Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentವೈರಲ್ ಆಯ್ತು ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ ಹನಿಮೂನ್ ಫೋಟೋಸ್

ವೈರಲ್ ಆಯ್ತು ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ ಹನಿಮೂನ್ ಫೋಟೋಸ್

ಕಳೆದ ವಾರ ಮದುವೆಯಾದ ತಮಿಳಿನ ಕಿರುತೆರೆ ನಟಿ ಮಹಾಲಕ್ಷ್ಮಿ ಹಾಗೂ ಲಿಬ್ರಾ ಸಂಸ್ಥೆಯ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಅವರ ಮದುವೆ ವಿಚಾರ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ಇವರಿಬ್ಬರ ಮದುವೆ ಫೋಟೋ ವೈರಲ್ ಆಗುತ್ತಿದ್ದಂತೆ ಫೇಸ್ಬುಕ್ ಯೌಟ್ಯೂಬ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲೂ ಕೂಡ ಇವರಿಬ್ಬರ ಜೋಡಿಯ ಬಗ್ಗೆ ಮಾತುಕತೆ. ಇಂತಹ ಮಾತುಗಳಲ್ಲಿ ಹಾಗೂ ಕಮೆಂಟ್ ಗಳಲ್ಲಿ ಪಾಸಿಟಿವ್ ಇಂಥ ನೆಗೆಟಿವ್ ಆಗಿ ಮಾತನಾಡಿದ ಜನಗಳೇ ಹೆಚ್ಚು. ತಮಿಳುನಾಡಿನಲ್ಲಿ ಆದ ಈ ವಿವಾಹ ಹೆಚ್ಚು ಕಡಿಮೆ ಭಾರತದಾದ್ಯಂತ ಟ್ರೋಲ್ ಆಗುವ ಮೂಲಕ ಫೇಮಸ್ ಆಯಿತು.

ಈಗ ಸದ್ಯಕ್ಕೆ ಮದುವೆ ಮುಗಿಯಿತು ವಾರವಾಗಿದ್ದರೆ ಕೂಡ ಜೋಡಿ ಬಗೆಗಿನ ಮಾತು ಕಥೆ ಹಾಗೂ ಅವರ ಬಗ್ಗೆ ವಿಷಯಗಳ ಹುಡುಕಾಟ ಇನ್ನು ನಿಂತಿಲ್ಲ. ಈ ರೀತಿ ಆಸಕ್ತಿ ತೋರಿದವರಿಗೆ ಹಲವಾರು ಅಚ್ಚರಿಕರ ವಿಷಯಗಳ ತಿಳಿದಿದೆ. ಕಿರುತೆರೆಯ ಧಾರಾವಾಹಿಗಳ ಮೂಲಕ ಫೇಮಸ್ ಆದ ಮಹಾಲಕ್ಷ್ಮಿ ಅವರು ಅರಸಿ ಎನ್ನುವ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ತಮ್ಮ ಕೆರಿಯರ್ ಆರಂಭಿಸಿದರು ಅದಕ್ಕೂ ಮುನ್ನ ಸನ್ ಮ್ಯೂಸಿಕ್ ಚಾನೆಲ್ ಅಲ್ಲಿ ವಿಡಿಯೋ ಜಾಕಿ ಆಗಿದ್ದ ಇವರು ಈಗಲೂ ಸಹ ಅನ್ಬೇ ಎನ್ನುವ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದಾರೆ.

