Home Entertainment ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಸೇರಿಸಿದ್ದು ಯಾಕೆ ಎಂಬ ರೋಚಕ ಸತ್ಯವನ್ನು ಬಿಚ್ಚಿಟ್ಟ ದ್ವಾರಕೀಶ್‌ ಈ ವಿಚಾರ ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ

ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಸೇರಿಸಿದ್ದು ಯಾಕೆ ಎಂಬ ರೋಚಕ ಸತ್ಯವನ್ನು ಬಿಚ್ಚಿಟ್ಟ ದ್ವಾರಕೀಶ್‌ ಈ ವಿಚಾರ ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ

0
ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಸೇರಿಸಿದ್ದು ಯಾಕೆ ಎಂಬ ರೋಚಕ ಸತ್ಯವನ್ನು ಬಿಚ್ಚಿಟ್ಟ ದ್ವಾರಕೀಶ್‌ ಈ ವಿಚಾರ ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ

ಕನ್ನಡ ಚಿತ್ರರಂಗ ಕಂಡಂತೆ ದ್ವಾರಕೀಶ್ ಅವರು ಇಲ್ಲಿಯವರೆಗೂ ಕೂಡ ಸುಮಾರು ಆರು ದಶಕಗಳಿಂದಲೂ ಕೂಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ದ್ವಾರಕೀಶ್‌ ಅವರು ನಿರ್ಮಾಪಕರು ಮತ್ತು ನಿರ್ದೇಶಕರು ಕೂಡ ಹೌದು ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಅಂಬರೀಶ್, ವಿಷ್ಣುವರ್ಧನ್, ಡಾ. ರಾಜಕುಮಾರ್ ಹೀಗೆ ಕನ್ನಡದ ಸಾಕಷ್ಟು ದಿಗ್ಗಜರ ನಟರಿಗೆ ಬಂಡವಾಳವನ್ನು ಹೂಡಿಕೆ ಮಾಡಿ ಅವರನ್ನು ತಮ್ಮ ಸಿನಿಮಾದಲ್ಲಿ ಹಾಕಿಕೊಳ್ಳುವುದರ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದರು‌. ಒಂದು ಕಾಲದಲ್ಲಿ ದ್ವಾರಕೀಶ್ ಅವರ ಸಿನಿಮಾ ಅಂದರೆ ಸಾಕು ಜನ ಹುಚ್ಚೆದ್ದು ಕುಣಿಯುತ್ತಿದ್ದರು ಅಷ್ಟರ ಮಟ್ಟಿಗೆ ಅಂದಿನ ಕಾಲದಲ್ಲಿ ಮೇಕಿಂಗ್ ಅನ್ನು ಮಾಡುತ್ತಿದ್ದರು ಹಾಗಾಗಿ ಈ ಪ್ರಚಂಡ ಕುಳ್ಳನನ್ನು ಕಿಂಗ್ ಮೇಕರ್ ಎಂದು ಕರೆಯುತ್ತಿದ್ದರು.

90ರ ದಶಕದಲ್ಲಿ ನಟಿ ಲೀಲಾವತಿ ಅವರ ಮಗ ವಿನೋದ್ ಅವರನ್ನು ಚಿತ್ರರಂಗಕ್ಕೆ ಕರೆತರಬೇಕು ಎಂದು ಲೀಲಾವತಿ ಅವರು ಬಹಳ ಆಸೆ ಕನಸನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಪುಟ್ಟಣ್ಣ ಕಣ್ಗಲ್ ಅವರ ನೆರವನ್ನು ಕೂಡ ಪಡೆಯುತ್ತಾರೆ ಈ ಸಮಯದಲ್ಲಿ ಪುಟ್ಟಣ್ಣ ಕಣಗಾಲ್ ಅವರು ದ್ವಾರಕೀಶ್ ಅವರ ಬಳಿ ಹೋಗಿ ಲೀಲಾವತಿ ಅವರ ಮಗ ವಿನೋದ್ ಅವರಿಗೆ ಉತ್ತಮ ಕಥೆಯುಳ್ಳ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ನೀಡಿ ಎಂದು ಹೇಳುತ್ತಾರೆ. ಆ ಸಮಯದಲ್ಲಿ ಡ್ಯಾನ್ಸ್ ರಾಜ ಡ್ಯಾನ್ಸ್ ಎಂಬ ಚಿತ್ರಕಥೆಯನ್ನು ಸಿದ್ಧಪಡಿಸುತ್ತಾರೆ ಈ ಸಿನಿಮಾದ ಎಲ್ಲ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಆಗ ದ್ವಾರಕೀಶ ಅವರು ಒಂದು ಮಹತ್ತರವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಅದೇನೆಂದರೆ ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ನಾಮಕರಣ ಮಾಡುತ್ತಾರೆ.

ಅಷ್ಟೇ ಅಲ್ಲದೆ ವಿನೋದ್ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಯಾಕೆ ನಾಮಕರಣ ಮಾಡಲಾಯಿತು ಎಂಬ ವಿಚಾರದ ಬಗ್ಗೆ ಸಿನಿಮಾ ರಿಲೀಸ್ ಆದ ನಂತರ ನಿಮಗೆ ತಿಳಿಸುತ್ತೇನೆ ಈ ಹೆಸರಿನ ಹಿಂದಿರುವ ಗುಟ್ಟನ್ನು ನಿಮ್ಮೆಲ್ಲರ ಮುಂದೆ ಬಹಿರಂಗಪಡಿಸುತ್ತೇನೆ ಎಂಬ ಮಾಹಿತಿಯನ್ನು ಕೂಡ ಹೊರ ಹಾಕುತ್ತಾರೆ. ಅಂದುಕೊಂಡ ಮಾದರಿಯಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗುತ್ತದೆ ಈ ಸಮಯದಲ್ಲಿ ನಟ ದ್ವಾರಕೀಶ್ ಅವರಿಗೆ ಹೆಚ್ಚಿನ ಒತ್ತಡ ಬೀಳುತ್ತದೆ. ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಯಾಕೆ ಸೇರಿಸಲಾಯಿತು ಅಂತ ಆದರೆ ಸತ್ಯವನ್ನು ಹೊರ ಹಾಕುವಂತಹ ಪರಿಸ್ಥಿತಿಯಲ್ಲಿ ದ್ವಾರಕೀಶ್ ಇರಲಿಲ್ಲ.

ಏಕೆಂದರೆ ಒಂದು ವೇಳೆ ರಾಜ್ ಎಂಬ ಹೆಸರಿನ ಇಂದಿರುವ ಅಸಲಿ ರಹಸ್ಯವನ್ನು ಬಿಚ್ಚಿಟ್ಟರೇ ಇದರಿಂದ ರಾಜ್‌ಕುಮಾರ್ ಅಭಿಮಾನಿಗಳು ದ್ವಾರಕೀಶ್ ವಿರುದ್ಧ ತಿರುಗಿ ಬೀಳುತ್ತಾರೆ ಎಂಬ ಭಯ ಇತ್ತು. ಅಷ್ಟೇ ಅಲ್ಲದೆ ಈ ವಿಚಾರವನ್ನು ಹೊರ ಹಾಕಿದರೆ ಪಾರ್ವತಮ್ಮ ಅವರ ಕುಟುಂಬಕ್ಕೂ ಕೂಡ ಮುಜುಗರ ಉಂಟಾಗಬಹುದು ಎಂಬ ಯೋಚನೆ ದ್ವಾರಕೇಶ್ ಅವರ ಮನಸ್ಸಿನಲ್ಲಿ ಬೀಳುತ್ತದೆ. ಹಾಗಾಗಿ ಈ ವಿಚಾರವನ್ನು ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ. ಆದರೆ ಸಾಕಷ್ಟು ಅಭಿಮಾನಿಗಳು ಮತ್ತು ಚಿತ್ರರಂಗಕ್ಕೆ ಸೇರಿದಂತಹ ಕೆಲವು ವ್ಯಕ್ತಿಗಳು ವಿನೋದ್ ಅವರ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಸೇರಿಸಿದ್ದಕ್ಕೆ ಕಾರಣ ವರನಟ ರಾಜಕುಮಾರ್ ಅವರೇ ಎಂದು ಹೇಳುತ್ತಿದ್ದಾರೆ.

ಹೌದು ಕೆಲವು ಮಾಹಿತಿಗಳ ಪ್ರಕಾರ ವಿನೋದ್ ಅವರ ತಂದೆ ರಾಜಕುಮಾರ್ ಎಂದು ಹೇಳುತ್ತಾರೆ ಆದರೆ ಇನ್ನೂ ಕೆಲವು ಮಾಹಿತಿಗಳ ಪ್ರಕಾರ ಲೀಲಾವತಿಯವರು ನಾಟಕ ಕಂಪನೀಯ ಓನರ್ ಆದಂತಹ ಮಹಾಲಿಂಗ ಭಾಗವತ್ ಅವರನ್ನು ಮದುವೆಯಾಗಿದ್ದರು ಹಾಗಾಗಿ ಇವರಿಬ್ಬರಿಗೆ ಜನಿಸಿದಂತಹ ಮಗನೇ ವಿನೋದ್ ಎಂದು ಹೇಳುತ್ತಾರೆ. ಆದರೆ ಇಲಿಯವರೆಗೂ ಕೂಡ ವಿನೋದ್ ಅವರ ತಂದೆ ಯಾರು ಎಂಬ ವಿಚಾರವನ್ನು ಲೀಲಾವತಿಯವರು ಎಲ್ಲಿಯೂ ಕೂಡ ರೆವೀಲ್ ಮಾಡಿಲ್ಲ ಇದೊಂದು ಯಕ್ಷಪ್ರಶ್ನೆ ಅಂತ ಹೇಳಬಹುದು.

ಒಂದು ವೇಳೆ ದ್ವಾರಕೀಶ ಅವರು ವಿನೋದ್ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಸೇರಿಸದೆ ಹೋಗಿದ್ದರೆ ಇಷ್ಟೆಲ್ಲ ತಾಪತ್ರಗಳು ಆಗುತ್ತಲೇ ಇರಲಿಲ್ಲ, ಅಥವಾ ಸ್ವತಃ ಲೀಲಾವತಿಯವರೇ ವಿನೋದ್ ಅವರ ಹುಟ್ಟಿಗೆ ಕಾರಣ ಯಾರು ಎಂಬ ವಿಚಾರವನ್ನು ಹೇಳಿದ್ದರೂ ಕೂಡ ಇಷ್ಟೆಲ್ಲ ಗೊಂದಲಗಳು ಉಂಟಾಗುತ್ತಿಲ್ಲ ಇಂದಿಗೂ ಕೂಡ ಇದೊಂದು ಬಗೆ ಹರಿಯಲಾಗದಂತಹ ಒಂದೇ ಒಂದು ಸಮಸ್ಯೆ ಅಂದರೆ ಅದು ವಿನೋದ್ ರಾಜ್ ಅವರ ಜನ್ಮಕ್ಕೆ ಕಾರಣ ಆದಂತಹ ವ್ಯಕ್ತಿ ಯಾರು ಅಂತ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here