ಭಾವನ ರಾಮಣ್ಣ ಅವರು ಕನ್ನಡದ ಅಪ್ಪಟ ಕಲಾವಿದೆ. ಚಂದ್ರಮುಖಿ ಪ್ರಾಣಸಖಿ, ಶಾಂತಿ, ಇಂತಿ ನಿನ್ನ ಪ್ರೀತಿಯ, ಆಪ್ತರಕ್ಷಕ, ಚಿಂಗಾರಿ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಮೂರು ಬಾರಿ ಕರ್ನಾಟಕ ಸ್ಟೇಟ್ ಅವಾರ್ಡ್ ಅನ್ನು ಕೂಡ ಅಭಿನಯಕ್ಕಾಗಿ ಪಡೆದಿದ್ದಾರೆ ಜೊತೆಗೆ ಭರತನಾಟ್ಯ ಕಲಾವಿದೆ ಆಗಿ ಕೂಡ ಇವರು ಗುರುತಿಸಿಕೊಂಡಿದ್ದಾರೆ.
ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164
ಇತ್ತೀಚಿಗೆ ರಾಜಕೀಯದಲ್ಲಿ ಸಕ್ರಿಯವಾಗಿರುವ ಇವರೊಬ್ಬರು ಸಾಮಾಜಿಕ ಕಾರ್ಯಕರ್ತೆ ಕೂಡ. ನಂದಿನಿ ರಾಮಣ್ಣ ಎನ್ನುವುದು ಇವರ ಜನ್ಮನಾಮ ಆಗಿದ್ದರು ಭಾವನಾ ರಾಮಣ್ಣ ಆಗಿಯೇ ಫೇಮಸ್ ಆಗಿರುವ ಇವರು ಅದ್ಭುತ ಭಾವನಜೀವಿ. ಮಹಿಳಾವಾದಿ ಕೂಡ ಆಗಿರುವ ಇವರು ಇತ್ತೀಚಿನ ವಿದ್ಯಾಮಾನಗಳ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಬಿ ಗಣಪತಿ ಎನ್ನುವರ ಖಾಸಗಿ ಯುಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಭಾವನ ಆಡಿದ ಮಾತುಗಳು ಹೀಗಿದ್ದವು.
ಈಗಿನ ಕಾಲದಲ್ಲಿ ಮಹಿಳೆಯರು ಪುರುಷನ ರೀತಿ ಬದಲಾಗಿ ಎಲ್ಲವನ್ನು ಗೆಲ್ಲುವ ಅವಶ್ಯಕತೆ ಇಲ್ಲ. ಮಹಿಳೆ ಮಹಿಳೆಯಾಗಿಯೇ ಆಕೆ ಏನನ್ನು ಬೇಕಾದರೂ ಸಾಧಿಸಬಹುದು. ಅದನ್ನು ಆರಂಭದಿಂದಲೇ ಅವರಿಗೆ ತಿಳಿಸಿಕೊಡಬೇಕು. ಯಾವುದನ್ನು ಕುಟುಂಬದಲ್ಲಿ ಮಾತನಾಡಲು, ಆಚರಿಸಲು, ಅನುಸರಿಸಲು ಅವಕಾಶ ಇರುತ್ತದೆಯೋ ಅದೇ ವಾತಾವರಣದಿಂದ ಧೈರ್ಯವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ.
ಹಾಗಾಗಿ ಇಂತಹ ವಾತಾವರಣ ಮೊದಲಿಗೆ ಕುಟುಂಬದಲ್ಲಿ ಸೃಷ್ಟಿ ಆಗಬೇಕು ನಂತರ ಪರಿಣಾಮ ಬರುವುದು ಶಾಲೆ. ಶಾಲೆ ವಿಚಾರವಾಗಿ ಇತ್ತೀಚೆಗೆ ಅನೇಕ ಗಲಾಟೆಗಳು ನಡೆಯುತ್ತಿವೆ. ಹಿಜಾಬ್ ವಿಚಾರವಾಗಿ ಹೇಳುವುದಾದರೆ ಅದು ಅಷ್ಟೊಂದು ತಪ್ಪು ಎಂದು ಅನಿಸಲಿಲ್ಲ. ಯಾವ ಸಂಸ್ಕೃತಿಯು ಶಾಲೆ ತನಕ ಹೋಗಲು ನಮಗೆ ಅವಕಾಶ ಕೊಡುತ್ತದೆಯೋ ಅದನ್ನು ಅನುಸರಿಸುವುದು ತಪ್ಪು ಎಂದು ಅನಿಸುವುದಿಲ್ಲ.
ಆದರೆ ಇತ್ತೀಚೆಗೆ ರಾಜಕೀಯ ಚಟುವಟಿಕೆಗಳಿಗೆ ಇದೆಲ್ಲಾ ಅಸ್ತ್ರಗಳಾಗಿ ಈ ರೀತಿ ವಿವಾದಗಳಾಗುತ್ತಿದೆ. ಇಂದು ಮನುಷ್ಯ ಚಂದ್ರನ ಅಂಗಳಕ್ಕೂ ಕೂಡ ಕಾಲಿಟ್ಟು, ಮನುಷ್ಯ ಹೋಗದ ಜಾಗದಲ್ಲೆಲ್ಲ ಉಪಗ್ರಹಗಳನ್ನು ಬಿಟ್ಟು ಯಶಸ್ವಿಯಾಗಿದ್ದಾನೆ. ಆದರೆ ಹೆಣ್ಣಿನ ಅಂತರಗವನ್ನು ಅರಿಯದೇ ಕಲಕಿ ಕಲ್ಮಶ ಮಾಡುತ್ತಿದ್ದಾರೆ. ಹೆಣ್ಣು ಅಂದಮೇಲೆ ಒಂದು ಚೌಕಟ್ಟು ಹಾಕಿ ಇದೇ ರೀತಿ ಇರಬೇಕು ಎಂದು ದೃಷ್ಟಿಕೋನ ಇಟ್ಟುಕೊಂಡು ಬಿಟ್ಟಿದ್ದಾರೆ ಅಥವಾ ಇದೇ ರೀತಿ ಎಂದು ನಿರ್ಧರಿಸಿ ಬಿಡುತ್ತಾರೆ.
