ದಚ್ಚು ಮತ್ತು ಕಿಚ್ಚ ಸ್ಯಾಂಡಲ್ ವುಡ್ ಕಂಡ ಜನಪ್ರಿಯ ಸ್ನೇಹ ಜೋಡಿ. ಇವರಿಬ್ಬರ ಸ್ನೇಹ ಒಂದು ಕಾಲದಲ್ಲಿ ಎಷ್ಟರಮಟ್ಟಿಗೆ ಇತ್ತು ಎಂದರೆ ಯಾವುದೇ ಸಿನಿಮಾರಂಗಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಇಬ್ಬರೂ ಕೂಡ ಒಬ್ಬರ ಪಕ್ಕ ಒಬ್ಬರು ಕುಳಿತುಕೊಳ್ಳುತ್ತಿದ್ದರು. ಊಟದಲ್ಲೂ ಸಹ ಒಬ್ಬರ ಜೊತೆಗೆ ಒಬ್ಬರು ಕುಳಿತು ಊಟ ಮಾಡುತ್ತಿದ್ದರು ಹಾಗೆ ಕಾರ್ಯಕ್ರಮದಿಂದ ತೆರಳುವಾಗ ಇಬ್ಬರೂ ಕೂಡ ಒಂದೇ ವಾಹನದಲ್ಲಿ ಹೊರಡುತ್ತಿದ್ದರು. ಕೆಲ ಕಾರ್ಯಕ್ರಮಗಳಲ್ಲಿ ಸ್ಟೇಜ್ ಮೇಲೆ ಒಟ್ಟಿಗೆ ಹೆಜ್ಜೆ ಹಾಕಿದ್ದೂ ಇದೆ, ಒಟ್ಟಿಗೆ ಮಾತನಾಡಿದ್ದು ಇದೆ. ಇಬ್ಬರು ಒಂದೇ ಕಾಲಮಾನದಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟಿಕೊಟ್ಟಿದ್ದರೂ ಇವರಿಬ್ಬರ ನಡುವೆ ಆ ಸಮಯದಲ್ಲಿ ಯಾವುದೇ ಬಾಂಧವ್ಯ ಇರಲಿಲ್ಲ. ಒಂದು ದಶಕದ ನಂತರ ಇವರಿಬ್ಬರ ನಡುವೆ ಸ್ನೇಹ ಚಿಗುರುತ್ತದೆ. ಮತ್ತು ಅದು ಎಷ್ಟು ಗಾಢವಾಗಿ ಬೆಳೆಯುತ್ತದೆ ಎಂದರೆ ಇಬ್ಬರೂ ಸಹೋದರರು ಎನ್ನುವಷ್ಟು ಇಬ್ಬರಲ್ಲೂ ಆತ್ಮೀಯತೆ ತುಂಬಿರುತ್ತದೆ.
ಆದರೆ ಆ ಸ್ನೇಹಕ್ಕೆ ವಿಧಿ ಹೆಚ್ಚು ದಿನ ಆಯಸ್ಸು ಕೊಡದೆ ಕಿತ್ತುಕೊಂಡು ಬಿಟ್ಟಿದೆ. ಇದೀಗ ಇಬ್ಬರು ಒಬ್ಬರ ಮುಖ ಕಂಡರೆ ಒಬ್ಬರು ಆಗದವರಂತೆ ವರ್ತಿಸುತ್ತಿದ್ದಾರೆ. ಇವರಿಬ್ಬರಿಗಿಂತ ಹೆಚ್ಚಾಗಿ ಇವರಿಬ್ಬರ ಅಭಿಮಾನಿಗಳು ಎಂದು ಹೆಸರು ಹೇಳಿಕೊಂಡು ಕೆಲವು ಕಿಡಿಗೇಡಿಗಳು ಮಾಡುವ ನೀಚ ಕೆಲಸದಿಂದ ಇಬ್ಬರ ನಡುವೆ ಇದ್ದ ಅಂತರ ಕಂದಕದಷ್ಟು ಬೆಳೆದು ಹೋಗಿದೆ. ಈಗಲೂ ಕೂಡ ಇವರಿಬ್ಬರ ನಿಜ ಅಭಿಮಾನಿಗಳು ಇಬ್ಬರು ಒಂದಾದರೆ ಸಾಕು ಇಬ್ಬರನ್ನು ಒಟ್ಟಿಗೆ ತೆರೆ ಮೇಲೆ ಯಾವಾಗ ನೋಡುತ್ತೇವೊ ಇಬ್ಬರು ಯಾವಾಗ ಒಟ್ಟಿಗೆ ಸಿನಿಮಾ ಮಾಡುತ್ತಾರೋ ಮತ್ತೆ ಮೊದಲಿನಂತೆ ಯಾವಾಗ ಆಗುತ್ತಾರೋ ಎಂದು ಕಾಯುತ್ತಿದ್ದಾರೆ, ಮತ್ತು ಪ್ರತಿಬಾರಿಯೂ ಇದಕ್ಕೆ ಸಂಬಂಧಪಟ್ಟ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗ ಕಿಚ್ಚನಿಗೆ ಹುಟ್ಟು ಹಬ್ಬದ ಸಂಭ್ರಮ ಬೆಂಗಳೂರಿನ ತಮ್ಮ ನಿವಾಸದಲ್ಲಿ ಪತ್ನಿ ಪ್ರಿಯಾ ಸುದೀಪ್ ಹಾಗೂ ಪುತ್ರಿ ಸ್ಯಾನ್ವಿ ಸುದೀಪ್ ಅವರು ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.
