ನಟಿ ಮೇಘನಾ ರಾಜ್ ಅವರು ಕಳೆದ ನಾಲ್ಕು ದಿನದಿಂದಲೂ ಎರಡನೆಯ ಮದುವೆಯ ವಿವಾದದ ಬಗ್ಗೆ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಹತ್ತು ವರ್ಷ ಪ್ರೀತಿಸಿ ಮದುವೆಯಾದವರು. ಆದರೆ ಮದುವೆಯಾದ ಮೂರೇ ವರ್ಷಕ್ಕೆ ತಮ್ಮ ಪತಿಯನ್ನು ಕಳೆದುಕೊಂಡು ಈಗಲೂ ಕೂಡ ನೋವಿನ ಜೀವನವನ್ನು ಸಾಗಿಸುತ್ತಿದ್ದಾರೆ. ಚಿರು ಅವರು ಆಗಲಿ ಒಂದುವರೆ ವರ್ಷವಾಗಿದೆ ಈ ಒಂದುವರೆ ವರ್ಷಕ್ಕೆ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ಮರೆತು ಎರಡನೇ ಮದುವೆ ಯಾಗುತ್ತಿದ್ದಾರೆ ಎಂಬ ವಿಚಾರದಲ್ಲಿ ವೈರಲಾಗುತ್ತಿದೆ. ಈ ವಿಚಾರ ಇಷ್ಟು ವೇಗವಾಗಿ ಹಬ್ಬುವುದಕ್ಕೆ ಕಾರಣ ಮೇಘನಾ ರಾಜ್ ಅವರು ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದರು.
ಈ ಸಮಯದಲ್ಲಿ ನಿರೂಪಕರು ನೀವು ಎರಡನೇ ಮದುವೆ ಆಗುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ ಈ ಮಾತಿಗೆ ಉತ್ತರ ನೀಡಿದಂತಹ ಮೇಘನಾ ರಾಜ್ ಅವರು ಎರಡನೆಯ ಮದುವೆಯ ಬಗ್ಗೆ ನಾನು ಯೋಚನೆ ಮಾಡಿಲ್ಲ. ನಾನು ಈ ದಿನವನ್ನು ಮಾತ್ರ ಆನಂದಿಸುತ್ತೇನೆ ಈ ಕ್ಷಣವನ್ನು ಮಾತ್ರ ಅನುಭವಿಸುತ್ತೇನೆ ನನ್ನ ಮನಸ್ಸಿನಲ್ಲಿ ಎರಡನೆಯ ಮದುವೆಯ ಬಗ್ಗೆ ಇನ್ನೂ ಕೂಡ ಯೋಚನೆ ಬಂದಿಲ್ಲ. ಹಾಗಾಗಿ ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಕ್ಕೆ ಹೋಗುವುದಿಲ್ಲ ಮುಂದೆ ಜೀವನ ಹೇಗೆ ನಡೆಯುತ್ತದೆ ಹಾಗೆ ಹೋಗುತ್ತೇನೆ ಅಷ್ಟೇ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಚಿರು ಅವರು ಯಾವಾಗಲೂ ನಿನ್ನ ಮನಸ್ಸಿನ ಮಾತನ್ನು ಕೇಳು ಎಂದು ನನಗೆ ಹೇಳುತ್ತಿದ್ದರು ಹಾಗಾಗಿ ನನ್ನ ಮನಸ್ಸು ಇನ್ನು ಕೂಡ ಎರಡನೇ ಮದುವೆಗೆ ಸಮ್ಮತಿಯನ್ನು ಸೂಚಿಸಿಲ್ಲ ಎಂದು ಹೇಳಿಕೊಳ್ಳುತ್ತಾರೆ.
ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕೆಲವು ಕಿಡಿಗೇಡಿಗಳಿ ಮತ್ತು ನೆಟ್ಟಿಗರು ಮೇಘನಾ ರಾಜ್ ಅವರು ಹೇಳಿದ ಹೇಳಿಕೆಯನ್ನೇ ತಿರುಚಿದ್ದಾರೆ. ಮೇಘನಾ ರಾಜ್ ಅವರು ನಾನು ಎರಡನೆಯ ಮದುವೆಯ ಬಗ್ಗೆ ಯೋಚಿಸಿಲ್ಲ ಮುಂದೆ ಜೀವನ ಹೇಗೆ ನಡೆಯುತ್ತದೆ ಎಂಬುದು ತಿಳಿದಿಲ್ಲ ಅಂತ ಹೇಳುತ್ತಾರೆ. ಆದರೆ ಅದನ್ನು ನೆಟ್ಟಿದರು ಮೇಘನಾ ರಾಜ್ ಅವರು ಎರಡನೇ ಮದುವೆ ಆಗುತ್ತಿದ್ದಾರೆ ಎಂದು ಸುದ್ದಿಯನ್ನು ಹಬ್ಬಿಸುತ್ತಾರೆ. ಈ ಸುದ್ದಿ ಎಲ್ಲಾ ಕಡೆ ವೈರಲ್ ಆಗುತ್ತದೆ ಕೆಲವು ನೆಟ್ಟಗರು ಮೇಘನಾ ರಾಜ್ ಅವರಿಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ. ಅವರನ್ನು ಇಷ್ಟು ಬೇಗ ಮರೆತು ಎರಡನೇ ಮದುವೆಯಾಗುವುದಕ್ಕೆ ನಿಮಗೆ ಮನಸಾದರೂ ಹೇಗೆ ಬಂತು ಎಂದು ನಿಂದಿಸುತ್ತಾರೆ.
