Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ಬಾರಿ ಸೈಮಾ ಅವಾರ್ಡ್ ಗೆ ಕನ್ನಡದಿಂದ ಮೂರು ಸಿನಿಮಾಗಳು ಆಯ್ಕೆ ಆಗಿವೆ ಈ ಮೂರು ಸಿನಿಮಾದಲ್ಲಿ ಅತಿ ಹೆಚ್ಚು ನಾಮಿನೇಟ್ ಆಗಿರುವ ಸಿನಿಮಾ ಯಾವುದು ಗೊತ್ತಾ.?

Posted on August 18, 2022 By Kannada Trend News No Comments on ಈ ಬಾರಿ ಸೈಮಾ ಅವಾರ್ಡ್ ಗೆ ಕನ್ನಡದಿಂದ ಮೂರು ಸಿನಿಮಾಗಳು ಆಯ್ಕೆ ಆಗಿವೆ ಈ ಮೂರು ಸಿನಿಮಾದಲ್ಲಿ ಅತಿ ಹೆಚ್ಚು ನಾಮಿನೇಟ್ ಆಗಿರುವ ಸಿನಿಮಾ ಯಾವುದು ಗೊತ್ತಾ.?

ಪ್ರತಿ ವರ್ಷವೂ ಕೂಡ ದುಬೈನಲ್ಲಿ ನಡೆಯುವಂತಹ ಸೈಮ ಅವಾರ್ಡ್ ಕಾರ್ಯಕ್ರಮಕ್ಕೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲಿಯೂ ಕೂಡ ಬಿಡುಗಡೆಯಾದಂತಹ ಸಿನಿಮಾವನ್ನು ಆಯ್ಕೆ ಮಾಡಲಾಗುತ್ತದೆ. ಉತ್ತಮ ಪ್ರದರ್ಶನ ಕಂಡ ಸಿನಿಮಾ, ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಸಿನಿಮಾ, ಹಾಗೂ ಅತಿ ಹೆಚ್ಚು ವೀಕ್ಷಣೆ ಪಡೆದಿರುವಂತಹ ಸಿನಿಮಾವನ್ನು ಆಯ್ಕೆ ಮಾಡಲಾಗುತ್ತದೆ. ಕನ್ನಡ ಸಿನಿಮಾದಿಂದ 30 ಸಿನಿಮಾ ಬಿಡುಗಡೆಯಾಗಿದ್ದರೆ ಅದರಲ್ಲಿ ಯಾವುದಾದರೂ ಐದು ಅಥವಾ ಮೂರು ಸಿನಿಮಾವನ್ನು ಆಯ್ಕೆ ಮಾಡಿಕೊಂಡು ಇದರಲ್ಲಿ ಹೆಚ್ಚು ಜನ ಮಣ್ಣನೆಯನ್ನು ಗಳಿಸಿಕೊಂಡಿರುವಂತಹ ಸಿನಿಮಾ ಯಾವುದು ಎಂಬುದನ್ನು ಸೈಮ ನಿರ್ಧಾರ ಮಾಡುತ್ತದೆ.

ವಿಶೇಷ ಏನೆಂದರೆ ಈ ಒಂದು ನಿಮ್ಮ ಮೆಚ್ಚಿನ ಸಿನಿಮಾ ಗೆ ನೀವು ಕೂಡ ವೋಟಿಂಗ್ ಮಾಡಬಹುದು ವೋಟ್ ನಾ ಮುಖಾಂತರವೂ ಕೂಡ ಇದನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚು ಯಾವ ಸಿನಿಮಾನ ನಾಮಿನೇಟ್ ಆಗಿರುತ್ತದೆ ಹಾಗೂ ಅತಿ ಹೆಚ್ಚು ಯಾವ ಸಿನಿಮಾಗೆ ವೋಟ್ ಬಿದ್ದಿರುತ್ತದೆ ಅಂತಹ ಸಿನಿಮಾವನ್ನು ವಿಜೇತ ಸಿನಿಮಾ ಎಂದು ಘೋಷಿಸಲಾಗುತ್ತದೆ. ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ಮೂರು ಸಿನಿಮಾಗಳು ಸೈಮ ಅವಾರ್ಡ್ ಗೆ ನಾಮಿನೇಟ್ ಆಗಿದೆ ಹೌದು. ಕಳೆದ ಎರಡು ವರ್ಷದ ಹಿಂದೆ ಎಷ್ಟೇ ತೆರೆ ಕಂಡಂತಹ ತರುಣ್ ಸುದೀಪ್ ಅವರ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ರಾಬರ್ಟ್ ಸಿನಿಮಾ ನಾಮಿನೇಟ್ ಆಗಿದೆ ವಿಶೇಷ ಏನೆಂದರೆ ರಾಬರ್ಟ್ ಸಿನಿಮಾ ಹತ್ತು ವಿಭಾಗದಲ್ಲಿ ನಾಮಿನೇಟ್ ಆಗಿದೆ.

