Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಾಂತಾರ ಸಿನಿಮಾ ಬಜೆಟ್ ಬಗ್ಗೆ ಶಾ.ಕಿಂ.ಗ್ ಹೇಳಿಕೆ ಕೊಟ್ಟ ರಿಷಬ್ ಶೆಟ್ಟಿ, ಪ್ಲಾನ್ ಮಾಡಿದ್ದು 7 ಕೋಟಿ ಆದ್ರೆ ಖರ್ಚು ಆಗಿದ್ದು ಎಷ್ಟು ಕೋಟಿ ಗೊತ್ತಾ.?

Posted on October 19, 2022October 20, 2022 By Kannada Trend News No Comments on ಕಾಂತಾರ ಸಿನಿಮಾ ಬಜೆಟ್ ಬಗ್ಗೆ ಶಾ.ಕಿಂ.ಗ್ ಹೇಳಿಕೆ ಕೊಟ್ಟ ರಿಷಬ್ ಶೆಟ್ಟಿ, ಪ್ಲಾನ್ ಮಾಡಿದ್ದು 7 ಕೋಟಿ ಆದ್ರೆ ಖರ್ಚು ಆಗಿದ್ದು ಎಷ್ಟು ಕೋಟಿ ಗೊತ್ತಾ.?

ಇಂದು ಕನ್ನಡ ಸಿನಿಮಾಗಳಲ್ಲಿ ಬಹುಬೇಗ ನೂರು ಕೋಟಿ ತಲುಪಿದ ಸಿನಿಮಾಗಳ ಹೆಸರಿನ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಕಾಂತಾರ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಪ್ರತಿದಿನಕ್ಕೊಂದು ಹೊಸ ದಾಖಲೆ ಬರೆಯುತ್ತಿದೆ. ಬಹುದೊಡ್ಡ ಬಜೆಟ್ ನ ಸಿನಿಮಾಗಳು ಈ ರೀತಿ ದೊಡ್ಡ ಕಲೆಕ್ಷನ್ ಮಾಡಿ ಹೆಸರು ಮಾಡುತ್ತಿದ್ದವು ಆದರೆ ಕಾಂತರಾ ರೀತಿಯ ಸಿಂಪಲ್ ಸಿನಿಮಾ ಇಷ್ಟು ದೊಡ್ಡ ಹೆಸರು ಮಾಡಿ ಇಂದು ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ತೆರೆ ಮೇಲೆ ರಾಜಾಜಿಸುತ್ತಿದೆ. ಕನ್ನಡಿಗರ ಹೆಮ್ಮೆ ಆಗಿರುವ ಕಾಂತಾರ ಸಿನಿಮಾದ ಸಿನಿಟೋಗ್ರಫಿ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದು ಕಾಂತರಾ ಸಿನಿಮಾದ ದೃಶ್ಯ ವೈಭವ ಕಣ್ಣು ಕಟ್ಟುವಂತೆ ಟೀಮ್ ಕಟ್ಟಿಕೊಟ್ಟಿದೆ. ಈಗ ಎಲ್ಲರ ಬಾಯಿಯಲ್ಲೂ ಓಡುತ್ತಿರುವ ಮತ್ತೊಂದು ವಿಷಯ ಏನೆಂದರೆ ಕಾಂತಾರ ಸಿನಿಮಾಗೆ ಒಟ್ಟು ಎಷ್ಟು ಖರ್ಚಾಗಿರಬಹುದು ಎಂದು.

