ನಟ ಶೋಭರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಯಾವುದೇ ಪಾತ್ರ ಕೊಟ್ಟರು ಕೂಡ ಅಚ್ಚುಕಟ್ಟಾಗಿ ನಿಭಾಯಿಸಬಲ್ಲ ಕಲಾವಿದ ಒಂದು ಕಾಲದಲ್ಲಿ ಖ್ಯಾತ ಕಳನಾಯಕನ ಪಾತ್ರದಲ್ಲಿ ಗುರುತಿಸಿಕೊಂಡವರು. ಸಾಲು ಸಾಲು ಸಿನಿಮಾದಲ್ಲಿ ನಟಿಸಿದರು ಶೋಭರಾಜು ಸಿನಿಮಾದಲ್ಲಿ ಇದ್ದರೆ ಅಂದರೆ ಅದರಲ್ಲೇನೋ ಒಂದು ವಿಶೇಷ ಇರುತ್ತಿತ್ತು. ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು ಕೂಡ ನೋಡುಗರ ಮನಸ್ಸನ್ನು ಗೆದ್ದಿದ್ದರು. ಚಿತ್ರರಂಗಕ್ಕೆ ನಟ ಶೋಭರಾಜ್ ಅವರು ಬಂದು ಮೂರು ದಶಕಗಳೇ ಆಗಿದೆ ಈ ಮೂರು ದಶಕಗಳಲ್ಲಿ ನೂರಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ತಮ್ಮ ಚಾಪನ್ನು ಮೂಡಿಸಿದ್ದಾರೆ.
ನಟ ಶೋಭರಾಜ್ ಅವರು ಮೊದಲ ಬಾರಿಗೆ ಚೈತ್ರದ ಪ್ರೇಮಾಂಜಲಿ ಎಂಬ ಸಿನಿಮಾದಲ್ಲಿ ಖಳ ನಟನಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಇವರಿಗೆ ಚಿತ್ರರಂಗದ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ ಆದರೆ ಒಮ್ಮೆ ಇವರನ್ನು ಖ್ಯಾತ ನಿರ್ದೇಶಕ ಎಟಿ ರಘು ಅವರು ನೋಡಿ ಶೋಭರಾಜ್ ಅವರು ವಿಲನ್ ಪಾತ್ರದಲ್ಲಿ ನಟನೆ ಮಾಡಿದರೆ ತುಂಬಾ ಚೆನ್ನಾಗಿರುತ್ತೆ ಆ ಪಾತ್ರಕ್ಕೆ ಇವರು ಸೂಕ್ತ ಎಂದು ಸಲಹೆ ನೀಡಿದ್ದರಂತೆ. ಎಸ್. ನಾರಾಯಣ ನಿರ್ದೇಶನದ ಚೈತ್ರದ ಪ್ರೇಮಾಂಜಲಿ ಎಂಬ ಸಿನಿಮಾವ ಚಿತ್ರೀಕರಣ ಪ್ರಾರಂಭವಾಗಿರುತ್ತದೆ. ಆ ಸಮಯದಲ್ಲಿ ಎಸ್ ನಾರಾಯಣ್ ಅವರು ಶೋಬವರಾಜ್ ಅವರನ್ನು ವಿಲನ್ ಪಾತ್ರಕ್ಕೆ ಹಾಕಿಕೊಳ್ಳುತ್ತಾರಂತೆ ತಾವು ನಟನೆ ಮಾಡಿದ ಮೊದಲ ಸಿನಿಮಾದಲ್ಲಿಯೇ ಬಹುದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಈ ಸಿನಿಮಾ ಶತದಿನೋತ್ಸವವನ್ನು ಪೂರೈಸುತ್ತದೆ ಆ ಕಾಲದಲ್ಲಿಯೇ ದೊಡ್ಡಮಟ್ಟದ ದಾಖಲೆಯನ್ನು ಬರೆಯುತ್ತದೆ ಈ ಸಿನಿಮಾದ ಮೂಲಕ ಹೆಸರು ಕೀರ್ತಿಯನ್ನು ಗಳಿಸುತ್ತಾರೆ.