ಇವರು ಧಾರವಾಹಿಯಲ್ಲಿ ಅಭಿನಯ ಮಾಡುತ್ತಿದ್ದ ಸಂದರ್ಭದಲ್ಲಿಯೇ ಅನಿಲ್ ಎನ್ನುವವರ ಜೊತೆ ಮೊದಲ ವಿವಾಹವಾಗಿದ್ದರು, ಈ ಜೋಡಿಗೆ ಸಚಿನ್ ಎನ್ನುವ ಪುತ್ರನು ಕೂಡ ಇದ್ದಾರೆ. ಆದರೆ ವಿವಾಹವಾದ ಕೆಲವು ವರ್ಷಗಳಲ್ಲಿ ಈ ಮದುವೆ ಮುರಿದು ಬಿದ್ದಿದ್ದು ಮಹಾಲಕ್ಷ್ಮಿ ಒಂಟಿಯಾಗಿದ್ದರು. ಅಲ್ಲದೆ ಇವರ ಹೆಸರು ಕಿರುತೆರೆ ಸಹಾ ಕಲಾವಿದರ ಹೆಸರ ಜೊತೆ ತಳುಕು ಹಾಕಿಕೊಂಡಿತ್ತು. ಆ ಸಮಯದಲ್ಲಿ ಅದು ಮಧ್ಯಮದಲ್ಲೆಲ್ಲ ಪ್ರಸಾರವಾಗಿ ವಿವಾದ ಕೂಡ ಆಗಿತ್ತು ರವೀಂದ್ರನ್ ಅವರು ಒಬ್ಬ ನಟ ಇಲ್ಲದೆ ಅವರು ನಿರ್ಮಾಪಕನಾಗಿ ನಿರ್ದೇಶಕನಾಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಲೀಬ್ರಾ ಎನ್ನುವ ಸಂಸ್ಥೆಯನ್ನು ಕೂಡ ಕಟ್ಟಿರುವ ಇವರು ಆ ಸಂಸ್ಥೆಯ ನಿರ್ಮಾಪಕರಾಗಿದ್ದಾರೆ ಅಲ್ಲದೆ ತಮ್ಮದೇ ಯುಟ್ಯೂಬ್ ಚಾನೆಲ್ ಕೂಡ ಹೊಂದಿರುವ ರವೀಂದ್ರನ್ ಅವರು ಒಬ್ಬ ಫ್ಯಾಟ್ ಮ್ಯಾನ್ ಆಗಿದ್ದಾರೆ. ಫ್ಯಾಟ್ ಮ್ಯಾನ್ ಫ್ಯಾಕ್ಟ್ ಎನ್ನುವ ವಿಷಯದ ಬಗ್ಗೆ ಹಲವು ವಿಚಾರಮಯ ವಿಷಯಗಳನ್ನು ಹಂಚಿಕೊಂಡಿರುವ ವಿಡಿಯೋಗಳು ಯೂಟ್ಯೂಬ್ ಅಲ್ಲಿ ಲಭ್ಯವಿದೆ ಇವರೊಬ್ಬ ಮೋಟಿವೇಶನ್ ಸ್ಪೀಕರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಕೂಡ ತಮ್ಮ ಮೊದಲ ವಿವಾಹವನ್ನು ಮರೆತುಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದರು ಈಗ ಮಹಾಲಕ್ಷ್ಮಿ ಹಾಗೂ ರವೀಂದ್ರನ್ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ.

ಕಿರುತೆರೆಯ ನಟಿಯಾಗಿರುವ ಮಹಾಲಕ್ಷ್ಮಿ ಅವರು ಫ್ಯಾಟ್ ಮ್ಯಾನ್ ಆಗಿರುವ ರವೀಂದ್ರನ್ ಅವರನ್ನು ಮದುವೆ ಆಗಿರುವುದರಿಂದಲೇ ಇವರಿಬ್ಬರ ಜೋಡಿಯು ಟ್ರೋಲ್ ಆಗುತ್ತಿರುವುದು. ಹಣದ ಆಸೆಗಾಗಿ ಈ ಮದುವೆ ನಡೆದಿದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬಂದಿದ್ದವು ಇವರನ್ನು ಟ್ರೋಲ್ ಮಾಡುತ್ತಿದ್ದ ಸಂದರ್ಭದಲ್ಲಿ ಮಹಾಲಕ್ಷ್ಮಿಯವರು ಖಾರವಾಗಿ ಪ್ರತಿಕ್ರಿಯಿಸಿದ್ದರು. ವಿವಾಹ ಆದ ಬಳಿಕವೂ ಇವರಿಬ್ಬರೂ ಸಂತೋಷದಿಂದಿ ಕಾಲ ಕಳೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಈ ಜೋಡಿಯಲ್ಲಿ ಇವರಿಬ್ಬರ ನಡುವೆ ಇರುವ ಭಾಂದವ್ಯ ಎಷ್ಟು ಗಾಢವಾಗಿದೆ ಎನ್ನುವುದನ್ನು ಕಾಣಬಹುದು.

ಮತ್ತು ಇತ್ತೀಚೆಗೆ ಸಂದೇಶಗಳನ್ನು ಎದುರಿಸುತ್ತಿರುವ ರವೀಂದ್ರನ್ ಅವರು ಇವರಿಬ್ಬರ ನಡುವೆ ಆದ ಸ್ನೇಹ ಪ್ರೀತಿ ಹಾಗೂ ಮದುವೆ ತನಕ ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗೂ ಮಹಾಲಕ್ಷ್ಮಿ ಅವರು ಮದುವೆ ಆಗುವುದಕ್ಕೆ ಹಾಕಿದ್ದ ಕಂಡಿಶನ್ ಬಗ್ಗೆ ಕೂಡ ಇವರು ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಸುಂದರ ಯುವತಿಯ ಕೈ ಹಿಡಿದ ಈ ನಿರ್ಮಾಪಕನೇ ಅದೃಷ್ಟ ಅಂತ ಹೇಳಬಹುದು ಪ್ರೀತಿಗೆ ಕಣ್ಣಿಲ್ಲ ಎಂಬುದು ಇದಕ್ಕೆ ನೋಡಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.