ಕಳೆದ ಮೂರು ವರ್ಷಗಳಿಂದ ಸುದೀಪ್ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅಭಿಮಾನಿಗಳೊಂದಿಗೆ ತಮ್ಮ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ವೈರಲಾಗುತ್ತಿದೆ ಆ ಫೋಟೋದಲ್ಲಿ ಸುದೀಪ್ ಹಾಗೂ ದರ್ಶನ್ ಅವರು ಒಟ್ಟಿಗೆ ಇಂದು ಕಾಣಿಸಿಕೊಂಡಿರುವ ರೀತಿ ಫೋಟೋ ತೆಗೆಯಲಾಗಿದೆ. ಆದರೆ ಇದು ನಿಜವಾಗಿಯೂ ಕ್ಯಾಮೆರಾ ಅಲ್ಲಿ ಸೆರೆ ಹಿಡಿದಿರುವ ಫೋಟೋ ಅಲ್ಲ ಬದಲಿಗೆ ಕಲಾವಿದನೊಬ್ಬನ ಕಲ್ಪನೆಯಲ್ಲಿ ಈ ರೀತಿಯ ಫೋಟೋ ಹೊರಹೊಮ್ಮಿದೆ. ಅವರಿಬ್ಬರು ಇಂದು ಒಟ್ಟಾಗಿ ಇದ್ದಿದ್ದರೆ ಕಿಚ್ಚನ ಹುಟ್ಟುಹಬ್ಬದ ಸಂಭ್ರಮದಲ್ಲಿ ದಚ್ಚು ಭಾಗಿಯಾಗಿರುತ್ತಿದ್ದರು ಆಗ ಅದು ಈ ರೀತಿ ಇರುತ್ತಿತ್ತು ಎಂದು ಅವನು ಕಲ್ಪಿಸಿಕೊಂಡು ಈ ಎಡಿಟ್ ಮಾಡಿದ್ದಾನೆ.
ಈ ಹಿಂದೆ ಕ್ರಾಂತಿ ಸಿನಿಮಾದ ಪ್ರಚಾರದ ಪೋಸ್ಟರ್ ಫೋಟೋವನ್ನು ಸುದೀಪ್ ಅವರು ಧರಿಸಿರುವ ರೀತಿ ಹಾಗೆ ಸುದೀಪ್ ಅವರ ವಿಕ್ರಂತ್ ರೋಣ ಸಿನಿಮಾದ ಪೋಸ್ಟರ್ ಇರುವ ಟೀ ಶರ್ಟ್ ಅನ್ನು ದರ್ಶನ್ ಅವರು ಧರಿಸಿ ಪಕ್ಕದಲ್ಲಿ ನಿಂತಿರುವ ಫೋಟೋ ಒಂದು ಇದೇ ರೀತಿ ಎಡಿಟ್ ಮಾಡಿ ವೈರಲ್ ಮಾಡಲಾಗಿತ್ತು. ಆ ಫೋಟೋ ಕೂಡ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಈಗ ವೈರಲ್ ಆಗಿರುವ ಈ ಫೋಟೋವನ್ನು ನೋಡುತ್ತಿದ್ದರೆ ಇದನ್ನಾದರೂ ನೋಡಿದ ಮೇಲೆ ಇಬ್ಬರ ಮನದಲ್ಲಿರುವ ಕೋಪ ಸ್ವಲ್ಪ ಆದರೂ ಕರಗಿ ಮತ್ತೆ ಅವರಿಬ್ಬರು ಒಟ್ಟಿಗೆ ಇದೇ ರೀತಿ ಕಾಣಿಸಿಕೊಳ್ಳಲಿ ಎಂದು ಆಸೆ ಪಡುವ ರೀತಿ ಇದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.