ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಅವರು ಇತ್ತೀಚಿಗಷ್ಟೇ ಕ್ರಾಂತಿ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ ಡಬ್ಬಿಂಗ್ ಕೆಲಸವನ್ನು ಕೂಡ ಸಂಪೂರ್ಣಗೊಳಿಸಿದ್ದಾರೆ. ಈ ಸಿನಿಮಾ ಕನ್ನಡ ರಾಜ್ಯೋತ್ಸವ ದಿನದಂದೇ ಅಂದರೆ ನವೆಂಬರ್ ಒಂದನೇ ತಾರೀಕು ರಿಲೀಸ್ ಆಗಲಿದೆ ಎಂದು ಚಿತ್ರತಂಡದವರು ಹೇಳಿದ್ದರು. ಅಷ್ಟೇ ಅಲ್ಲದೆ ಚಿತ್ರತಂಡವು ಕೂಡ ಈ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಕೆಲವು ಸುಳಿವನ್ನು ಕೂಡ ನೀಡಿತು. ಆದರೆ ಇದೀಗ ಮತ್ತೊಂದು ಅಪ್ಡೇಟ್ ಸಿಕ್ಕಿದೆ ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ಬಿಡುಗಡೆಯಾಗುವುದಿಲ್ಲ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಈ ವಿಚಾರ ಹೊರ ಬರುತ್ತಿದ್ದ ಹಾಗೆ ದರ್ಶನ್ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದರೆ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ನೋಡುವುದಕ್ಕಾಗಿ ಕಾತುರದಿಂದ ಕಾದು ಕುಳಿತಿದ್ದರು. ಆದರೆ ಇದೀಗ ಇದಕ್ಕಿಂತ ಹಾಗೆ ಈ ಸಿನಿಮಾವನ್ನು ರಿಲೀಸ್ ಮಾಡಲಾಗುವುದಿಲ್ಲ ಎಂಬ ಮಾಹಿತಿಯನ್ನು ಕೇಳಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ದರ್ಶನ್ ಅವರ ಸಿನಿಮಾವನ್ನು ಬಿಡುಗಡೆ ಮಾಡದಿರಲು ಕಾರಣವೇನು ಎಂಬುದನ್ನು ನೋಡುವುದಾದರೆ. ಕ್ರಾಂತಿ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದ್ದರು ಕೂಡ ಕೆಲವು ಸೀನ್ಗಳನ್ನು ರೀಶೂಟ್ ಮಾಡಬೇಕಾಗಿದೆ. ಹಾಗಾಗಿ ಈ ಒಂದು ರೀ ಶೂಟಿಂಗ್ ಗೆ ಹೆಚ್ಚಿನ ಸಮಯ ಅವಕಾಶ ಬೇಕಾಗಿರುವುದರಿಂದ ನವಂಬರ್ ಒಂದಕ್ಕೆ ಕ್ರಾಂತಿ ಸಿನಿಮಾವನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಚಿತ್ರಕಂಡ ಹೇಳಿಕೊಂಡಿದ್ದಾರೆ.
ಈ ಕಾರಣಕ್ಕಾಗಿಯೇ ಆದಷ್ಟು ಬೇಗ ಬಾಕಿ ಉಳಿದಿರುವಂತಹ ಸೀನ್ ಗಳನ್ನು ಶೂಟಿಂಗ್ ಮಾಡಿ ನವೆಂಬರ್ ಕೊನೆಯ ವಾರದಲ್ಲಾದರೂ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಸಾಕಷ್ಟು ಪ್ರಯತ್ನವನ್ನು ಪಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕ್ರಾಂತಿ ಸಿನಿಮಾ ಅಕ್ಷರ ಕ್ರಾಂತಿಯನ್ನು ಮರು ಸೃಷ್ಟಿ ಮಾಡಲಿದೆ ಸರ್ಕಾರಿ ಶಾಲೆಗಳ ಅವನತಿ ಹಾಗೂ ಶಿಕ್ಷಣದ ಬಗ್ಗೆ ಇರುವಂತಹ ನಿರ್ಲಕ್ಷ ಇವುಗಳನ್ನು ಎತ್ತಿ ತೋರಿಸುವಂತಹ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ ಎಂದು ದರ್ಶನವರು ಖಾಸಗಿ ಯೌಟ್ಯೂಬ್ ಚಾನೆಲ್ ಒಂದರಲ್ಲಿ ನಡೆಸಿದಂತಹ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ವಿಶೇಷವಾಗಿ ಈ ಒಂದು ಕ್ರಾಂತಿ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸುಮಲತಾ ಅಂಬರೀಶ್ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಸಾಕಷ್ಟು ಕಲಾವಿದರು ತೆರೆಯನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾ ಅದ್ಬುತವಾಗಿ ಮೂಡಿ ಬರಲಿದೆ ಎಂದು ಕೆಲವು ಸಿನಿ ರಸಿಕರು ಅಭಿಪ್ರಾಯವನ್ನು ಪಟ್ಟಿದ್ದರೆ. ಈ ಹಿಂದೆ ದರ್ಶನ್ ಅವರ ಯಜಮಾನ ಸಿನಿಮಾ ಯಾವ ರೀತಿಯಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು ಅದೇ ರೀತಿಯಲ್ಲಿ ಕ್ರಾಂತಿ ಸಿನಿಮಾ ಕೂಡ ಹಿಟ್ ಆಗುತ್ತದೆ ಎಂಬುದು ದರ್ಶನ್ ಅಭಿಮಾನಿಗಳ ಮಾತಾಗಿದೆ. ಆದರೆ ಯಾವುದೇ ಸಿನಿಮಾವಾದರೂ ಸರಿ ಇನ್ನಿತರ ಕಾರ್ಯಕ್ರಮವಾದರೂ ಸರಿ ಪ್ರಮೋಷನ್ ಮಾಡಿದರೆ ಅದಕ್ಕೆ ಹೆಚ್ಚಿನ ಪ್ರಶಂಸೆಯನ್ನು ಮತ್ತು ಆದ್ಯತೆ ನೀಡಲಾಗುತ್ತದೆ
ಆದರೆ ದರ್ಶನ್ ಅವರನ್ನು ಮೀಡಿಯಾದಿಂದ ಬ್ಯಾನ್ ಮಾಡಲಾಗಿರುವುದರಿಂದ ಕ್ರಾಂತಿ ಸಿನಿಮಾಗೆ ಯಾವುದೇ ರೀತಿಯಾದಂತಹ ಮೀಡಿಯಾ ಸಪೋರ್ಟ್ ಹಾಗೂ ಮೀಡಿಯಾ ಪ್ರಮೋಷನ್ ಇಲ್ಲ. ಹಾಗಾಗಿ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡುತ್ತಾ ಅಥವಾ ಇಲ್ಲವಾ ಎಂಬುದನ್ನು ನೋಡಬೇಕಾಗಿದೆ ಆದರೂ ಕೂಡ ದರ್ಶನ್ ಅಭಿಮಾನಿಗಳನ್ನು ಮೆಚ್ಚಲೇಬೇಕು. ಏಕೆಂದರೆ ತಮ್ಮ ನೆಚ್ಚಿನ ನಟನ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಸ್ವತಹ ತಾವೇ ಮಾಡುತ್ತಿದ್ದಾರೆ. ಹಾಗಾಗಿ ಈ ಸಿನಿಮಾ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಮೂಡಿ ಬರಬಹುದು ಎಂಬುದು ಕೆಲವರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.