Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಳೆದವಾರವಷ್ಟೇ ಮದುವೆಯಾದ ಕಮಲಿ ಸೀರಿಯಲ್ ಅನಿಕಾ & ಶಂಭು ಥೈಲ್ಯಾಂಡ್ ನಲ್ಲಿ ಎಂಜಾಯ್ ಮಾಡ್ತಿರೋ ಈ ವಿಡಿಯೋ ನೋಡಿ

Posted on October 21, 2022October 22, 2022 By Kannada Trend News No Comments on ಕಳೆದವಾರವಷ್ಟೇ ಮದುವೆಯಾದ ಕಮಲಿ ಸೀರಿಯಲ್ ಅನಿಕಾ & ಶಂಭು ಥೈಲ್ಯಾಂಡ್ ನಲ್ಲಿ ಎಂಜಾಯ್ ಮಾಡ್ತಿರೋ ಈ ವಿಡಿಯೋ ನೋಡಿ

ಪ್ರೀತಿಸಿ ಮದುವೆಯಾದ ಹಲವಾರು ಕಲಾವಿದರ ಪೈಕಿ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಕಮಲಿ ಧಾರಾವಾಹಿಯ ಶಂಬು ಮತ್ತು ಅನೇಕ ಇಬ್ಬರು ಸಹ ನಟರು ಸಹ ಈ ಒಂದು ಲಿಸ್ಟ್ ನಲ್ಲಿ ಸೇರ್ಪಡೆಯಾಗಿದ್ದಾರೆ ಹೌದು ಕಮಲಿ ಧಾರಾವಾಹಿಯ ಈ ಜೋಡಿ ಕೂಡ ರಿಯಲ್‌ ಲೈಫ್‌ನಲ್ಲಿ ಜೋಡಿಯಾಗಿದ್ದಾರೆ. ಜೀ ಕನ್ನಡ ವೀಕ್ಷಕರಿಗೆ ಧಾರಾವಾಹಿ ಗೊತ್ತೇ ಇರುತ್ತದೆ. ಈ ಧಾರಾವಾಹಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಹಳ್ಳಿಯಿಂದ ಓದಲು ನಗರಕ್ಕೆ ಬರುವ ಕಮಲಿ ಎಂಬ ಮುಗ್ಧ ಹೆಣ್ಣುಮಗಳು ಸಿಟಿಯಲ್ಲಿ ಏನೆಲ್ಲಾ ಸಮಸ್ಯೆ ಎದುರಿಸುತ್ತಾಳೆ ಎಂದು ಧಾರಾವಾಹಿಯಲ್ಲಿ ತೋರಿಸಲಾಗಿದೆ. ಇನ್ನು ಪ್ರತಿ ಧಾರಾವಾಹಿಯಲ್ಲಿ ಇರುವಂತೆ ಈ ಧಾರಾವಾಹಿಯಲ್ಲಿಯೂ ಕಮಲಿಗೆ ಅನಿಕಾ ಎಂಬ ಶತ್ರು ಇದ್ದಾಳೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

View this post on Instagram

A post shared by Gabriella Smith (@gabby_ella_smith)

ಕಮಲಿಯ ಪ್ರತಿ ಕೆಲಸಕ್ಕೆ ಕಲ್ಲು ಹಾಕುವ ಅನಿಕಾ ಪಾತ್ರಕ್ಕೆ ಜನರು ಶಪಿಸಿರುವುದು ಉಂಟು. ಹಾಗೇ ಕಮಲಿಗೆ ಶಂಭು ಎಂಬ ಒಳ್ಳೆ ಸ್ನೇಹಿತ ಕೂಡ ಇದ್ದಾರೆ. ಕಮಲಿ ಸ್ನೇಹಿತ ಶಂಭು, ಅನಿಕಾಗೆ ಕೂಡ ಶತ್ರುವೇ ಆದರೆ ಇದೀಗ ಈ ಜೋಡಿ ರಿಯಲ್ ಲೈಫ್‌ನಲ್ಲಿ ಪ್ರೀತಿಯಲ್ಲಿದ್ದಾರೆ. ರಿಯಲ್‌ ಲೈಫ್‌ನಲ್ಲಿ ಅನಿಕಾ ಅವರ ಹೆಸರು ಗೇಬ್ರಿಯಾಲಾ ರಚನಾ ಸ್ಮಿತ್ ಹಾಗೂ ಶಂಭು ಅವರ ಹೆಸರು ಸುಹಾಸ್ ಆತ್ರೇಯ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದು ಈಗಷ್ಟೇ ಮನೆಯವರ ಒಪ್ಪಿಗೆ ಪಡೆದು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ನಿಶ್ಚಿತಾರ್ಥದ ಸಾಕಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಜೊತೆಗೆ ಫೋಟೋಶೂಟ್, ವಿಡಿಯೋ ಶೂಟ್ ಕೂಡ ಇದೆ. ಆದರೆ ಇವರಿಬ್ಬರಿಗೂ ಲವ್ ಆಗಿರುವುದು ಈಗಲ್ಲ ಕಳೆದ 2019 ರಲ್ಲಿ ಇಬ್ಬರೂ ಒಟ್ಟಿಗೆ ತೆಗೆಸಿದ ಫೋಟೋಗಳನ್ನು ಸುಹಾಸ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

View this post on Instagram

A post shared by Suhas Athreyas (@suhas_athreyas)

ಈ ಜೋಡಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಮಂದಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಗುರು ಹಿರಿಯರ ಸಮ್ಮುಖದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ಇವರಿಗೆ ಹಲವಾರು ಅಭಿಮಾನಿಗಳು ಶುಭ ಹಾರೈಕೆಯನ್ನು ಸಹ ತಿಳಿಸುತ್ತಾ ಇದ್ದಾರೆ. ಕಮಲಿ ಧಾರಾವಾಹಿಯ ಈ ಜೋಡಿ ಇದೀಗ ಹನಿಮೂನ್ ಗೆ ಥೈಲ್ಯಾಂಡ್ ಗೆ ತೆರಳಿದ್ದು ಅಲ್ಲಿ ತೆಗೆದಿರುವಂತಹ ಫೋಟೋ ಮತ್ತು ವಿಡಿಯೋ ಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋಗಳನ್ನು ನೋಡಿದಂತಹ ಹಲವಾರು ಅಭಿಮಾನಿಗಳು ಇವರಿಗೆ ಶುಭ ಹಾರೈಕೆಯನ್ನು ಸಹ ತಿಳಿಸಿದ್ದಾರೆ.

View this post on Instagram

A post shared by Gabriella Smith (@gabby_ella_smith)

ಧಾರವಾಹಿಯಲ್ಲಿ ಇಬ್ಬರೂ ಸಹ ಶತ್ರುಗಳಾಗಿದ್ದರೂ ನಿಜ ಜೀವನದಲ್ಲಿ ಇವರದು ಒಂದು ಒಳ್ಳೆಯ ಜೋಡಿ ಸುಮಾರು ಮೂರು ವರ್ಷಗಳ ಕಾಲ ಪ್ರೀತಿಯಲ್ಲಿ ಇದ್ದು ಇದೀಗ ವೈವಾಹಿಕ ಜೀವನಕ್ಕೆ ಕಾಲಿರಿಸಿರುವಂತಹ ಅನಿಕ ಮತ್ತು ಶಂಭು ಪ್ರವಾಸವನ್ನು ಕೈಗೊಂಡಿದ್ದಾರೆ ಇವರು ನಾಲ್ಕು ದಿನಗಳ ಕಾಲ ಹೊರ ದೇಶಕ್ಕೆ ಹಾರಿದ್ದು ಅಲ್ಲಿ ತಮ್ಮ ಹನಿಮೂನನ್ನು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾರೆ ಹಾಗೆ ಹುಲಿಯ ಜೊತೆಗಿನ ಫೋಟೋ ಹಾಗೆಯೇ ಪಕ್ಷಿಯನ್ನು ಕೈ ಮೇಲೆ ಕೂರಿಸಿಕೊಂಡು ತೆಗೆದುಕೊಂಡಿರುವಂತಹ ಫೋಟೋವನ್ನು ನಾವು ನೋಡಬಹುದು. ಕೆಲ ದಿನಗಳ ಕಾಲ ತಮ್ಮ ಕೆಲಸದಿಂದ ಬ್ರೇಕ್ ತೆಗೆದುಕೊಂಡು ತಮ್ಮ ವೈವಾಹಿಕ ಜೀವನದ ಸುಂದರ ಕ್ಷಣಗಳನ್ನು ಈ ಜೋಡಿಯು ಥೈಲ್ಯಾಂಡ್ ನಲ್ಲಿ ಕಳೆಯುತ್ತಾ ಇದ್ದಾರೆ. ಈ ಮಾಹಿತಿ ಇಷ್ಟ ಆದ್ರೆ ತಪ್ಪದೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Entertainment Tags:Anika, Gabriella, Shambhu
WhatsApp Group Join Now
Telegram Group Join Now

Post navigation

Previous Post: ಟಾಸ್ಕ್ ವೇಳೆ ನಿಂತಲ್ಲೇ ಮೂತ್ರ ಮಾಡಿಕೊಂಡ ಆರ್ಯವರ್ಧನ್ ಗುರೂಜಿ, ಇವರ ಸ್ಥಿತಿ ನೋಡಿ ಮನೆ ಮಂದಿ ಎಲ್ಲಾ ಕಕ್ಕಾಬಿಕ್ಕಿ.
Next Post: ಕಾಂತಾರ ಸಿನಿಮಾ ಭೂತಕೋಲ ಹಿಂದು ಧರ್ಮದಲ್ಲ ಎಂದು ಹೇಳಿದ ನಟ ಚೇತನ್ ವಿವಾದಾತ್ಮಕ ಹೇಳಿಕೆ ಬಗ್ಗೆ ನೋ ಕಮೆಂಟ್ಸ್ ಎಂದ ರಿಷಬ್ ಶೆಟ್ಟಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore