ನಟ ಸುಬ್ಬು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನುಸಿರಿ ಮಲೆ ಮತ್ತು ಆರ್ಯವರ್ಧನ್ ಪಾತ್ರ ಎಷ್ಟು ಪ್ರಸಿದ್ಧಿಯನ್ನು ಪಡೆದಿದೆಯೋ ಅಷ್ಟೇ ಪ್ರಸಿದ್ಧಿಯನ್ನು ಸುಬ್ಬು ಎಂಬ ಪಾತ್ರವನ್ನು ಕೂಡ ಪಡೆದುಕೊಂಡಿದೆ. ಇನ್ನು ಸುಬ್ಬು ಪಾತ್ರಧಾರಿಯಲ್ಲಿ ನಟನೆ ಮಾಡುತ್ತಿರುವಂತಹ ವ್ಯಕ್ತಿಯ ಹೆಸರು ಶಿವಾಜಿ ರಾವ್ ಜಾದವ್, ಈ ಅದ್ಭುತ ನಟನ ಬಗ್ಗೆ ಎಷ್ಟು ಹೇಳಿದರು ಕೂಡ ಸಾಲುವುದಿಲ್ಲ ಏಕೆಂದರೆ ಈತ ನಡೆದು ಬಂದ ಜೀವನದ ಹಾದಿ ಹಾಗೂ ಎದುರಿಸಿದ ಸಂಕಷ್ಟಗಳು ಹಾಗೂ ಇಂದು ನಡೆಸುತ್ತಿರುವಂತಹ ಜೀವನ ಶೈಲಿ ಇವೆಲ್ಲವನ್ನು ನೋಡುತ್ತಿದ್ದರೆ ನಿಜಕ್ಕೂ ಕೂಡ ಯುವಕರಿಗೆ ಈತ ಸ್ಪೂರ್ತಿದಾಯಕ ವ್ಯಕ್ತಿ ಅಂತಾನೇ ಹೇಳಬಹುದು.
ಶಿವಾಜಿ ರಾವ್ ಜಾದವ್ ಅವರು ಮೂಲತಹ ಮಹಾರಾಷ್ಟ್ರದವರು ಆದರೆ ಹುಟ್ಟಿದ್ದು ಬೆಳೆದದ್ದು ಎಲ್ಲವೂ ಕೂಡ ಮೈಸೂರಿನವರೇ ನಾಟಕ ರಂಗದಲ್ಲಿ ಅತಿವಾ ಆಸಕ್ತಿಯನ್ನು ಹೊಂದಿದ್ದ ಕಾರಣ ಹೇಗಾದರೂ ಮಾಡಿ ನಾನು ನಟನ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಅಂತ ಪ್ರಾರಂಭದಲ್ಲಿ ನಾಟಕಗಳಲ್ಲಿ ಅಭಿನಯಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಅದ್ಭುತವಾದ ನಟನೆ ಹಾಗೂ ಪ್ರತಿಭೆಯನ್ನು ಹೊಂದಿದ ಕಾರಣ ಇವರಿಗೆ ಅವಕಾಶ ದೊರೆಯುತ್ತದೆ ತದನಂತರ ಧಾರಾವಾಹಿಗಳಲ್ಲಿ ನಟನೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಧಾರವಾಹಿಯಿಂದ ಬೆಳ್ಳಿ ತೆರೆಗೂ ಕೂಡ ಪಾದರ್ಪಣೆ ಮಾಡುತ್ತಾರೆ ಹಲವಾರು ಸಿನಿಮಾದಲ್ಲಿ ಹಾಸ್ಯ ಪ್ರಧಾನ ಪಾತ್ರದಲ್ಲಿ ಮತ್ತು ಪೋಷಕ ಪ್ರಧಾನ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಎಲ್ಲಾ ಕ್ಷೇತ್ರದಲ್ಲೂ ಕೂಡ ಗುರುತಿಸಿಕೊಂಡಿದ್ದರು ಇವರು ಜೀವನದಲ್ಲಿ ತುತ್ತು ಅನ್ನಕ್ಕೂ ಕೂಡ ಪರದಾಡುತ್ತಿದ್ದರು ಅಂತ ಹೇಳಿದರೆ ಯಾರೂ ಕೂಡ ಇದನ್ನು ನಂಬುವುದಿಲ್ಲ ಆದರೆ ಇದು ಅಕ್ಷರ ಸಹ ಈ ಮಾತನ್ನು ಶಿವಾಜಿ ರಾವ್ ಜಾದವ್ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಹೌದು ಅವಕಾಶಗಳು ದೊರೆತರೂ ಕೂಡ ಇವರಿಗೆ ಸಂಭಾವನೆ ಎಂಬುದು ದೊರೆಯುತ್ತಿರಲಿಲ್ಲವಂತೆ ದಿನಕ್ಕೆ 100-150 ರೂಪಾಯಿ ಸಂಭಾವನೆ ನೀಡುವುದೇ ಹೆಚ್ಚು ಅಂತೆ. ಆದರೂ ಕೂಡ ನಟನ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ನನಗೆ ಸಂಬಳ ಹೆಚ್ಚು ದೊರೆಯದೆ ಇದ್ದರೂ ಪರವಾಗಿಲ್ಲ ನನ್ನಿಷ್ಟದ ಕೆಲಸವನ್ನು ನಾನು ಮಾಡಬೇಕು ಅಂತ ಶಿವಾಜಿ ಜಾದವ್ ಅವರು ಅಷ್ಟು ಕಡಿಮೆ ಸಂಬಳಕ್ಕೆ ಒಪ್ಪಿಕೊಂಡು ನಟನೆ ಮಾಡುತ್ತಿದ್ದರಂತೆ.
