ಕಳೆದ ಎರಡು ದಿನಗಳಿಂದ ಎಲ್ಲರೂ ಬಹಳ ಆಶ್ಚರ್ಯ ಪಡುವ ರೀತಿಯಲ್ಲಿ ನಟ ಅನಿರುದ್ಧ್ ಅವರ ಮೇಲೆ ಗಂಭೀರ ಆರೋಪ ಕೇಳಿ ಬರುತ್ತಿದೆ. ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ ಅನಿರುದ್ಧ ಅವರು ಕಳೆದ ಕೆಲವು ವರ್ಷಗಳು ಸಂಪೂರ್ಣವಾಗಿ ಇಂಡಸ್ಟ್ರಿ ಯಿಂದ ಮಾಯ ಆಗಿಬಿಟ್ಟಿದ್ದರು ಎನ್ನಬಹುದು. ಮತ್ತೆ ಅವರನ್ನು ಕನ್ನಡದ ಜನರೆದುರು ಕರೆತರುವ ಪ್ರಯತ್ನವನ್ನು ಜೊತೆಜೊತೆಯಲಿ ಎನ್ನುವ ಧಾರಾವಾಹಿ ಟೀಮ್ ಮಾಡಿತ್ತು. ಇದು ಅವರ ಪಾಲಿಗೆ ದೊರೆತ ಎರಡನೇ ಅವಕಾಶ ಎನ್ನಬಹುದು ಅಲ್ಲದೆ ಈ ಧಾರಾವಾಹಿಯು ಶುರುವಾದ ಸಮಯದಿಂದ ಅನಿರುದ್ಧ್ ಅವರ ಮೇಲೆ ಕರ್ನಾಟಕದ ಜನತೆಗೆ ಅಪಾರ ಅಭಿಮಾನ ಪ್ರೀತಿ ಬೆಳೆದಿತ್.ತು ಅದರಲ್ಲೂ ಕಿರುತರೆ ಪ್ರೇಕ್ಷಕರಂತೂ ಅನಿರುಧ್ ಅವರನ್ನು ತಮ್ಮ ಮನೆಯ ಮಗ ಎನ್ನುವಷ್ಟು ಪ್ರೀತಿಸುತ್ತಿದ್ದರು. ಇದಕ್ಕೆಲ್ಲ ಕಾರಣ ಜೊತೆ ಜೊತೆಯಲಿ ದಾರವಾಹಿಯಲ್ಲಿ ಅವರು ನಟಿಸಿದ್ದ ಆರ್ಯವರ್ಧನ್ ಎನ್ನುವ ಪಾತ್ರ.
ಒಂದು ಒಳ್ಳೆಯ ನೇಮ್ ಫೇಮ್ ಎಲ್ಲವನ್ನು ತಂದುಕೊಟ್ಟಿದ್ದ ಜೊತೆಜೊತೆಯಲಿ ಧಾರಾವಾಹಿ ತಂಡದಲ್ಲಿ ಅನಿರುದ್ಧ್ ಅವರು ಕಿರಿಕ್ ಮಾಡಿಕೊಂಡಿದ್ದಾರಂತೆ. ಈ ಬಗ್ಗೆ ಜೊತೆಯಲಿ ಧಾರಾವಾಹಿಯ ನಿರ್ಮಾಪಕರ ಮತ್ತು ನಿರ್ದೇಶಕರು ಆದ ಆರೂರು ಜಗದೀಶ್ ಅವರು ಆರೋಪ ಮಾಡಿದ್ದಾರೆ. ಜೊತೆಗೆ ಪ್ರೆಸ್ ಮೀಟ್ ನಡೆಸಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಹಾಗೆಯೇ ಈಗಾಗಲೇ ಚಾನೆಲ್ ಅವರಿಗೆ ತಮ್ಮ ತೊಂದರೆಗಳನ್ನೆಲ್ಲ ತಿಳಿಸಿ ಆರ್ಯವರ್ಧನ್ ಅವರನ್ನು ಧಾರವಾಹಿಯಿಂದ ಕೈ ಬಿಡುವ ನಿರ್ಧಾರ ಮಾಡಿದ್ದೇನೆ ಎನ್ನುವುದನ್ನು ಸಹ ಹೇಳಿದ್ದಾರೆ. ಇತ್ತ ಅನಿರುದ್ಧ್ ಅವರು ಆ ಆರೋಪಗಳಿಗೆ ಪ್ರತ್ಯಾರೋಪಗಳನ್ನು ಮಾಡಿ ತಮ್ಮ ನಿಲುವು ಏನು ಎನ್ನುವುದನ್ನು ಸಹ ತಿಳಿಸಿದ್ದಾರೆ. ಅಂತಿಮವಾಗಿ ಅನಿರುದ್ಧ್ ಅವರು ಇಷ್ಟೆಲ್ಲಾ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಈ ಧಾರವಾಹಿ ನನಗೆ ತುಂಬಾ ತಂದು ಕೊಟ್ಟಿದ್ದೆ ಆ ಧಾರಾವಾಹಿಯಲ್ಲಿ ನಾನು ಈಗಲೂ ಕೂಡ ಅಭಿನಯಿಸಲು ರೆಡಿ ಇದ್ದೇನೆ ಎಂದಿದ್ದಾರೆ.
