ಪುನೀತ್ ರಾಜಕುಮಾರ್ ಅವರು ಅಪ್ಪು ಎಂದೇ ಕರ್ನಾಟಕದ ಜನರಿಂದ ಕರೆಸಿಕೊಳ್ಳುತ್ತಿದ್ದರು ಇವರು ದೊಡ್ಡಮನೆಯ ರಾಜಕುಮಾರನಾಗಿ, ಅಭಿಮಾನಿಗಳ ಮನಸ್ಸನ್ನು ಅರಸು ಆಗಿ, ಪೃಥ್ವಿಯೇ ಮೆಚ್ಚುವಂತ ರಾಜ್ ಆಗಿ, ರಾಮನಂತ ಗುಣವುಳ್ಳ ವೀರ ಕನ್ನಡಿಗನಾಗಿ, ಆಕಾಶದೆತ್ತರ ಆದರ್ಶ ಗುಣಗಳನ್ನು ಹೊಂದಿದ್ದ ಅಪ್ಪು, ಅಭಿಮಾನಿಗನ್ನು ಸದಾ ರಂಜಿಸುತ್ತಿದ್ದ ದೊಡ್ಮನೆ ಹುಡುಗ ಆಗಿ, ಅಂಜನಿಪುತ್ರನಂತೇ ಸಾಹಸಗಳನ್ನು ಮಾಡುತ್ತಾ ಗಂಧದಗುಡಿ ಬಗ್ಗೆ ಕಾಳಜಿ ವಹಿಸುತ್ತಾ ಯುವಕರಿಗೆ ಸದಾ ಸ್ಪೂರ್ತಿ ತುಂಬುವ ಯುವರತ್ನನಾಗಿ, ಯಾರೇ ಕೂಗಾಡಿದರು ಪ್ರೀತಿ ಮಾತುಗಳಿಂದ ಕರಗಿಸುತ್ತಾ ಅವರೊಂದಿಗೆ ಸ್ನೇಹ ಮೈತ್ರಿ ಮಾಡಿಕೊಳ್ಳುತ್ತಿದ್ದ ಜಾಕಿಯಾಗಿ. ದೇಶ ಸೇವೆ ಬಗ್ಗೆ ಹೆಮ್ಮೆ ಮೂಡಿಸುವಂತಹ ಜೇಮ್ಸ್ ಎನ್ನುವಂತಹ ಸಿನಿಮಾಗಳನ್ನು ಮಾಡುತ್ತಿದ್ದ ವಂಶಿಯಾಗಿ, ಸ್ನೇಹ ಪ್ರೀತಿಯ ಬೆಲೆಯನ್ನು ಸಾರುವ ಹುಡುಗರ ಜೊತೆ ಇದ್ದು ಬಾಲ್ಯದಿಂದಲೇ ಭಾಗ್ಯವಂತರನಾಗಿ, ಭಕ್ತ ಪ್ರಹ್ಲಾದ ನಂತಹ ಅದ್ಭುತ ಪಾತ್ರಗಳನ್ನು ನಿರ್ವಹಿಸುತ್ತಿದ್ದ ನಟಸಾರ್ವಭೌಮನಾಗಿದ್ದರು.
ಚಲಿಸುವ ಮೋಡಗಳಲ್ಲಿ ಮರೆಯಾಗಿರುವ ನಕ್ಷತ್ರಗಳಂತೆ ನಮ್ಮ ಪವರ್ ಸ್ಟಾರ್ ಜೀವನ ನಡೆಸಿದರು ಅವರು ತಮ್ಮ ಅದ್ಭುತ ಅಭಿನಯದ ಜೊತೆಗೆ ಉತ್ತಮ ಕಂಠದಿಂದ ಆದರ್ಶ ಗುಣ ವ್ಯಕ್ತಿತ್ವಗಳಿಂದ ಮತ್ತು ಡ್ಯಾನ್ಸ್ , ಜಿಮ್, ವ್ಯಾಯಾಮ ಎಂದು ದೇಹ ದಂಡಿಸುವ ಅಭ್ಯಾಸಗಳಲ್ಲಿ ಭಾಗಿಯಾಗಿ ಎಲ್ಲರಿಗೂ ಸ್ಫೂರ್ತಿಯಾಗಿದ್ದವರು. ಅಪ್ಪು ಅವರ ಮುಗ್ಧ ನಗು, ಸರಳ ವ್ಯಕ್ತಿತ್ವ ಹಾಗೂ ಎಲ್ಲರ ಜೊತೆ ಮಗುವಿನಂತೆ ಬೆರೆಯುವ ಮನಸ್ಸು ಈ ಕಾರಣದಿಂದಲೇ ಅವರನ್ನು ಇಡೀ ಚಿತ್ರರಂಗ ಪ್ರೀತಿಯಿಂದ ಕಾಣುತ್ತಿತ್ತು. ಅಷ್ಟೇ ಅಲ್ಲದೆ ಅವರ ಸಿನಿಮಾಗಳು ಹಾಗೂ ಕಾರ್ಯಕ್ರಮಗಳನ್ನು ನೋಡಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಅಪ್ಪು ಅವರಿಗೆ ಅಭಿಮಾನಿಯಾಗಿದ್ದರು. ಆದರೆ ಇಷ್ಟೆಲ್ಲ ಜನರ ಪ್ರೀತಿ ಪಡೆದು ಹುಟ್ಟಿದಾಗಿನಿಂದಲೂ ರಾಜನಂತಿದ್ದ ನಮ್ಮ ಅಪ್ಪು ವಿಗೆ ವಿಧಿಯು ಇಷ್ಟು ಬೇಗ ಧಾರುಣ ರೀತಿಯಲ್ಲಿ ಸಾ’ವು ತಂದುಕೊಟ್ಟಿದ್ದು ಮಾತ್ರ ಯಾರಿಗೂ ಸಹಿಸಿಕೊಳ್ಳಲಾಗುತ್ತಿಲ್ಲ.
ಅಪ್ಪು ಅವರು ಎಂತಹ ಸಹೃದಯಿ ಹಾಗೂ ಸಮಾಜದ ಮೇಲೆ ಕಾಳಜಿ ಹೊಂದಿದ್ದ ವ್ಯಕ್ತಿ ಎನ್ನುವುದು ಅವರು ಇದ್ದಾಗಿನಿಂದಲೂ ಸಹ ಅವರ ಸುತ್ತಮುತ್ತಲ ಜನರಿಗೆ ತಿಳಿದಿತ್ತು. ಆದರೆ ಅದು ವಿಶ್ವವ್ಯಾಪಿ ತಿಳಿದಿದ್ದು ಅವರು ನಮ್ಮನ್ನೆಲ್ಲ ಅಗಲಿದ ಮೇಲೆಯೇ ಕನ್ನಡದ ರೈತರ ಮೇಲೆ ಅಪಾರ ಅಭಿಮಾನ ಹೊಂದಿದ್ದ ಪುನೀತ್ ರಾಜಕುಮಾರ್ ಅವರು ನಂದಿನಿ ಹಾಲಿನ ಉತ್ಪನ್ನಗಳ ಮೇಲಿನ ಜಾಹೀರಾತಿಗಾಗಿ ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೆ ಉಚಿತವಾಗಿ ಹಾಗೂ ಅವರ ಮನಸ್ಸಿನ ತೃಪ್ತಿಗಾಗಿ ಮತ್ತು ಕನ್ನಡದ ರೈತರಿಗೆ ಒಳ್ಳೆಯದಾಗಲಿ ಎನ್ನುವ ಸದುದ್ದೇಶದಿಂದ ಅದರಲ್ಲಿ ಅಭಿನಯಿಸಿದ್ದರಂತೆ. ಹಾಗೂ ನಂದಿನಿ ಹಾಲಿನ ಉತ್ಪನ್ನಗಳ ಬಗೆಗಿನ ಯಾವುದೇ ಪ್ರಚಾರ ಕಾರ್ಯಕ್ರಮವನ್ನು ಉಚಿತವಾಗಿ ನಡೆಸು ಕೊಡುತ್ತಿದ್ದರಂತೆ. ಹಾಗೆಯೇ ಅಪ್ಪು ಅವರ ಕಂಠವು ಸಹ ಅವರ ತಂದೆಯ ವಾಯ್ಸ್ ಅಂತೆಯೇ ಅದ್ಭುತವಾಗಿತ್ತು.
ಇದರಿಂದಾಗಿ ಅವರಿಗೆ ಹಲವು ಸಿನಿಮಾಗಳಲ್ಲಿ ಹಾಡುವ ಮನವಿಗಳು ಬರುತ್ತಿದ್ದವು. ಆದರೆ ಅವರು ಯಾವುದೇ ಸಿನಿಮಾಗಳಿಗಾಗಿ ಹಾಡನ್ನು ಹಾಡಿದರು ಸಹ ಅದಕ್ಕೆ ಬರುವ ಹಣವನ್ನು ಸಮಾಜಸೇವೆಗಾಗಿ ಮೀಸಲಿಡುತ್ತಿದ್ದರಂತೆ. ಅಷ್ಟೇ ಅಲ್ಲದೆ ಅವರು ಎಲ್ಇಡಿ ಬಲ್ಪ್ ಸೇರಿದಂತೆ ಹಲವು ವಸ್ತುಗಳ ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದರು ಇವುಗಳಿಂದ ಅವರು ಪಡೆಯುತ್ತಿದ್ದ ಸಂಭಾವನೆಯನ್ನು ಸಹ ಸ್ವಂತಕ್ಕೆ ಖರ್ಚುಮಾಡದೆ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಲು ಬಳಸುತ್ತಿದ್ದರಂತೆ. ಅಷ್ಟೇ ಅಲ್ಲದೆ ಪುನೀತ್ ರಾಜಕುಮಾರ್ ಅವರು ಗಂಧದಗುಡಿ ಎನ್ನುವ ಶೀರ್ಷಿಕೆಯನ್ನು ಒಳಗೊಂಡ ಒಂದು ಸಾಕ್ಷಚಿತ್ರದಲ್ಲಿ ಅಭಿನಯಿಸಿದ್ದರು ಕನ್ನಡದ ವನ್ಯ ಸಂಪತ್ತು ಹಾಗೂ ಕಾಡು ಪ್ರಾಣಿಗಳ ಆಗುಹೋಗುಗಳ ಬಗ್ಗೆ ಮತ್ತು ಈಗಿನ ಕಾಲದಲ್ಲಿ ಅರಣ್ಯಗಳಿಗೆ ಹಾಗೂ ಅಲ್ಲಿರುವ ಪ್ರಾಣಿಗಳಿಗೆ ಆಗುತ್ತಿರುವ ಅಪಾಯಗಳ ಬಗ್ಗೆ ಸಿನಿಮಾದ ಮೂಲಕ ತಿಳಿಸಿಕೊಡುವ ಸಲುವಾಗಿ ಒಂದು ಒಳ್ಳೆಯ ಸಾಮಾಜಿಕ ಕಳಕಳಿಯಿರುವ ಸಿನಿಮಾ ಎಂದು ಈ ಸಿನಿಮಾವನ್ನು ಒಪ್ಪಿಕೊಂಡಿದ್ದರಂತೆ.
ಆದರೆ ಅದು ರಿಲೀಸ್ ಆಗುವ ಮುನ್ನವೇ ನಮ್ಮನ್ನೆಲ್ಲ ಅವರು ಆಗಲಿ ಹೋಗಿದ್ದು ಮಾತ್ರ ತುಂಬಾ ನೋ’ವಿ’ನ ಸಂಗತಿಯಾಗಿದೆ. ಅಪ್ಪು ಅವರ ಒಟ್ಟು ಆಸ್ತಿಯ ಮೌಲ್ಯ 200ಕೋಟಿ ಆಗಿದ್ದು ಈ ಆಸ್ತಿಯು ಅವರ ಪತ್ನಿ ಅಶ್ವಿನಿ ಹಾಗೂ ಮಕ್ಕಳಾದ ಧೃತಿ ಮತ್ತು ವಂದನ ಹಾಗೂ ಅಣ್ಣನಾದ ರಾಘವೇಂದ್ರ ರಾಜಕುಮಾರ್ ಅವರ ಜವಾಬ್ದಾರಿಗೆ ಸೇರಿದೆಯಂತೆ. ಅದರಲ್ಲಿ 8 ಕೋಟಿ ಹಣವನ್ನು ಮಾತ್ರ ಮೈಸೂರಿನ ಶಕ್ತಿಧಾಮ ನಡೆಸಲು ಠೇವಣಿ ಇಡಲಾಗಿದೆಯಂತೆ. ಹಾಗೂ ಪುನೀತ್ ರಾಜಕುಮಾರ್ ಅವರು ಪಿಆರ್ಕೆ ಪ್ರೊಡಕ್ಷನ್ಸ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಕನ್ನಡದ ಪ್ರತಿಭೆಗಳಿಗೆ ನಟಿಸಲು ಅವಕಾಶ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಇದನ್ನು ಸ್ಥಾಪಿಸಿದರಂತೆ. ಈಗ ಆ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ವಹಿಸಿಕೊಂಡಿದ್ದಾರೆ ಹಾಗೂ ಈಗಾಗಲೇ ಪುನೀತ್ ರಾಜಕುಮಾರ್ ಅವರ ಕನಸನ್ನು ನನಸು ಮಾಡುವ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ದನ್ಯವಾದಗಳು ಸ್ನೇಹಿತರೆ ನೀವೇನಾದರೂ ಅಪ್ಪು ಅಭಿಮಾನಿಗಳಾಗಿದ್ದರೆ ಅಪ್ಪು ಗ್ರೇಟ್ ಅಂತ ಕಮೆಂಟ್ ಹಾಕಿ