ಪುನೀತ್ ಅಣ್ಣನ ಮೇಲೆ ಆಣೆ ಮಾಡಿ ಹೇಳ್ತಿನಿ ನನ್ನ ಅತ್ತಿರ ಊಟಕ್ಕೂ ಕೂಡ ದುಡ್ಡು ಇಲ್ಲ ಅಂತ ಕಣ್ಣೀರು ಹಾಕ್ತಿರೋ ಕಾಫಿ ನಾಡು ಚಂದು.

ಕಾಫಿ ನಾಡು ಚಂದು ಸದ್ಯಕ್ಕೆ ಕಳೆದ ಕೆಲವು ತಿಂಗಳಿನಿಂದ ಸಿಕ್ಕಾಪಟ್ಟೆ ಟ್ರೈಂಡ್ ನಲ್ಲಿ ಇರುವ ಹೆಸರು ಅಂತಾನೆ ಹೇಳಬಹುದು ಹುಟ್ಟು ಹಬ್ಬದ ಹಾಡುಗಳನ್ನು ಹಾಡುವುದರ ಮೂಲಕ ಸಿಕ್ಕಾಪಟ್ಟೆ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಕೂಡ ಕಾಫಿ ನಾಡು ಚಂದು ಅವರು ಸುಮಾರು 11 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ ತಮ್ಮ ವಿಭಿನ್ನವಾದ ಶೈಲಿಯಲ್ಲಿ ವಿಭಿನ್ನವಾದಂತಹ ಪದಗಳನ್ನು ಜೋಡಣೆ ಮಾಡಿ ಹಾಡು ಹೇಳುವುದೇ ಇವರ ಹವ್ಯಾಸವಾಗಿದೆ. ಮೊದಲಿನಿಂದಲೂ ಕೂಡ ಕಾಫಿ ನಾಡು ಚಂದು ಅವರು ಹುಟ್ಟು ಹಬ್ಬದ ಹಾಡನ್ನು ಹೇಳಿಕೊಂಡು ಬರುತ್ತಿದ್ದರು. ಆದರೆ ಕಾಫಿನಾಡು ಚಂದು ಅವರು ಎಲ್ಲಿಯೂ ಕೂಡ ಅಷ್ಟಾಗಿ ಗುರುತಿಸಿಕೊಂಡಿರಲಿಲ್ಲ ಯಾವಾಗ instagram ಖಾತೆಯಲ್ಲಿ ಇವರ ಹುಟ್ಟು ಹಬ್ಬದ ಹಾಡೊಂದು ವೈರಲ್ ಆಯಿತೋ ಅಲ್ಲಿಂದ ಇವರ ನಸೀಬೆ ಬದಲಾಯಿತು ಅಂತ ಹೇಳಬಹುದು.

ಹೌದು ಒಂದು ಕಾಲದಲ್ಲಿ ಕಾಫಿ ನಾಡು ಚಂದು ಎಂಬ ಹೆಸರನ್ನು ಯಾರು ಕೂಡ ಗುರುತಿಸುತ್ತಿರಲಿಲ್ಲ ಆದರೆ ಈಗ ಕಾಫಿ ನಾಡು ಚಂದು ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಎಲ್ಲರೂ ಕೂಡ ಬರ್ತಡೇ ಸಾಂಗ್ ಅಂತ ಹೇಳುತ್ತಾರೆ. ಅಷ್ಟು ಫೇಮಸ್ ಆಗಿದ್ದಾರೆ ಇನ್ನು ಇವರ instagram ಫಾಲೋವರ್ಸ್ ಕೂಡ ಏನು ಕಡಿಮೆ ಇಲ್ಲ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಯಾವಾಗಲೂ ಕೂಡ ಕಾಫಿ ನಾಡು ಚಂದು ಅವರು ಹಾಡು ಹೇಳುವುದಕ್ಕಿಂತ ಮುಂಚೆ ನಾನು ಪುನೀತ್ ಅಣ್ಣ ಮತ್ತು ಶಿವಣ್ಣ ಅವರ ಅಭಿಮಾನಿ ಅಂತ ಹೇಳಿಕೊಳ್ಳುತ್ತಾರೆ ಈ ಒಂದು ಹೆಸರಿನಿಂದಲೇ ಇವರಿಗೆ ಹೆಚ್ಚು ಖ್ಯಾತಿ ದೊರೆಯಿತು ಅಂತ ಹೇಳಿದರು ಕೂಡ ತಪ್ಪಾಗಲಾರದು.

ಕಾಫಿನಾಡು ಚಂದು ಅವರು ಮೂಲತಃ ಚಿಕ್ಕಮಂಗಳೂರಿನವರು ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ, ಆದರೆ ಇತ್ತೀಚಿನ ದಿನದಲ್ಲಿ ಕಾಫಿ ನಾಡು, ಚಂದು ಅವರು ಸಾರ್ವಜನಿಕವಾಗಿ ಬಹಳನೇ ತೊಂದರೆಯನ್ನು ಅನುಭವಿಸುತ್ತಿದ್ದಾರಂತೆ. ಹೌದು ಇವರು ಹಾಡು ಹೇಳುವುದಕ್ಕೆ ಫೇಮಸ್ ಎಂಬ ಕಾರಣಕ್ಕಾಗಿ ಹಲವಾರು ಅಭಿಮಾನಿಗಳು ಮತ್ತು ಸಾರ್ವಜನಿಕರು ಪ್ರತಿನಿತ್ಯವೂ ಕೂಡ ಆಟೋ ಸ್ಟ್ಯಾಂಡ್ ಗೆ ಹೋಗಿ ಹಾಡು ಹೇಳುವಂತೆ ಒತ್ತಾಯ ಮಾಡುತ್ತಾರಂತೆ. ಇದಕ್ಕೆ ಬೇಸರವನ್ನು ವ್ಯಕ್ತಪಡಿಸಿದಂತಹ ಕಾಫಿ ನಾಡು ಚಂದು ಅವರು ನಾನು ಬಡವ ನಾನು ಕೆಲಸ ಮಾಡಿದರೆ ಮಾತ್ರ ನನಗೆ ಹಣ ದೊರೆಯುತ್ತದೆ. ಹಣ ದೊರೆಯುತ್ತದೆ ಮಾತ್ರ ನಾನು ನನ್ನ ಕುಟುಂಬವನ್ನು ನಿರ್ವಹಿಸುವುದಕ್ಕೆ ಸಾಧ್ಯ ನಾನು ಹಾಡನ್ನು ಹೇಳುತ್ತೇನೆ ಇಲ್ಲ ಎಂದು ಹೇಳುವುದಿಲ್ಲ.