ತುಂಬಾ ಸಂಪ್ರದಾಯವಾದಿ ಆಗಿದ್ದರೆ ಸೀರೆ, ಬಳೆ, ಸಿಂಧೂರ ಇಟ್ಟವರಿಗೆ ಇಷ್ಟೇ ತಿಳಿದಿರುವುದು ಎಂದು ಲೆಕ್ಕಚಾರ ಹಾಕಿಬಿಡುತ್ತಾರೆ. ಆದರೆ ಸೀರೆ ಉಟ್ಟವರು ಇಂಗ್ಲಿಷ್ ಮಾತನಾಡಿದರೆ ಆಶ್ಚರ್ಯ ಪಡುತ್ತಾರೆ ಅಥವಾ ಯಾರಾದರೂ ಬಹಳ ಮೋಡರ್ನ್ ಆಗಿದ್ದರೆ ಅವರನ್ನು ಕೂಡ ಇನ್ನೊಂದು ರೀತಿ ಲೆಕ್ಕ ಹಾಕುತ್ತಾರೆ. ಆದರೆ ಎಲ್ಲವೂ ಬದುಕುತ್ತಿರುವ ಶೈಲಿ ಅಷ್ಟೇ. ಎಲ್ಲಾ ಹೆಣ್ಣು ಮಕ್ಕಳ ಮನಸ್ಸಲ್ಲೂ ಚಂಚಲತೆ ಇರುತ್ತದೆ, ಭಾವನೆಗಳಿರುತ್ತವೆ, ಮಾತುಗಳು ಇರುತ್ತವೆ.
ಇವುಗಳನ್ನೆಲ್ಲ ಪರಿಪೂರ್ಣವಾಗಿ ಅನುಭವಿಸಲು ಬಿಡಬೇಕು ನಾನು ಮದುವೆಯಾಗದೆ ಗೃಹಿಣಿ ಆಗಿದ್ದೇನೆ ನನ್ನದೊಂದು ಆಲೋಚನೆ ಮೊದಲಿನಿಂದಲೂ ಇದೆ. ನಾನೊಬ್ಬ ಸಿಂಗಲ್ ಪೇರೆಂಟ್ ಆಗಿ ಅಥವಾ ಮದುವೆ ಆಗದೆ ತಾಯಿ ಆಗಲು ಇಷ್ಟಪಡುತ್ತೇನೆ ಎಂದು ಹಲವು ವೇದಿಕೆ ಕೊಂಡಿದ್ದೇನೆ. ಆದರೆ ಎಲ್ಲರೂ ಕೂಡ ಇದನ್ನು ವಿರೋಧಿಸುತ್ತಾರೆ. ಎಷ್ಟರಮಟ್ಟಿಗೆ ಎಂದರೆ ಮಾಡೆರ್ನ್ ಪ್ರಪಂಚದಲ್ಲಿ ಬದುಕುತ್ತಿರುವ ನನ್ನ ಆಪ್ತ ಸ್ನೇಹಿತರು ಕೂಡ ಇದನ್ನು ಸಮಾಜ ಹೇಗೆ ಒಪ್ಪುತ್ತದೆ ಹೇಗೆ ನಿನ್ನನ್ನು ನೋಡುತ್ತಾರೆ ಎಂದು ಕೇಳುತ್ತಾರೆ.
ಆದರೆ ಆಯುರ್ವೇದಿಕ್ ವೈದ್ಯರುಗಳು ಇದರಲ್ಲಿ ಏನು ಸಮಸ್ಯೆ ಇಲ್ಲ ಎನ್ನುತ್ತಾರೆ ಮತ್ತು ನಾನು ಎಷ್ಟೋ ಹಳ್ಳಿಗಳ ಕಡೆ ಕ್ಯಾಂಪೇನ್ ಹೋಗಿದ್ದೇನೆ. ಅಲ್ಲಿನ ಹೆಣ್ಣು ಮಕ್ಕಳಿಗೆ ವಿದ್ಯೆ ಇಲ್ಲದಿರಬಹುದು ಆದರೆ ಎಷ್ಟೋ ಮಹಿಳೆಯರು ನನ್ನ ಬಳಿ ಬಂದು ನೀವು ಮದುವೆಯಾಗಿ ಅಥವಾ ಮಗು ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಒಟ್ಟಾರೆಯಾಗಿ ಹೆಣ್ಣು ಎಂದರೆ ಇಷ್ಟೇ ಎಂದು ಅಲ್ಲ, ಒಟ್ಟಾರೆಯಾಗಿ ಹೆಣ್ಣುತನವನ್ನು ಪರಿಪೂರ್ಣವಾಗಿ ಅನುಭವಿಸಲು ಸಮಾಜ ಬಿಟ್ಟು ಬಿಡಬೇಕು ಎಂದು ಭಾವನ ಹೇಳಿದರು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.