ಈ ಎಲ್ಲ ವಿಚಾರಗಳು ಮೇಘನಾ ರಾಜ್ ಅವರಿಗೆ ತಿಳಿದು ತುಂಬಾನೆ ನೋವನ್ನು ಅನುಭವಿಸುತ್ತಾರೆ ಅಷ್ಟೇ ಅಲ್ಲದೆ ತಮ್ಮ ಎರಡನೇ ಮದುವೆಯ ಬಗ್ಗೆ ಇರುವಂತಹ ವದಂತಿಗಳಿಗೆ ತೆರೆ ಎಳೆಯುವಂತಹ ಕಾರ್ಯವನ್ನು ಮಾಡಬೇಕು ಅಂತ ನಿರ್ಧರಿಸಿ ಮೇಘನಾ ರಾಜ್ ಅವರು ಇದೀಗ ಹೊಸದೊಂದು ಮಹತ್ಕಾರವಾದಂತ ಕೆಲಸವನ್ನು ಮಾಡಿದ್ದಾರೆ. ಹೌದು ಮೇಘನಾ ರಾಜ್ ಅವರು ತಮ್ಮ ಪತಿ ಚಿರಂಜೀವಿ ಸರ್ಜಾ ಅವರನ್ನು ಎಷ್ಟು ಇಷ್ಟ ಪಡುತ್ತಿದ್ದರು ಅಂದರೆ ಅದನ್ನು ಬಾಯಿ ಮಾತಿನಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಕೆಲವೊಮ್ಮೆ ಅವರು ಆ ಪ್ರೀತಿಯನ್ನು ತಮ್ಮ ಬರವಣಿಗೆ ಮೂಲಕ ವ್ಯಕ್ತಪಡಿಸಿದ್ದರು ಆದರೆ ಇದನ್ನು ಸಾಮಾನ್ಯ ಜನರು ಅರ್ಥಮಾಡಿಕೊಳ್ಳಲಿಲ್ಲ ನೆಟ್ಟಿಗರಂತು ಎರಡನೇ ಮದುವೆ ಆಗುತ್ತಿದ್ದಾರೆ ಎಂದು ಬಹಳಷ್ಟು ನೋವು ನೀಡಿದರು.
ಹಾಗಾಗಿ ಮೇಘನಾ ರಾಜ್ ಅವರು ಇದೀಗ ತಮ್ಮ ಪತಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದು ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದರ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆ. ಹೌದು ನೆನ್ನೆಯಷ್ಟೇ ಮೇಘನಾ ರಾಜ್ ಅವರು ತಮ್ಮ ಕೈನ ಮೇಲೆ ಚಿರು ಹಾಗೂ ರಾಯನ್ ಎಂಬ ಹೆಸರಿನ ಆಚೆಯನ್ನು ಹಾಕಿಸಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಈ ಇಬ್ಬರು ವ್ಯಕ್ತಿಗಳು ನನ್ನ ಜೀವನಕ್ಕೆ ಬಹಳನೇ ಮುಖ್ಯವಾದದ್ದು ನಾನು ಇವರಿಬ್ಬರನ್ನು ಸಾಯೋವರೆಗೂ ಪ್ರೀತಿಸುತ್ತೇನೆ ಇವರೆಬ್ಬರ ಸ್ಥಾನವನ್ನು ಯಾರಿಂದಲೂ ಕೂಡ ತುಂಬುವುದಕ್ಕೆ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದ ಹಾಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಮೇಘನಾ ರಾಜ್ ನೀವು ಯಾವುದಕ್ಕೂ ಎದೆಗುಂದ ಬೇಡಿ ನೆಟ್ಟಿಗರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಧೈರ್ಯವನ್ನು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.