ಬರುವ ಕಾಸಿನಲ್ಲಿಯೇ ಕುಟುಂಬ ನಿರ್ವಹಣೆ ಮಾಡಬೇಕಾದಂತಹ ಪರಿಸ್ಥಿತಿಯನ್ನು ಎದುರಿಸುತ್ತಾರೆ ಆದರೆ ಕಷ್ಟ ಎಂಬುದು ಮನುಷ್ಯನಿಗೆ ಯಾವಾಗಲೂ ಒಂದೇ ರೀತಿ ಇರುವುದಿಲ್ಲ ದಿನ ಕಳೆದಂತೆ ಕಷ್ಟಗಳು ಕೂಡ ಕಳೆಯುತ್ತದೆ ಎಂಬ ಮಾತು ಸತ್ಯ ಅದಕ್ಕೆ ನೈಜ ಉದಾಹರಣೆ ಅಂದರೆ ಶಿವಾಜಿ ರಾವ್ ಜಾದವ್ ಅಂತಾನೆ ಹೇಳಬಹುದು. ಪ್ರಾರಂಭದಲ್ಲಿ 150 ರುಪಾಯಿ ಸಂಭಾವನೆ ಪಡೆಯುತ್ತಿದ್ದಂತಹ ಈ ನಟನ ಅದ್ಭುತ ಪ್ರತಿಭೆಯನ್ನು ನೋಡಿ ದಿನಕ್ಕೆ 500 ರಿಂದ ಸಾವಿರ ರೂಪಾಯಿ ಸಂಬಳವನ್ನು ನೀಡುತ್ತಾರಂತೆ. ಧಾರಾವಾಹಿ ತಂಡ ನೀಡಿದ ಹಣವನ್ನು ಅನಗತ್ಯವಾಗಿ ಖರ್ಚು ಮಾಡಿದೆ ಹೇಗಾದರೂ ಮಾಡಿ ಈ ಹಣದಿಂದಲೇ ನಾನು ಮುಂದುವರಿಯಬೇಕು ಎಂದು ಪ್ಲಾನ್ ಮಾಡಿಕೊಂಡು ಆ ಹಣವನ್ನು ಬಿಸಿನೆಸ್ ನಲ್ಲಿ ಮತ್ತು ಹಲವು ಕಂಪನಿಗಳಲ್ಲಿ ಇನ್ವೆಸ್ಟ್ಮೆಂಟ್ ಮಾಡುತ್ತಾರಂತೆ.
ಎಲ್ಲಿಯೂ ಕೂಡ ಅನಗತ್ಯ ಕರ್ಚು ಮಾಡದೆ ತಮ್ಮ ಜೀವನಕ್ಕೆ ಬೇಕಾದಷ್ಟುದ್ದನ್ನು ಮಾತ್ರ ಬಳಕೆ ಮಾಡಿಕೊಂಡು ಬಾಕಿ ಉಳಿದಂತಹ ಹಣವನ್ನು ಬಿಸಿನೆಸ್ ನಲ್ಲಿ ತೊಡಗಿಸುತ್ತಾರೆ. ಇವರು ಹಾಕಿದಂತಹ ಹಣ ದುಪ್ಪಟ್ಟು ಆಗುತ್ತದೆ. ಒಂದು ಕಾಲದಲ್ಲಿ ಇವರಿಗೆ ವಾಸ ಮಾಡುವುದಕ್ಕೂ ಕೂಡ ಸ್ವಂತ ಮನೆ ಇರುವುದಿಲ್ಲ ಆದರೆ ದಿನ ಕಳೆದಂತೆ ಇವರು ಎಷ್ಟು ಶ್ರೀಮಂತರಾಗುತ್ತಾರೆ ಅಂದರೆ ಮೈಸೂರಿನಲ್ಲಿ ಸ್ವಂತ ಅಪಾರ್ಟ್ಮೆಂಟ್ ಒಂದನ್ನು ಕಟ್ಟಿಸಿಕೊಂಡಿದ್ದರೆ ಸುಮಾರು 42 ಮನೆಯನ್ನು ಇದೀಗ ಬಾಡಿಗೆಗೆ ಬಿಟ್ಟಿದ್ದಾರೆ. ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಕೂಡ ಪರದಾಡುತ್ತಿದ್ದಂತಹ ಶಿವಾಜಿ ರಾವ್ ಜಾದವ್ ಅವರು ಇಂದು ಕೋಟ್ಯಾಧಿಪತಿಯಾಗಿದ್ದಾರೆ ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕೂಡ ನಿರೂಪಿಸಿ ಕೊಟ್ಟಿದ್ದಾರೆ. ನಿಜಕ್ಕೂ ಈ ಒಂದು ಅದ್ಭುತ ನಟನ ಜೀವನ ನೋಡಿದರೆ ಎಷ್ಟೋ ಜನರ ಬದುಕಿಗೆ ಸ್ಪೂರ್ತಿ ಅಂತ ಅನಿಸುತ್ತದೆ.