SIIMA, the most popular awards show in South India announces its nominations for 2021 | Kannada #GarudaGamanaVrishabhaVahana #Roberrt and #Yuvarathnaa are leading the SIIMA Nominations for 2021 in Kannada.
.
.
.
.#10YearsOfSIIMA #SIIMA #SIIMA2021Nominations #SIIMA2022 pic.twitter.com/JHW8J6HUyi

— SIIMA (@siima) August 17, 2022

ಇದನ್ನು ಹೊರತು ಪಡಿಸಿದರೆ ಒಂದು ಮೊಟ್ಟೆಯ ಕಥೆಯ ಖ್ಯಾತಿಯ ರಾಜ ಬಿ ಶೆಟ್ಟಿ ನಿರ್ದೇಶನದ ಗರುಡಾಗಮನ ವೃಷಭ ವಾಹನ ಎಂಬ ಸಿನಿಮಾ ಎಂಟು ಬಾರಿ ಹಲವಾರು ವಿಭಾಗದಿಂದ ನೋಮಿನೇಟ್ ಆಗಿದೆ. ಇನ್ನು ಹೊಂಬಾಳೆ ಫಿಲಂಸ್ ಅಡಿಯಲ್ಲಿ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿನಯದ ಯುವರತ್ನ ಎಂಬ ಸಿನಿಮಾ ಏಳು ವಿಭಾಗದಿಂದ ಆಯ್ಕೆಯಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕಳೆದ ಎರಡು ವರ್ಷದಿಂದ ಬಿಡುಗಡೆಯಾದ ಎಲ್ಲಾ ಸಿನಿಮಗಿಂತ ಈ ಮೂರು ಸಿನಿಮಾಗಳು ಅತ್ಯುತ್ತವಾದ ಮತ್ತು ಅದ್ಭುತ ಕಥೆಯನ್ನು ಒಳಗೊಂಡಿದೆ ಎಂಬ ಕಾರಣದಿಂದಾಗಿ ಮೂರು ಸಿನಿಮಾವನ್ನು ಆಯ್ಕೆ ಮಾಡಲಾಗಿದ್ದು ಅದರ ಪೈಕಿ ರಾಬರ್ಟ್ ಸಿನಿಮಾ ಹತ್ತು ವಿಭಾಗದಲ್ಲಿ ನಾಮಿನೇಟ್ ಆಗಿರುವುದು ವಿಶೇಷ.

ಈ ಮೂರು ಸಿನಿಮಾಗಳು ಕೂಡ ಅತಿ ಹೆಚ್ಚು ಬಾರಿ ನಾಮಿನೇಟ್ ಆಗಿದೆ ಆದರೆ ಈ ಮೂರು ಸಿನಿಮಾದಲ್ಲಿ ಯಾವ ಸಿನಿಮಾ ವಿಜಯತವಾಗಿದೆ ಹಾಗೂ ಯಾವ ಸಿನಿಮಾ ಸೈಮಾ ಅವಾರ್ಡ್ ಪಡೆಯುತ್ತದೆ ಎಂಬುದನ್ನು ಈಗಾಲೇ ಹೇಳಲು ಸಾಧ್ಯವಿಲ್ಲ. ಅದನ್ನು ಸೈಮಾ ಕಾರ್ಯಕ್ರಮದ ದಿನದಷ್ಟೇ ರೆವೀಲ್ ಮಾಡಲಾಗುತ್ತದೆ ಸದ್ಯಕ್ಕೆ ಅಭಿಮಾನಿಗಳಂತೂ ತಮ್ಮ ನೆಚ್ಚಿನ ಸಿನಿಮಾ ಸೈಮಾ ಅವಾರ್ಡ್ಸ್ ನಲ್ಲಿ ನಾಮಿನೇಟ್ ಆಗಿರುವುದನ್ನು ಕಂಡು ಸಂತಸ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ನೆಚ್ಚಿನ ಸಿನಿಮಾ ಗೆಲ್ಲಲಿ ಎಂಬ ಆಶಯವನ್ನು ಇಟ್ಟುಕೊಂಡಿದ್ದಾರೆ ಈ ಸಿನಿಮಾ ನೀವು ಗೆಲ್ಲಬೇಕಾದರೆ ಮಾಡಬೇಕಿರುವುದಕ್ಕೆ ಕೇವಲ ಒಂದೇ ಒಂದು ಕೆಲಸ ಹೌದು ನೀವು ನಿಮ್ಮ ನೆಚ್ಚಿನ ಸಿನಿಮಾ ವಿಜೇತವಾಗಲು ವೋಟಿಂಗ್ ಮಾಡಬಹುದು. ಸೈಮಾ ವೆಬ್​ಸೈಟ್​ಗೆ ತೆರಳಿ ವೋಟ್ ಮಾಡಬೇಕು ಅಥವಾ ಸೈಮಾ ಫೇಸ್​ಬುಕ್ ಪೇಜ್ ಮೂಲಕವೂ ವೋಟ್ ಮಾಡಬಹುದಾಗಿದೆ. ರಾಬರ್ಟ್, ಗರುಡಗಮನ ವೃಷಭ ವಾಹನ, ಯುವರತ್ನ ಈ ಮೂರು ಸಿನಿಮಾದಲ್ಲಿ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Darshan, Garudagamana Vrushabhavahana, Puneeth, Raj B Shetty, Robert, Yuvarathna
WhatsApp Group Join Now
Telegram Group Join Now

Post navigation

Previous Post: ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ವಿಕ್ರಂತ್ ರೋಣ ಸಿನಿಮಾ ನಂತರ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ನೋಡಿ.
Next Post: ಒಂದು ಕಾಲದಲ್ಲಿ ಟಾಪ್ ಕಲಾವಿದ ಆಗಿದ್ದ ಶೋಭರಾಜ್ ಅವಕಾಶಗಳಿಲ್ಲದೆ ಈಗ ಯಾವ ಪರಿಸ್ಥಿತಿಯಲ್ಲಿದ್ದರೆ ಗೊತ್ತಾ.? ಚಿತ್ರರಂಗ ಕಡೆಗಣಿಸಿತ ಈ ಅದ್ಭುತ ನಟನನ್ನು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore