘನಾ ರಾಜ್ ಅವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದೆ. ಆದರೆ ಕೆಲವು ಅಭಿಮಾನಿಗಳು ಮಾತ್ರ ಮೇಘನಾ ರಾಜ್ ಬಿಗ್ ಬಾಸ್ ಮನೆಗೆ ಹೋಗುವುದು ಬೇಡ ಬಿಗ್ ಬಾಸ್ ಮನೆಗೆ ಹೋದರೆ ಹೆಸರು ಹಾಳಾಗುತ್ತದೆ. ತಮ್ಮ ವ್ಯಕ್ತಿತ್ವಕ್ಕೆ ಇರುವಂತಹ ಗೌರವ ಹಾಳಾಗುತ್ತದೆ ಅಂತ ಹೇಳುತ್ತಿದ್ದಾರೆ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನಂತರ ಮೇಘನಾ ರಾಜ್ ಅವರು ಸಾಕಷ್ಟು ಕಷ್ಟದಿಂದ ಜೀವನ ನಡೆಸುತ್ತಿದ್ದರೆ ಈಗ ಏನಾದರೂ ಅವರು ಬಿಗ್ ಬಾಸ್ ಮನೆಗೆ ಹೋದರೆ ಇನ್ನಷ್ಟು ಅಪಮಾನ ಅವಮಾನ ಮತ್ತು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.

ಹಾಗಾಗಿ ಮೇಘನಾ ರಾಜ್ ಯಾವುದೇ ಕಾರಣಕ್ಕೂ ಕೂಡ ಬಿಗ್ ಬಾಸ್ ಮನೆಗೆ ಹೋಗಬಾರದು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಆದರೆ ಮೇಘನಾ ರಾಜ್ ಅವರು ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತಾರೆ ಎಂಬುದನ್ನು ಕಾದು ನೋಡಬೇಕಿದೆ. ನಿಮ್ಮ ಪ್ರಕಾರ ಮೇಘನಾ ರಾಜ್ ಅವರು ಬಿಗ್ ಬಾಸ್ ಮನೆಗೆ ಹೋಗುವುದು ಒಳ್ಳೆಯದ ಅಥವಾ ಅವರು ಬಿಗ್ ಬಾಸ್ ಮನೆಗೆ ಹೋಗುವುದು ಬೇಡವ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಏಕೆಂದರೆ ಪ್ರತಿಯೊಂದು ಕಾಮೆಂಟ್ ಕೂಡ ಮೇಘನಾ ರಾಜ್ ಅವರು ಬಿಗ್ ಬಾಸ್ ಮನೆಗೆ ಹೋಗಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧರಿಸುತ್ತದೆ.