ಈ ಬಗ್ಗೆ ಇದುವರೆಗೆ ಎಲ್ಲೂ ಕೂಡ ಸಿನಿಮಾ ತಂಡ ಮಾತನಾಡಿಲ್ಲ ಆದರೆ ಮೊದಲ ಬಾರಿಗೆ ರಿಷಬ್ ಶೆಟ್ಟಿ ಅವರ ತಂದೆ ಈ ಬಗ್ಗೆ ಮಾತನಾಡಿದ್ದು ಕಾಂತರಾದ ಒಟ್ಟು ಬಜೆಟ್ ಎಷ್ಟು ಆಗಿತ್ತು ಎನ್ನುವುದರ ನಿಖರ ಮಾಹಿತಿ ಕೊಟ್ಟಿದ್ದಾರೆ. ಕಾಂತರಾ ಸಿನಿಮಾ ತೆಗೆಯಲು ರಿಷಬ್ ಶೆಟ್ಟಿ ಅವರ ಸ್ವಂತ ಊರಿನಲ್ಲಿಗೆ ಸೆಟ್ ಹಾಕಲಾಗಿತ್ತು ಆದರೆ ಆ ಭಾಗದಲ್ಲಿ ಮಳೆ ಜಾಸ್ತಿ ಆದ ಕಾರಣ ಪೂರ್ತಿ ಸೆಟ್ ಒಂದು ಬಾರಿ ಹಾಳಾಗಿ ಹೋಗಿತ್ತು. ಅಲ್ಲಿ ಹಾಕಿಸಿದ ಮಣ್ಣು ಕೂಡ ಕರಗಿ ಹೋಗಿ ಎಷ್ಟೋ ವೇಳೆ ಸಂಚಾರಕ್ಕೂ ದಕ್ಕೆ ಆಗಿ ರಸ್ತೆಗಳೇ ಮುಚ್ಚಿ ಹೋಗಿತ್ತು ಆಗ ರಸ್ತೆ ಕೂಡ ಸರಿ ಮಾಡಿಸಲು ಚಿತ್ರತಂಡ ಹೆಣಗಾಡಿತ್ತು. ಇದೆಲ್ಲವನ್ನು ಸೇರಿಸಿ ಸಿನಿಮಾಗೆ ಒಟ್ಟು 15 ರಿಂದ 16 ಕೋಟಿ ಖರ್ಚಾಗಿದೆಯಂತೆ ಆದರೆ ಮೊದಲ ಬಾರಿಗೆ ಸಿನಿಮಾವನ್ನು ಹೊಂಬಾಳೆ ಫಿಲಂಸ್ ಅವರ ಬಳಿ ತೆಗೆದುಕೊಂಡು ಹೋದಾಗ ಏಳು ಕೋಟಿ ಅಂದಾಜು ಲೆಕ್ಕ ನೀಡಿದ್ದರಂತೆ ಆದರೆ ಅದರ ಎರಡರಷ್ಟು ಸಿನಿಮಾ ತಂಡ ಈ ಸಿನಿಮಾಕ್ಕಾಗಿ ದುಡ್ಡು ಹಾಕಿದೆ.

ರಿಷಭ್ ಅವರು ಹೊಂಬಾಳೆ ಫಿಲಂಸ್ ಅವರನ್ನು ತಮ್ಮ ಪ್ರಚಾರದ ಪೂರ್ತಿ ಈ ವಿಷಯಕ್ಕಾಗಿ ನೆನೆಸಿಕೊಂಡಿದ್ದಾರೆ ಹೊಂಬಾಳೆ ಫಿಲಂ ಅಂತಹ ಬ್ಯಾನರ್ ಸಿಕ್ಕ ಕಾರಣ ಇಷ್ಟು ಅದ್ಭುತವಾಗಿ ನಾನು ನನ್ನ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ. ಇಂದು ಸಿನಿಮಾ ಬಗ್ಗೆ ಎಲ್ಲರೂ ಕೂಡ ಮಾತನಾಡುತ್ತಿದ್ದು ಜನಸಾಮಾನ್ಯರು ಸೇರಿದಂತೆ ಸೆಲೆಬ್ರಿಟಿಗಳು ಹಾಗೂ ಬೇರೆ ಭಾಷೆಯ ನಿರ್ದೇಶಕರುಗಳ ನಟರು ಕೂಡ ಕನ್ನಡದ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ರಿಷಬ್ ಶೆಟ್ಟಿ ಅವರು ಒಬ್ಬ ಭರವಸೆಯ ನಿರ್ದೇಶಕ ಎನ್ನುವುದು ಮತ್ತೆ ಮತ್ತೆ ಪ್ರೂ ಆಗುತ್ತಿದ್ದು ಕಿರಿಕ್ ಪಾರ್ಟಿ ಬೆಲ್ ಬಾಟಮ್ ನಂತರ ಈಗ ಕಾಂತಾರಾ ಇವುಗಳ ನಿರ್ದೇಶನವನ್ನು ಮೆಚ್ಚಿಕೊಂಡು ಅವರ ಹೆಸರಿಗೊಂದು ಸ್ಟಾರ್ ಗಿರಿಯನ್ನು ಸೇರಿಸಲು ಎಲ್ಲರೂ ನಿರ್ಧರಿಸಿದ್ದಾರೆ.

ಪ್ರಶಾಂತ್ ನೀಲ್ ಅವರು ಕಾಂತಾರ ವಿಮರ್ಶೆ ಮಾಡುವಾಗ ಡಿವೈನ್ ಎನ್ನುವ ಪದವನ್ನು ಬಳಸಿ ಹೇಳಿದ್ದರು ಹಾಗಾಗಿ ರಿಷಬ್ ಶೆಟ್ಟಿ ಅವರಿಗೆ ಈ ಹೆಸರು ಸರಿ ಹೊಂದುತ್ತದೆ ಅವರನ್ನು ಇನ್ನು ಮುಂದೆ ಡಿವೈನ್ ಸ್ಟಾರ್ ಎಂದು ಕರೆಯಬೇಕು ಎನ್ನುವ ಮಾತುಕತೆಗಳು ನಡೆಯುತ್ತಿವೆ. ಡಿವೈನ್ ಎನ್ನುವ ಪದವು ದೈವಿಕ ಎನ್ನುವ ಅರ್ಥವನ್ನು ಕೊಡುತ್ತದೆ ಕಾಂತಾರ ಸಿನಿಮಾದ ಕ್ಲೈಮಾಕ್ಸ್ ಅಲ್ಲಿ ರಿಷಬ್ ಶೆಟ್ಟಿ ಅವರು ನಿಜವಾಗಿಯೂ ಗುಳಿಕಾ ದೈವದಂತೆಯೇ ಆರ್ಭಟಿಸಿದ್ದಾರೆ. ಅವರ ಅಭಿನಯ ಕಂಡು ಜನ ನಿಜವಾಗಿಯೂ ದೈವವೇ ಆವಾಹನೆ ಆಗಿತ್ತೇನೋ ಎಂದು ಅಚ್ಚರಿಗೊಂಡಿದ್ದಾರೆ. ಇನ್ನು ಕಾಂತರಾ ಸಿನಿಮಾ ಗೆ 7 ಕೋಟಿ ಬಜೆಟ್ ಹಾಕಲಾಗಿತ್ತು ಆದರೆ ಈ ಸಿನಿಮಾ ಮುಕ್ತಾಯವಾಗುವ ವೇಳೆಗೆ ಇದರ ಬಜೆಟ್ ಎರಡರಷ್ಟು ಹೆಚ್ಚಾಗಿದೆ ಕಾಂತರಾ ಸಿನಿಮಾ ಗೆ 15 ಕೋಟಿ ಖರ್ಚಾಗಿದೆ ಎಂದು ತಿಳಿದುಬಂದಿದೆ.

ಹೊಂಬಾಳೆ ಸಂಸ್ಥೆ 15 ಕೋಟಿ ಬಂಡವಾಳವನ್ನು ಹೂಡಿಕೆ ಮಾಡಿ ಇದೀಗ ಇನ್ನೂರಕ್ಕೂ ಹೆಚ್ಚು ಕೋಟಿ ಹಣವನ್ನು ಲಭಿಸುತ್ತಿದೆ ಕಾಂತಾರ ಸಿನಿಮಾ ಬಿಡುಗಡೆಯಾದ ಕೇವಲ ಎರಡೇ ವಾರಕ್ಕೆ 200 ಕೋಟಿ ಕಲೆಕ್ಷನ್ ಮಾಡಿದೆ ಇದು ಆರಂಭ ಮಾತ್ರ ಕೊನೆಯವರೆಗೂ ಈ ಒಂದು ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಯಾರಿಂದಲೂ ಕೂಡ ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಕಾಂತಾರ ಸಿನಿಮಾದ ಕ್ರೇಜ್ ಇಂಡಿಯಾದಲ್ಲಿ ಅಷ್ಟರ ಮಟ್ಟಿಗೆ ಫೇಮಸ್ ಆಗುತ್ತಿದೆ ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಈ ಸಿನಿಮಾ ಇದೀಗ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲೂ ಕೂಡ ಬಿಡುಗಡೆಯಾಗಿದೆ. ಹಾಗಾಗಿ ಕೆಲವು ಮೂಲಗಳ ಪ್ರಕಾರ 500 ಕೋಟಿ ದಾಟಬಹುದು ಎಂದು ಹೇಳಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಿಮಗೆ ಕಮೆಂಟ್ ಮುಖಾಂತರ ತಿಳಿಸಿ.

Entertainment Tags:Hombale films, Kanthara, Rishab Shetty
WhatsApp Group Join Now
Telegram Group Join Now

Post navigation

Previous Post: ಕಾಂತಾರ ಸಿನಿಮಾದ ಸಕ್ಸಸ್ ನೋಡಿ ಹೊಟ್ಟೆಕಿಚ್ಚು ಪಟ್ರ ಯಶ್.? ಮೀಡಿಯಾ ಮುಂದೆ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಶಾ-ಕ್
Next Post: Trail post to check now oct 19 2022

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore