ರಾಜ್ ಕುಟುಂಬ ಅಭಿಮಾನಿಗಳನ್ನೇ ದೇವರು ಎಂದು ನಂಬಿತ್ತು ಹಾಗೆ ರಾಜಣ್ಣ ಕೂಡ ಅಭಿಮಾನಿ ದೇವರು ಎಂದೇ ಜನರನ್ನು ಸಂಭೋಧನೆ ಮಾಡುತ್ತಿದ್ದರು. ಮುಂದುವರೆದು ಅಣ್ಣಾವ್ರ ಮಕ್ಕಳು ಕೂಡ ಇದೇ ರೀತಿ ನಡೆದುಕೊಂಡರು ಪುನೀತ್ ರಾಜಕುಮಾರ್ ಅವರು ತಮ್ಮ ಒಂದು ಸಿನಿಮಾದ ಹಾಡಿನಲ್ಲಿ ಅಭಿಮಾನಿಗಳೇ ನಮ್ಮ ಮನೆ ದೇವರು ಎಂದು ಕೂಡ ಹಾಡಿದ್ದಾರೆ. ಆದರೆ ಇದೀಗ ಪುನೀತ್ ರಾಜಕುಮಾರ್ ಅವರನ್ನು ಪ್ರತಿ ಮನೆಗಳಲ್ಲೂ ದೇವರಂತೆ ಕಾಣುತ್ತಿದ್ದಾರೆ ಈಗ ಕರ್ನಾಟಕ ಅಪ್ಪು ಅವರನ್ನು ಅಭಿಮಾನಿಗಳ ದೇವರು ಎಂದು ಹೇಳುತ್ತಿದ್ದಾರೆ ಯಾಕೆಂದರೆ ಅಪ್ಪು ಅವರು ಕರ್ನಾಟಕದ ಜನತೆಗಾಗಿ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಮತ್ತು ಅವರು ಮಾಡಿರುವ ಒಳ್ಳೆಯ ಕೆಲಸಗಳು ಈಗ ಸಾವಿರಾರು ಜನಕ್ಕೆ ಸ್ಪೂರ್ತಿಯಾಗಿ ಎಲ್ಲರೂ ಕೂಡ ಅಪ್ಪು ಅವರ ವ್ಯಕ್ತಿತ್ವವನ್ನು ಮಾದರಿಯಾಗಿ ತೆಗೆದುಕೊಂಡು ಅದೇ ರೀತಿ ಬದುಕಲು ಆಸೆ ಪಡುತ್ತಿದ್ದಾರೆ.
ಅಪ್ಪು ಅವರು ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಹಾಗಾಗಿ ಮೈಸೂರಿನ ಶಕ್ತಿಧಾಮದಲ್ಲಿ ಇರುವ ಹೆಣ್ಣು ಮಕ್ಕಳಿಗೆ ಉಚಿತವಾಗಿ ವಿದ್ಯೆ ವಸತಿ ಸೌಲಭ್ಯ ಕಲ್ಲಿಸಿಕೊಟ್ಟಿದ್ದರು, ಇದಲ್ಲದೆ ಗೋಶಾಲೆಗಳು ಅನಾಥಾಶ್ರಮಗಳು ವೃದ್ಧಾಶ್ರಮಗಳು ಮತ್ತು ರೈತರು ಕರ್ನಾಟಕ ವನ್ಯ ಸಂಪತ್ತು ಇವುಗಳ ಮೇಲೆಲ್ಲಾ ಅಪ್ಪು ಅವರಿಗೆ ವಿಶೇಷ ಕಾಳಜಿ ಇತ್ತು. ತಮ್ಮ ಕೈಗೂ ಮೀರಿ ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ಸಹಾಯವನ್ನು ಅರಸಿ ಅಪ್ಪುವನ್ನು ಹುಡುಕಿಕೊಂಡು ಬರುತ್ತಿದ್ದ ಯಾರೊಬ್ಬರನ್ನು ಯಾರನ್ನೂ ಬರಿ ಕೈಯಲ್ಲಿ ಅಪ್ಪು ಹಿಂದಿರುಗಿಸುತ್ತಿರಲಿಲ್ಲ. ಹೀಗಾಗಿ ಇಡೀ ಕರ್ನಾಟಕ ಇಂದು ತಮ್ಮ ಮನೆ ಮಗನನ್ನು ಕಳೆದುಕೊಂಡ ದುಃಖದಲ್ಲಿ ಮುಳುಗು ಹೋಗಿದೆ. ಇದರ ನಡುವೆ ಕರ್ನಾಟಕ ಚಲನಚಿತ್ರ ಮಂಡಳಿಯ ಅಪ್ಪು ಅವರ ಕುರಿತಾದ ಕಿರುಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಈ ಕಾರ್ಯಕ್ರಮಕ್ಕೆ ತಮಿಳು ತೆಲುಗು ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ಕಲಾವಿದರು ಆಗಮಿಸಿದ್ದರು ಮತ್ತು ಕರ್ನಾಟಕದ ರಾಜಕೀಯ ಮುಖಂಡರುಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದರಲ್ಲಿ ಅಪ್ಪು ಅವರ ಇಡೀ ಜೀವನ ಕುರಿತಾದ ಮಾಹಿತಿ ಇದೆ 1975ರಲ್ಲಿ ಚೆನ್ನೈನ ಆಸ್ಪತ್ರೆಯಲ್ಲಿ ನಕ್ಷತ್ರ ಒಂದು ಜನಿಸಿತು ಎಂದು ಶುರುವಾಗುವ ಇದು ಬಾಲ್ಯ ಜೀವನ ಹೇಗಿತ್ತು ಮತ್ತೆ ಅವರು ಸಿನಿಮಾ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಿದ್ದು ಹೇಗೆ ಮತ್ತು ಕುಟುಂಬದವರ ಜೊತೆ ಅವರ ಒಡನಾಟ ಕೊನೆಗೆ ಅಪ್ಪು ಮಾಡಿದ ಸಾಧನೆಗೆ ಅವರ ಸಾವಿನ ದಿನ ಅಭಿಮಾನಿಗಳು ಬಂದು ಅಂತಿಮ ದರ್ಶನ ಪಡೆದು ಸಲ್ಲಿಸಿದ ಗೌರವ ಈ ಎಲ್ಲವನ್ನು ಕೂಡ ಅದು ಒಳಗೊಂಡಿದೆ. ಈ ಕಿರುಚಿತ್ರವನ್ನು ನೋಡುತ್ತಿದ್ದ ಹಾಗೆಯೇ ಶಿವಣ್ಣ ಅವರು ಅಲ್ಲೇ ಭಾವುಕರಾಗಿದ್ದಾರೆ. ಅಪ್ಪು ಆಗಲಿಲ್ಲ ದಿನದಿಂದಲೂ ಶಿವಣ್ಣ ಅವರು ಭಾವನಾತ್ಮಕವಾಗಿ ಕುಸಿದು ಹೋಗಿದ್ದಾರೆ ಎಂದೇ ಹೇಳಬಹುದು. ಅಪ್ಪು ಅವರು ಒಬ್ಬ ನಟ ಅನ್ನುವುದಕ್ಕಿಂತ ಹೆಚ್ಚಾಗಿ ಸಮಾಜ ಸೇವೆಯಲ್ಲಿ ಅವರು ಗುರುತಿಸಿಕೊಂಡ ಪರಿಯಿಂದ ಇಡೀ ಕರ್ನಾಟಕದ ಜನತೆ ಇಂದು ಅವರನ್ನು ದೇವರ ರೂಪದಲ್ಲಿ ಕಾಣುತ್ತಿದ್ದಾರೆ.
ಯಾವುದೇ ಜಾತ್ರೆ ಇದ್ದರೂ ಕೂಡ ಅಲ್ಲಿ ಅಪ್ಪು ಫೋಟೋ ಕೂಡ ಮೆರವಣಿಗೆ ಹೊರಡುತ್ತದೆ. ಈಗ ಗಣೇಶ ಹಬ್ಬದ ಪ್ರಯುಕ್ತ ಗಣೇಶನ ವಿಗ್ರಹದ ಜೊತೆ ಅಪ್ಪುವಿನ ವಿಗ್ರಹ ಕೂಡ ತಯಾರಾಗುತ್ತಿದೆ. ಇದರಲ್ಲಿ ಗಣೇಶನಿಗೆ ಮೋದಕ ಬೀಸುತ್ತಿರುವ ಅಪ್ಪು ಗಣೇಶನ ಪಕ್ಕ ಕುಳಿತಿರುವ ಹಪ್ಪು ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಅಪ್ಪು ಎದುರುಗಡೆ ಕುಳಿತಿರುವ ಗಣೇಶ, ಗಣೇಶ ಅಪ್ಪು ಅವರ ಕೆನ್ನೆ ಸವರಿತ್ತಿರುವುದು ಈ ರೀತಿ ಅನೇಕ ವಿಗ್ರಹಗಳು ತಯಾರಾಗಿ ಅಭಿಮಾನಿಗಳು ಈ ವಿಗ್ರಹಗಳನ್ನು ಖರೀದಿಸಿ ಇಬ್ಬರಿಗೂ ಪೂಜೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಇನ್ನೊಂದು ವಿಶೇಷ ಏನೆಂದರೆ, ಕನ್ನಡದ ನಟ ನೀನಾಸಂ ಸತೀಶ್ ಅವರು ಅವರ ದೇವರ ಮನೆಯಲ್ಲಿ ಉಳಿದ ಫೋಟೋಗಳ ಜೊತೆ ಅಪ್ಪು ಅವರ ಫೋಟೋವನ್ನು ಕೂಡ ಇಟ್ಟು ಪ್ರತಿದಿನ ತಾವೇ ಪೂಜೆ ಮಾಡುತ್ತಿದ್ದಾರೆ.