ತದನಂತರ ಎಸ್ ನಾರಾಯಣ್ ಅವರ ಜೊತೆಯೇ ನಾಲ್ಕೈದು ವರ್ಷ ಕೆಲಸ ಮಾಡುತ್ತಾರೆ, ಸಾಕಷ್ಟು ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು ತದನಂತರ ಪೋಷಕ ಪಾತ್ರದಲ್ಲಿಯೂ ಕೂಡ ಕಾಣಿಸಿಕೊಂಡರು. ಆದರೆ ಇತ್ತೀಚಿಗೆ ಬರುತ್ತಿರುವಂತಹ ಸಿನಿಮಾದಲ್ಲಿ ಹಾಸ್ಯಮಯವಾದ ಪಾತ್ರವನ್ನು ಕೂಡ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಸುಮಾರು 30 ವರ್ಷದಿಂದಲೂ ಕೂಡ ನಟ ಶೋಭರಾಜ್ ಅವರು ಬೆಳ್ಳಿ ತೆರೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಆದರೆ ವಿಪರ್ಯಾಸ ಏನೆಂದರೆ ಇತ್ತೀಚಿನ ದಿನದಲ್ಲಿ ಯಾವ ಸಿನಿಮಾದಲ್ಲೂ ಕೂಡ ನಟ ಶೋಭರಾಜ್ ಅವರು ಕಾಣಿಸಿಕೊಳ್ಳುತ್ತಿಲ್ಲ ಇದನ್ನು ನೋಡಿದಂತಹ ಕೆಲವು ಸಿಹಿ ರಸಿಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಹಿಂದಿನ ಕಾಲದ ನಟರನ್ನು ಕಡೆಗಣಿಸಿ ಇತ್ತೀಚಿನ ದಿನದಲ್ಲಿ ಹೊಸ ಕಲಾವಿದರಿಗೆ ಅವಕಾಶವನ್ನು ನೀಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಚಿತ್ರರಂಗ ಅಂದಮೇಲೆ ಅಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು ಆದರೆ ತೀರ ಎಲ್ಲರೂ ಕೂಡ ಹೊಸಬರೇ ಇದ್ದರೆ ಹಳೆಯ ಕಲಾವಿದರು ಕಣ್ಮರೆಯಾಗುತ್ತಾರೆ. ಈಗಾಗಲೇ ನೀವು ಸಾಕಷ್ಟು ಕಲಾವಿದರನ್ನು ನೋಡಿರಬಹುದು ಬ್ಯಾಂಕ್ ಜನಾರ್ಧನ್, ಟೆನ್ನಿಸ್ ಕೃಷ್ಣ, ಶೋಭರಾಜು, ದೊಡ್ಡಣ್ಣ, ಮಿತ್ರ, ಕೋಮಲ್, ಶಂಕರ್ ಅಶ್ವಥ್ ಇವರೆಲ್ಲರೂ ಕೂಡ ಒಂದು ಕಾಲದಲ್ಲಿ ದೊಡ್ಡ ದೊಡ್ಡ ನಟರ ಜೊತೆ ಅಭಿನಯ ಮಾಡಿದಂತಹ ವ್ಯಕ್ತಿಗಳು. ಸಾಕಷ್ಟು ಅನುಭವವನ್ನು ಹೊಂದಿದ್ದಾರೆ ಅಷ್ಟೇ ಅಲ್ಲದೆ ನಟನೆ ಮಾಡುವುದರಲ್ಲಿ ನಿಸಿಮ್ಮರು ಆದರೆ ಈ ಎಲ್ಲಾ ಹಿರಿಯ ಕಲಾವಿದರನ್ನು ಕಡೆಗಣಿಸಿ ಇದೀಗ ಬೇರೆಯವರಿಗೆ ಅವಕಾಶವನ್ನು ನೀಡುತ್ತಿದ್ದಾರೆ. ಆ ಪೈಕಿ ನಟ ಶೋಭರಾಜ್ ಅವರು ಕೂಡ ಒಬ್ಬರು ಸದ್ಯಕ್ಕೆ ಯಾವುದೇ ಸಿನಿಮಾ ಅವಕಾಶವಿಲ್ಲದೆ ಮನೆಯಲ್ಲೇ ಕುಳಿತುಕೊಂಡಿದ್ದಾರೆ. ನಿಜಕ್ಕೂ ಈ ಖ್ಯಾತ ನಟನ ಈ ಪರಿಸ್ಥಿತಿಯನ್ನು ಕಣ್ಣಾರೆ ಕಂಡರೆ ಬೇಸರವಾಗುತ್ತದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.