ಆದರೆ ಬೆಳಗ್ಗೆ ಬಂದು ಹಾಡು ಹೇಳು ಅಂತ ಪಟ್ಟು ಹಿಡಿದುಕೊಂಡು ಕುಳಿತುಕೊಂಡರೆ ನಾನು ಸಂಪಾದನೆ ಮಾಡುವುದು ಹೇಗೆ ನನಗೆ ಮದುವೆಯಾಗಿದೆ ಎರಡು ಮಕ್ಕಳು ಇದೆ ಅವರ ಭವಿಷ್ಯವನ್ನು ಕಲ್ಪಿಸುವುದಾದರೂ ಹೇಗೆ. ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ ನನ್ನ ಬಳಿ ಮಧ್ಯಾಹ್ನದ ಹೊತ್ತು ಊಟ ಮಾಡುವುದಕ್ಕೂ ಕೂಡ ಕಾಸು ಇರುವುದಿಲ್ಲ. ಆಟೋ ಬಾಡಿಗೆ ಹೋದರೆ ಮಾತ್ರ ಊಟ ಮಾಡುವುದಕ್ಕೆ ಕಾಸು ಇರುತ್ತದೆ ಮನೆಗೆ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತದೆ. ಇದರ ಜೊತೆಗೆ ನಾನು ಆಟೋ ಬಾಡಿಗೆಯನ್ನು ಕೂಡ ಕಟ್ಟಬೇಕು ಹಾಗಾಗಿ ನನ್ನ ಪರಿಸ್ಥಿತಿಯನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ.

ನಾನು ಬಿಡುವಿನ ಸಮಯದಲ್ಲಿ ಹಾಡು ಹೇಳುತ್ತೇನೆ ಆದರೆ ಎಲ್ಲಾ ಸಮಯದಲ್ಲೂ ಹಾಡು ಹೇಳಿ ಅಂತ ಒತ್ತಾಯ ಮಾಡಬೇಡಿ ಎಂದು ಕಾಫಿ ನಾಡು ಚಂದು ಅವರು ಕಣ್ಣೀರು ಹಾಕಿದ್ದಾರೆ. ಸದ್ಯಕ್ಕೆ ಆ ವಿಡಿಯೋ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದನ್ನು ನೋಡಿದಂತಹ ನೆಟ್ಟಿದರು ನಿನಗೆ ಬೇಕಿತ್ತಾ ಎಂದು ಕಾಮೆಂಟ್ ಹಾಕಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ರಾತ್ರೋರಾತ್ರಿ ಫೇಮಸ್ ಆಗಬೇಕು ಸೆಲೆಬ್ರಿಟಿಗಳು ಆಗಬೇಕು ಅಂತ ತಮ್ಮ ಹವ್ಯಾಸವನ್ನು ಮತ್ತು ಅತೀವ ವರ್ತನೆಯನ್ನು ಹೆಚ್ಚಾಗಿ ತೋರಿಸಿಕೊಳ್ಳುತ್ತಾರೆ ಆ ಪೈಕಿ ಕಾಫಿ ನಾಡು ಚಂದು ಅವರು ಕೂಡ ಒಬ್ಬರು ಅಂತನೇ ಹೇಳಬಹುದು.

ಹೌದು ಕರ್ನಾಟಕದಾದ್ಯಂತ ಗುರುತಿಸಿಕೊಳ್ಳಬೇಕು ಹೆಚ್ಚು ಹುಟ್ಟು ಹಬ್ಬದ ಹಾಡುಗಳನ್ನು ಹಾಡಿ ಫೇಮಸ್ ಆಗಬೇಕು ಅಂತ ಅಂದುಕೊಂಡಿದ್ದರು ಆದರೆ ಇದೀಗ ಅದೇ ಅವರ ಜೀವನಕ್ಕೆ ಮುಳ್ಳಾಗುತ್ತಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಏಕೆಂದರೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಸಂಪಾದನೆಯೂ ಇಲ್ಲ ಹೀಗಾಗಿ ಅವರು ಕಷ್ಟದ ಜೀವನವನ್ನು ಎದುರಿಸುವಂತಹ ಅನಿವಾರ್ಯ ಬಂದಿದೆ. ಅದಕ್ಕೆ ಹಿರಿಯರು ಹೇಳುವುದು ಯಾವುದೇ ಆದರೂ ಕೂಡ ಇತಿಮಿತಿಯಲ್ಲಿ ಇರಬೇಕು ಅಂತ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ ಕಾಫಿನಾಡು ಚಂದು ಅವರ ಬಗ್ಗೆ ನಿಮ್ಮ ಮನದಾಳದ ಮಾತನ್ನು ಹಂಚಿಕೊಳ್ಳಿ.

 

Leave a Comment

WhatsApp Group Join Now
Telegram Group Join Now