ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಟೀಮ್ ಜೊತೆ ಅನುಶ್ರೀ ಮಾಡಿದ ಈ ಟಪಾಂಗುಚಿ ಡಾನ್ಸ್ ನೋಡಿದ್ರೆ ನಿಂತಲ್ಲೇ ಹೆಜ್ಜೆ ಹಾಕ್ತೀರಾ.

ಆಂಕರ್ ಅನುಶ್ರೀ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕರ್ನಾಟಕದ ಮನೆ ಮಾತಾಗಿದ್ದಾರೆ ಅನುಶ್ರೀ ಅವರ ನಿರೂಪಣೆ ಅಂದರೆ ಸಾಕು ಎಲ್ಲರೂ ಕೂಡ ಮುಗಿ ಬೀಳುತ್ತಾರೆ. ಏಕೆಂದರೆ ಇವರ ಸ್ಪಷ್ಟ ಕನ್ನಡ ಮಾತನಾಡುವ ಶೈಲಿ ರಂಜಿಸುವಂತಹ ಕಲೆ ಇವೆಲ್ಲವೂ ಕೂಡ ಕರ್ನಾಟಕದ ಜನತೆಗೆ ಬಹಳ ಇಷ್ಟವಾಗಿದೆ. ಈ ಕಾರಣಕ್ಕಾಗಿಯೇ ಆಂಕರ್ ಅನುಶ್ರೀ ಅವರ ಕಾರ್ಯಕ್ರಮ ಅಂದರೆ ಎಲ್ಲಾ ಪ್ರೇಕ್ಷಕರು ಕೂಡ ತಪ್ಪದೇ ವೀಕ್ಷಣೆ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಟಿವಿ ಪ್ರಮೋಷನ್ ಕಾರ್ಯಗಳು ಇರಬಹುದು ಸಿನಿಮಾ ಕಾರ್ಯಗಳು ಇರಬಹುದು ಅಥವಾ ಡ್ಯಾನ್ಸಿಂಗ್ ಕಾರ್ಯಕ್ರಮ ಇರಬಹುದು ಎಲ್ಲದರಲ್ಲೂ ಕೂಡ ಅನುಶ್ರೀ ಅವರೇ ಇರಬೇಕು ಎಂಬ ಬೇಡಿಕೆಯನ್ನು ಕರ್ನಾಟಕದ ಜನತೆ ಇಟ್ಟಿದ್ದಾರೆ.

ಸದ್ಯಕ್ಕೆ ಹೇಳಬೇಕಾದರೆ ಈಗ ಇರುವಂತಹ ಎಲ್ಲಾ ನಿರೂಪಕರ ಪೈಕಿ ಅನುಶ್ರೀ ಅವರೇ ನಂಬರ್ ಒನ್ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಆಂಕರ್ ಅನುಶ್ರೀ ಅವರು ಸದಾ ಕಾಲ ಯಾವುದಾದರೂ ಒಂದು ಆಕ್ಟಿವಿಟಿಯಲ್ಲಿ ಸಕ್ರಿಯರಾಗಿರುತ್ತಾರೆ ಇವರು ಕೇವಲ ನಿರೂಪಣೆ ಮಾಡುವುದರಲ್ಲಿ ಮಾತ್ರ ಹೆಸರುವಾಸಿಯಾಗಿಲ್ಲ ಬದಲಾಗಿ ಡ್ಯಾನ್ಸ್ ಮಾಡುವುದರಲ್ಲೂ ಕೂಡ ಪ್ರಾವೀಣ್ಯತೆಯನ್ನು ಹೊಂದಿದ್ದರೆ. ಈ ಕಾರಣಕ್ಕಾಗಿ ಕಸ್ತೂರಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಡ್ಯಾನ್ಸಿಂಗ್ ಕಾರ್ಯಕ್ರಮ ಒಂದರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಅದರಲ್ಲಿ ವಿಜೇತರು ಕೂಡ ಆಗಿದ್ದರು.