ಆದರೆ ಆರೂರು ಜಗದೀಶ್ ಅವರು ಮಾತ್ರ ಈಗಾಗಲೇ ನಾನು ಸಾಕಷ್ಟು ಅವರಿಂದ ನೊಂದು ಹೋಗಿದ್ದೇನೆ, ಅವರಿಂದ ಧಾರವಾಹಿಯಲ್ಲಿ ಇತರ ಕಲಾವಿದರ ನಡವಡಿಕೆಗಳು ಕೂಡ ಬದಲಾಗುತ್ತಿದೆ. ಮತ್ತು ನಾನು ವೈಯುಕ್ತಿಕವಾಗಿ ಬಹಳ ನೊಂದು ನಾನು ನನ್ನ ಕುಟುಂಬಸ್ಥರು ದಿನ ಕಣ್ಣೀರು ಇಡುತ್ತಿದ್ದೇವೆ. ಇದಕ್ಕೆಲ್ಲ ಕಾರಣ ಇವರೇ ನಾನು ಇವರನ್ನು ಬಹಳ ಪ್ರೀತಿಯಿಂದ ನೋಡಿದ್ದೆ ತೆರೆ ಮೇಲೆ ಇವರನ್ನು ಹೇಗೆ ತರಬೇಕು ಎನ್ನುವುದು ನನ್ನ ಕನಸು ಆದರೆ ನನಗೆ ಅಷ್ಟೇ ಪ್ರಮಾಣದ ಪ್ರೀತಿ ಅವರಿಂದ ದೊರೆತಿಲ್ಲ ಅಲ್ಲದೆ ಈಗಾಗಲೇ ಅವರಿಂದ ಸಾಕಷ್ಟು ನಷ್ಟ ಕೂಡ ಆಗಿದೆ ಹಾಗಾಗಿ ನನಗೆ ಇವರ ಸಹವಾಸವೇ ಬೇಡ ಎನ್ನುವಷ್ಟು ಬೇಸತ್ತು ಹೋಗಿದ್ದಾರಂತೆ ನಿರ್ದೇಶಕರು. ಇತ್ತೀಚೆಗೆ ಅನಿರುದ್ಧ ಅವರಿಗೆ ಅಹಂ ಜಾಸ್ತಿಯಾಗಿದ್ದೆ ಯಾವಾಗಲೂ ಸೆಟ್ಟಿಂಗ್ ಅಲ್ಲಿ ಜಗಳ ಆಡುತ್ತಾರೆ, ಅನವಶ್ಯಕ ಚರ್ಚೆಗಳು ನಡೆಯುತ್ತಾ ಇರುತ್ತವೆ.
ಇದರಿಂದ ಬಹಳ ಟೈಮ್ ವೇಸ್ಟ್ ಆಗುವುದರ ಜೊತೆಗೆ ನಿರ್ಮಾಪಕನಾಗಿ ನನಗೆ ಬಹಳ ನಷ್ಟ ಆಗುತ್ತಿದೆ. ಅವರ ವರ್ತನೆ ನನಗೆ ಇಷ್ಟ ಆಗುತ್ತಿಲ್ಲ. ಪಾತ್ರದಲ್ಲಿ ಹಾಗೂ ಕಥೆಯಲ್ಲಿ ಅನವಶ್ಯಕವಾಗಿ ಹಸ್ತಕ್ಷೇಪ ಮಾಡುತ್ತಾರೆ ಹೀಗಾಗಿ ನನ್ನ ಕಷ್ಟವನ್ನು ಚಾನೆಲ್ ಜೊತೆ ಹೇಳಿಕೊಂಡು ಅವರು ಬೇಡ ಎನ್ನುವ ನಿರ್ಧಾರ ಮಾಡಿದ್ದೇನೆ ಎಂದು ಆರೂರು ಜಗದೀಶ್ ಅವರು ಹೇಳಿಕೊಂಡಿದ್ದಾರೆ. ಆದರೆ ನಿರ್ಮಾಪಕರ ಸಂಘದ ಎಲ್ಲರೂ ಚರ್ಚೆ ಮಾಡಿ ಎರಡು ವರ್ಷಗಳವರೆಗೆ ಅನಿರುದ್ಧ್ ಅವರನ್ನು ಕಿರುತೆರೆಯಿಂದ ಕೈಬಿಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೂಡ ಹರಿದಾಡುತ್ತಿವೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.