ನಮ್ಮಲ್ಲಿ ಸಾಕಷ್ಟು ನಟ ನಟಿಯರು ಇದ್ದಾರೆ ನೂರಾರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಆದರೂ ಕೂಡ ಇನ್ನೂ ಸಂಕಷ್ಟದ ಜೀವನದಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಉಳಿದುಕೊಳ್ಳಲು ಮನೆ ಇಲ್ಲ ಮೂರು ಹೊತ್ತಿನ ಊಟ ಮಾಡುವುದಕ್ಕೂ ಕೂಡ ಅವರು ಶಕ್ತಿಯಾಗಿ ಇರುವುದಿಲ್ಲ ಇಂತಹ ಸಾಕಷ್ಟು ಉದಾಹರಣೆಯನ್ನು ನಾವು ನೋಡೇ ಇದ್ದೇವೆ. ಎಲ್ಲರಿಗೂ ತಿಳಿದಿರುವಂತೆ ನಟ ಪ್ರಭಾಕರ್ ಅವರು ಸುಮಾರು 200 ಅಧಿಕ ಸಿನಿಮಾದಲ್ಲಿ ನಟನೆ ಮಾಡಿದರು ಆದರೆ ಕೊನೆಯ ದಿನದಲ್ಲಿ ಆಸ್ಪತ್ರೆ ಬಿಲ್ ಪಾವತಿ ಮಾಡುವುದಕ್ಕೂ ಕೂಡ ಅವರ ಬಳಿ ಹಣ ಇರುವುದಿಲ್ಲ. ಅವರೊಬ್ಬರೇ ಮಾತ್ರವಲ್ಲದೆ ಕಳೆದ ಎರಡು ತಿಂಗಳಿನ ಹಿಂದೆ ಎಷ್ಟೇ ವಿಧಿವಶರಾದಂತಹ ಮೋಹನ್ ಜುನೇಜಾ ಇರಬಹುದು ಅಥವಾ ಕರಿಬಸಯ್ಯ ಇರಬಹುದು ಟೆನಿಸ್ ಕೃಷ್ಣ ಇರಬಹುದು ಶಂಕರ್ ಅಶ್ವಥ್ ಆಗಿರಬಹುದು ಹೀಗೆ ಕನ್ನಡದ ಬಹುತೇಕ ದಿಗ್ಗಜರು ಇನ್ನೂ ಕೂಡ ಸಂಕಷ್ಟದ ಜೀವನವನ್ನೇ ಸಾಗಿಸುತ್ತಿದ್ದಾರೆ.
ಈ ಎಲ್ಲಾ ನಟರ ಪೈಕಿ ಇಂದು ಶಿವಾಜಿ ರಾವ್ ಜಾದವ್ ಅವರು ಮಾತ್ರ ಜೀವನದಲ್ಲಿ ಯಾಕೆ ಇಷ್ಟು ಯಶಸ್ಸನ್ನು ಸಾಧಿಸಿದ್ದಾರೆ ಅಂದರೆ ಅದಕ್ಕೆ ಕಾರಣ ಅವರು ಮಾಡಿಕೊಂಡಿದ್ದಂತಹ ಪ್ಲಾನ್ ಅಂತಾನೆ ಹೇಳಬಹುದು. ಹೌದು ನಾವು ಜೀವನದಲ್ಲಿ ಏನೇ ಮಾಡಿದರು ಕೂಡ ಒಂದು ಗುರಿ ಮತ್ತು ಉದ್ದೇಶವನ್ನು ಇಟ್ಟುಕೊಳ್ಳಬೇಕು. ಆ ಗುರಿ ಮತ್ತು ಉದ್ದೇಶವನ್ನು ಇಟ್ಟುಕೊಂಡಾಗ ಮಾತ್ರ ನಾವು ಆ ಹಂತವನ್ನು ತಲುಪುವುದಕ್ಕೆ ಸಾಧ್ಯ ಶಿವಾಜಿ ರಾವ್ ಅವರು ಕೂಡ ತಮ್ಮ ಗುರಿ ಮತ್ತು ಉದ್ದೇಶದ ಬಗ್ಗೆ ಮಾತ್ರ ಗಮನ ನೀಡಿ ತಮ್ಮ ಜೀವನವನ್ನು ಇಂದು ನಿರೂಪಿಸಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.