ಡ್ಯಾನ್ಸ್ ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ ಮತ್ತು ಪ್ರವೀಣ್ಯತೆ ಹೊಂದಿದ್ದರು ಕೂಡ ಸದ್ಯಕ್ಕೆ ಅನುಶ್ರೀ ಅವರು ನಿರೂಪಕಿಯಾಗಿಯೇ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಅನುಶ್ರೀ ಅವರು ಡಾನ್ಸ್ ಮೇಲೆ ಇರುವಂತಹ ಹೊಲವನ್ನು ಆಗಾಗ ವ್ಯಕ್ತಪಡಿಸುತ್ತಾರೆ. ಸಮಯ ಸಿಕ್ಕಾಗೆಲ್ಲ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ ಅಷ್ಟೇ ಅಲ್ಲದೆ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಭಾಗವಹಿಸುವಂತಹ ಸ್ಪರ್ಧಿಗಳು ಆಗಿರಬಹುದು ಅಥವಾ ಮೆಂಟರ್ ಗಳು ಆಗಿರಬಹುದು ಡ್ಯಾನ್ಸ್ ಮಾಸ್ಟರ್ ಆಗಿರಬಹುದು ಯಾರೇ ಆಗಿದ್ದರೂ ಕೂಡ ಅವರ ಜೊತೆಗೆ ಹೆಜ್ಜೆ ಹಾಕುವುದರ ಮೂಲಕ ಸಮಯವನ್ನು ಕಳೆಯುತ್ತಾರೆ.

ಈಗಲೂ ಕೂಡ ಅನುಶ್ರೀ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕೋರಿಯೋಗ್ರಾಫರ್ ಆದಂತಹ ರುದ್ರ ಮಾಸ್ಟರ್ ಮಂಜು ಮಾಸ್ಟರ್ ರವಿ ಮಾಸ್ಟರ್ ಅರುಣ್ ಮಾಸ್ಟರ್ ಸೇರಿದಂತೆ ಸಾಕಷ್ಟು ಕಲಾವಿದರ ಒಟ್ಟಿಗೆ ಹೆಜ್ಜೆಯನ್ನು ಹಾಕಿದರೆ ಈ ಡಾನ್ಸ್ ನೋಡಿದರೆ ಎಂತವರಾದರೂ ಕೂಡ ಎದ್ದು ಕುಣಿಯುತ್ತಾರೆ. ಹೌದು ಅಲ್ಲಿ ನೋಡು ಗಣೇಶ, ಇಲ್ಲಿ ನೋಡು ಗಣೇಶ, ಮೇಲೆ ನೋಡು ಗಣೇಶ, ಕೆಳಗೆ ನೋಡು ಗಣೇಶ ಎಂಬ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಅನುಶ್ರೀ ಅವರು ಎಂಜಾಯ್ ಮಾಡುತ್ತಿದ್ದಾರೆ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಅವರು ಮಾಡಿದಂತಹ ಈ ಡಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸನ್ನು ಗೆದ್ದಿದೆ.

ಅಷ್ಟೇ ಅಲ್ಲದೆ ಅನುಶ್ರೀ ಅವರ ಈ ಟಪಂಗುಚಿ ಡ್ಯಾನ್ಸನ್ನು ನೋಡಿದಂತಹ ಕೆಲವು ಅಭಿಮಾನಿಗಳು ಕೂಡ ಹೆಜ್ಜೆ ಹಾಕಿದ್ದಾರೆ. ಅನುಶ್ರೀ ಅವರು ಬಹು ಬೇಡಿಕೆಯ ನಿರೂಪಕಿ ಈ ಕಾರಣಕ್ಕಾಗಿ ಅನುಶ್ರೀ ಅವರಿಗೆ ಎಂಜಾಯ್ ಮಾಡುವುದಕ್ಕೆ ಸಮಯ ಸಿಗುವುದಿಲ್ಲ ಆದರೂ ಕೂಡ ಬಿಡುವಿನ ಸಮಯದಲ್ಲಿ ತಮ್ಮ ಟೀಮ್ ಒಟ್ಟಿಗೆ ಹೆಚ್ಚಿನ ಸಮಯ ಕಳೆಯುವುದಕ್ಕೆ ಇಷ್ಟಪಡುತ್ತಾರೆ. ಡ್ಯಾನ್ಸ್ ಮಾಡುವುದಕ್ಕೆ ಅವಕಾಶ ಸಿಕ್ಕರೆ ಸಾಕು ಎಂದು ಕಾಯುವ ಅನುಶ್ರೀ ಅವರು ಕೆಲವೊಮ್ಮೆ ವೇದಿಕೆಯ ಮೇಲೆ ಇನ್ನು ಕೆಲವೊಮ್ಮೆ ಶೂಟಿಂಗ್ ನಡೆಯುವಂತಹ ಜಾಗದಲ್ಲಿ ಮತ್ತು ಕೆಲವೊಮ್ಮೆ ಕ್ಯಾರವನ್ ನಲ್ಲಿ ಹೆಜ್ಜೆ ಹಾಕುತ್ತಾರೆ. ಅನುಶ್ರೀ ಅವರು ಮಾಡಿದ ಈ ಡಾನ್ಸ್ ನೋಡಿ, ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

Leave a Comment

WhatsApp Group Join Now
Telegram Group Join Now